ಆ್ಯಪ್ನಗರ

ಲಿಪ್-ಲಾಕ್ ಫೋಟೋ ಬಳಿಕ ನಟಿ ಅಮಲಾ ಪೌಲ್ ಕ್ವಾರಂಟೈನ್ ವಿಡಿಯೋ ವೈರಲ್

ನಟಿ ಅಮಲಾ ಪೌಲ್ ಎರಡನೇ ಮದುವೆಯಾಗಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ಅವರು ಮನೆಯಲ್ಲೇ ಇದ್ದು ಸ್ವಯಂ ನಿರ್ಬಂಧ ಪಾಲಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರು ಮನೆಯಲ್ಲಿ ಬೆಕ್ಕಿನ ಜೊತೆಗೆ ಆಟವಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದು ವೈರಲ್ ಆಗಿದೆ.

TIMESOFINDIA.COM 26 Mar 2020, 7:32 pm
ಕೊರೊನಾ ವೈರಸ್ ಮಣಿಸಲು ಇಡೀ ದೇಶ ಲಾಕ್‍ಡೌನ್ ಆಗಿದ್ದು ಈ ಬಗ್ಗೆ ಜಾಗೃತಿ ಮೂಡಿಸಲು ಸೆಲೆಬ್ರಿಟಿಗಳು ಹಾಗೂ ಸಿನಿಮಾ ತಾರೆಗಳು ಕೈಜೋಡಿಸಿದ್ದು ಸಾಮಾಜಿಕ ಮಾಧ್ಯಮಗಳ ಮುಖಾಂತರ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಮುಂದಿನ ಕೆಲ ವಾರಗಳ ತನಕ ಮನೆಯಲ್ಲೇ ಇರಿ ಎಂದು ತಮ್ಮ ಅಭಿಮಾನಿಗಳಲ್ಲಿ ವಿನಂತಿಸಿಕೊಳ್ಳುತ್ತಿದ್ದಾರೆ.
Vijaya Karnataka Web ಅಮಲಾ ಪೌಲ್


21 ದಿನಗಳ ಲಾಕ್‍ಡೌನ್ ಸಮಯದಲ್ಲಿ ಮನೆಯಲ್ಲಿ ಕಾಲ ಕಳೆಯುವುದು ಹೇಗೆ ಎಂಬ ಬಗ್ಗೆಯೂ ಕೆಲವರು ಐಡಿಯಾಗಳನ್ನೂ ನೀಡುತ್ತಿದ್ದಾರೆ. ಈ ವಿಚಾರದಲ್ಲಿ ನಟಿ ಅಮಲಾ ಪೌಲ್ ಸಹ ಹಿಂದೆ ಬಿದ್ದಿಲ್ಲ. ವಾರದ ಹಿಂದೆ ಭವಿಂದರ್ ಸಿಂಗ್ ಜೊತೆಗಿನ ಲಿಪ್-ಲಾಕ್ ಫೋಟೋ ವೈರಲ್ ಆಗಿತ್ತು. ಇವರಿಬ್ಬರಿಗೂ ಮದುವೆಯೇ ಆಗಿದೆ ಎಂಬ ಸುದ್ದಿ ಹಬ್ಬಿತ್ತು. ಇದೀಗ ಹೆಬ್ಬುಲಿ ಬೆಡಗಿಯ ಕ್ವಾರಂಟೈನ್ ವಿಡಿಯೋ ಕೂಡ ವೈರಲ್ ಆಗಿದೆ.

ತನ್ನ ಮುದ್ದಿನ ಬೆಕ್ಕಿನ ಜೊತೆಗೆ ಕ್ವಾರಂಟೈನ್ ಸಮಯವನ್ನು ಕಳೆಯುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಬೆಕ್ಕಿನ ಜೊತೆಗೆ ಆಟವಾಡುತ್ತಾ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಬೆಕ್ಕಿನ ಪ್ರಿಯರಿಗೆ ಮಾತ್ರ ಅನ್ವಯಿಸುತ್ತದೆ ಎಂಬರ್ಥದಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಬಗ್ಗೆ ಅಭಿಮಾನಿಯೊಬ್ಬ ಕಾಮೆಂಟ್ ಮಾಡಿದ್ದು ಪ್ರಾಣಿಗಳ ಜೊತೆಗೆ ಅಷ್ಟೆಲ್ಲಾ ಸಲುಗೆ ಒಳ್ಳೆಯದಲ್ಲ ಎಂದಿದ್ದಾರೆ. ಇದಕ್ಕೆ ಉತ್ತರ ನೀಡಿರುವ ಅಮಲಾ, ಬೆಕ್ಕುಗಳಿಂದ ಕೊರೊನಾ ವೈರಸ್ ಏನೂ ಬರಲ್ಲ ಎಂದು ಉತ್ತರ ನೀಡಿದ್ದಾರೆ. ಸದ್ಯಕ್ಕೆ ಮನೆಯಲ್ಲೇ ಕಾಲ ಕಳೆಯುತ್ತಿರುವ ಅಮಲಾ, ಈ ವಿಡಿಯೋ ಬಗ್ಗೆ ಕಾಮೆಂಟ್ ಮಾಡಿರುವ ಪ್ರತಿಯೊಬ್ಬರಿಗೂ ಉತ್ತರಿಸುತ್ತಿದ್ದಾರೆ.

ಅಮಲಾ ಪೌಲ್ ಬೆತ್ತಲೆ ದೃಶ್ಯಕ್ಕಾಗಿ ಇಪ್ಪತ್ತು ದಿನ ಶೂಟಿಂಗ್‌!

ಅಮಲಾ ಪೌಲ್ ಕೊನೆಯದಾಗಿ ತೆರೆಯ ಮೇಲೆ ಕಾಣಿಸಿಕೊಂಡ ಸಿನಿಮಾ 'ಆಡೈ'. ಈ ಚಿತ್ರವನ್ನು ರತ್ನ ಕುಮಾರ್ ನಿರ್ದೇಶಿಸಿದ್ದಾರೆ. ಇತ್ತೀಚೆಗೆ ಭವಿದಂರ್ ಸಿಂಗ್ ಇನ್‍ಸ್ಟಾಗ್ರಾಮ್‍ನಲ್ಲಿ ಅಮಲಾ ಪೌಲ್ ಜೊತೆಗಿನ ಸಾಂಪ್ರದಾಯಿಕ ಉಡುಗೆಯಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಫೋಟೋಗಳನ್ನು ನೋಡಿ ಅಮಲಾ ಪೌಲ್ ಎರಡನೇ ಮದುವೆ ಮಾಡಿಕೊಂಡಿದ್ದಾರೆ ಎಂದೇ ಎಲ್ಲರೂ ಭಾವಿಸಿದ್ದರು.

ಮಾಜಿ ಗಂಡನ ಎರಡನೇ ಮದುವೆ ಬಗ್ಗೆ ಅಮಲಾ ಪೌಲ್ ಪ್ರತಿಕ್ರಿಯೆ

ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಅಮಲಾ ಪೌಲ್, "ನನಗೆ ಎರಡನೇ ಮದುವೆಯಾಗಿಲ್ಲ. ಒಂದು ಸಂಸ್ಥೆಗಾಗಿ ಮಾಡಿದ ಫೋಟೋಶೂಟ್ ಇದು. ಇದನ್ನೇ ಮದುವೆ ಎಂದು ಭಾವಿಸಿದರೆ ಹೇಗೆ? ಒಂದು ವೇಳೆ ಹಸೆಮಣೆ ಏರಿದರೆ ಮೊದಲೇ ನಿಮಗೆ ತಿಳಿಸುತ್ತೇನೆ. ಅನಗತ್ಯವಾಗಿ ಗಾಬರಿಯಾಗಬೇಡಿ" ಎಂದಿದ್ದರು. ಈ ಹಿಂದೆ ತಮಿಳು ನಿರ್ದೇಶಕ ಎಎಲ್ ವಿಜಯ್ ಅವರನ್ನು ವರಿಸಿದ್ದರು ಈ ಚೆಲುವೆ. ಭಿನ್ನಾಭಿಪ್ರಾಯಗಳ ಕಾರಣ ಇಬ್ಬರೂ ವಿಚ್ಛೇದನ ಪಡೆದರು.
View this post on Instagram I bet, only cat lovers can relate... . Bhagyam maandhu kitteelaa :p . Vc : @viimal #catlover #youonlyknowacatwhenyouhaveacat 🙄 #theydontgiveafuckaboutyou #dontyouagree #butyabruhh #its #unconditionallove #ifyouknowwhatiamtalkingabout #quarantineandchill #lockdownday1 A post shared by Amala Paul ✨ (@amalapaul) on Mar 25, 2020 at 9:59am PDT

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌