ಆ್ಯಪ್ನಗರ

ರಾಣಾ ದಗ್ಗುಬಾಟಿ ಜೊತೆ ಮಿಹೀಕಾ ಬಜಾಜ್‌ ನಿಶ್ಚಿತಾರ್ಥ! ಲಾಕ್‌ಡೌನ್‌ ನಡುವೆಯೇ ಬಲ್ಲಾಳದೇವನ ಸಂಭ್ರಮ

ದಕ್ಷಿಣ ಭಾರತದ ಖ್ಯಾತ ನಟ ರಾಣಾ ದಗ್ಗುಬಾಟಿ ಇಂದು (ಮೇ 20) ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು ತಮ್ಮ ಪ್ರೀತಿಯ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದರು.

Vijaya Karnataka Web 20 May 2020, 11:49 am
ದೇಶದಲ್ಲಿ ಕೊರೊನಾ ವೈರಸ್‌ ರಣಕೇಕೆ ಹಾಕುತ್ತಿದ್ದರೂ ಸಹ ಮದುವೆ, ನಿಶ್ಚಿತಾರ್ಥದ ಸಮಾರಂಭಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಆರಂಭದಲ್ಲಿ ಕೋವಿಡ್‌-19 ಹಾವಳಿಗೆ ಹೆದರಿದ್ದ ಜನರು ಇಂಥ ಸಮಾರಂಭಗಳನ್ನು ಮುಂದೂಡಿದ್ದರು. ಆದರೆ ಈಗ ಲಾಕ್‌ಡೌನ್‌ ನಿಯಮಗಳನ್ನು ಪಾಲಿಸುತ್ತಲೇ ಮದುವೆ ಮುಂತಾದ ಕಾರ್ಯಕ್ರಮಗಳನ್ನು ನೆರವೇರಿಸುತ್ತಿದ್ದಾರೆ. ಜನಸಾಮಾನ್ಯರು ಮಾತ್ರವಲ್ಲದೆ ಸೆಲೆಬ್ರಿಟಿಗಳು ಕೂಡ ಈ ಸಂದರ್ಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ನಿಖಿಲ್‌ ಕುಮಾರಸ್ವಾಮಿ-ರೇವತಿ, ನಿರ್ದೇಶಕ ಎ.ಪಿ. ಅರ್ಜುನ್‌-ಅನ್ನಪೂರ್ಣ, ಟಾಲಿವುಡ್‌ನಲ್ಲಿ ನಿಖಿಲ್‌ ಸಿದ್ಧಾರ್ಥ್‌ ಮತ್ತು ಡಾ. ಪಲ್ಲವಿ ಶರ್ಮಾ ಹೀಗೆ ಕೆಲವರು ಲಾಕ್‌ಡೌ ನಡುವೆಯೇ ಸಪ್ತಪದಿ ತುಳಿದಿದ್ದಾರೆ. ಕಿರುತೆರೆಯ ಕೆಲವು ಕಲಾವಿದರು ಕೂಡ ಬಾಳಬಂಧನಕ್ಕೆ ಒಳಗಾಗಿದ್ದಾರೆ.
Vijaya Karnataka Web actor rana daggubati engagement with miheeka bajaj at hyderabad
ರಾಣಾ ದಗ್ಗುಬಾಟಿ ಜೊತೆ ಮಿಹೀಕಾ ಬಜಾಜ್‌ ನಿಶ್ಚಿತಾರ್ಥ! ಲಾಕ್‌ಡೌನ್‌ ನಡುವೆಯೇ ಬಲ್ಲಾಳದೇವನ ಸಂಭ್ರಮ


'ಬಾಹುಬಲಿ' ಸಿನಿಮಾದಲ್ಲಿ ಬಲ್ಲಾಳದೇವನ ಪಾತ್ರ ಮಾಡಿ ದೇಶವ್ಯಾಪಿ ಜನಪ್ರಿಯತೆ ಗಳಿಸಿದ ನಟ ರಾಣಾ ದಗ್ಗುಬಾಟಿ ಕೂಡ ಈಗ ಮದುವೆಯ ಮೂಡ್‌ನಲ್ಲಿ ಇದ್ದಾರೆ. ಸದ್ಯದಲ್ಲೇ ಅವರು ಹಸೆಮಣೆ ಏರಲಿದ್ದಾರೆ. ಅದಕ್ಕೂ ಮುನ್ನ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಅವರ ಕುಟುಂಬದವರು ಹಮ್ಮಿಕೊಂಡಿದ್ದಾರೆ. ಬುಧವಾರ (ಮೇ 20) ಮನದರಸಿ ಮಿಹೀಕಾ ಬಜಾಜ್‌ ಜೊತೆ ರಾನಾ ದಗ್ಗುಬಾಟಿ ಎಂಗೇಜ್‌ಮೆಂಟ್‌ ಮಾಡಿಕೊಳ್ಳಲಿದ್ದಾರೆ.

​ಎಲ್ಲಿ ನಡೆಯಲಿದೆ ನಿಶ್ಚಿತಾರ್ಥ?

ರಾಣಾ ದಗ್ಗುಬಾಟಿ ಅಭಿಮಾನಿಗಳಿಗೆ ಇದು ಗುಡ್‌ ನ್ಯೂಸ್‌. ಹೈದರಾಬಾದ್‌ನಲ್ಲಿ ರಾಣಾ ಮತ್ತು ಮಿಹೀಕಾ ಬಜಾಜ್‌ ಇಂದು ಉಂಗುರ ಬದಲಾಯಿಸಿಕೊಳ್ಳಲಿದ್ದಾರೆ. ಲಾಕ್‌ಡೌನ್‌ ಆದೇಶ ಜಾರಿಯಲ್ಲಿ ಇರುವುದರಿಂದ ತುಂಬಾ ಸರಳವಾಗಿ ಈ ಸಮಾರಂಭ ನಡೆಯಲಿದೆ. ಕುಟುಂಬದವರು ಮತ್ತು ಕೆಲವೇ ಕೆಲವು ಆಪ್ತರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ಈಗಾಗಲೇ ನಾವು ಮದುವೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ ಎಂದು ರಾಣಾ ದಗ್ಗುಬಾಟಿ ತಂದೆ ಸುರೇಶ್‌ ಬಾಬು ಹೇಳಿಕೆ ನೀಡಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದರೆ ಡಿಸೆಂಬರ್‌ನಲ್ಲಿ ರಾಣಾ ಮತ್ತು ಮಿಹೀಕಾ ಹಸೆಮಣೆ ಏರಲಿದ್ದಾರೆ. ಅಷ್ಟರೊಳಗೆ ಕೊರೊನಾ ವೈರಸ್‌ ನಿರ್ಮೂಲನೆ ಆಗಿದ್ದರೆ ಅದ್ದೂರಿಯಾಗಿ ರಾಣಾ ಮದುವೆ ನಡೆಯುತ್ತದೆ. ಇಲ್ಲವಾದರೆ ಸರಳ ವಿವಾಹಕ್ಕೆ ಅವರು ಮೊರೆಹೋಗಬೇಕಷ್ಟೇ.

ಮದುವೆ ಕನಸು ಕಾಣುತ್ತಿರುವ ರಾಣಾ ದಗ್ಗುಬಾಟಿಗೆ ಶಾಕ್‌ ಕೊಟ್ಟ ಶ್ರೀರೆಡ್ಡಿ ಫೇಸ್‌ಬುಕ್‌ ಪೋಸ್ಟ್‌!

​ಲಾಕ್‌ಡೌನ್‌ನಲ್ಲೂ ರಾಣಾ ಸಂಭ್ರಮ

ಕೆಲವೇ ದಿನಗಳ ಹಿಂದೆ ನಟ ರಾಣಾ ದಗ್ಗುಬಾಟಿ ಒಂದು ಬ್ರೇಕಿಂಗ್‌ ನ್ಯೂಸ್‌ ನೀಡಿದರು. ಇಷ್ಟು ದಿನ ತಮ್ಮ ರಿಲೇಷನ್‌ಶಿಪ್‌ ಸ್ಟೇಟಸ್‌ ಬಗ್ಗೆ ಏನನ್ನೂ ಮಾತನಾಡಿರದ ಅವರು ಏಕಾಏಕಿ ಪ್ರಿಯತಮೆಯನ್ನು ಪರಿಚಯ ಮಾಡಿಸಿದರು. ಸೋಶಿಯಲ್‌ ಮೀಡಿಯಾದಲ್ಲಿ ಇಂಟೀರಿಯರ್‌ ಡಿಸೈನರ್‌ ಮಿಹೀಕಾ ಬಜಾಜ್‌ ಅವರ ಫೋಟೋವನ್ನು ಹಂಚಿಕೊಂಡು 'ಇವಳು ಯೆಸ್‌ ಎಂದಳು' ಎಂದು ಕ್ಯಾಪ್ಷನ್‌ ನೀಡಿದರು. ಈ ಪೋಸ್ಟ್ ನೋಡುತ್ತಿದ್ದಂತೆಯೇ ಅಭಿಮಾನಿಗಳು ಮತ್ತು ಚಿತ್ರರಂಗದ ಸ್ನೇಹಿತರು ರಾಣಾ ದಗ್ಗುಬಾಟಿಗೆ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ. 35ರ ಪ್ರಾಯದ ರಾಣಾ ಶೀಘ್ರದಲ್ಲೇ ದಾಂಪತ್ಯ ಜೀವನ ಆರಂಭಿಸಲಿದ್ದಾರೆ. ಮದುವೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಅವರು ಕುಟುಂಬದವರು.

'ಬಾಹುಬಲಿ' ರಾಣಾ ದಗ್ಗುಬಾಟಿ ಮನದರಸಿ ಇವರೇ ನೋಡಿ! 'ಬಲ್ಲಾಳ'ನ ಮನಗೆದ್ದ ಈ ಚೆಲುವೆ ಯಾರು?

​ಗುಟ್ಟಾಗಿ ಪ್ರೀತಿಸಿದ ಬಲ್ಲಾಳದೇವ!

'ಬಾಹುಬಲಿ' ಚಿತ್ರದ ಯಶಸ್ಸಿನ ಬಳಿಕ ರಾಣಾ ದಗ್ಗುಬಾಟಿ ಅವರಿಗೆ ಭಾರಿ ಜನಪ್ರಿಯತೆ ಸಿಕ್ಕಿತು. ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಅವರು ಬ್ಯುಸಿ ಆದರು. ಕೆಲಸದ ಮಧ್ಯೆಯೇ ಅವರು ಪ್ರೀತಿಯಲ್ಲಿ ಮುಳುಗಿದ್ದರಾದರೂ ಅದು ಜಗತ್ತಿಗೆ ಗೊತ್ತಾಗದಂತೆ ನೋಡಿಕೊಂಡಿದ್ದರು. ಚಿತ್ರರಂಗದಲ್ಲಿ ಸಣ್ಣ ಅನುಮಾನ ಸುಳಿದಾಡಿದರೂ ದೊಡ್ಡದಾಗಿ ಗಾಸಿಪ್‌ ಹಬ್ಬುತ್ತದೆ. ಆದರೆ ರಾಣಾ ಮತ್ತು ಮಿಹೀಕಾ ಬಹಳ ದಿನಗಳಿಂದ ಡೇಟಿಂಗ್‌ ಮಾಡುತ್ತಿದ್ದರೂ ಒಂದು ದಿನ ಕೂಡ ಮಾಧ್ಯಮದ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಳ್ಳಲಿಲ್ಲ. ವೃತ್ತಿಯಲ್ಲಿ ಇಂಟೀರಿಯರ್ ಡಿಸೈನರ್‌ ಆಗಿರುವ ಮಿಹೀಕಾ ಬಜಾಜ್‌ಗೆ ಚಿತ್ರರಂಗದ ನಂಟು ಇಲ್ಲ. ರಾಣಾ ಅವರ ಸಿನಿಮಾಗಳ ಶೂಟಿಂಗ್‌ ನೋಡಲು ಸಹ ಅವರು ಸೆಟ್‌ಗೆ ಬಂದಿರಲಿಲ್ಲ.

ಮತ್ತೆ ಮುಖಾಮುಖಿ ಆಗಲಿದ್ದಾರೆ 'ಬಾಹುಬಲಿ' ಮತ್ತು ಬಲ್ಲಾಳದೇವ? ಪ್ರಭಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್‌!

ರಾಣಾ ದಗ್ಗುಬಾಟಿ ಟ್ವಿಟರ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌