ಆದಾಯ ತೆರಿಗೆ ಅಧಿಕಾರಿಗಳು ಇತ್ತೀಚೆಗೆ ತಮಿಳು ನಟ ದಳಪತಿ ವಿಜಯ್ ನಿವಾಸ ಮೇಲೆ ದಾಳಿ ನಡೆಸಿದ್ದರು. 'ಬಿಗಿಲ್' ಚಿತ್ರಕ್ಕಾಗಿ ಭಾರಿ ಸಂಭಾವನೆ ಪಡೆದಿದ್ದಾರೆ ಎಂಬ ಉದ್ದೇಶದಿಂದಾಗಿ ಈ ಐಟಿ ದಾಳಿ ನಡೆದಿತ್ತು. ಒಂದು ತಿಂಗಳ ಅವಧಿಯಲ್ಲಿ ಎರಡು ಸಲ ವಿಜಯ್ ಮನೆ ಮೇಲೆ ಐಟಿ ದಾಳಿ ನಡೆದಿದೆ. ಸದ್ಯಕ್ಕೆ ಮಾಸ್ಟರ್ ಚಿತ್ರದಲ್ಲಿ ಬಿಝಿ ಇದ್ದಾರೆ ವಿಜಯ್. ಈ ವರ್ಷದ ಅತ್ಯಂತ ನಿರೀಕ್ಷಿತ ಸಿನಿಮಾಗಳಲ್ಲಿ ಮಾಸ್ಟರ್ ಸಿನಿಮಾ ಸಹ ಒಂದು ಎನ್ನಿಸಿಕೊಂಡಿದೆ. ವಿಶೇಷ ಎಂದರೆ 'ಬಿಗಿಲ್' ಚಿತ್ರಕ್ಕಿಂತಲೂ ಶೇ.50ರಷ್ಟು ಹೆಚ್ಚು ಸಂಭಾವನೆಯನ್ನು ಮಾಸ್ಟರ್ ಚಿತ್ರಕ್ಕಾಗಿ ವಿಜಯ್ ಪಡೆದಿದ್ದಾರೆ ಎನ್ನುತ್ತಿವೆ ಮೂಲಗಳು. ಈ ಬಗ್ಗೆ ನಟಿ ಖುಷ್ಬೂ ಸುಂದರ್ ಟ್ವಿಟರ್ ನಲ್ಲಿ ಅಭಿಮಾನಿಗಳ ಜೊತೆಗೆ ರೋಚಕ ಸಂಗತಿಯನ್ನು ಹಂಚಿಕೊಂಡಿದ್ದಾರೆ.
ತನಿಖಾ ಇಲಾಖೆ ನಟ ವಿಜಯ್ ಅವರ ಸಂಭಾವನೆಯ ವಿವರಗಳನ್ನು ಬಿಡುಗಡೆ ಮಾಡಿದೆ. ಬಿಗಿಲ್ ಚಿತ್ರದ ಮೂಲಕ ವಿಜಯ್ಗೆ ₹ 50 ಕೋಟಿ ಸಿಕ್ಕಿತ್ತು. ಈಗ ಮಾಸ್ಟರ್ ಚಿತ್ರಕ್ಕಾಗಿ ₹ 80 ಕೋಟಿ ಸಂಭಾವನೆ ಪಡೆದಿದ್ದಾರೆ. ಈ ಹಿಂದಿನ ಚಿತ್ರಕ್ಕೆ ವಿಜಯ್ ತೆರಿಗೆ ಕೂಡ ಕಟ್ಟಿದ್ದಾರೆ ಎಂಬ ಸಂಗತಿಯನ್ನೂ ಖುಷ್ಬೂ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.
ಕನ್ನಡದಲ್ಲಿ ನಟಿಸಿದ ಮಾಳವಿಕಾ ಜೊತೆ ರೊಮ್ಯಾನ್ಸ್ ಮಾಡಲಿರುವ 'ದಳಪತಿ' ವಿಜಯ್
ನಟ ವಿಜಯ್ ಸಂಭಾವನೆಯನ್ನು ಖುಷ್ಬೂ ಅವರು ಯಾಕೆ ಬಹಿರಂಪಡಿಸಿದ್ದಾರೆ ಎಂಬುದು ಗೊತ್ತಾಗಿಲ್ಲ. ನಟ ವಿಜಯ್ ಜೊತೆಗೆ ಆತ್ಮೀಯ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ ಖುಷ್ಬೂ. ಹಲವಾರು ಸಂದರ್ಶನಗಳಲ್ಲಿ ವಿಜಯ್ರನ್ನು ಹಾಡಿ ಹೊಗಳಿದ್ದಾರೆ ಕೂಡ. ಈ ಹಿನ್ನೆಲೆಯಲ್ಲಿ ವಿಜಯ್ ಸಂಭಾವನೆಯನ್ನು ಬಹಿರಂಗಪಡಿಸಿರುವ ಸಾಧ್ಯತೆಗಳಿವೆ. ಇಷ್ಟು ದಿನ ಚಿತ್ರವೊಂದಕ್ಕೆ ವಿಜಯ್ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬುದು ರಹಸ್ಯ ಸಂಗತಿಯಾಗಿ ಉಳಿದಿತ್ತು. ಈಗ ಆ ರಹಸ್ಯ ಈಗ ಬಯಲಾಗಿದೆ.
ವಿಜಯ್ ಅಭಿನಯದ 'ಬಿಗಿಲ್' ಚಿತ್ರದ ಬಜೆಟ್ ಎಷ್ಟು ಗೊತ್ತಾ?
ಅಂದಹಾಗೆ ಮಾಸ್ಟರ್ ಚಿತ್ರದ ಆಡಿಯೋ ಇದೇ ಮಾರ್ಚ್ 15ರಂದು ಚೆನ್ನೈನಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರವನ್ನು ಲೋಕೇಶ್ ಕನಗರಾಜ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಿದ್ದಾರೆ. ಈ ಚಿತ್ರದಲ್ಲಿ ಭಾರಿ ತಾರಾಗಣವೇ ತುಂಬಿದೆ. ವಿಜಯ್, ವಿಜಯ್ ಸೇತುಪತಿ, ಮಾಳವಿಕಾ ಮೋಹನನ್ ಹಾಗೂ ಆಂಡ್ರಿಯಾ ಜೆರೆಮಯ್ಯಾ ಮುಂತಾದವರಿದ್ದಾರೆ. ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದ ಮೇಲೆ ಕೊರೊನಾ ಆತಂಕದ ಛಾಯೆ ಕವಿದಿದೆ.