ಆ್ಯಪ್ನಗರ

Vasishta Haripriya Marriage : ವಸಿಷ್ಠ ಸಿಂಹ & ಹರಿಪ್ರಿಯಾ ನಡುವೆ ಪ್ರೀತಿ ಚಿಗುರಿದ್ದು ಹೇಗೆ? ಈ ಜೋಡಿ ಮದುವೆ ಆಗೋದು ಯಾವಾಗ?

ಇತ್ತೀಚೆಗೆ ಕನ್ನಡದ ಖ್ಯಾತ ನಟ ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯಾ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಜೋಡಿಯ ಮಧ್ಯೆ ಪ್ರೀತಿ ಉಂಟಾಗಿದ್ದೇಗೆ? ಇವರ ಮದುವೆ ಯಾವಾಗ ನಡೆಯಲಿದೆ? ಆ ಕುರಿತು ಇಲ್ಲಿದೆ ಮಾಹಿತಿ.

Authored byಅವಿನಾಶ್ ಜಿ. ರಾಮ್ | Vijaya Karnataka 5 Dec 2022, 11:23 am

ಹೈಲೈಟ್ಸ್‌:

  • ಶುಕ್ರವಾರ (ಡಿ.2) ನಟ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಎಂಗೇಜ್ ಆಗಿದ್ದರು
  • ಹಲವು ಸಮಯದಿಂದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಪ್ರೀತಿಯಲ್ಲಿದ್ದಾರೆ
  • ಸರಳವಾಗಿ ನೆರವೇರಿದ ನಿಶ್ಚಿತಾರ್ಥ ಸಮಾರಂಭ; ಕುಟುಂಬ ಸದಸ್ಯರು ಭಾಗಿ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web vasishta simha and haripriya
ವಸಿಷ್ಠ ಸಿಂಹ & ಹರಿಪ್ರಿಯಾ ನಡುವೆ ಪ್ರೀತಿ ಚಿಗುರಿದ್ದು ಹೇಗೆ? ಈ ಜೋಡಿ ಮದುವೆ ಆಗೋದು ಯಾವಾಗ?
ಪ್ರೀತಿಯೆಂಬ ಮಾಯೆಯಲ್ಲಿ ಬೀಳದವರೇ ಇಲ್ಲ, ಪ್ರೀತಿ ಎಂಬ ಮಾಯಾ ಜಿಂಕೆ ಎಲ್ಲರನ್ನು ಸೆಳೆಯುತ್ತದೆ. ಇದಕ್ಕೆ ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಕೂಡ ಹೊರತಾಗಿಲ್ಲ. ಸದಾ ಕಾಲ ಚಿತ್ರೀಕರಣ, ಕಾರ್ಯಕ್ರಮ, ಸಿನಿಮಾ ಕಥೆ ಕೇಳುವುದು, ಚಿತ್ರ ಬಿಡುಗಡೆಯ ಜಂಜಾಟ, ಅಭಿಮಾನಿಗಳ ಭೇಟಿ ಇತ್ಯಾದಿಗಳಲ್ಲಿ ಬ್ಯುಸಿ ಇರುವ ಇವರಿಬ್ಬರು ಈಗ ತಮ್ಮ ವೈಯಕ್ತಿಕ ಬದುಕಿಗೂ ಸ್ವಲ್ಪ ಸಮಯ ಕೊಟ್ಟು, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಪ್ರೀತಿಸಿದ್ದಾರೆ. ಆ ಪ್ರೀತಿಗೆ ನಿಶ್ಚಿತಾರ್ಥವೆಂಬ ಅಧಿಕೃತ ಮುದ್ರೆ ಒತ್ತಿದ್ದಾರೆ.
ಹರಿಪ್ರಿಯಾ ಕನ್ನಡದ ಜನಪ್ರಿಯ ನಟಿ. ಕನ್ನಡದ ಹಲವು ಸ್ಟಾರ್‌ಗಳ ಜತೆಗೆ ಅವರು ನಟಿಸಿದ್ದಾರೆ. ವಸಿಷ್ಠ ಸಿಂಹ ಕೂಡ ಕನ್ನಡದ ಪ್ರಮುಖ ನಟರಲ್ಲಿ ಒಬ್ಬರು. ಹಲವು ಸಿನಿಮಾಗಳಲ್ಲಿ ನಟಿಸಿರುವ ಅವರು ತೆಲುಗು ಸಿನಿಮಾದಲ್ಲೂ ನಾಯಕರಾಗಿದ್ದಾರೆ. ಶೀಘ್ರದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಈ ಜೋಡಿ, ಈವರೆಗೆ ಒಂದು ಸಿನಿಮಾದಲ್ಲಿ ಮಾತ್ರ ಜತೆಯಾಗಿದೆ. ತೆಲುಗಿನ ‘ಎವರು’ ಸಿನಿಮಾದ ರಿಮೇಕ್‌ನಲ್ಲಿ ಇವರಿಬ್ಬರು ನಟಿಸಿದ್ದು, ಸದ್ಯದಲ್ಲೇ ಆ ಚಿತ್ರ ರಿಲೀಸ್‌ ಆಗಲಿದೆ. ಸಿನಿಮಾದಲ್ಲಿ ಒಟ್ಟಿಗೆ ನಟಿಸದಿದ್ದರೂ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದು ಮಾತ್ರ ಬಹಳ ಕುತೂಹಲಕರವಾಗಿದೆ. ಈ ಎಲ್ಲಾ ವಿಷಯಗಳನ್ನು ಸದ್ಯದಲ್ಲೇ ಈ ಜೋಡಿ ಮಾಧ್ಯಮಗಳ ಮುಂದೆ ಹಂಚಿಕೊಳ್ಳಲಿದೆ.

Hariprriya-Vasishta Simha: ಹರಿಪ್ರಿಯಾ, ವಸಿಷ್ಠ ಸಿಂಹ ನಿಶ್ಚಿತಾರ್ಥದ ಫೋಟೋ ಹೊರಬಿತ್ತು ; 'ಸಿಂಹಪ್ರಿಯ' ಎಂದ ಅಭಿಮಾನಿಗಳು
ಹಲವು ವರ್ಷಗಳಿಂದಲೇ ಚಿರಪರಿಚಿತರು
ಲವಲವಿಕೆಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಹಲವು ವರ್ಷಗಳಿಂದಲೇ ಚಿರಪರಿಚಿತರು. ಈ ಪರಿಚಯ ಸ್ನೇಹಕ್ಕೆ ತಿರುಗಿದೆ. ಪರಸ್ಪರ ಫೋನ್‌ನಲ್ಲಿ ಮಾತನಾಡುತ್ತಾ ಆತ್ಮೀಯರಾಗಿದ್ದಾರೆ. ಒಬ್ಬರ ಇಷ್ಟ ಕಷ್ಟಗಳನ್ನು ಅರಿತು ಪರಸ್ಪರ ಮೆಚ್ಚಿಕೊಂಡು ಪ್ರೀತಿಸಲು ಆರಂಭಿಸಿದ್ದಾರೆ. ಈ ಪ್ರೀತಿ ಆರಂಭವಾಗಿ ವರ್ಷವಾದರೂ ಈ ವಿಷಯವನ್ನು ರಹಸ್ಯವಾಗಿಟ್ಟಿದ್ದಾರೆ. ಈ ಇವರ ಪ್ರೀತಿಯ ಗುಟ್ಟು ರಟ್ಟಾಗಿದ್ದು, ಇವರ ಪ್ರೇಮ ಮದುವೆಯವರೆಗೆ ಬಂದು ನಿಂತಿದೆ.

Haripriya: ನಿಶ್ಚಿತಾರ್ಥದ ವದಂತಿ ಮಧ್ಯೆಯೇ ಹರಿಪ್ರಿಯಾ ವಿಶೇಷ ಪೋಸ್ಟ್: ಎಷ್ಟೋಂದು ಅರ್ಥ ಕಲ್ಪಿಸಿದ ಅಭಿಮಾನಿಗಳು!
ಎಂದೂ ನಿನ್ನ ನೆರಳಾಗಿ ಕಾಯುವೆ ನಾನು
ವಸಿಷ್ಠ ಸಿಂಹರನ್ನು ಬಹುವಾಗಿ ಪ್ರೀತಿಸುವ ಹರಿಪ್ರಿಯಾ ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಕ್ರಿಯೇಟಿವ್‌ ಆಗಿ ವಿವರಿಸಿದ್ದಾರೆ. ಶಾಂತ ಸ್ವರೂಪ ಸಿಂಹ ಕೈಯಲ್ಲಿ ನಿಶ್ಚಿಂತೆಯಾಗಿ ನಿದ್ರಿಸುತ್ತಿರುವ ಹುಡುಗಿಯ ಫೋಟೋ ಪೋಸ್ಟ್‌ ಮಾಡಿರುವ ಅವರು, ‘ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು’ ಎಂದು ಕ್ಯಾಪ್ಷನ್‌ ಕೊಟ್ಟಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ವಸಿಷ್ಠ, ‘ಎಂದೂ ನಿನ್ನ ನೆರಳಾಗಿ ಕಾಯುವೆ ನಾನು’ ಎಂದು ಬರೆದಿದ್ದಾರೆ. ಒಬ್ಬರ ವೃತ್ತಿಯನ್ನು ಮತ್ತೊಬ್ಬರು ಗೌರವಿಸಬೇಕು ಮತ್ತು ವೈಯಕ್ತಿಕ ನಿಲುವುಗಳನ್ನು ಸಹ ಪರಸ್ಪರ ಗೌರವಿಸಿಕೊಂಡರೆ ಜೀವನ ಚೆನ್ನಾಗಿರುತ್ತದೆ ಎಂಬ ಮಾತಿನಂತೆ ಈ ಜೋಡಿ ಜೀವನ ನಡೆಸಲಿದೆಯಂತೆ. ಹರಿಪ್ರಿಯಾ ಮದುವೆಯಾದ ಮೇಲೂ ಕಾಡುವಂತಹ ಕಥೆಗಳಲ್ಲಿ ನಟಿಸಲಿದ್ದಾರಂತೆ.

Vasishta Simha-Haripriya: ನಿವಾಸದಲ್ಲಿಯೇ ವಸಿಷ್ಠ ಎನ್ ಸಿಂಹ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ನಟಿ ಹರಿಪ್ರಿಯಾ
ಈ ಜೋಡಿ ಪ್ರೀತಿಸಿ ಮದುವೆಯಾಗುತ್ತಿದ್ದರೂ, ಮುಂದಿನ ಶುಭಕಾರ್ಯಗಳನ್ನು ಹಿರಿಯರ ಆಣತಿಯಂತೆ ಮಾಡಲಿದೆ. ಗುರುವಾರದವರೆಗೂ ಮಂಗಳೂರಿನಲ್ಲಿ ಚಿತ್ರೀಕರಣದಲ್ಲಿದ್ದ ವಸಿಷ್ಠ ಸಿಂಹ ಶುಕ್ರವಾರ ದಿನ ಚೆನ್ನಾಗಿದೆ ಎಂಬ ಕಾರಣಕ್ಕೆ ಬೆಂಗಳೂರಿಗೆ ಬಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದು ಸಹ ಹಿರಿಯರ ಆಶಯದಂತೆ ನಡೆದಿದ್ದು, ಈ ಸಮಾರಂಭಕ್ಕೆ ಕುಟುಂಬಸ್ಥರನ್ನು ಬಿಟ್ಟರೆ ಬೇರೆ ಯಾರಿಗೂ ಆಮಂತ್ರಣವಿರಲಿಲ್ಲ. ಇಬ್ಬರಿಗೂ ಸಮಯ ಕಡಿಮೆ ಇದ್ದ ಕಾರಣಕ್ಕೆ ಸರಳ ನಿಶ್ಚಿತಾರ್ಥ ನಡೆದಿದೆ ಎನ್ನಲಾಗುತ್ತಿದೆ. ಈ ಪ್ರೇಮ ಜೋಡಿಗೆ ಸೋಷಿಯಲ್‌ ಮೀಡಿಯಾದಲ್ಲಿ ಈಗ ‘ಸಿಂಹಪ್ರಿಯಾ’ ಎಂಬ ಟೈಟಲ್‌ ನೀಡಲಾಗಿದೆ.

2023ಕ್ಕೆ ಸಿಂಹಪ್ರಿಯಾ ಮದುವೆವಸಿಷ್ಠ ಸಿಂಹ ಸದ್ಯಕ್ಕೆ ‘ಲವ್‌ ಲೀ’ ಸಿನಿಮಾದಲ್ಲಿ ನಟಿಸುತ್ತಿದ್ದು, ಶೀಘ್ರದಲ್ಲೇ ಅವರ ಮತ್ತೊಂದು ಸಿನಿಮಾ ಆರಂಭವಾಗಲಿದೆ. ಹಾಗಾಗಿ 2023ರ ಆರಂಭದಲ್ಲಿ ಒಳ್ಳೆಯ ದಿನ ನೋಡಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದೆ.
ಲೇಖಕರ ಬಗ್ಗೆ
ಅವಿನಾಶ್ ಜಿ. ರಾಮ್
'ವಿಜಯ ಕರ್ನಾಟಕ' ಡಿಜಿಟಲ್ ವಿಭಾಗದಲ್ಲಿ 2019ರ ಸೆಪ್ಟೆಂಬರ್‌ನಿಂದ ಪತ್ರಕರ್ತನಾಗಿ ಅವಿನಾಶ್ ಜಿ. ರಾಮ್ ಕೆಲಸ ಮಾಡುತ್ತಿದ್ದಾರೆ. ಚಿನ್ನದ ಪದಕದೊಂದಿಗೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ ಕಳೆದ 10 ವರ್ಷಗಳಿಂದ ಸಿನಿಮಾ ವರದಿಗಾರರಾಗಿ ಕೆಲಸ ಮಾಡಿದ ಅನುಭವವಿದೆ. ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ನಾಲ್ಕು ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಅವಿನಾಶ್‌ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ಪ್ರವಾಸ, ಓದು, ಸಂಗೀತ ಕೇಳುವುದು ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌