ಆ್ಯಪ್ನಗರ

ಚುನಾವಣೆ ಪ್ರಚಾರ ಮಾಡುವ ಕನ್ನಡ ನಟರು ರೈತರನ್ನು ಬೆಂಬಲಿಸಿ ಯಾಕೆ ಮಾತನಾಡಿಲ್ಲ: ನಟ ಚೇತನ್ ಪ್ರಶ್ನೆ!

ಡಿಸೆಂಬರ್ 8, 2020ರಂದು ಭಾರತ್ ಬಂದ್ ಮಾಡಲು ಅನೇಕ ಸಂಘಟನೆಗಳು ಬೆಂಬಲ ನೀಡಿವೆ. ಆದರೆ ಸೆಲೆಬ್ರಿಟಿಗಳು ಅಷ್ಟಾಗಿ ಯಾರೂ ಮಾತನಾಡಿಲ್ಲ. ಈ ಬಗ್ಗೆ ನಟ ಚೇತನ್ ಅವರು ಪ್ರಶ್ನೆ ಮಾಡಿದ್ದಾರೆ.

Vijaya Karnataka Web 7 Dec 2020, 5:42 pm
ರೈತ-ಕೃಷಿ ಕಾರ್ಮಿಕರ ಸಂಘಟನೆಗಳು, ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಮಂಗಳವಾರ ಭಾರತ್ ಬಂದ್‌ಗೆ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ. ಆದರೆ ನಟರು ಯಾಕೆ ಪ್ರೋತ್ಸಾಹ ನೀಡುತ್ತಿಲ್ಲ ಎಂದು ನಟ ಚೇತನ್ ಪ್ರಶ್ನಿಸಿದ್ದಾರೆ.
Vijaya Karnataka Web actor chetan questions that why kannada actors not supporting farmers
ಚುನಾವಣೆ ಪ್ರಚಾರ ಮಾಡುವ ಕನ್ನಡ ನಟರು ರೈತರನ್ನು ಬೆಂಬಲಿಸಿ ಯಾಕೆ ಮಾತನಾಡಿಲ್ಲ: ನಟ ಚೇತನ್ ಪ್ರಶ್ನೆ!


ಚೇತನ್ ಪ್ರಶ್ನೆ ಏನು?

'ನಾವು ದೇಶಾದ್ಯಂತ ರೈತರ ಪ್ರತಿಭಟನೆಯನ್ನು ಬೆಂಬಲಿಸುತ್ತೇವೆ. ದೇಶಾದ್ಯಂತ ರೈತರು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಚುನಾವಣಾ ಪ್ರಚಾರದ ಬ್ಯಾಂಡ್‌ವ್ಯಾಗನ್‌ಗಳ ಮೇಲೆ ವೇಗವಾಗಿ ನೆಗೆಯುವ ಕನ್ನಡ ಚಲನಚಿತ್ರ ನಟರು ರೈತರಿಗೆ ಬೆಂಬಲವಾಗಿ ಒಂದು ಮಾತನ್ನೂ ಹೇಳಿಲ್ಲ. ನಾವು ನಟರು ಜನರಿಗೆ ಸಹಾಯ ಮಾಡುವ ಬಗ್ಗೆ ಕಾಳಜಿ ವಹಿಸುತ್ತೇವೆಯೇ? ಅಥವಾ ನಮ್ಮ ಶ್ರೀಮಂತ ಗಣ್ಯ ಸ್ನೇಹಿತರನ್ನು ಇನ್ನಷ್ಟು ಪ್ರಚೋದಿಸಲು ನಾವು ನಟರು ಮಾತ್ರ ಆಸಕ್ತಿ ಹೊಂದಿದ್ದೇವೆಯೇ?' ಎಂದು ಪ್ರಶ್ನಿಸಿ ಚೇತನ್ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.

ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಕಲಾವಿದರು ಯಾರು?

ಕಳೆದ ಕೆಲ ದಿನಗಳ ಹಿಂದೆ ನಟ ದರ್ಶನ್, ಅಮೂಲ್ಯಾ, ಖುಷ್ಬೂ ಬೆಂಗಳೂರಿನ ಆರ್‌ಆರ್ ನಗರದ ಉಪ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದರು. ಬಹುಶಃ ಇವರನ್ನು ಉದ್ದೇಶಿಸಿ ಚೇತನ್ ಈ ಮಾತು ಹೇಳಿರುವ ಸಾಧ್ಯತೆಯಿದೆ. ಚೇತನ್ ಅವರು ಈ ಹಿಂದೆ ಹಲವು ಬಾರಿ ರೈತರ ಪರವಾಗಿ ಮಾತನಾಡಿದ್ದರು, ಹೋರಾಟಗಳಲ್ಲಿ ಭಾಗಿಯಾಗಿದ್ದರು.

Also Read-ನಿರ್ದೇಶಕರ ಪಟ್ಟು: ತೆಲುರು ರಣಂ ಚಿತ್ರದಲ್ಲಿ ಚೇತನ್‌

ಭಾರತ್ ಬಂದ್‌ಗೆ ಯಾರ ಬೆಂಬಲವಿದೆ?

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್‌ಗೆ ಕಾಂಗ್ರೆಸ್, ಎನ್‌ಸಿಪಿ, ಡಿಎಂಕೆ, ಎಸ್‌ಪಿ, ಎಡಪಕ್ಷಗಳು ಟಿಆರ್‌ಎಸ್, ಎಎಪಿ ಬೆಂಬಲ ನೀಡಿವೆ. ಪಂಜಾಬ್, ಹರಿಯಾಣ ಹಾಗೂ ಉತ್ತರ ಪ್ರದೇಶದ ಸಾವಿರಾರು ರೈತರು ಈಗಾಗಲೇ ದಿಲ್ಲಿ ಗಡಿ ತಲುಪಿದ್ದಾರೆ. ಕೊರೊನಾ ವೈರಸ್ ಇರುವುದರಿಂದ ತುಂಬ ಜಾಗರೂಕತೆತಿಂದ ಪ್ರತಿಭಟನೆ ನಡೆಸಬೇಕಾಗಿದೆ. ಇನ್ನು ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಪ್ರತಿಭಟನೆ ನಡೆಯಲಿದೆ.

also Read-ಹೋರಾಟ ಮುಂದುವರಿಸಿದ ಚೇತನ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌