ಆ್ಯಪ್ನಗರ

ಎಸ್ಎಸ್ ರಾಜಮೌಳಿ 'ಆರ್‌ಆರ್‌ಆರ್' ಸೆಟ್‌ನಲ್ಲಿ ಅಜಯ್ ದೇವಗನ್

ಮಲ್ಟಿ ಸ್ಟಾರರ್ ಸಿನಿಮಾಗಳಿಗೆ ಇರುವ ಕ್ರೇಜ್ ಅಷ್ಟಿಷ್ಟಲ್ಲ. ಸ್ಟಾರ್ ನಟರನ್ನು ಒಂದೇ ಫ್ರೇಮ್‌ನಲ್ಲಿ ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳು ಕಾತುರದಿಂದ ನಿರೀಕ್ಷಿಸುತ್ತಿರುತ್ತಾರೆ. ಒಂದು ರೀತಿ ಅಭಿಮಾನಿಗಳ ಪಾಲಿಗೆ ಹಬ್ಬ ಎನ್ನಬಹುದು. ಯಂಗ್ ಟೈಗರ್ ಎನ್‍ಟಿಆರ್, ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಕಾಂಬಿನೇಶನ್‌ನಲ್ಲಿ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಐತಿಹಾಸಿಕ ಕಥಾಹಂದರದ ಸಿನಿಮಾ 'ಆರ್‌ಆರ್‌ಆರ್'.

Vijaya Karnataka Web 21 Jan 2020, 4:16 pm
ಮಲ್ಟಿ ಸ್ಟಾರರ್ ಸಿನಿಮಾಗಳಿಗೆ ಇರುವ ಕ್ರೇಜ್ ಅಷ್ಟಿಷ್ಟಲ್ಲ. ಸ್ಟಾರ್ ನಟರನ್ನು ಒಂದೇ ಫ್ರೇಮ್‌ನಲ್ಲಿ ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳು ಕಾತುರದಿಂದ ನಿರೀಕ್ಷಿಸುತ್ತಿರುತ್ತಾರೆ. ಒಂದು ರೀತಿ ಅಭಿಮಾನಿಗಳ ಪಾಲಿಗೆ ಹಬ್ಬ ಎನ್ನಬಹುದು. ಯಂಗ್ ಟೈಗರ್ ಎನ್‍ಟಿಆರ್, ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಕಾಂಬಿನೇಶನ್‌ನಲ್ಲಿ ಖ್ಯಾತ ನಿರ್ದೇಶಕ ಎಸ್ಎಸ್ ರಾಜಮೌಳಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಐತಿಹಾಸಿಕ ಕಥಾಹಂದರದ ಸಿನಿಮಾ 'ಆರ್‌ಆರ್‌ಆರ್'.
Vijaya Karnataka Web ajay devgn kick starts the schedule of ss rajamoulis next rrr movie
ಎಸ್ಎಸ್ ರಾಜಮೌಳಿ 'ಆರ್‌ಆರ್‌ಆರ್' ಸೆಟ್‌ನಲ್ಲಿ ಅಜಯ್ ದೇವಗನ್


ಈ ಸಿನಿಮಾ ಕೇವಲ ಟಾಲಿವುಡ್‍ನಲ್ಲಷ್ಟೇ ಅಲ್ಲ, ಇಡೀ ಭಾರತದಲ್ಲೇ ಕುತೂಹಲ ಮೂಡಿಸಿದೆ. ಒಂದು ವರ್ಷದಿಂದ ಪ್ರೇಕ್ಷಕರು ಈ ಸಿನಿಮಾ ಬಗ್ಗೆ ನಿರೀಕ್ಷಿಸುವಂತಾಗಿದೆ. ಆದರೆ ಸಿನಿಮಾ ಬಿಡುಗಡೆ ತಡವಾಗಲಿದೆ ಎಂಬ ಸುದ್ದಿ ಎಲ್ಲರನ್ನೂ ನಿರಾಸೆಗೊಳಿಸಿದೆ. ಆದರೆ ಆದಷ್ಟು ಬೇಗ ಪ್ರೇಕ್ಷಕರ ಮುಂದೆ ತರುವ ಭರವಸೆಯನ್ನು ರಾಜಮೌಳಿ ನೀಡಿದ್ದಾರೆ.

ಚಿತ್ರೀಕರಣ ಸಹ ಭರದಿಂದ ಸಾಗುತ್ತಿದೆ. ಈ ಚಿತ್ರದಲ್ಲಿ ಅಜಯ್ ದೇವಗನ್ ಮುಖ್ಯವಾದ ಪಾತ್ರ ಪೋಷಿಸುತ್ತಿದ್ದು ಮಂಗಳವಾರ ಶೂಟಿಂಗ್ ಸ್ಥಳದಲ್ಲಿ ಕಾಣಿಸಿಕೊಂಡಿದ್ದಾರೆ. ರಾಜಮೌಳಿ ಹಾಗೂ ಅಜಯ್ ದೇವಗನ್ ಪರಸ್ಪರ ಕೈ ಕುಲುಕುತ್ತಿರುವ ಚಿತ್ರವನ್ನು ಚಿತ್ರತಂಡ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ತಾನಾಜಿ ಬಳಿಕ ಅಜಯ್ ದೇವಗನ್ ಒಪ್ಪಿಕೊಂಡಿರುವ ಸಿನಿಮಾ

'ತಾನಾಜಿ: ದಿ ಅನ್‍ಸಂಗ್ ವಾರಿಯರ್' ಸಿನಿಮಾ ಬಳಿಕ ಬಾಲಿವುಡ್ ನಟ ಅಜಯ್ ದೇವಗನ್ ಮತ್ತೊಂದು ಚಿತ್ರಕ್ಕೆ ಸಜ್ಜಾಗಿದ್ದಾರೆ. ಎಸ್ಎಸ್ ರಾಜಮೌಳಿ ನಿರ್ದೇಶನದಲ್ಲಿ ಆರ್‌ಆರ್‌ಆರ್ ಸಿನಿಮಾದಲ್ಲಿ ಅಭಿನಯಿಸಲು ಸಜ್ಜಾಗಿದ್ದಾರೆ. ಆರ್‌ಆರ್‌ಆರ್ ಚಿತ್ರತಂಡ ಅಜಯ್ ದೇವಗನ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದೆ. ಅವರ ಆಗಮನದಿಂದ ಸೆಟ್‌ನಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಶೀಘ್ರಲ್ಲೇ ಅವರ ಶೆಡ್ಯೂಲ್ ಶುರುವಾಗಲಿದೆ ಎಂದಿದೆ ಚಿತ್ರತಂಡ.

ಎಸ್ ಎಸ್ ರಾಜಮೌಳಿ 'ಆರ್ ಆರ್ ಆರ್' ಶೀರ್ಷಿಕೆಯ ಲೇಟೆಸ್ಟ್ ಅರ್ಥ

ಹತ್ತು ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾ

ಇನ್ನೊಂದು ವಿಶೇಷ ಎಂದರೆ ಆರ್‌ಆರ್‌ಆರ್ ಸಿನಿಮಾವನ್ನು ಒಟ್ಟು 10 ಭಾಷೆಗಳಲ್ಲಿ ರಿಲೀಸ್ ಮಾಡಲಾಗುತ್ತಿದೆ. ಈ ವರ್ಷ ದಸರಾ ಹಬ್ಬಕ್ಕೆ ಈ ಸಿನಿಮಾವನ್ನು ರಿಲೀಸ್ ಮಾಡಲು ಪ್ಲಾನ್ ಮಾಡಿದ್ದಾರೆ ರಾಜಮೌಳಿ. ಈ ಸಿನಿಮಾದ ಬಜೆಟ್ ಸುಮಾರು ₹ 300 ಕೋಟಿ ಎಂದಿವೆ ಮೂಲಗಳು. ರಾಜಮೌಳಿ ನಿರ್ದೇಶನದ ಸಿನಿಮಾಗಳಿಗೆ ಮಾರುಕಟ್ಟೆ ಸಿಕ್ಕಾಪಟ್ಟೆ ಇರುವುದು ಗೊತ್ತೇ ಇದೆ. ಬಾಹುಬಲಿ ಹಾಗೂ ಬಾಹುಬಲಿ 2 ಸಿನಿಮಾಗಳು ಜಗತ್ತಿನಾದ್ಯಂತ ಇದುವರೆಗೆ ₹ 2000 ಕೋಟಿ ಕಲೆಕ್ಷನ್ ಮಾಡಿವೆ.

ಸ್ವಾತಂತ್ರ್ಯ ಹೋರಾಟದ ಕಥಾಹಂದರದ ಸಿನಿಮಾ

ಈ ಚಿತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್‌ಚರಣ್, ಕೋಮರಂ ಭೀಮ್ ಪಾತ್ರದಲ್ಲಿ ಎನ್‍ಟಿಆರ್ ಅಭಿನಯಿಸಿದ್ದಾರೆ. ಆದರೆ ಅಜಯ್ ದೇವಗನ್ ಯಾವ ಪಾತ್ರದಲ್ಲಿ ಕಾಣಿಸಲಿದ್ದಾರೆ ಎಂಬುದು ಇನ್ನೂ ಗೊತ್ತಾಗಿಲ್ಲ. ಬಾಲಿವುಡ್ ನಟಿ ಆಲಿಯಾ ಭಟ್ ಹೀರೋಯಿನ್ ಆಗಿರುವ ಈ ಚಿತ್ರದಲ್ಲಿ ಹಾಲಿವುಡ್ ತಾರೆಗಳಾದ ಸ್ಟೀವೆನ್ ಸನ್, ಒಲಿವಿಯಾ ಮೋರಿಸ್, ಅಲಿಸನ್ ಡೂಡಿ ಸಹ ಅಭಿನಯಿಸುತ್ತಿದ್ದಾರೆ. ಸಿನಿಮಾ ದಸರಾ ಹಬ್ಬಕ್ಕೆ ಅಕ್ಟೋಬರ್‌ನಲ್ಲಿ ತೆರೆಕಾಣಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌