ಆ್ಯಪ್ನಗರ

ಮದುವೆಯಾಗಿದ್ದ ನಾಗಾರ್ಜುನ ಜೊತೆ 15 ವರ್ಷ ಡೇಟ್ ಮಾಡಿದ್ದ ಟಬು ಇನ್ನೂ ಯಾಕೆ ಮದುವೆಯಾಗಿಲ್ಲ?

ಸೆಲೆಬ್ರಿಟಿಗಳ ಲವ್, ಅಫೇರ್ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಿರುತ್ತವೆ. ಅದರಂತೆ ನಟ ನಾಗಾರ್ಜುನ ಹಾಗೂ ಟಬು ಬಗ್ಗೆಯೂ ಚರ್ಚೆಯಾಗಿತ್ತು. ನಟಿ ಟಬು ಇಷ್ಟು ವರ್ಷವಾದರೂ ಯಾಕೆ ಇನ್ನೂ ಮದುವೆಯಾಗಿಲ್ಲ ಎಂಬುದು ಹಲವರ ಪ್ರಶ್ನೆ. ಅದಕ್ಕೆ ಉತ್ತರ ಇಲ್ಲಿದೆ.

Indiatimes 6 Sep 2020, 3:14 pm
1985ರಲ್ಲಿ 'ಹಮ್ ನೌಜವಾನ್' ಸಿನಿಮಾ ಮೂಲಕ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ನಟಿ ಟಬು, ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಹೈದರಾಬಾದ್‌ನ ಮುಸ್ಲಿಂ ಕುಟುಂಬದಲ್ಲಿ ಜನಿಸಿದ ಟಬು ಅರು ಶಬಾನಾ ಅಜ್ಮಿ, ತನ್ವಿ ಆಜ್ಮಿ, ಬಾಬಾ ಆಜ್ಮಿಯ ಸಂಬಂಧಿಕರು. ತೆಲುಗು, ಹಿಂದಿ, ಇಂಗ್ಲಿಷ್‌, ಬೆಂಗಾಲಿ, ಮರಾಠಿ, ಸ್ಪ್ಯಾನಿಶ್, ಫ್ರೆಂಚ್, ತಮಿಳು, ಮಲಯಾಳಂ ಭಾಷೆಗಳನ್ನು ಮಾತನಾಡುವ ಟಬು 48 ವರ್ಷವಾದರೂ ಇನ್ನು ಮದುವೆಯಾಗಿಲ್ಲ. ಯಾಕೆ?
Vijaya Karnataka Web actress tabu love affair with nagarjuna
ಮದುವೆಯಾಗಿದ್ದ ನಾಗಾರ್ಜುನ ಜೊತೆ 15 ವರ್ಷ ಡೇಟ್ ಮಾಡಿದ್ದ ಟಬು ಇನ್ನೂ ಯಾಕೆ ಮದುವೆಯಾಗಿಲ್ಲ?


ನಾಗಾರ್ಜುನಗಿಂತ ಮುಂಚೆ ಇಬ್ಬರ ಜೊತೆ ಟಬು ಲವ್?
'ಪ್ರೇಮ್' ಸಿನಿಮಾದಲ್ಲಿ ನಟಿಸುವಾಗ ನಟ ಸಂಜಯ್ ಕಪೂರ್ ಜೊತೆ ಟಬು ಡೇಟ್ ಮಾಡಿದ್ದರಂತೆ. ಆದರೆ ಈ ಬಗ್ಗೆ ಇವರಿಬ್ಬರು ಮಾತನಾಡಿರಲಿಲ್ಲ. ಆನಂತರ ನಿರ್ದೇಶಕ / ನಿರ್ಮಾಪಕ ಸಾಜೀದ್ ನಾಡಿಯದ್ವಾಲಾ ಜೊತೆ ಟಬು ಹೆಸರು ಥಳುಕು ಹಾಕಿಕೊಂಡಿತ್ತು. ಸಾಜೀದ್ ಪತ್ನಿ ನಿಧನವಾದ ನಂತರದಲ್ಲಿ ಇವರಿಬ್ಬರು ಡೇಟ್ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು.

15 ವರ್ಷ ಟಬು ಜೊತೆ ಡೇಟ್ ಮಾಡಿದ್ದ ನಾಗಾರ್ಜುನ
ನಾಗಾರ್ಜುನ ಜೊತೆ ಟಬು ಹೆಸರು ಜೋರಾಗಿ ಕೇಳಿಬಂದಿತ್ತು. ಆ ವೇಳೆ ನಾಗಾರ್ಜುನ ಅವರಿಗೆ ಮೊದಲ ಮದುವೆಯಾಗಿತ್ತು. ಅನೇಕ ವರ್ಷಗಳ ಇವರಿಬ್ಬರು ಜೊತೆಯಾಗಿದ್ದರು. ಇವರಿಬ್ಬರ ಬಂಧ ಬಿಗಿಯಾಗಿದ್ದರೂ ಕೂಡ ನಾಗಾರ್ಜುನ-ಟಬು ವೈವಾಹಿಕ ಜೀವನಕ್ಕೆ ಕಾಲಿಟ್ಟಿರಲಿಲ್ಲ. ಆಮೇಲೆ ಏನೇ ಆಗಲೀ ನಾಗಾರ್ಜುನ ತನ್ನ ಪತ್ನಿಯನ್ನು ಬಿಟ್ಟಿರಲಾರ ಎಂಬುದನ್ನು ತಿಳಿದ ಟಬು, ಅವರಿಂದ ದೂರವಾಗಿದ್ದರು. ಒಟ್ಟಾರೆ ಇವರಿಬ್ಬರು 15 ವರ್ಷ ಡೇಟ್ ಮಾಡುತ್ತಿದ್ದರು ಎನ್ನಲಾಗಿದೆ.

ಅಮಲಾ ಜೊತೆ ಎರಡನೇ ಮದುವೆ
ನಾಗಾರ್ಜುನ ಅವರು ಲಕ್ಷ್ಮೀ ಎಂಬುವವರನ್ನು ಮದುವೆಯಾಗಿದ್ದರು. ಈ ಜೋಡಿಗೆ ನಾಗಚೈತನ್ಯ ಎಂಬ ಮಗನಿದ್ದಾನೆ. ಆನಂತರದಲ್ಲಿ 1990ರಲ್ಲಿ ಇವರಿಬ್ಬರು ವಿಚ್ಛೇದನ ಪಡೆದಿದ್ದರು. 1992ರಲ್ಲಿ ನಟಿ, ಮಾಡೆಲ್, ಭರತನಾಟ್ಯಂ ಡಾನ್ಸರ್ ಅಮಲಾರನ್ನು ನಾಗಾರ್ಜುನ ಪ್ರೀತಿಸಿ ಮದುವೆಯಾದರು. ಟಬು ಜೊತೆಗಿನ ರಿಲೇಶನ್‌ಶಿಪ್ ಜೊತೆಗೆ ಮಾತನಾಡಿದ್ದ ಅಮಲಾ 'ಈ ಬಗ್ಗೆ ನಾನಾಗಲೀ ನನ್ನ ಪತಿಯಾಗಲಿ ಎಂದೂ ಚರ್ಚಿಸಿಲ್ಲ. ನನ್ನ ಮನೆ ಪವಿತ್ರವಾದದ್ದು, ದೇವಾಲಯ ಇದ್ದಂತೆ. ಚಿತ್ರರಂಗಕ್ಕೆ ಸಂಬಂಧಿಸಿದ ಅಹಿತಕರ ಘಟನೆಯನ್ನು ಮನೆತನಕ ತರುವುದು ನನಗೆ ಇಷ್ಟವಿಲ್ಲ' ಎಂದು ಹೇಳಿದ್ದರು.

Also Read-ಬಿಗ್‌ ಬಾಸ್‌ ನಿರೂಪಣೆಗೆ ಸಲ್ಮಾನ್ ಖಾನ್‌ ಸಂಭಾವನೆ 250 ಕೋಟಿ ರೂ.! ಒಂದು ಎಪಿಸೋಡ್‌ಗೆ ಎಷ್ಟು?

ಅಜಯ್ ದೇವಗನ್ ಜೊತೆ ಟಬು ಉತ್ತಮ ಸ್ನೇಹ
ಸಿನಿಮಾ ಕೆಲಸ ಮಾಡಿ ಟಬು ಮನೆಗೆ ಬರುತ್ತಿದ್ದರೇ ವಿನಃ ಪಾರ್ಟಿಗಳಿಗೆ ಹೋಗುತ್ತಿರಲಿಲ್ಲ. ಚಿತ್ರರಂಗದಲ್ಲಿ ಅಜಯ್ ದೇವಗನ್, ಫರಾ ಖಾನ್ ಜೊತೆ ಟಬು ತುಂಬ ಒಳ್ಳೆಯ ಸಂಬಂಧ ಹೊಂದಿದ್ದಾರೆ. ತನ್ನನ್ನು ಮದುವೆಯಾಗಿಲ್ಲ ಎಂದು ಆಗಾಗ ಟಬು ಅವರು ಅಜಯ್ ದೇವಗನ್ ಕಾಲೆಳೆಯುತ್ತಿರುತ್ತಾರೆ. ಮದುವೆ,ಮ ಮಕ್ಕಳ ಬಗ್ಗೆ ನಂಬಿಕೆ ಹೊಂದಿರುವ ಟಬು ಯಾಕೆ ಮದುವೆಯಾಗಿಲ್ಲ ಎಂಬುದರ ಬಗ್ಗೆ ಇದುವರೆಗೂ ಮಾಹಿತಿ ನೀಡಿಲ್ಲ.
Also Read-ನನ್ನ ಸೊಸೆ ಸಮಂತಾ ಇದುವರೆಗೂ ಅಡುಗೆಯನ್ನೇ ಮಾಡಲಿಲ್ಲ ಎಂದಿದ್ದಾರೆ ನಟಿ ಅಮಲಾ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌