ಆ್ಯಪ್ನಗರ

ಅಂಥ ಫೋಟೋ & ವಿಡಿಯೋಗಳನ್ನು ಲೀಕ್‌ ಮಾಡ್ಬೇಡಿ! ನಟಿ ಆಶಿಕಾ ಈ ರೀತಿ ಮನವಿ ಮಾಡಿದ್ದೇಕೆ?

ಅಭಿಮಾನಿಗಳ ಕೆಲ ವರ್ತನೆಯಿಂದ ನಟಿ ಅಶಿಕಾ ರಂಗನಾಥ್‌ ಬೇಸರಪಟ್ಟುಕೊಂಡಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದು, ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಕಾರಣ ಫೋಟೋ ಮತ್ತು ವಿಡಿಯೋ ಲೀಕ್‌!

Vijaya Karnataka Web 5 Oct 2020, 4:11 pm
ಕನ್ನಡದ ಬಹುಬೇಡಿಕೆಯ ನಟಿಯರಲ್ಲಿ ಆಶಿಕಾ ರಂಗನಾಥ್‌ ಕೂಡ ಇದ್ದಾರೆ. ಪ್ರಸ್ತುತ ಅವರು 'ಅವತಾರ್‌ ಪುರುಷ', 'ಮದಗಜ' ಮುಂತಾದ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಅವರಿಗೆ ಅಭಿಮಾನಿಗಳಿಂದ ಬೇಸರ ಆಗಿದೆ. ಯಾಕೆಂದರೆ, 'ಮದಗಜ' ಚಿತ್ರಕ್ಕೆ ಸಂಬಂಧಿಸಿದ ಕೆಲವು ಫೋಟೋ ಮತ್ತು ವಿಡಿಯೋಗಳನ್ನು ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಸೋರಿಕೆ ಮಾಡಿದ್ದಾರೆ!
Vijaya Karnataka Web ಆಶಿಕಾ ರಂಗನಾಥ್‌


ಕಳೆದ ಕೆಲವು ದಿನಗಳಿಂದ ಮೈಸೂರಿನ ಗ್ರಾಮೀಣ ಭಾಗದಲ್ಲಿ 'ಮದಗಜ' ಶೂಟಿಂಗ್‌ ನಡೆಯುತ್ತಿದೆ. ಶ್ರೀಮುರಳಿ ನಾಯಕತ್ವದ ಈ ಚಿತ್ರಕ್ಕೆ 'ಅಯೋಗ್ಯ' ಮಹೇಶ್‌ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರೀಕರಣ ನೋಡಲು ಅಕ್ಕಪಕ್ಕದ ಹಳ್ಳಿಯ ಜನರು ಆಗಮಿಸುತ್ತಿದ್ದಾರೆ. ಈ ವೇಳೆ ಮುಖ್ಯವಾದ ದೃಶ್ಯಗಳನ್ನು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡು ಆನ್‌ಲೈನ್‌ನಲ್ಲಿ ಜನರು ಹಂಚಿಕೊಳ್ಳುತ್ತಿದ್ದಾರೆ. ಇದು ಆಶಿಕಾ ಬೇಸರಕ್ಕೆ ಕಾರಣ ಆಗಿದೆ.

'ನಮ್ಮ ಫಿಲ್ಮ್‌ ಸೆಟ್‌ನಲ್ಲಿ ರೆಕಾರ್ಡ್‌ ಮಾಡಿದ ಅನೇಕ ವಿಡಿಯೋಗಳನ್ನು ನಾನು ನೋಡುತ್ತಿದ್ದಾನೆ. ನಮ್ಮ ಚಿತ್ರದ ಶಾಟ್‌ಗಳನ್ನು ಇನ್‌ಸ್ಟಾಗ್ರಾಮ್‌ ಮತ್ತು ಟ್ವಿಟರ್‌ನಲ್ಲಿ ಲೀಕ್‌ ಮಾಡಲಾಗಿದೆ. ದಯವಿಟ್ಟು ಇದನ್ನು ರಿಪೋರ್ಟ್‌ ಮಾಡಿ. ನಮ್ಮ ಕಾಸ್ಟ್ಯೂಮ್‌, ಲುಕ್‌ ಸೇರಿದಂತೆ ಸಿನಿಮಾಗೆ ಸಂಬಂಧಿಸಿದ ಇಂಥ ಯಾವುದೇ ವಿಷಯಗಳನ್ನು ಸೋರಿಕೆ ಮಾಡಬೇಡಿ' ಎಂದು ಸೋಶಿಯಲ್‌ ಮೀಡಿಯಾ ಮೂಲಕ ಅಭಿಮಾನಿಗಳಲ್ಲಿ ಆಶಿಕಾ ರಂಗನಾಥ್‌ ಮನವಿ ಮಾಡಿಕೊಂಡಿದ್ದಾರೆ.

also read: ಮೈಸೂರಿನಲ್ಲಿ ಶ್ರೀಮುರಳಿಗೆ ಸರ್ಪ್ರೈಸ್‌ ನೀಡಿದ ದರ್ಶನ್‌! 'ರೋರಿಂಗ್‌ ಸ್ಟಾರ್‌' ಫುಲ್‌ ಖುಷ್‌

'ಜನರ ಎಕ್ಸೈಟ್‌ಮೆಂಟ್‌ ಏನು ಎಂಬುದು ನನಗೆ ಅರ್ಥ ಆಗುತ್ತದೆ. ಶ್ರೀಮುರಳಿ ಅವರಂಥ ದೊಡ್ಡ ಸ್ಟಾರ್‌ ಇರುವಾಗ ಅವರ ಮೇಲಿನ ಅಭಿಮಾನಕ್ಕಾಗಿ ಜನರು ಪೋಸ್ಟ್‌ ಮಾಡುತ್ತಾರೆ. ಆದರೆ ಸಿನಿಮಾದಲ್ಲಿನ ದೃಶ್ಯ ಮತ್ತು ಲುಕ್‌ಗಳನ್ನು ಬಹಿರಂಗ ಪಡಿಸಬಾರದು ಎಂಬುದು ನನ್ನ ಮನವಿ' ಎಂದಿದ್ದಾರೆ ಆಶಿಕಾ. ಮೈಸೂರಿನಲ್ಲಿ ಭರದಿಂದ ಶೂಟಿಂಗ್ ಸಾಗುತ್ತಿತ್ತು, ಇತ್ತೀಚೆಗೆ ಇದೇ ಸಿನಿಮಾ ಸೆಟ್‌ಗೆ ನಟ 'ಚಾಲೆಂಜಿಂಗ್‌ ಸ್ಟಾರ್‌' ದರ್ಶನ್‌ ಭೇಟಿ ನೀಡಿದ್ದರು.

also read: ಶ್ರೀಮುರಳಿಯ 'ಮದಗಜ' ತಂಡಕ್ಕೆ ಎಂಟ್ರಿ ಕೊಟ್ಟ 'ಕೆಜಿಎಫ್‌' ಪ್ರಶಾಂತ್ ನೀಲ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌