ಆ್ಯಪ್ನಗರ

Sanjjanaa Galrani: ಮಗನ ಹೆಸರನ್ನು ರಿವೀಲ್ ಮಾಡಿ, ಇನ್‌ಸ್ಟಾಗ್ರಾಮ್ ಅಕೌಂಟ್ ಸೃಷ್ಟಿ ಮಾಡಿದ ಸಂಜನಾ ಗಲ್ರಾನಿ

ನಟಿ ಸಂಜನಾ ಗಲ್ರಾನಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದಾರೆ. ಈಗ ಅವರ ಮಗನನ್ನೂ ಕೂಡ ಇನ್‌ಸ್ಟಾಗ್ರಾಮ್‌ಗಹೆ ಕರೆತಂದಿದ್ದಾರೆ. ಮಗನ ಹೆಸರಲ್ಲಿ ಅವರು ಇನ್‌ಸ್ಟಾಗ್ರಾಮ್‌ ಅಕೌಂಟ್ ಸೃಷ್ಟಿ ಮಾಡಿದ್ದಾರೆ. ಆ ಮೂಲಕ ಮಗನ ಹೆಸರನ್ನು ಕೂಡ ರಿವೀಲ್ ಮಾಡಿದ್ದಾರೆ. ಈ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Authored byಪದ್ಮಶ್ರೀ ಭಟ್ | Vijaya Karnataka Web 27 Jun 2022, 9:02 am

ಹೈಲೈಟ್ಸ್‌:


  • ಸಂಜನಾ ಗಲ್ರಾನಿ ಅವರ ಮಗನಿಗೆ 1 ತಿಂಗಳ ಹರೆಯ
  • ಸಂಜನಾ ಗಲ್ರಾನಿ ಅವರು ಮಗನ ಹೆಸರನ್ನು ರಿವೀಲ್ ಮಾಡಿದ್ದಾರೆ
  • ಮಗನ ಹೆಸರಲ್ಲಿ ಸಂಜನಾ ಗಲ್ರಾನಿ ಅವರು ಇನ್‌ಸ್ಟಾಗ್ರಾಮ್ ಅಕೌಂಟ್ ಸೃಷ್ಟಿ ಮಾಡಿದ್ದಾರೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web sanjana
ಸದ್ಯ ತಾಯ್ತನದ ಖುಷಿ ಅನುಭವಿಸುತ್ತಿರುವ ನಟಿ ಸಂಜನಾ ಗಲ್ರಾನಿ ( Sanjjanaa Galrani ) ಅವರು ಮಗನ ಹೆಸರು ರಿವೀಲ್ ಮಾಡಿದ್ದಾರೆ, ಅಷ್ಟೇ ಅಲ್ಲದೆ ಮಗನ ಹೆಸರಲ್ಲಿ ಇನ್‌ಸ್ಟಾಗ್ರಾಮ್ ಅಕೌಂಟ್‌ವೊಂದನ್ನು ಸೃಷ್ಟಿ ಮಾಡಿದ್ದಾರೆ.

ಸಂಜನಾ ಗಲ್ರಾನಿ ಮಗ ಹೇಳಿದ್ದೇನು?
"ಹಾಯ್, ನನ್ನನ್ನು ನಾನು ಅಧಿಕೃತವಾಗಿ ಇಂದು ನಿಮ್ಮೆಲ್ಲರಿಗೂ ಪರಿಚಯಗೊಳ್ಳುತ್ತಿದ್ದೇನೆ. ನನ್ನ ಹೆಸರು ಅಲಾರಿಕ್. ನನಗೆ ಒಂದು ತಿಂಗಳು ಆಗಿದೆ, ನಾನು ಇನ್‌ಸ್ಟಾಗ್ರಾಮ್‌ಗೆ ಹೊಸಬ. ನನ್ನ ಸೂಪರ್ ಮಾಮ್ ಸಂಜನಾ ಗಲ್ರಾನಿ ಅವರು ನನ್ನ ಅಕೌಂಟ್‌ನ್ನು ಮ್ಯಾನೇಜ್ ಮಾಡುತ್ತಾರೆ. ನೀವು ನನ್ನನ್ನು ಫಾಲೋ ಮಾಡಿ ಪ್ರೀತಿ ತೋರಿಸುತ್ತೀರಾ? ನನಗೆ ತುಂಬ ಕಾಳಜಿ ಮಾಡುತ್ತಿರುವ ನನ್ನ ತಂಮಮದದೆ ಅಜೀಜ್‌ಗೂ ಕೂಡ ನಾನು ಧನ್ಯವಾದ ಹೇಳಲು ಬಯಸುವೆ" ಎಂದು ಸಂಜನಾ ಗಲ್ರಾನಿ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಂಜನಾ ಸಕ್ರಿಯ

ಗರ್ಭಿಣಿಯಾದಾಗಿನಿಂದ ಮಗು ಬಗ್ಗೆ, ಪ್ರಗ್ನೆನ್ಸಿ ಬಗ್ಗೆ ಸಂಜನಾ ಅವರು ಒಂದಲ್ಲ ಒಂದು ಪೋಸ್ಟ್ ಹಂಚಿಕೊಳ್ಳುತ್ತಲೇ ಇದ್ದರು. ಈಗ ಮಗನ ಜೊತೆ ಆಟ ಆಡುತ್ತಿರುವ ಫೋಟೋ, ವಿಡಿಯೋಗಳನ್ನು ಹಂಚಿಕೊಂಡರೂ ಕೂಡ, ಅವರು ಅವರ ಮಗನ ಮುಖವನ್ನು ತೋರಿಸಿಲ್ಲ. ವಿಧ ವಿಧವಾದ ರೀತಿಯಲ್ಲಿ ಸಂಜನಾ ಗಲ್ರಾನಿ ಅವರು ಬೇಬಿಬಂಪ್ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಇನ್ನು ಸಂಜನಾ ಅವರ ಸೀಮಂತ ಕಾರ್ಯಕ್ಕೆ ಚಿತ್ರರಂಗದ ಕೆಲ ಗಣ್ಯರು ಆಗಮಿಸಿದ್ದರು. ಮೇ 19ರಂದು ಹೈದರಾಬಾದ್‌ನಲ್ಲಿ ಸಂಜನಾ ಮಗುವಿಗೆ ಜನ್ಮ ನೀಡಿದ್ದರು. ಅದೇ ದಿನ ಅವರ ಸಹೋದರಿ ನಿಕ್ಕಿ ಗಲ್ರಾನಿ ಅವರು ನಟ ಆದಿಯನ್ನು ಮದುವೆಯಾಗಿದ್ದರು.
Sanjjanaa Galrani: ನಟಿ ಸಂಜನಾ ಗಲ್ರಾನಿ ಮನೆಯಲ್ಲಿ ಡಬಲ್ ಖುಷಿ; ಅತ್ತ ಮದುವೆಯಾದ ತಂಗಿ ನಿಕ್ಕಿ ಗಲ್ರಾನಿ, ಇತ್ತ ತಾಯಿಯಾದ ಅಕ್ಕ

ಸಂಜನಾ ಹೇಳಿದ್ದೇನು?
ಮಗುಗೆ ಜನ್ಮ ನೀಡುವ ಮುನ್ನ ಮಾಧ್ಯಮದ ಜೊತೆ ಮಾತನಾಡಿದ್ದ ಸಂಜನಾ ಗಲ್ರಾನಿ ಅವರು, "ಹೆರಿಗೆಗೆ ಇನ್ನು ಕೆಲವು ದಿನಗಳು ಬಾಕಿ ಇರುವ ತನಕವೂ ನಾನು ಆಕ್ಟೀವ್ ಆಗಿರಬೇಕು ಎಂದುಕೊಂಡೆ, ಈ ರೀತಿ ಕೆಲಸ ಮಾಡುವ ಅನೇಕ ಮಹಿಳೆಯರನ್ನು ನಾನು ನೋಡಿದ್ದೇನೆ. ಅವರೇ ನನಗೆ ಸ್ಫೂರ್ತಿ. ನಾನು ವಾರದಲ್ಲಿ 3-4 ದಿನಗಳು ಕೆಲಸ ಮಾಡುತ್ತೇನೆ. ನನ್ನ ಶೆಡ್ಯೂಲ್ ತುಂಬ ಬ್ಯುಸಿ ಇತ್ತು. ನನಗೆ ಮಕ್ಕಳೆಂದರೆ ತುಂಬ ಪ್ರೀತಿ. ಕೆಲ ಕಾರಣಗಳಿಂದ ನಾನು ತಾಯಿ ಆಗುವುದನ್ನು ಮುಂದಕ್ಕೆ ಹಾಕುತ್ತಲಿದ್ದೆ. ಯಾವಾಗ ಮಗು ಮಾಡಿಕೊಳ್ಳುತ್ತೀಯಾ ಎಂದು ನನ್ನ ಪೋಷಕರು ಯಾವಾಗಲೂ ಕೇಳುತ್ತಲೇ ಇದ್ದರು. ನನಗೆ 34 ವರ್ಷ ವಯಸ್ಸು. ಹಾಗಾಗಿ ತಾಯಿಯಾಗಲು ಇದು ಸರಿಯಾದ ಸಮಯ ಎಂದು ನಿರ್ಧರಿಸಿದೆ" ಎಂದು ಹೇಳಿದ್ದರು.

Nikki Galrani Wedding: 'ರಂಗಸ್ಥಲಂ' ನಟ ಆದಿ ಪಿನಿಸೆಟ್ಟಿ ಜೊತೆಗೆ ಸಪ್ತಪದಿ ತುಳಿದ ಸಂಜನಾ ಗಲ್ರಾನಿ ಸಹೋದರಿ ನಟಿ ನಿಕ್ಕಿ ಗಲ್ರಾನಿ
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌