ಆ್ಯಪ್ನಗರ

ನಟಿ ರಮ್ಯಾಗೆ ಶುರು ಆಗಿದೆ ಹೊಸ ಸಮಸ್ಯೆ! ಹ್ಯಾಕರ್‌ಗಳ ಮೇಲೆ ಮೂಡಿದ ಅನುಮಾನ

ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿರುವ ನಟಿ ರಮ್ಯಾಗೆ ಕಿಡಿಗೇಡಿಗಳ ಕಾಟ ಶುರು ಆದಂತಿದೆ. ಹ್ಯಾಕರ್‌ಗಳು ಅವರ ಖಾತೆಗೆ ಖನ್ನ ಹಾಕಲು ಪ್ರಯತ್ನಿಸಿದ್ದಾರೆ. ಆ ಬಗ್ಗೆ ಸ್ವತಃ ರಮ್ಯಾ ಮಾಹಿತಿ ಹಂಚಿಕೊಂಡಿದ್ದಾರೆ.

Vijaya Karnataka Web 27 Aug 2020, 10:46 am
ಸಿನಿಮಾದಿಂದ ದೂರಾಗಿ, ಈಗ ರಾಜಕೀಯದಲ್ಲೂ ಗ್ಯಾಪ್‌ ಪಡೆದುಕೊಂಡಿರುವ ರಮ್ಯಾ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಹೆಚ್ಚು ಸಕ್ರಿಯ ಆಗಿದ್ದಾರೆ. ಇಷ್ಟದ ಫೋಟೋಗಳನ್ನು ಹಂಚಿಕೊಳ್ಳುತ್ತ, ಸೆಲೆಬ್ರಿಟಿ ಸ್ನೇಹಿತರ ಪೋಸ್ಟ್‌ಗಳಿಗೆ ಕಾಮೆಂಟ್‌ ಮಾಡುತ್ತ ಕಾಲ ಕಳೆಯುತ್ತಿದ್ದಾರೆ. ಈ ನಡುವೆ ಅವರಿಗೆ ಸೈಬರ್‌ ಕಿಡಿಗೇಡಿಗಳು ಕಾಟ ಕೊಡಲು ಆರಂಭಿಸಿದ್ದಾರೆ.
Vijaya Karnataka Web actress politician ramya divya spandana instagram account hacked
ನಟಿ ರಮ್ಯಾಗೆ ಶುರು ಆಗಿದೆ ಹೊಸ ಸಮಸ್ಯೆ! ಹ್ಯಾಕರ್‌ಗಳ ಮೇಲೆ ಮೂಡಿದ ಅನುಮಾನ


ಇನ್‌ಸ್ಟಾಗ್ರಾಮ್‌ನಲ್ಲಿ ರಮ್ಯಾಗೆ ಒಂದು ಸಮಸ್ಯೆ ಎದುರಾಗಿದೆ. ಈವರೆಗೂ ಅವರು ಅಪ್‌ಲೋಡ್‌ ಮಾಡಿದ ಫೋಟೋಗಳೇ ಕಣ್ಮರೆ ಆಗಿವೆ! ಎಷ್ಟೇ ಪ್ರಯತ್ನಿಸಿದರೂ ಆ ಸಮಸ್ಯೆ ಸರಿ ಆಗಿಲ್ಲ. ರಿಫ್ರೆಶ್‌, ರಿ-ಇನ್‌ಸ್ಟಾಲ್‌ ಮಾಡಿದ ಬಳಿಕವೂ ಪ್ರಯೋಜನ ಆಗಿಲ್ಲ. ಇದಕ್ಕಾಗಿ ಅವರು ದಿನವೆಲ್ಲ ಪ್ರಯತ್ನಿಸಿದ್ದಾರೆ. ಹಾಗಾಗಿ ಈ ವಿಚಾರವನ್ನು ಇನ್‌ಸ್ಟಾಗ್ರಾಮ್‌ ಸ್ಟೇಟಸ್‌ ಮೂಲಕ ಅವರು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ರಮ್ಯಾ ಖಾತೆ ಹ್ಯಾಕ್‌ ಆಗಿರಬಹುದೇ ಎಂಬ ಅನುಮಾನ ದಟ್ಟವಾಗಿದೆ. ಈವರೆಗೂ ಇನ್‌ಸ್ಟಾಗ್ರಾಮ್‌ನಲ್ಲಿ 70ಕ್ಕೂ ಅಧಿಕ ಪೋಸ್ಟ್‌ಗಳನ್ನು ಅವರು ಮಾಡಿದ್ದಾರೆ. ಆದರೆ ಸದ್ಯಕ್ಕೆ ಯಾವುದೂ ಕಾಣಿಸುತ್ತಿಲ್ಲ! ಇದು ಸೈಬರ್‌ ಕಿಡಿಗೇಡಿಗಳ ಕೃತ್ಯ ಎಂದು ಊಹಿಸಲಾಗುತ್ತಿದೆ. ಈ ಬಗ್ಗೆ ಖಚಿತ ಮಾಡಿಕೊಳ್ಳಲು 'ನನ್ನ ಅಕೌಂಟ್‌ಗೆ ಏನೋ ಆಗಿದೆ. ನನ್ನ ಪೋಸ್ಟ್‌ಗಳು ನಿಮಗೆ ಕಾಣಿಸುತ್ತಿವೆಯೇ?' ಎಂದು ಅಭಿಮಾನಿಗಳಿಗೆ ರಮ್ಯಾ ಪ್ರಶ್ನೆ ಕೇಳಿದ್ದಾರೆ.

also read: ನಟಿ ರಶ್ಮಿಕಾ ಫೋಟೋಗೆ ಕಾಮೆಂಟ್ ಮಾಡಿದ ರಮ್ಯಾ! ಅದಕ್ಕೆ 'ಕಿರಿಕ್ ಬ್ಯೂಟಿ' ಕೊಟ್ಟ ರಿಪ್ಲೈ ಏನು?

ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಖಾತೆ ಹ್ಯಾಕ್‌ ಆಗುವುದು ಜಾಸ್ತಿ ಆಗಿದೆ. ಸಿನಿಮಾ ಮತ್ತು ಕಿರುತೆರೆಯ ಅನೇಕ ಕಲಾವಿದರಿಗೆ ಈ ಸಮಸ್ಯೆ ಎದುರಾಗಿತ್ತು. ಚಂದನ್‌ ಶೆಟ್ಟಿ ಅವರ ಫೇಸ್‌ಬುಕ್‌ ಕೂಡ ಹ್ಯಾಕ್‌ ಆಗಿದೆ. ಹಾಗಾಗಿ, ಸೆಲೆಬ್ರಿಟಿಗಳ ಯಾವುದೇ ಪೋಸ್ಟ್‌ ಅಥವಾ ಮೆಸೇಜ್‌ಗಳನ್ನು ನಂಬಿಕೊಂಡು ತಕ್ಷಣಕ್ಕೆ ಪ್ರತಿಕ್ರಿಯಿಸುವ ಬದಲು ಅದರ ಸತ್ಯಾಸತ್ಯತೆ ತಿಳಿಯುವವರೆಗೆ ಅಭಿಮಾನಿಗಳು ತಾಳ್ಮೆ ಇಟ್ಟುಕೊಳ್ಳುವುದು ಒಳಿತು.

also read: ರಾಹುಲ್ ಗಾಂಧಿ ತಪ್ಪು ಮಾಡಿದ್ದಾರೆ! ಟ್ವಿಟ್ಟರ್‌ನಲ್ಲಿ ಮೌನ ಮುರಿದ ರಮ್ಯಾ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌