ಆ್ಯಪ್ನಗರ

ಸಾಲುಮರದ ತಿಮ್ಮಕ್ಕ ಅವರ ಬಗ್ಗೆ ಹೇಳಲು ತಡವರಿಸಿದ ನಟಿ ರಶ್ಮಿಕಾ! 'ವೃಕ್ಷಮಾತೆ'ಯ ಕುರಿತು ಸರಾಗವಾಗಿ ಮಾತನಾಡಿದ ತಮಿಳು ನಟ!!

ಈ ಹಿಂದೆ ಕೆಲ ವಿಚಾರಗಳಿಗೆ ಸಂಬಂಧಿಸಿದಂತೆ ರಶ್ಮಿಕಾ ಮಂದಣ್ಣ ಸೋಷಿಯಲ್‌ ಮೀಡಿಯಾದಲ್ಲಿ ಟೀಕೆಗೆ ಗುರಿಯಾಗಿದ್ದರು. ಇದೀಗ ವೈರಲ್ ಆಗಿರುವ ವಿಡಿಯೋವೊಂದು ಮತ್ತೆ ಅವರನ್ನು ಸುದ್ದಿಯಾಗುವಂತೆ ಮಾಡಿದೆ!

Vijaya Karnataka Web 27 Oct 2019, 4:45 pm
ಸಾಲುಮರದ ತಿಮ್ಮಕ್ಕ ಕರ್ನಾಟಕದ ಹೆಮ್ಮೆ. ಲಕ್ಷಾಂತರ ಸಸಿ ನೆಟ್ಟು, ಅವುಗಳನ್ನು ಪೋಷಿಸಿದ ಕೀರ್ತಿ ಸಾಲುಮರದ ತಿಮ್ಮಕ್ಕ ಅವರದ್ದು. ಅವರ ಸಾಧನೆಯನ್ನು ಗೌರವಿಸಿ ಕೇಂದ್ರ ಸರ್ಕಾರ ಅವರಿಗೆ ದೇಶದ ಅತ್ಯುನ್ನತ ಪದ್ಶಶ್ರೀ ಪ್ರಶಸ್ತಿಯನ್ನು ನೀಡಿದೆ. ಇಂಥ ಮಹಾನ್ ಸಾಧಕಿಯ ಬಗ್ಗೆ ಹೇಳಲು ನಟಿ ರಶ್ಮಿಕಾ ಮಂದಣ್ಣ ತಡವರಿಸಿದ ಘಟನೆ ಇತ್ತೀಚೆಗೆ ನಡೆದಿದೆ. ಅಚ್ಚರಿ ಎಂದರೆ, ರಶ್ಮಿಕಾ ಕನ್ನಡತಿಯಾಗಿದ್ದರೂ, ತಿಮ್ಮಕ್ಕ ಅವರ ಬಗ್ಗೆ ಸರಿಯಾಗಿ ಹೇಳಲು ಸಾಧ್ಯ ವಾಗಿಲ್ಲ. ಆದರೆ, ತಮಿಳು ನಟರೊಬ್ಬರು ಸರಾಗವಾಗಿ ತಿಮ್ಮಕ್ಕ ಅವರ ಸಾಧನೆಗಳನ್ನು ತಿಳಿಸಿದ್ದಾರೆ.
Vijaya Karnataka Web Rashmika Mandanna

ಟಾಲಿವುಡ್‌ ನಿರ್ಮಾಪಕ ನೀಡಿದ ಆಫರ್ ರಿಜೆಕ್ಟ್ ಮಾಡಿದ ರಶ್ಮಿಕಾ ಮಂದಣ್ಣ! ಎನಿದು ವಿಚಾರ?
ಅಷ್ಟಕ್ಕೂ ಇದು ನಡೆದಿರುವುದು ತಮಿಳನಾಡಿನಲ್ಲಿ. ಇತ್ತೀಚಿಗೆ ಆಯೋಜನೆಗೊಂಡಿದ್ದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಸಾಲುಮರದ ತಿಮ್ಮಕ್ಕ ಅವರಿಗೆ ಸನ್ಮಾನ ಇಟ್ಟುಕೊಳ್ಳಲಾಗಿತ್ತು. ಅಲ್ಲಿ ಕನ್ನಡದ ನಟಿ ರಶ್ಮಿಕಾ ಕೂಡ ಹಾಜರಿದ್ದರು. ಅಲ್ಲದೆ, ತಮಿಳುನಾಡಿನ ಖ್ಯಾತ ನಟ-ನಟಿಯರೆಲ್ಲ ಅಲ್ಲಿ ನೆರೆದಿದ್ದರು. ಆಗ ವೇದಿಕೆ ಬಂದ ಸಾಲುಮರದ ತಿಮ್ಮಕ್ಕ ಅವರು ಕನ್ನಡದಲ್ಲೇ ಮಾತನಾಡಲು ಆರಂಭಿಸಿದರು. ಆಗ ಅದನ್ನು ಅಲ್ಲಿದ ನೆರೆದವರಿಗೆ ಅರ್ಥವಾಗುವಂತೆ ಇಂಗ್ಲಿಷ್‌ನಲ್ಲಿ ಹೇಳಲು ರಶ್ಮಿಕಾಗೆ ನಿರೂಪಕರು ಕೇಳಿಕೊಂಡರು. ಆದರೆ, ತಿಮ್ಮಕ್ಕ ಅವರು ಹೇಳಿದ್ದನ್ನು ರಶ್ಮಿಕಾಗೆ ಸರಿಯಾಗಿ ಭಾಷಾಂತಾರಿಸಲು ಸಾಧ್ಯವಾಗಲಿಲ್ಲ.
ನೆರವಿಗೆ ಬಂದ ವಿವೇಕ್‌!
ಆಗ ಅಲ್ಲಿಯೇ ವೇದಿಕೆಯಲ್ಲಿದ್ದ ತಮಿಳು ನಟ ವಿವೇಕ್‌, ತಿಮ್ಮಕ್ಕ ಅವರನ್ನು ಹೇಳಿದ್ದನ್ನು ಸರಾಗವಾಗಿ ತಮಿಳಿಗೆ ಭಾಷಾಂತಾರ ಮಾಡಿದರು. ಜೊತೆಗೆ ತಿಮ್ಮಕ್ಕ ಸಾಧನೆಯನ್ನು ಮನತುಂಬಿ ಹೊಗಳಿದರು. ತಿಮ್ಮಕ್ಕ ಅವರ ಬಗ್ಗೆ ತಿಳಿದುಕೊಂಡ ಅಲ್ಲಿ ನೆರೆದಿದ್ದ ಅನೇಕರು ಚಪ್ಪಾಳೆ ತಟ್ಟುವುದರ ಮೂಲಕ ಗೌರವ ಸಲ್ಲಿಸಿದರು. ಮಕ್ಕಳಿಲ್ಲ ಎಂದು ಕೊರಗುವ ಬದಲು, ಸಸಿಗಳನ್ನು ನೆಟ್ಟು, ಅವುಗಳನ್ನೇ ಪ್ರೀತಿಯಿಂದ ನೋಡಿಕೊಂಡ ತಿಮ್ಮಕ್ಕ, ಮರಗಳನ್ನೇ ತಮ್ಮ ಮಕ್ಕಳೆಂದು ಭಾವಿಸಿದರು. ಅದನ್ನು ಕೇಳಿದ ಸಭಿಕರು ಖುಷಿ ವ್ಯಕ್ತಪಡಿಸಿದರು.

ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ನಟ ವಿವೇಕ್‌ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೆ, ತಿಮ್ಮಕ್ಕ ಅವರು ಹೇಳಿದ್ದನ್ನು ಸರಿಯಾಗಿ ಅರ್ಥೈಸಿಕೊಳ್ಳಲಾಗದ ರಶ್ಮಿಕಾ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಂದಹಾಗೆ, ಭಾಷೆ ಕುರಿತು ರಶ್ಮಿಕಾ ಅನೇಕ ಬಾರಿ ಈ ಟ್ರೋಲ್‌ಗೆ ಒಳಗಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌