ಆ್ಯಪ್ನಗರ

ತೆಲುಗು ಚಿತ್ರಕ್ಕಾಗಿ ಕೊರೊನಾ ಹಾವಳಿ ನಡುವೆಯೂ ದೊಡ್ಡ ರಿಸ್ಕ್‌ ತೆಗೆದುಕೊಂಡ ನಟಿ ರಚಿತಾ ರಾಮ್‌!

ಇಷ್ಟು ದಿನ ಶೂಟಿಂಗ್‌ ಇಲ್ಲದೆ ಮನೆಯಲ್ಲೇ ಕಾಲ ಕಳೆಯುತ್ತಿದ್ದ ನಟಿ ರಚಿತಾ ರಾಮ್‌ ಅವರು ಈಗ ಕ್ಯಾಮರಾ ಎದುರಿಸಲು ಹೈದರಾಬಾದ್‌ಗೆ ತೆರಳಿದ್ದಾರೆ. ತೆಲುಗು ಚಿತ್ರದ ಸಲವಾಗಿ ರಿಸ್ಕ್ ತೆಗೆದುಕೊಂಡು ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದಾರೆ.

Vijaya Karnataka Web 23 Jun 2020, 11:39 am
ಕಳೆದ ಮೂರು ತಿಂಗಳಿನಿಂದ ಇಡೀ ಚಿತ್ರರಂಗಕ್ಕೆ ಒಂದು ರೀತಿಯ ಮಂಕು ಕವಿದಿತ್ತು. ಮುಹೂರ್ತ, ಶೂಟಿಂಗ್‌, ಡಬ್ಬಿಂಗ್‌, ಚಿತ್ರ ಪ್ರದರ್ಶನ ಇತ್ಯಾದಿ ಚುಟುವಟಿಕೆಗಳು ಇಲ್ಲದ ಕಾರಣ ಸಿನಿಮಾ ಕ್ಷೇತ್ರ ಕಳೆಗುಂದಿತ್ತು. ಈಗ ಶೂಟಿಂಗ್‌ ಮತ್ತು ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಿಗೆ ಸರ್ಕಾರ ಅನುಮತಿ ನೀಡಿರುವುದರಿಂದ ಕಲಾವಿದರು ಮತ್ತು ತಂತ್ರಜ್ಞರು ಮನೆಯಿಂದ ಹೊರಬರಲು ಧೈರ್ಯ ಮಾಡುತ್ತಿದ್ದಾರೆ.
Vijaya Karnataka Web ರಚಿತಾ ರಾಮ್‌


ಲಾಕ್‌ಡೌನ್ ಆರಂಭ ಆದಾಗಿನಿಂದಲೂ ಮನೆಯಲ್ಲೇ ಕಾಲ ಕಳೆಯುತ್ತಿದ್ದರು ನಟಿ ರಚಿತಾ ರಾಮ್‌. ಕನ್ನಡದ ಬಹುಬೇಡಿಕೆಯ ನಟಿ ಆಗಿರುವ ಅವರು ಹೀಗೆ ಎಷ್ಟು ದಿನ ಅಂತ ಮನೆಯಲ್ಲೇ ಇರಲು ಸಾಧ್ಯ? ಪ್ರಸ್ತುತ ಅನೇಕ ಸಿನಿಮಾ ತಂಡಗಳು ಶೂಟಿಂಗ್‌ ಪುನಾರಂಭ ಮಾಡಿವೆ. ಆ ಪೈಕಿ ರಚಿತಾ ರಾಮ್‌ ಅಭಿನಯದ ತೆಲುಗು ಸಿನಿಮಾ ಕೂಡ ಒಂದು. ಅದರ ಶೂಟಿಂಗ್‌ ಸಲುವಾಗಿ ರಚಿತಾ ಹೈದರಾಬಾದ್‌ಗೆ ತೆರಳಿದ್ದಾರೆ.

ರಚಿತಾ ನಟಿಸುತ್ತಿರುವ ಮೊದಲ ಪರಭಾಷಾ ಸಿನಿಮಾ ತೆಲುಗಿನ 'ಸೂಪರ್‌ ಮಚ್ಚಿ'. ಈ ಚಿತ್ರದಲ್ಲಿ ನಟ ಕಲ್ಯಾಣ್‌ ದೇವ್‌ಗೆ ಜೋಡಿಯಾಗಿ ರಚಿತಾ ಕಾಣಿಸಿಕೊಳ್ಳಲಿದ್ದಾರೆ. ಲಾಕ್‌ಡೌನ್‌ ಆರಂಭ ಆಗುವುದಕ್ಕೂ ಮುನ್ನ ಬಹುತೇಕ ಶೂಟಿಂಗ್‌ ಮುಗಿಸಿಕೊಳ್ಳಲಾಗಿತ್ತು. ಕೆಲವೇ ದಿನಗಳ ಚಿತ್ರೀಕರಣ ಬಾಕಿ ಇತ್ತು ಎನ್ನುವಾಗಲೇ ಲಾಕ್‌ಡೌನ್‌ ಜಾರಿ ಆಯಿತು. ಈಗ ಶೂಟಿಂಗ್‌ಗೆ ಅನುಮತಿ ಸಿಕ್ಕಿರುವ ಹಿನ್ನೆಲೆಯಲ್ಲಿ 'ಸೂಪರ್‌ ಮಚ್ಚಿ' ಚಿತ್ರೀಕರಣ ಪುನಾರಂಭ ಆಗಿದೆ.

also read: ಸಿನಿಮಾ ಬಿಟ್ಟು ಧಾರಾವಾಹಿ ಸುದ್ದಿ ಹೇಳೋಕೆ ಬಂದ ರಚಿತಾ ರಾಮ್! ಇದು ಲಾಕ್‌ಡೌನ್ ಎಫೆಕ್ಟ್‌

ಅಂದಹಾಗೆ, ಕೊರೊನಾ ವೈರಸ್‌ ಹಾವಳಿ ಸದ್ಯಕ್ಕಂತೂ ಕಮ್ಮಿ ಆಗುವ ಲಕ್ಷಣ ಕಾಣಿಸುತ್ತಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಜಾಸ್ತಿ ಆಗುತ್ತಲೇ ಇದೆ. ಈ ನಡುವೆಯೂ ರಚಿತಾ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸೂಕ್ತ ಮುನ್ನೆಚ್ಚರಿಕಾ ಕ್ರಮಗಳ ನಡುವೆಯೇ ಚಿತ್ರೀಕರಣ ಮಾಡಲಾಗುತ್ತಿದೆ ಎಂದು ಅವರು ಸೋಶಿಯಲ್‌ ಮೀಡಿಯಾ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

also read: ಹಾಲಿವುಡ್‌ ಶೈಲಿಯ ಚಿತ್ರಕ್ಕೆ ರಚಿತಾ ನಾಯಕಿ! ಮೊದಲ ಬಾರಿಗೆ ಇಂಥ ಪಾತ್ರ ಮಾಡ್ತಿದ್ದಾರೆ 'ಡಿಂಪಲ್‌ ಕ್ವೀನ್'!

ಪ್ರಸ್ತುತ ರಚಿತಾ ರಾಮ್‌ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಧನಂಜಯ್‌ ಜೊತೆಗಿನ 'ಡಾಲಿ', ಪ್ರಜ್ವಲ್‌ ದೇವರಾಜ್‌ ಜೊತೆ 'ವೀರಂ', ರಮೇಶ್‌ ಅರವಿಂದ್‌ ನಿರ್ದೇಶನದ '100', ಪ್ರೇಮ್‌ ನಿರ್ದೇಶನದ 'ಏಕ್‌ ಲವ್‌ ಯಾ' ಸೇರಿದಂತೆ ಅನೇಕ ಚಿತ್ರಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ.

also read: 'ಏಕ್‌ ಲವ್ ಯಾ'ಗೆ ನೋ ಫಾರಿನ್ ಶೂಟಿಂಗ್! 'ಜೋಗಿ' ಪ್ರೇಮ್‌ ಹೊಸ ಐಡಿಯಾ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌