ಆ್ಯಪ್ನಗರ

100 ಕೋಟಿ ಸಂಭಾವನೆ ಕೇಳಿದ್ರಾ ನಟ ವಿಜಯ್‌? ಬೆಚ್ಚಿಬಿದ್ದ ಬಾಲಿವುಡ್ ಮಂದಿ!!

ಕಾಲಿವುಡ್‌ನಲ್ಲಿ ನಟ ವಿಜಯ್ ಸದ್ಯಮಟ್ಟಿಗೆ ಓಡುವ ಕುದುರೆ. ಅವರ ಸಿನಿಮಾಗಳು ಅನಾಯಾಸವಾಗಿ ನೂರಾರು ಕೋಟಿ ರೂ. ಗಳಿಕೆ ಮಾಡುತ್ತವೆ. ಒಂದುವೇಳೆ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕರೂ, ಬಾಕ್ಸ್ ಆಫೀಸ್‌ನ ಮೇಲೆ ಅದು ಯಾವುದೇ ಪರಿಣಾಮ ಬೀರುವುದಿಲ್ಲ.

Vijaya Karnataka Web 14 Jan 2020, 3:01 pm
ಕಾಲಿವುಡ್‌ನಲ್ಲಿ ನಟ ವಿಜಯ್ ಸದ್ಯಮಟ್ಟಿಗೆ ಓಡುವ ಕುದುರೆ. ಅವರ ಸಿನಿಮಾಗಳು ಅನಾಯಾಸವಾಗಿ ನೂರಾರು ಕೋಟಿ ರೂ. ಗಳಿಕೆ ಮಾಡುತ್ತವೆ. ಒಂದುವೇಳೆ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕರೂ, ಬಾಕ್ಸ್ ಆಫೀಸ್‌ನ ಮೇಲೆ ಅದು ಯಾವುದೇ ಪರಿಣಾಮ ಬೀರುವುದಿಲ್ಲ. ಯಾಕೆಂದರೆ, ಬರೀ ವಿಜಯ್ ಅನ್ನೋ ಹೆಸರಿನ ಮೇಲೆ ಸಿನಿಮಾಗಳು ನಿರ್ಮಾಪಕರ ಜೇಬು ತುಂಬಿಸುತ್ತಿವೆ. ರಜನಿಕಾಂತ್‌ ನಂತರ ಕಾಲಿವುಡ್‌ನ ಸ್ಟಾರ್ ಆಗಿ ವಿಜಯ್ ಕೂರುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ. ಕಳೆದ 10 ವರ್ಷಗಳಲ್ಲಿ ವಿಜಯ್‌ ನಟಿಸಿದ 'ಜಿಲ್ಲಾ', 'ತುಪಾಕಿ', 'ಕತ್ತಿ', 'ನನ್ಬನ್', 'ಥೆರಿ', 'ಮೆರ್ಸಲ್‌', 'ಸರ್ಕಾರ್', 'ಬಿಗಿಲ್' ಸಿನಿಮಾಗಳು ದಾಖಲೆ ಪ್ರಮಾಣದ ಕಲೆಕ್ಷನ್‌ ಮಾಡಿವೆ. ವಿಮರ್ಶೆ ದೃಷ್ಟಿಯಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದ 'ಭೈರವ' ಕೂಡ 100 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಇಷ್ಟೆಲ್ಲ ದಾಖಲೆ ಬರೆಯುತ್ತಿರುವ ವಿಜಯ್‌ ಸಂಭಾವನೆ ಎಷ್ಟು ಪಡೆಯುತ್ತಾರೆ? ಆ ವಿಚಾರವಾಗಿಯೇ ಅವರೀಗ ಸುದ್ದಿಯಲ್ಲಿದ್ದಾರೆ.
Vijaya Karnataka Web actor ilayathalapathy vijay demand hundred crore remuneration for pan india movie
100 ಕೋಟಿ ಸಂಭಾವನೆ ಕೇಳಿದ್ರಾ ನಟ ವಿಜಯ್‌? ಬೆಚ್ಚಿಬಿದ್ದ ಬಾಲಿವುಡ್ ಮಂದಿ!!


​ನೂರು ಕೋಟಿ ರೂ. ಕೇಳಿದ ವಿಜಯ್

ಬಾಲಿವುಡ್‌ ನಿರ್ಮಾಪಕರೊಬ್ಬರು ವಿಜಯ್ ಅವರನ್ನು ಇಟ್ಟುಕೊಂಡು ಪ್ಯಾನ್ ಇಂಡಿಯಾ ಸಿನಿಮಾ ಮಾಡೋಕೆ ನಿರ್ಧರಿಸಿದ್ದರಂತೆ. ಅದಕ್ಕಾಗಿ ವಿಜಯ್‌ ಅವರನ್ನು ಸಂಪರ್ಕ ಮಾಡಿದ್ದಾರೆ. ಪ್ರಸ್ತುತ ವಿಜಯ್‌ ಸಂಭಾವನೆ 50 ಕೋಟಿ ರೂ. ಗಡಿ ದಾಟಿ ಇಲ್ಲ. ಆದರೆ, ಈ ಪ್ರಾಜೆಕ್ಟ್‌ಗೆ ವಿಜಯ್‌ ಕೇಳಿದ ಸಂಭಾವನೆ ಬರೋಬ್ಬರಿ 100 ಕೋಟಿ ರೂ. ಅಂತೆ!! ಅದು ಜಿಎಸ್‌ಟಿ ಹೊರತುಪಡಿಸಿ ಅನ್ನೋದು ನ್ಯೂಸ್‌!

​ವಿಜಯ್‌ ಮಾರ್ಕೆಟ್ ಎಷ್ಟಿದೆ?

ವಿಜಯ್ ನಟನೆಯ ಸಿನಿಮಾಗಳು ಬಿಡುಗಡೆಗೂ ಮೊದಲೇ ಆದಾಯ ಗಳಿಸುತ್ತಿವೆ. ವಿತರಣೆ, ಟಿವಿ ಪ್ರಸಾರದ ಹಕ್ಕುಗಳು, ಡಬ್ಬಿಂಗ್ ಹಕ್ಕುಗಳಿಂದಲೇ ಅಂದಾಜು 300 ಕೋಟಿ ರೂ.ಗಳವರೆಗೂ ಕಲೆಕ್ಷನ್ ಮಾಡುತ್ತವೆ. ಹೀಗಿರುವಾಗ ನಾಯಕನಾಗಿ ವಿಜಯ್‌ 100 ಕೋಟಿ ರೂ. ಸಂಭಾವನೆ ಕೇಳುವುದರಲ್ಲಿ ಯಾವುದೇ ತಪ್ಪು ಇಲ್ಲ ಎನ್ನುತ್ತವೆ ಅವರ ಆಪ್ತ ಮೂಲಗಳು.

​ಉತ್ತರ ಭಾರತದಲ್ಲಿದ್ದಾರೆ ವಿಜಯ್ ಅಭಿಮಾನಿಗಳು

ವಿಜಯ್ ನಟಿಸಿರುವ ಸಿನಿಮಾಗಳು ಹಿಂದಿಗೆ ಡಬ್‌ ಆಗುತ್ತವೆ. ಅವು ಹಿಂದಿ ವಾಹಿನಿಗಳಲ್ಲಿ ಪ್ರಸಾರವಾದಾಗ ಅಪಾರ ಪ್ರಮಾಣದ ಟಿಆರ್‌ಪಿ ಅವರಿಗೆ ಸಿಗುತ್ತದೆ. ನಾರ್ತ್‌ ಇಂಡಿಯಾದಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಬಾಲಿವುಡ್‌ ನಿರ್ಮಾಪಕರು ಸಿನಿಮಾ ಮಾಡುವ ಆಸಕ್ತಿ ತೋರಿದ್ದಾರಂತೆ.

​ಬಿಗಿಲ್‌ ಮಾಡಿತ್ತು ಮೋಡಿ

ವಿಜಯ್ ದ್ವಿಪಾತ್ರದಲ್ಲಿ ನಟಿಸಿದ್ದ 'ಬಿಗಿಲ್' ಚಿತ್ರವು ಕಳೆದ ದೀಪಾವಳಿ ಹಬ್ಬದಂದು ತೆರೆಗೆ ಬಂದಿತ್ತು. 140 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣಗೊಂಡಿದ್ದ ಆ ಸಿನಿಮಾ ಅಂದಾಜು 300 ಕೋಟಿ ರೂ. ಗಳಿಸಿತ್ತು. ಇದು ವಿಜಯ್ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಿತ್ತು. ಹಾಗಾಗಿ, ವಿಜಯ್ ಮಾರುಕಟ್ಟೆ ವ್ಯಾಪ್ತಿ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ.

​ಮಾಸ್ಟರ್ ಆಗಿದ್ದಾರೆ ವಿಜಯ್‌

ಸದ್ಯ ವಿಜಯ್ ಅವರ ಗಮನವೆಲ್ಲ 'ಮಾಸ್ಟರ್' ಸಿನಿಮಾದ ಮೇಲಿದೆ. 'ಖೈದಿ'ಯಂತಹ ಬ್ಲಾಕ್‌ ಬಸ್ಟರ್ ಹಿಟ್ ಸಿನಿಮಾ ನೀಡಿದ್ದ ನಿರ್ದೇಶಕ ಲೋಕೇಶ್‌ ಕನಗರಾಜ್ ಇದರ ನಿರ್ದೇಶನ ಮಾಡುತ್ತಿದ್ದಾರೆ. ಶಿವಮೊಗ್ಗದ ಜೈಲಿನಲ್ಲಿ ಪ್ರಮುಖ ಸನ್ನಿವೇಶಗಳ ಚಿತ್ರೀಕರಣವನ್ನೂ ಮಾಡಿದ್ದಾರೆ ಅವರು. ವಿಜಯ್ ಸೇತುಪತಿ ಮಹತ್ವದ ಪಾತ್ರ ನಿಭಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌