ಆ್ಯಪ್ನಗರ

ಯುಗಾದಿ ಹಬ್ಬಕ್ಕೆ ಊರಿಗೆ ಹೋಗ್ಬೇಕು ಅಂದ್ಕೊಂಡಿದ್ರಾ? ಹಾಗಾದ್ರೆ ಒಮ್ಮೆ 'ಡಾಲಿ' ಮಾತು ಕೇಳಿಬಿಡಿ!

ರಾಜ್ಯದಲ್ಲಿ ಕೊರೊನಾ ಮಹಾಮಾರಿ ಕಾಡುತ್ತಿದೆ. ಈ ಮಧ್ಯೆ ಯುಗಾದಿ ಹಬ್ಬ ಕೂಡ ಬಂದಿದೆ. ಹಬ್ಬ ಬಂತೆಂದೂ ಎಲ್ಲರು ತಮ್ಮ ತಮ್ಮ ಊರುಗಳಿಗೆ ಹೋಗೋದು ಅಂದುಕೊಂಡಿರುತ್ತಾರೆ. ಅವರಿಗೆಲ್ಲ ಒಂದು ಕಿವಿ ಮಾತು ಹೇಳಿದ್ದಾರೆ 'ಡಾಲಿ' ಧನಂಜಯ.

Vijaya Karnataka Web 23 Mar 2020, 9:23 pm
ವಿಶ್ವವೇ ಕೊರೊನಾ ವೈರಸ್‌ ಕಾಟಕ್ಕೆ ಬಳಲಿದೆ. ಶತಮಾನದಲ್ಲೇ ಹಿಂದೆಂದೂ ಕಂಡು ಕೇಳರಿಯದಂತಹ ಭೀಕರ ಸನ್ನಿವೇಶವೊಂದಕ್ಕೆ ಮನುಕುಲ ಸಾಕ್ಷಿಯಾಗುತ್ತಿದೆ. ಚೀನಾದಲ್ಲಿ 80 ಸಾವಿರಕ್ಕೂ ಅಧಿಕ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಇಟಲಿಯಲ್ಲಿ ಸಾವಿನ ಸಂಖ್ಯೆ 5 ಸಾವಿರ ದಾಟಿದೆ. ಬಹುತೇಕ ದೇಶಗಳು ಅಂತರರಾಷ್ಟ್ರೀಯ ಸಂಚಾರ ಸ್ಥಗಿತಗೊಳಿಸಿವೆ. ಭಾರತದಲ್ಲಿ ವಿಮಾನಯಾನ ಸೇರಿದಂತೆ ಎಲ್ಲ ರೀತಿಯ ಸಂಚಾರ ವ್ಯವಸ್ಥೆಗಳನ್ನು ರದ್ದು ಮಾಡಲಾಗಿದೆ. ದೇಶದ 75ಕ್ಕೂ ಅಧಿಕ ಜಿಲ್ಲೆಗಳು ಲಾಕ್‌ ಡೌನ್‌ ಆಗಿವೆ. ಈಗಾಗಲೇ ಭಾರತದಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ 400 ದಾಟಿದೆ.
Vijaya Karnataka Web actor dolly dhananjay creates awareness about coronavirus
ಯುಗಾದಿ ಹಬ್ಬಕ್ಕೆ ಊರಿಗೆ ಹೋಗ್ಬೇಕು ಅಂದ್ಕೊಂಡಿದ್ರಾ? ಹಾಗಾದ್ರೆ ಒಮ್ಮೆ 'ಡಾಲಿ' ಮಾತು ಕೇಳಿಬಿಡಿ!


ಕರ್ನಾಟಕದಲ್ಲಿ ಈವರೆಗೂ 33 ಪ್ರಕರಣಗಳು ಬೆಳಕಿಗೆ ಬಂದಿವೆ. ಸೋಂಕು ಪೀಡಿತರನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಸಿಟಿಯಲ್ಲಿರುವ ಜನ ಹಳ್ಳಿಗಳತ್ತ ಮುಖ ಮಾಡಬೇಡಿ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮನವಿ ಮಾಡಿದ್ದಾರೆ. ಸಿನಿ ತಾರೆಯರು ಕೂಡ ಜನರಲ್ಲಿ ಆದಷ್ಟು ಜಾಗೃತ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈಗ 'ಡಾಲಿ' ಧನಂಜಯ ಕೂಡ ಅದೇ ಕೆಲಸ ಮಾಡುತ್ತಿದ್ದಾರೆ. ಮುಂಬರುವ ಯುಗಾದಿ ಹಬ್ಬಕ್ಕೆ ಬಹುತೇಕರು ತಮ್ಮ ಊರುಗಳಿಗೆ ಹೋಗುತ್ತಾರೆ. ಅದನ್ನು ಗಮನದಲ್ಲಿಟ್ಟುಕೊಂಡು ಒಂದು ಸಂದೇಶ ನೀಡಿದ್ದಾರೆ ಅವರು.

​ಎಲ್ಲಿದ್ದಿರೋ ಅಲ್ಲೇ ಇರಿ!

'ದಯವಿಟ್ಟು ಹಬ್ಬ ಅನ್ನೋ ಕಾರಣಕ್ಕೆ ಹಳ್ಳಿಗಳಿಗೆ ಹೋಗಬೇಡಿ. ನೀವುಗಳು ಎಲ್ಲೆಲ್ಲಿ ಇದ್ದಿರೋ, ಅಲ್ಲೇ ಇದ್ದುಬಿಡಿ. ನಾನು ಕೂಡ ನನ್ನ ಹಬ್ಬಕ್ಕೆ ನನ್ನ ಹಳ್ಳಿಗೆ ಹೋಗುತ್ತಿಲ್ಲ. ಬೆಂಗಳೂರಿನಲ್ಲೇ ಉಳಿದುಕೊಂಡಿದ್ದೇನೆ. ನಮಗೆ ಕೊರೊನಾ ಲಕ್ಷಣ ಇದ್ದರೂ ಕೂಡ ನಮಗೆ ಗೊತ್ತಾಗುವುದಿಲ್ಲ. ಊರಲ್ಲಿ ನಮ್ಮ ತಂದೆ-ತಾಯಿ, ಅಜ್ಜ, ಅಜ್ಜಿ ಎಲ್ಲ ಇರುತ್ತಾರೆ. ವಯಸ್ಸಾದವರು ಇರುತ್ತಾರೆ. ನಾವು ಊರಿಗೆ ಹೋದ್ರೆ, ಅವರಿಗೆ ಯಾರಿಗು ತೊಂದರೆ ಆಗೋದು ಬೇಡ. ಸಂಪೂರ್ಣವಾಗಿ ಕೊರೊನಾ ಮುಕ್ತವಾಗುವ ತನಕ ಎಲ್ಲರು ಎಲ್ಲೆಲ್ಲಿ ಇದ್ದಿರೋ ಅಲ್ಲೇ ಇದ್ದುಬಿಡಿ. ಸರ್ಕಾರ ಮತ್ತು ಡಾಕ್ಟರ್ ಏನು ಹೇಳುತ್ತಿದ್ದಾರೋ, ಅದನ್ನು ಪಾಲಿಸಿ' ಎಂದಿದ್ದಾರೆ 'ಡಾಲಿ' ಧನಂಜಯ.

ಡಾನ್‌ ಜಯರಾಜ್‌ ಪಾತ್ರ ಮಾಡಲಿದ್ದಾರೆ 'ಡಾಲಿ' ಧನಂಜಯ! ಇಲ್ಲಿದೆ ಫುಲ್ ಡಿಟೇಲ್ಸ್‌!

​ವದಂತಿಗಳಿಗೆ ಕವಿಗೊಡಬೇಡಿ!

ಕೊರೊನಾ ಸೋಂಕು ಹಬ್ಬಿದ ದಿನದಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುಳ್ಳು ವದಂತಿಗಳು ಹರಿದಾಡುತ್ತಿವೆ. ಅದನ್ನು ಯಾರು ನಂಬಬಾರದು ಎಂದು ಧನು ಮನವಿ ಮಾಡಿದ್ದಾರೆ. 'ವದಂತಿಗಳಿಗೆ ಮತ್ತು ಅವೈಜ್ಞಾನಿಕ ಮಾಹಿತಿಗಳ ಬಗ್ಗೆ ಗಮನ ನೀಡಬೇಡಿ. ಆದಷ್ಟು ಸುಶಿಕ್ಷಿತರಾಗಿರಿ. ಸೋಶಿಯಲ್‌ ಡಿಸ್ಟೆನ್ಸ್ ಪಾಲಿಸಿ. ದಯವಿಟ್ಟು ಗುಂಪುಗಳಲ್ಲಿ ಸೇರುವುದು ಮಾಡಬೇಡಿ. ದಯವಿಟ್ಟು ಈ ಕೊರೊನಾ ವಿರುದ್ಧ ನಾವೆಲ್ಲರೂ ದೂರ ದೂರವೇ ಇದ್ದು ಒಗ್ಗಟ್ಟಾಗಿ ಹೋರಾಟ ಮಾಡೋಣ. ಎಲ್ಲೆಲ್ಲಿ ಇದ್ದಿರೋ ಅಲ್ಲೇ ಇರಿ' ಎಂದು ಹೇಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

10 ಕೋಟಿ ರೂ. ಕಮಾಯಿ ಮಾಡಿದೆಯೇ 'ಪಾಪ್‌ಕಾರ್ನ್‌ ಮಂಕಿ ಟೈಗರ್‌'?

ವಿಡಿಯೋ ಮೂಲಕ ಸಂದೇಶ ನೀಡಿದ ಧನಂಜಯ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌