ಆ್ಯಪ್ನಗರ

ತಮ್ಮ ಮಗು ಯಾವ ದಿನ? ಎಷ್ಟು ಗಂಟೆಗೆ ಹುಟ್ಟಲಿದೆ ಎಂದು ನಿಖರವಾಗಿ ಭವಿಷ್ಯ ನುಡಿದ ನಟಿ ಸಮಂತಾ!

ನಟಿ ಸಮಂತಾ ಅಕ್ಕಿನೇನಿ ಮದುವೆಯಾಗಿ ಎರಡು ವರ್ಷಗಳೇ ಆಗಿವೆ. ಆದರೆ, ಸಿನಿಮಾಗಳಿಂದ ಮಾತ್ರ ಅವರ ದೂರವಾಗಿಲ್ಲ. ಒಂದಾದ ಮೇಲೊಂದು ಸಿನಿಮಾ ಮಾಡುತ್ತಿದ್ದಾರೆ. ಈ ವರ್ಷ ಪತಿ ನಾಗ ಚೈತನ್ಯ ಅವರೊಂದಿಗೆ ನಟಿಸಿರುವ 'ಮಜಿಲಿ' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಯಶಸ್ಸು ಕಂಡಿತ್ತು. ಈಗ ಅವರು '96' ಸಿನಿಮಾದ ರಿಮೇಕ್‌ನಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚಿಗೆ ಅವರು ಏರ್‌ಪೋರ್ಟ್‌ನಲ್ಲಿ ವಿಮಾನಕ್ಕಾಗಿ ಕಾಯುವಾಗ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಅಭಿಮಾನಿಗಳಿಗೆ ಪ್ರಶ್ನೆ ಕೇಳುವಂತೆ ಕೇಳಿದ್ದಾರೆ. ಅದರಲ್ಲಿ ಒಬ್ಬರು ಕೇಳಿದ ಪ್ರಶ್ನೆ ಸಮಂತಾಗೆ ಕೋಪ ತರಿಸಿದೆ. ಅದೇನೆಂದರೆ, ನೀವು ಯಾವಾಗ ಮಗು ಹೊಂದುತ್ತೀರಿ ಎಂಬುದಾಗಿತ್ತು. ಅದಕ್ಕೆ ಸಖತ್ ಬೋಲ್ಡ್ ಆಗಿಯೇ ಉತ್ತರ ನೀಡಿರುವ ಸಮಂತಾ, 'ನನ್ನ ದೇಹದ ಕಾರ್ಯವೈಖರಿ ಬಗ್ಗೆ ಯಾರಿಗೆಲ್ಲ ಆಸಕ್ತಿ ಇದೆಯೋ, ಅವರಿಗಾಗಿ ಈ ಉತ್ತರ. ನಾನು 2022ರ ಆಗಸ್ಟ್ 7ರಂದು ಬೆಳಗ್ಗೆ 7ಗಂಟೆಗೆ ನನ್ನ ಮಗುವಿಗೆ ಜನ್ಮ ನೀಡಲಿದ್ದೇನೆ' ಎಂದಿದ್ಧಾರೆ. ಸದ್ಯ ಅವರು 'ದಿ ಫ್ಯಾಮಿಲಿ ಮ್ಯಾನ್‌ 2' ವೆಬ್‌ ಸಿರೀಸ್‌ನಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಅದಕ್ಕಾಗಿ ಅವರು ಪುಣೆಗೆ ತೆರಳಿದ್ದರು. ಶೂಟಿಂಗ್ ಮುಗಿಸಿ, ಮನೆಗೆ ಮರಳುವಾಗ ವಿಮಾನ ಬರುವುದು ತಡವಾಯ್ತು. ಆ ವೇಳೆ ಅವರು ಅಭಿಮಾನಿಗಳೊಂದಿಗೆ ಮಾತುಕಥೆ ಆರಂಭಿಸಿದ್ದರು. ಆಗ ಈ ಪ್ರಶ್ನೆ ಎದುರಾಗಿತ್ತು.

Vijaya Karnataka Web 16 Mar 2020, 7:19 pm

Vijaya Karnataka Web actress samantha akkineni talks about her pregnancy
ತಮ್ಮ ಮಗು ಯಾವ ದಿನ? ಎಷ್ಟು ಗಂಟೆಗೆ ಹುಟ್ಟಲಿದೆ ಎಂದು ನಿಖರವಾಗಿ ಭವಿಷ್ಯ ನುಡಿದ ನಟಿ ಸಮಂತಾ!

ಪ್ರೀತಿಸಿ ಮದುವೆಯಾಗಿರುವ ಸಮಂತಾ

'ಯೇ ಮಾಯಾ ಚೆಸಾವೆ' ಚಿತ್ರದ ಮೂಲಕ ಮೊದಲ ಬಾರಿಗೆ ಒಟ್ಟಿಗೆ ಸಮಂತಾ-ಚೈತನ್ಯ ನಟಿಸಿದ್ದರು. ಆನಂತರ ಇಬ್ಬರು 'ಆಟೋನಗರ್ ಸೂರ್ಯ', 'ಮನಂ' ಸಿನಿಮಾಗಳಲ್ಲಿ ನಟಿಸಿದ್ದರು. ಇತ್ತೀಚಿಗೆ ತೆರೆಕಂಡಿದ್ದ 'ಮಜಿಲಿ'ಯಲ್ಲೂ ಸಮಂತಾ-ನಾಗ ಚೈತನ್ಯ ಕಾಣಿಸಿಕೊಂಡಿದ್ದರು. ಹಲವು ವರ್ಷ ಪ್ರೀತಿ ಮಾಡಿ, ಕೊನೆಗೆ ಮದುವೆಯಾದರು.

ಅಭಿಮಾನಿಗೆ ಉತ್ತರ ನೀಡುತ್ತಿರುವ ಸಮಂತಾ

ಮಗು ಯಾವಾಗ ಹೊಂದುವಿರಿ ಎಂಬ ಪ್ರಶ್ನೆಗೆ ಕೊಂಚ ಗರಂ ಆಗಿ ಇನ್‌ಸ್ಟಾಗ್ರಾಮ್‌ನಲ್ಲಿಯೇ ಖಡಕ್‌ ಆಗಿ ಉತ್ತರ ನೀಡಿದ ಸಮಂತಾ.

ಪತಿಯೊಂದಿಗೆ ವಿದೇಶ ಪ್ರವಾಸದಲ್ಲಿ ಸಮಂತಾ

ಪತಿ ನಾಗ ಚೈತನ್ಯ ಅವರೊಂದಿಗೆ ಹಲವು ದೇಶಗಳಿಗೆ ಸಮಂತಾ ಪ್ರವಾಸ ಕೈಗೊಳ್ಳುತ್ತಲೇ ಇರುತ್ತಾರೆ ಸಮಂತಾ. ಕೆಲವು ದಿನಗಳ ಹಿಂದಷ್ಟೇ ಕುಟುಂಬಸಮೇತ ಅವರು ವಿದೇಶ ಸುತ್ತಿಕೊಂಡು ಬಂದಿದ್ದರು.

ಅಕ್ಕಿನೇನಿ ಕುಟುಂಬದ ದೀಪಾವಳಿ ಸಂಭ್ರಮ

ಅಕ್ಕಿನೇನಿ ಕುಟುಂಬ ಸದಸ್ಯರೊಂದಿಗೆ ದೀಪಾವಳಿ ಹಬ್ಬ ಸೆಲೆಬ್ರೇಟ್‌ ಮಾಡಿದ್ದರು ಸಮಂತಾ. ಮಾವ ನಾಗಾರ್ಜುನ ಅವರ ಮುದ್ದಿನ ಸೊಸೆ ಆಗಿರುವ ಸಮಂತಾ, ಇತ್ತೀಚಿಗೆ ನಾಗ್ ನಟಿಸಿದ್ದ 'ಮನ್ಮಥುಡು 2'ನಲ್ಲಿ ಸಣ್ಣ ಪಾತ್ರ ಮಾಡಿದ್ದರು.

ಜಾನು ಲುಕ್‌ನಲ್ಲಿ ಸಮಂತಾ

96 ಚಿತ್ರದ ರಿಮೇಕ್‌ನಲ್ಲಿ ಸಮಂತಾ ನಟಿಸಿದ್ದು, ಅದರ ಫಸ್ಟ್‌ ಲುಕ್‌ ಇದಾಗಿದೆ. ಈ ಚಿತ್ರದ ಶೂಟಿಂಗ್ ಮುಕ್ತಾಯಗೊಂಡಿದೆ. ತಮಿಳಿನಲ್ಲಿ ತ್ರಿಷಾ ಮಾಡಿದ್ದ ಪಾತ್ರಕ್ಕೆ ಸಮಂತಾ ಜೀವ ತುಂಬಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌