ಆ್ಯಪ್ನಗರ

ವಾವ್.... ಮೆಡಿಕಲ್‌ ಸ್ಟೋರ್‌ನಲ್ಲಿ ಎಣ್ಣೆ ಸಿಗುತ್ತೆ ಅಂತ ಗೊತ್ತಿರಲಿಲ್ಲ! ಖ್ಯಾತ ನಟಿ ಶಾಕಿಂಗ್‌ ಹೇಳಿಕೆ

ದಕ್ಷಿಣ ಭಾರತದ ಖ್ಯಾತ ನಟಿ ರಾಕುಲ್‌ ಪ್ರೀತ್‌ ಸಿಂಗ್‌ ಈ ರೀತಿ ಹೇಳಿಕೆ ನೀಡಿದ್ದಾರೆ. ಅವರು ಹೀಗೆ ಮಾತನಾಡಲು ಇತ್ತೀಚೆಗೆ ವೈರಲ್‌ ಆದ ಒಂದು ವಿಡಿಯೋ ಕಾರಣ. ಇಂಥ ಹೇಳಿಕೆಯಿಂದ ರಾಕುಲ್‌ ಮತ್ತೆ ಸುದ್ದಿ ಆಗಿದ್ದಾರೆ.

Vijaya Karnataka Web 8 May 2020, 1:08 pm
ಲಾಕ್‌ಡೌನ್‌ನಿಂದಾಗಿ ಎಲ್ಲ ಬಾರ್‌ಗಳು ಕ್ಲೋಸ್‌ ಆಗಿದ್ದವು. ಆದರೆ ಇತ್ತೀಚೆಗೆ ಕೆಲವು ರಾಜ್ಯಗಳಲ್ಲಿ ಮತ್ತೆ ಮದ್ಯ ಮಾರಾಟ ಆರಂಭ ಆಗಿದೆ. ಇದು ಕುಡುಕರ ಪಾಲಿಗೆ ಭಾರಿ ಸಂತಸ ಮೂಡಿಸಿರುವ ಬೆಳವಣಿಗೆ. ಹೀಗೆ ಮದ್ಯದಂಗಡಿಗಳು ಬಾಗಿಲು ತೆರೆದ ಬೆನ್ನಲ್ಲೇ ನಟಿ ರಾಕುಲ್‌ ಪ್ರೀತ್‌ ಸಿಂಗ್‌ ಅವರ ಒಂದು ವಿಡಿಯೋ ವೈರಲ್‌ ಆಗಿತ್ತು.
Vijaya Karnataka Web ರಾಕುಲ್‌ ಪ್ರೀತ್‌ ಸಿಂಗ್‌


ರಾತ್ರಿ ವೇಳೆ ಕಾರು ನಿಲ್ಲಿಸಿ, ಪಕ್ಕದಲ್ಲಿದ್ದ ಅಂಗಡಿಗೆ ತೆರಳಿ ರಾಕುಲ್‌ ಪ್ರೀತ್‌ ಸಿಂಗ್‌ ಮದ್ಯ ಖರೀದಿಸಿದ್ದಾರೆ ಎನ್ನಲಾದ ದೃಶ್ಯ ಆ ವಿಡಿಯೋದಲ್ಲಿ ಇತ್ತು. ಸಾಮಾಜಿಕ ಜಾಲತಾಣದಲ್ಲಿ ಅದು ಸಿಕ್ಕಾಪಟ್ಟೆ ಚರ್ಚೆ ಹುಟ್ಟುಹಾಕಿದ್ದಲ್ಲದೆ ವಾಟ್ಸಪ್‌ ಗ್ರೂಪ್‌ಗಳಲ್ಲಿ ಹರಿದಾಡಿತು. ಆದರೆ ಅದರಲ್ಲಿ ಇರುವುದು ರಾಕುಲ್‌ ಹೌದೋ ಅಲ್ಲವೋ ಎಂಬುದು ಸ್ಪಷ್ಟ ಆಗಿರಲಿಲ್ಲ.

ಹೌದು, ಆ ವಿಡಿಯೋದಲ್ಲಿ ಇರುವ ಯುವತಿ ಮುಖಕ್ಕೆ ಮಾಸ್ಕ್‌ ಧರಿಸಿದ್ದರಿಂದ ಅದು ರಾಕುಲ್‌ ಹೌದೋ ಅಲ್ಲವೋ ಎಂಬುದು ಗೊತ್ತಾಗಿರಲಿಲ್ಲ. ಆದರೆ ಈಗ 'ಅದು ನಾನೇ' ಎಂದು ಸ್ವತಃ ರಾಕುಲ್‌ ಒಪ್ಪಿಕೊಂಡಿದ್ದಾರೆ. ಆದರೆ ಅವರು ನಿಜಕ್ಕೂ ಎಣ್ಣೆ ಖರೀದಿಸಿದ್ದಾರಾ? ಅಲ್ಲೇ ಇರುವುದು ನಿಜವಾದ ಟ್ವಿಸ್ಟ್‌! ಅಚ್ಚರಿ ಏನೆಂದರೆ ಅವರು ಹೋಗಿದ್ದು ಮದ್ಯದ ಅಂಗಡಿಗೆ ಅಲ್ಲವೇ ಅಲ್ಲ.

'ಎಣ್ಣೆ' ತರಲು ವೈನ್‌ ಸ್ಟೋರ್‌ಗೆ ಹೋಗಿದ್ದರೇ ನಟಿ ರಾಕುಲ್ ಪ್ರೀತ್‌ ಸಿಂಗ್? ಈ ವಿಡಿಯೋ ಅಸಲಿಯತ್ತೇನು?

ಅಂದು ಕೆಲವು ಔಷಧಿಗಳನ್ನು ತರಲು ರಾಕುಲ್‌ ಪ್ರೀತ್‌ ಸಿಂಗ್‌ ಮೆಡಿಕಲ್‌ ಸ್ಟೋರ್‌ಗೆ ತೆರಳಿದ್ದರಂತೆ. ಅದೇ ಸಂದರ್ಭದಲ್ಲಿ ವಿಡಿಯೋ ರೆಕಾರ್ಡ್‌ ಮಾಡಿಕೊಂಡವರು ಆಕೆ ಎಣ್ಣೆಯನ್ನೇ ಖರೀದಿಸಲು ಹೋಗಿದ್ದರು ಎಂಬಂತೆ ಬಿಂಬಿಸಿ ಆ ವಿಡಿಯೋವನ್ನು ವೈರಲ್‌ ಮಾಡಿದ್ದರು. ಅದಕ್ಕೆ ಈಗ ರಾಕುಲ್‌ ಪ್ರತಿಕ್ರಿಯೆ ನೀಡಿದ್ದಾರೆ. 'ವಾವ್.... ಮೆಡಿಕಲ್‌ ಸ್ಟೋರ್‌ನಲ್ಲಿ ಎಣ್ಣೆ ಮಾರಾಟ ಮಾಡ್ತಾರೆ ಅಂತ ಗೊತ್ತಿರಲಿಲ್ಲ' ಎಂದು ಟ್ವೀಟ್‌ ಮಾಡಿದ್ದಾರೆ.

ಲಾಕ್ ಡೌನ್‌ ಟೈಮ್‌ನಲ್ಲಿ ಕಬಡ್ಡಿ ಆಡ್ತಿದ್ದಾರೆ ದಕ್ಷಿಣ ಭಾರತದ ಬಹುಬೇಡಿಕೆಯ ನಟಿ!

ಇನ್ನು, ರಾಕುಲ್‌ ಪರವಾಗಿಯೂ ಅನೇಕ ಅಭಿಮಾನಿಗಳು ಟ್ವೀಟ್‌ ಮಾಡಿದ್ದಾರೆ. 'ಒಂದು ವೇಳೆ ಅವರು ಎಣ್ಣೆ ಖರೀದಿ ಮಾಡಿದರೆ ತಪ್ಪೇನಿದೆ? ಎಲ್ಲವನ್ನೂ ಒಂದೇ ರೀತಿಯಲ್ಲಿ ಯಾಕೆ ಬಿಂಬಿಸುತ್ತೀರಿ? ಏನು ತಿನ್ನಬೇಕು, ಏನು ಕುಡಿಯಬೇಕು ಎಂಬ ಸ್ವಾತಂತ್ರ್ಯ ಅವರಿಗೂ ಇದೆ' ಎಂಬುದಾಗಿ ಹಲವರು ಕಾಮೆಂಟ್‌ ಮಾಡಿದ್ದಾರೆ.

ಮಹಿಳಾ ದಿನಾಚರಣೆ ಆಚರಿಸುವುದರಲ್ಲಿ ನನಗೆ ನಂಬಿಕೆ ಇಲ್ಲ: ರಾಕುಲ್ ಪ್ರೀತ್ ಸಿಂಗ್


------------------
ಈ ಪ್ರಶ್ನೆಗೆ ಕಾಮೆಂಟ್‌ ಬಾಕ್ಸ್‌ನಲ್ಲಿ ಉತ್ತರಿಸಿ
1. ಲಾಕ್‌ಡೌನ್‌ ನಡುವೆ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದರ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌