ಆ್ಯಪ್ನಗರ

ತಂದೆಯ ಜನ್ಮದಿನಕ್ಕೆ ಅನುಷ್ಕಾ ಪ್ರೀತಿಯ ಸಂದೇಶ; ಅಪ್ಪನಿಗೆ ಸ್ವೀಟಿಯ ಸ್ವೀಟ್‌ ಮಾತು

ಸಿನಿಮಾಗಳಲ್ಲಿ ಎಷ್ಟೇ ಬ್ಯುಸಿ ಆಗಿದ್ದರೂ ಕುಟುಂಬದವರಿಗೆ ಅನುಷ್ಕಾ ಶೆಟ್ಟಿ ಸಮಯ ಕೊಡುತ್ತಾರೆ. ಪರಭಾಷೆಯಲ್ಲಿ ಹೆಚ್ಚು ಖ್ಯಾತಿ ಗಳಿಸಿರುವ ಅವರು, ತಂದೆಯ ಜನ್ಮದಿನಕ್ಕೆ ಪ್ರೀತಿಭರಿತ ಮಾತುಗಳಿಂದ ಶುಭ ಕೋರಿದ್ದಾರೆ.

Vijaya Karnataka Web 20 Apr 2020, 6:38 pm
ಬೇರೆ ಸೆಲೆಬ್ರಿಟಿಗಳ ರೀತಿಯಲ್ಲಿ ಅನುಷ್ಕಾ ಶೆಟ್ಟಿ ಸದಾ ಕಾಲ ಸೋಶಿಯಲ್‌ ಮೀಡಿಯಾ ಬಳಸುವುದಿಲ್ಲ. ಸಿನಿಮಾ ಪ್ರಚಾರ ಮತ್ತು ಅಭಿಮಾನಿಗಳಿಗೆ ಶುಭ ಕೋರಲು ಮಾತ್ರ ಅವರು ಫೇಸ್‌ಬುಕ್‌ಗೆ ಹಾಜರಿ ಹಾಕುತ್ತಾರೆ. ಈ ಎರಡು ಕಾರಣ ಬಿಟ್ಟು ಅವರೇನಾದರೂ ಫೇಸ್‌ಬುಕ್‌ ಬಳಸುತ್ತಾರೆ ಎಂದರೆ ಅದು ಫ್ಯಾಮಿಲಿಗೋಸ್ಕರ ಮಾತ್ರ!
Vijaya Karnataka Web actress anushka shetty wishes her father happy birthday
ತಂದೆಯ ಜನ್ಮದಿನಕ್ಕೆ ಅನುಷ್ಕಾ ಪ್ರೀತಿಯ ಸಂದೇಶ; ಅಪ್ಪನಿಗೆ ಸ್ವೀಟಿಯ ಸ್ವೀಟ್‌ ಮಾತು


ಹೌದು, ಕಳೆದ ವರ್ಷ ತಾಯಿ ಪ್ರಫುಲ್ಲಾ ಶೆಟ್ಟಿ ಜನ್ಮದಿನದ ಸಲುವಾಗಿ ಕನ್ನಡದಲ್ಲಿಯೇ ಶುಭ ಕೋರುವ ಮೂಲಕ ಕನ್ನಡಿಗರ ಮನಗೆದ್ದಿದ್ದರು ಅನುಷ್ಕಾ. ಫ್ಯಾಮಿಲಿ ಫೋಟೋಗಳನ್ನು ಅಪರೂಪಕ್ಕೆಂಬಂತೆ ಅವರು ಹಂಚಿಕೊಳ್ಳುತ್ತಾರೆ. ಈಗ ತಂದೆ ಎ.ಎನ್‌. ವಿಠಲ್‌ ಶೆಟ್ಟಿ ಅವರ ಬರ್ತ್‌ಡೇಗೆ ಅನುಷ್ಕಾ ವಿಶ್‌ ಮಾಡಿದ್ದಾರೆ. ಭಾವುಕ ಪದಗಳಿಂದ ಅಪ್ಪನಿಗೆ ಸಂದೇಶ ರವಾನಿಸಿದ್ದಾರೆ.

'ಅತಿ ಹೆಚ್ಚು ಕಾಳಜಿವಹಿಸುವ, ಅತಿ ಹೆಚ್ಚು ಪ್ರೀತಿಸುವ, ಅತಿ ಹೆಚ್ಚು ಪ್ರೋತ್ಸಾಹಿಸುವ ಅಪ್ಪ ನೀವು. ನಮಗಾಗಿ ನೀವು ತುಂಬ ಶ್ರೇಷ್ಠ ಕೆಲಸಗಳನ್ನು ಮಾಡಿದ್ದೀರಿ. ಇವತ್ತು ನಿಮ್ಮ ದಿನ. ಯಾವಾಗಲೂ ನಗುತ್ತಲಿರಿ. ಯಾಕೆಂದರೆ, ಆ ನಗುವೇ ನಮ್ಮ ಖುಷಿಗೆ ಕಾರಣ. ಹ್ಯಾಪಿ ಬರ್ತ್‌ಡೇ ಮೈ ಲವ್ಲೀ ಪಪ್ಪಾ' ಎಂದು ಅನುಷ್ಕಾ ಬರೆದುಕೊಂಡಿದ್ದಾರೆ.

ಕನ್ನಡತಿ ಅನುಷ್ಕಾ ಶೆಟ್ಟಿ ಬರೆದ ಪ್ರೀತಿಯ ಪತ್ರ; ವಿಶೇಷ ವ್ಯಕ್ತಿಗೆ ತಿಳಿಸಿದ್ದಾರೆ ಹೃತ್ಪೂರ್ವಕ ಧನ್ಯವಾದ!

ಅನುಷ್ಕಾ ಕೆಲಸ ಮಾಡುತ್ತಿರುವುದು, ಖ್ಯಾತಿ ಗಳಿಸಿರುವುದು ಟಾಲಿವುಡ್‌, ಕಾಲಿವುಡ್‌ನಲ್ಲೇ ಆದರೂ ಅವರಿಗೆ ಕರುನಾಡಿನ ಮೇಲೆ ವಿಶೇಷ ಪ್ರೀತಿ. ಕನ್ನಡ ಭಾಷೆ ಬಗ್ಗೆಯೂ ಅಪಾರ ಗೌರವ. ಈ ವರ್ಷದ ಯುಗಾದಿ ಹಬ್ಬಕ್ಕೂ ಅಚ್ಚ ಕನ್ನಡದಲ್ಲಿ ಎಲ್ಲರಿಗೂ ಹಾರೈಕೆ ತಿಳಿಸಿದ್ದರು. ಬಿಸು ಹಬ್ಬಕ್ಕೆ ತುಳು ಭಾಷೆಯಲ್ಲಿಯೇ ಶುಭ ಹಾರೈಸಿದ್ದರು.

'ನಾನು ಮತ್ತು ಪ್ರಭಾಸ್ ಬೆಳಗಿನ ಜಾವ 3 ಗಂಟೆಯ ಫ್ರೆಂಡ್ಸ್‌'- ಅನುಷ್ಕಾ ಶೆಟ್ಟಿ ಹಿಂಗ್ಯಾಕೆ ಹೇಳಿದ್ರು?


--------------------------------------
ಈ ಪ್ರಶ್ನೆಗೆ ಕಾಮೆಂಟ್‌ ಬಾಕ್ಸ್‌ನಲ್ಲಿ ಉತ್ತರಿಸಿ
1. ಅನುಷ್ಕಾ ಶೆಟ್ಟಿ ಅವರ ಕನ್ನಡ ಅಭಿಮಾನದ ಬಗ್ಗೆ ನಿಮ್ಮ ಅನಿಸಿಕೆ ಏನು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌