ಆ್ಯಪ್ನಗರ

Naga Chaitanya: ಕಾರ್‌ನಲ್ಲಿ ಹುಡುಗಿ ಜೊತೆ ಇದ್ದಾಗಲೇ ಪೊಲೀಸರ ಕೈಯಲ್ಲಿ ಸಿಕ್ಕಿಬಿದ್ದಿದ್ದ ನಟ ನಾಗ ಚೈತನ್ಯ

ನಟ ನಾಗ ಚೈತನ್ಯ ಅವರು ಹೈದಾರಾಬಾದ್‌ನಲ್ಲಿ ಕಾರ್‌ನಲ್ಲಿ ಹೋಗುತ್ತಿದ್ದಾಗ ಪೊಲೀಸರ ಜೊತೆ ಸಿಕ್ಕಿ ಬಿದ್ದಿದ್ದರಂತೆ. ಈ ಕುರಿತು ಸಂದರ್ಶನವೊಂದರಲ್ಲಿ ಅವರು ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ಕಾರ್‌ನಲ್ಲಿ ಹುಡುಗಿ ಜೊತೆ ಓಡಾಡುವಾಗ ಪೊಲೀಸರು ಹಿಡಿದಿದ್ದ ಬಗ್ಗೆ ಮಾತನಾಡಿದ್ದಾರೆ. ಆ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Authored byಪದ್ಮಶ್ರೀ ಭಟ್ | TIMESOFINDIA.COM 13 Aug 2022, 5:09 pm

ಹೈಲೈಟ್ಸ್‌:



  • ಸಂದರ್ಶನವೊಂದರಲ್ಲಿ ಪೊಲೀಸರ ಕೈಗಿ ಸಿಕ್ಕಿಬಿದ್ದ ಕಥೆ ಹೇಳಿದ ನಾಗ ಚೈತನ್ಯ
  • ನಾಗ ಚೈತನ್ಯ ಅವರು ಹುಡುಗಿ ಜೊತೆ ಕಾರ್‌ನಲ್ಲಿ ಇದ್ದರಂತೆ
  • ಸದ್ಯ ನಟಿಯೋರ್ವರ ಜೊತೆ ನಾಗ ಚೈತನ್ಯ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web naga chaitanya
ನಟ ನಾಗ ಚೈತನ್ಯ ( Naga Chaitanya ) ಅವರು ಹುಡುಗಿ ಜೊತೆ ಹೈದರಾಬಾದ್‌ನಲ್ಲಿ ಕಾರ್‌ನಲ್ಲಿ ಓಡಾಡುತ್ತಿರುವಾಗ ಅವರ ಕಾರ್‌ನ್ನು ಪೊಲೀಸರು ತಡೆದಿದ್ದರಂತೆ, ಈ ಬಗ್ಗೆ ಸ್ವತಃ ನಾಗ ಚೈತನ್ಯ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಸಮಂತಾಗೆ ( Samantha ) ವಿಚ್ಛೇದನ ಕೊಟ್ಟು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗುತ್ತಿರುವ ಅವರು ಹಳೆಯ ಘಟನೆಯೊಂದನ್ನು ಸ್ಮರಿಸಿಕೊಂಡಿದ್ದಾರೆ.
'ಲಾಲ್ ಸಿಂಗ್ ಛಡ್ಡಾ' ಚಿತ್ರದ ಪ್ರಚಾರದಲ್ಲಿ ಸದ್ಯ ಬ್ಯುಸಿಯಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ಕಾರ್‌ನಲ್ಲಿ ಹುಡುಗಿ ಜೊತೆ ಓಡಾಡುವಾಗ ಪೊಲೀಸರು ಹಿಡಿದಿದ್ದ ಬಗ್ಗೆ ಮಾತನಾಡಿದ್ದಾರೆ.

ನಾಗ ಚೈತನ್ಯ ಏನಂದ್ರು?
ರೈಲ್ವೇ ನಿಲ್ದಾಣದಲ್ಲಿ ನನ್ನ ಪ್ರಿಯತಮೆಗೆ ಕಿಸ್ ಮಾಡುವಾಗ ಪೊಲೀಸರು ನಮ್ಮನ್ನು ಹಿಡಿದಿದ್ದರು ಎಂದು ನಿರೂಪಕರು ನೆನಪಿಸಿಕೊಂಡಾಗ, "ನನಗೂ ಅದೇ ರೀತಿ ಆಗೊತ್ತು. ಹೈದರಾಬಾದ್‌ನಲ್ಲಿ ಕಾರ್‌ನ ಹಿಂಬದಿ ಸೀಟ್‌ನಲ್ಲಿ ಹುಡುಗಿ ಜೊತೆ ಕೂತಿದ್ದೆ" ಎಂದಿದ್ದಾರೆ. ಆಗ ನಿರೂಪಕರು "ಹೆದರಿಕೆಯಾಯ್ತಾ?" ಎಂದು ಪ್ರಶ್ನೆ ಮಾಡಿದ್ದು, ಉತ್ತರ ನೀಡಿದ ನಾಗ ಚೈತನ್ಯ "ಪರವಾಗಿಲ್ಲ. ನಾನು ಅಲ್ಲಿ ಏನು ಮಾಡುತ್ತಿದ್ದೆ, ಯಾಕೆ ಸಿಕ್ಕಿಹಾಕಿಕೊಂಡೆ ಅಂತ ನನಗೆ ಗೊತ್ತಿದೆ. ಹೇಳೋದಿಕ್ಕೆ ಇದೊಂದು ಕಥೆ ಅಷ್ಟೇ.." ಎಂದಿದ್ದಾರೆ.

Naga Chaitanya: 'ನನಗೆ ಸಮಂತಾ ಮೇಲೆ ತುಂಬ ಗೌರವವಿದೆ, ವಿಚ್ಛೇದನದ ಬಗ್ಗೆ ಮಾತನಾಡಿ ಸಾಕಾಗಿದೆ': ನಟ ನಾಗ ಚೈತನ್ಯ

ಸಮಂತಾಗೆ ವಿಚ್ಛೇದನ
ಸಮಂತಾ ಈಗ ಏನಾದರೂ ಕಣ್ಣು ಮುಂದೆ ಬಂದರೆ ನಾನು ಸುಮ್ಮನೆ ನಗು ಎಂದು ಸಂದರ್ಶನದಲ್ಲಿ ನಾಗ ಚೈತನ್ಯ ಹೇಳಿದ್ದಾರೆ. 2017ರ ಅಕ್ಟೋಬರ್ 7ರಂದು ನಾಗ ಚೈತನ್ಯ, ಸಮಂತಾ ಅದ್ದೂರಿಯಾಗಿ ಸಾಕಷ್ಟು ಸೆಲೆಬ್ರಿಟಿಗಳು ಮುಂದೆಯೇ ಮದುವೆಯಾಗಿದ್ದರು. ಸಮಂತಾ ಮತ್ತು ನಾಗ ಚೈತನ್ಯ ತಮ್ಮ ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲು ಕೆಲವೇ ದಿನಗಳು ಇದ್ದಾಗಲೇ ಈ ಜೋಡಿ ವಿಚ್ಛೇದನ ಪಡೆದಿತ್ತು.

Samantha: ಮಾಜಿ ಪತಿ ಜೊತೆ ಇದ್ದ ಹೈದರಾಬಾದ್‌ ಮನೆಯನ್ನು ಖರೀದಿಸಿದ ಸಮಂತಾ

ಸಮಂತಾ, ನಾಗ ಚೈತನ್ಯ ಈಗ ಹೇಗಿದ್ದಾರೆ?
ಸಮಂತಾ, ನಾಗ ಚೈತನ್ಯ ಅವರು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದರು. ನಾಗ ಚೈತನ್ಯ ಜೊತೆ ಈಗ ಇರುವ ಸಂಬಂಧದ ಬಗ್ಗೆ ಮಾತನಾಡಿರುವ ಸಮಂತಾ ಅವರು, "ಚೂಪಾದ ವಸ್ತುಗಳನ್ನು ಬಚ್ಚಿಟ್ಟಿರುವ ಕೋಣೆಯಲ್ಲಿ ನಮ್ಮಿಬ್ಬರನ್ನು ಕೂಡಿ ಹಾಕಿದರೆ ಹೇಗಿರುತ್ತದೆ..? ಹೌದು, ನಾನು ಆ ವಲಯದಲ್ಲಿದ್ದೇನೆ. ಈಗ ನಮ್ಮ ನಡುವೆ ಉತ್ತಮ ಸೌಹಾರ್ದಯುತವಾದ ಬಂಧ ಇಲ್ಲದೇ ಇದ್ದರೂ, ಮುಂದೊಂದು ದಿನ ಅದು ಸಾಧ್ಯವಾಗಬಹುದು" ಎಂದಿದ್ದಾರೆ.

ನಾಗ ಚೈತನ್ಯ ಅವರು ಶೋಭಿತಾ ಧುಲಿಪಲ ಜೊತೆ ಡೇಟ್‌ನಲ್ಲಿದ್ದಾರೆ ಎಂಬ ಮಾತು ಕೇಳಿಬರುತ್ತಿದ್ದು, ಇದಕ್ಕಿನ್ನು ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ.
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌