ಆ್ಯಪ್ನಗರ

'ಜಾರಿ ಬಿದ್ದರೂ ಯಾಕೀ ನಗು..' ಎಂದು ಹಾಡುತ್ತ ಮೋಡಿ ಮಾಡಿದ 'ಕಂಬ್ಳಿಹುಳ' ತಂಡ

'ಜೋಡಿ ಕುದುರೆ', 'ಗೋಣಿ ಚೀಲ' ಕಿರುಚಿತ್ರಗಳಿಂದ ಗಮನಸೆಳೆದ ನಿರ್ದೇಶಕ ನವನ್ ಶ್ರೀನಿವಾಸ್ ಈಗ 'ಕಂಬ್ಳಿಹುಳ' ಸಿನಿಮಾದ ಮೂಲಕ ಪೂರ್ಣಪ್ರಮಾಣದ ನಿರ್ದೇಶಕರಾಗಿದ್ದಾರೆ. ಈ ಸಿನಿಮಾದ ಮೊದಲ ವಿಡಿಯೋ ಹಾಡು ಬಿಡುಗಡೆಯಾಗಿದೆ.

Authored byಅವಿನಾಶ್ ಜಿ. ರಾಮ್ | Vijaya Karnataka Web 19 Aug 2022, 6:03 pm

ಹೈಲೈಟ್ಸ್‌:

  • ಹೊಸ ತಂಡ ಸೇರಿಕೊಂಡು ಮಾಡಿರುವ 'ಕಂಬ್ಳಿಹುಳ' ಸಿನಿಮಾ
  • ಅಂಜನ್ ನಾಗೇಂದ್ರ & ಅಶ್ವಿತಾ ಆರ್. ಹೆಗಡೆ ಮುಖ್ಯಭೂಮಿಕೆಯ 'ಕಂಬ್ಳಿಹುಳ'
  • 'ಕಂಬ್ಳಿಹುಳ' ಸಿನಿಮಾದ ಮೊದಲ ವಿಡಿಯೋ ಸಾಂಗ್ ರಿಲೀಸ್‌

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Kamblihula
'ಜಾರಿ ಬಿದ್ದರೂ ಯಾಕೀ ನಗು..' ಎಂದು ಹಾಡುತ್ತ ಮೋಡಿ ಮಾಡಿದ 'ಕಂಬ್ಳಿಹುಳ' ತಂಡ
ಸ್ಯಾಂಡಲ್‌ವುಡ್‌ಗೆ ಒಂದಷ್ಟು ಸಿನಿಮೋತ್ಸಾಹಿಗಳ ಯುವ ತಂಡ ಎಂಟ್ರಿ ಕೊಟ್ಟಿದೆ. ಹೊಸ ಪ್ರತಿಭೆಗಳು ಒಟ್ಟಾಗಿ ಸೇರಿ 'ಕಂಬ್ಳಿಹುಳ' ಸಿನಿಮಾವನ್ನು ನಿರ್ಮಿಸಿದೆ. 'ಕಂಬ್ಳಿಹುಳ' ಚಿತ್ರದ ಮೊದಲ ಹಾಡನ್ನು ರಿಲೀಸ್ ಮಾಡಿದೆ. 'ಜಾರಿ ಬಿದ್ದರೂ ಯಾಕೀ ನಗು..' ಎಂದು ಶುರುವಾಗುವ ಈ ಹಾಡು ಕೇಳುಗರಿಗೆ ಇಷ್ಟವಾಗಿದೆ. ಮುದ್ದಾದ ಜೋಡಿಯೊಂದರ ಪ್ರೇಮಕಥೆಯನ್ನು ಈ ಹಾಡಿನಲ್ಲಿ ಸುಂದರವಾಗಿ ಸೆರೆಹಿಡಿಯಲಾಗಿದೆ. ಈಚೆಗೆ ಈ ಹಾಡನ್ನು ರಿಲೀಸ್ ಮಾಡಿ ಸಂಭ್ರಮಿಸಿದ ಚಿತ್ರತಂಡ.
ಈ ಕ್ಯೂಟ್ ಸಾಂಗ್‌ಗೆ ಮಹದೇವ್ ಸ್ವಾಮಿ, ರವಿ ಧನ್ಯನ್ ಅವರು ಸಾಹಿತ್ಯ ಬರೆದಿದ್ದಾರೆ. ವಿಜಯ್ ಪ್ರಕಾಶ್ ಹಾಗೂ ಸಂಗೀತಾ ರವೀಂದ್ರನಾಥ್ ಅವರ ಧ್ವನಿ ಇರುವ ಈ ಹಾಡಿಗೆ ಶಿವ ಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ. ರಂಗಭೂಮಿ ಕಲಾವಿದ ಅಂಜನ್ ನಾಗೇಂದ್ರ ಹಾಗೂ ಅಶ್ವಿತಾ ಆರ್. ಹೆಗಡೆ ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಹಾಡಿಗೆ ಗಾಯಕ ವಿಜಯ್ ಪ್ರಕಾಶ್, ನಟ ಪೃಥ್ವಿ ಅಂಬಾರ್, ನಿರ್ದೇಶಕ 'ಸಿಂಪಲ್' ಸುನಿ ಸೇರಿದಂತೆ ಹಲವರು ನಟರು ಮೆಚ್ಚುಗೆಯ ಮಾತನಾಡಿದ್ದಾರೆ.

'ಫ್ರೆಂಡ್ಸ್ ಇದ್ರೇನೆ ಜೀವನ..' ಎಂದ್ರು ಯೋಗರಾಜ್ ಭಟ್; 'ಪದವಿಪೂರ್ವ' ಚಿತ್ರದ ಹೊಸ ಸಾಂಗ್ ರಿಲೀಸ್
ಈ ಚಿತ್ರದ ಮಾಹಿತಿ ಹಂಚಿಕೊಂಡ ನಿರ್ದೇಶಕ ನವನ್ ಶ್ರೀನಿವಾಸ್, 'ಕಿರುಚಿತ್ರದಿಂದ ಆರಂಭವಾದ ನನ್ನ ಜರ್ನಿ ಈಗ 'ಕಂಬ್ಳಿಹುಳ' ಸಿನಿಮಾದವರೆಗೂ ಬಂದಿದೆ. ಈ ಸಿನಿಮಾದಿಂದ ನಾನು ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದೇನೆ. ಮಲೆನಾಡಿನ ಹಿನ್ನೆಲೆಯಲ್ಲಿ ನಡೆಯುವ ಚಿತ್ರವಿದು. ಶೃಂಗೇರಿ, ಸಕಲೇಶಪುರ, ತೀರ್ಥಹಳ್ಳಿ ಸುತ್ತಮುತ್ತಾ ಚಿತ್ರೀಕರಣ ಮಾಡಿದ್ದೇವೆ. ಈ ಸಿನಿಮಾದಲ್ಲಿ ಒಂದು ಎಮೋಷನಲ್ ಜರ್ನಿ ಇದೆ. ಎರಡು ಕಾಲು ಘಂಟೆ ನಗು, ಅಳು, ಕಾಮಿಡಿ ಎಲ್ಲವನ್ನೂ ಈ ಸಿನಿಮಾದ ಮೂಲಕ ತೋರಿಸಲಿದ್ದೇವೆ' ಎನ್ನುತ್ತಾರೆ.

ನವರಸಗಳನ್ನು ಆಧರಿಸಿದ '9 ಸುಳ್ಳು ಕಥೆಗಳು' ಚಿತ್ರಕ್ಕೆ ಸಾಥ್ ನೀಡಿದ ಡಾ. ಶಿವರಾಜಕುಮಾರ್
ಗ್ರೇ ಸ್ಕ್ವೇರ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರವು ನೈಜ ಘಟನೆಯಾಧಾರಿತವಾಗಿದೆ. 'ಕಂಬ್ಳಿಹುಳ' ಚಿತ್ರದಲ್ಲಿ ರಂಗಭೂಮಿ ಕಲಾವಿದರಿಗೆ ಪ್ರಾಧಾನ್ಯತೆ ನೀಡಲಾಗಿದ್ದು, ರೋಹಿತ್ ಕುಮಾರ್, ದೀಪಕ್ ರೈ ಪಣಜೆ, ಸಂಧ್ಯಾ ಅರಕೆರೆ, ಸಂಪತ್ ಶೆಟ್ಟಿ, ವನಿತಾ ಸೇರಿದಂತೆ ಹಲವು ಯುವ ಪ್ರತಿಭೆಗಳು ನಟಿಸಿದ್ದಾರೆ. ವಿಜಯ್, ಸವೀನ್, ಪುನೀತ್ ಹಾಗೂ ಗುರು 'ಕಂಬ್ಳಿಹುಳ' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಚಿತ್ರಕ್ಕೆ ಛಾಯಾಗ್ರಾಹಣವನ್ನು ಸತೀಶ್ ರಾಜೇಂದ್ರ ಮಾಡಿದ್ದಾರೆ. ಜಿತೇಂದ್ರ ನಾಯಕ ಮತ್ತು ರಾಘವೇಂದ್ರ ಟಿ.ಕೆ. ಅವರ ಸಂಕಲನ ಈ ಸಿನಿಮಾಕ್ಕಿದೆ.
ಲೇಖಕರ ಬಗ್ಗೆ
ಅವಿನಾಶ್ ಜಿ. ರಾಮ್
'ವಿಜಯ ಕರ್ನಾಟಕ' ಡಿಜಿಟಲ್ ವಿಭಾಗದಲ್ಲಿ 2019ರ ಸೆಪ್ಟೆಂಬರ್‌ನಿಂದ ಪತ್ರಕರ್ತನಾಗಿ ಅವಿನಾಶ್ ಜಿ. ರಾಮ್ ಕೆಲಸ ಮಾಡುತ್ತಿದ್ದಾರೆ. ಚಿನ್ನದ ಪದಕದೊಂದಿಗೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ ಕಳೆದ 10 ವರ್ಷಗಳಿಂದ ಸಿನಿಮಾ ವರದಿಗಾರರಾಗಿ ಕೆಲಸ ಮಾಡಿದ ಅನುಭವವಿದೆ. ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ನಾಲ್ಕು ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಅವಿನಾಶ್‌ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ಪ್ರವಾಸ, ಓದು, ಸಂಗೀತ ಕೇಳುವುದು ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌