ಆ್ಯಪ್ನಗರ

ಅನುಷ್ಕಾ ಶೆಟ್ಟಿ-ಪ್ರಭಾಸ್‌ ಪಾಲಿಗೆ ಇದು ಸ್ಪೆಷಲ್‌ ದಿನ! 'ಬಾಹುಬಲಿ' ದಾಖಲೆ ಬರೆದು ಇಂದಿಗೆ 3 ವರ್ಷ

ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ಬಾಹುಬಲಿ ಸರಣಿ ಸಿನಿಮಾ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಇಡೀ ತಂಡಕ್ಕೆ ಏ.28 ಎಂದರೆ ಸ್ಮರಣೀಯ ದಿನ. ಅನುಷ್ಕಾ ಶೆಟ್ಟಿ-ಪ್ರಭಾಸ್‌ ಕೂಡ ಈ ದಿನವನ್ನು ಮರೆಯುವಂತಿಲ್ಲ.

Vijaya Karnataka Web 28 Apr 2020, 4:32 pm
ಎರಡು ಪಾರ್ಟ್‌ಗಳಲ್ಲಿ 'ಬಾಹುಬಲಿ' ಚಿತ್ರ ಮೂಡಿಬಂದಿತ್ತು. ಮೊದಲ ಭಾಗ 2015ರಲ್ಲಿ ತೆರೆಕಂಡು ಸೂಪರ್‌ ಹಿಟ್‌ ಆಯಿತು. ನಂತರ ಬಂದ 'ಬಾಹುಬಲಿ 2' ಕೂಡ ಹೊಸ ದಾಖಲೆ ಬರೆಯಿತು. 2017ರ ಏಪ್ರಿಲ್‌ 28ರಂದು ಆ ಚಿತ್ರ ಬಿಡುಗಡೆ ಆಗಿತ್ತು. ಪ್ರಭಾಸ್‌, ಅನುಷ್ಕಾ ಶೆಟ್ಟಿ, ರಾಣಾ ದಗ್ಗುಬಾಟಿ, ತಮನ್ನಾ ಭಾಟಿಯಾ, ಸತ್ಯರಾಜ್‌, ರಮ್ಯಾಕೃಷ್ಣ ಮುಂತಾದವರು ಅಭಿನಯಿಸಿದ್ದರು.
Vijaya Karnataka Web ಬಾಹುಬಲಿ ಪ್ರಭಾಸ್‌


ಸಾವಿರಾರು ಕೋಟಿ ರೂ. ಕಮಾಯಿ
ನಟ ಪ್ರಭಾಸ್‌ ಈ ಎರಡೂ ಪಾರ್ಟ್‌ಗಾಗಿ ಹಲವು ವರ್ಷ ಮೀಸಲಿಟ್ಟಿದ್ದರು. ಆ ಅವಧಿಯಲ್ಲಿ ಬೇರೆ ಯಾವುದೇ ಸಿನಿಮಾಗಳನ್ನೂ ಅವರು ಒಪ್ಪಿಕೊಂಡಿರಲಿಲ್ಲ. ನಟಿ ಅನುಷ್ಕಾ ಶೆಟ್ಟಿ ಎರಡು ಬೇರೆ ಬೇರೆ ಗೆಟಪ್‌ಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸಿದ್ದರು. ಅವರೆಲ್ಲರ ಶ್ರಮಕ್ಕೆ ಸೂಕ್ತ ಪ್ರತಿಫಲ ಸಿಕ್ಕಿತು. ಅಂದಾಜು 250 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ 'ಬಾಹುಬಲಿ 2' ಚಿತ್ರ ವಿಶ್ವಾದ್ಯಂತ ಒಂದೂವರೆ ಸಾವಿರ ಕೋಟಿ ರೂ.ಗಿಂತಲೂ ಹೆಚ್ಚು ಕಮಾಯಿ ಮಾಡಿತು.

'ಬಾಹುಬಲಿ' ನೆನಪು ಅಮರ
ಭಾರತೀಯ ಸಿನಿಮಾ ಇತಿಹಾಸದ ಪುಟಗಳಲ್ಲಿ ಅಮರವಾಗಿ ಉಳಿಯುವಂತಹ ಈ ಚಿತ್ರದ ಭಾಗವಾಗಿದ್ದಕ್ಕೆ ತಂಡದ ಪ್ರತಿಯೊಬ್ಬರಿಗೂ ಹೆಮ್ಮೆ ಇದೆ. ಈಗ 'ಬಾಹುಬಲಿ 2' ತೆರೆಕಂಡು ಮೂರು ವರ್ಷ ಪೂರೈಸಿರುವ ಸಂಭ್ರಮವನ್ನು ಸೋಶಿಯಲ್‌ ಮೀಡಿಯಾ ಮೂಲಕ ಎಲ್ಲರೂ ಹಂಚಿಕೊಳ್ಳುತ್ತಿದ್ದಾರೆ. ತೆರೆಹಿಂದಿನ ಫೋಟೋಗಳನ್ನು ಶೇರ್‌ ಮಾಡಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಪ್ರಭಾಸ್ ಕುರಿತ ಆಸಕ್ತಿಕರ ಸಂಗತಿ ಹೇಳಿದ ನಟಿ ಪೂಜಾ ಹೆಗ್ಡೆ

ಅನುಷ್ಕಾ-ಪ್ರಭಾಸ್‌ ಕಾಂಬಿನೇಷನ್‌
'ಬಾಹುಬಲಿ ನನ್ನ ಜೀವನದ ಅತಿದೊಡ್ಡ ಸಿನಿಮಾ. ಅದಕ್ಕೆ ಕಾರಣರಾದ ಅಭಿಮಾನಿಗಳಿಗೆ, ತಂಡಕ್ಕೆ ಹಾಗೂ ನಿರ್ದೇಶಕ ರಾಜಮೌಳಿ ಅವರಿಗೆ ಧನ್ಯವಾದಗಳು' ಎಂದು ಪ್ರಭಾಸ್‌ ಬರೆದುಕೊಂಡಿದ್ದಾರೆ. ಅನುಷ್ಕಾ ಶೆಟ್ಟಿ ಕೂಡ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ ಈ ಸಿನಿಮಾದಲ್ಲಿ ಮನಮೋಹಕವಾಗಿ ಮೂಡಿಬಂದಿತ್ತು.

ಮೆಗಾ ಡಾಟರ್ ನೀಹಾರಿಕಾ ಕೋಣಿದೆಲ ಜೊತೆಗೆ ನಟ ಪ್ರಭಾಸ್ ಮದುವೆ ನಿಜವೇ?

ನೆನಪಿಗೆ ಜಾರಿದ ತಮನ್ನಾ
'ಮೂರು ವರ್ಷ ಪೂರೈಸಿದನ್ನು ಸಂಭ್ರಮಿಸುತ್ತಿದ್ದೇವೆ ಎಂದು ನನಗೆ ಕಲ್ಪನೆ ಮಾಡಿಕೊಳ್ಳಲಾಗುತ್ತಿಲ್ಲ. ನಿರ್ದೇಶಕ ರಾಜಮೌಳಿ ಅವರ ಜೊತೆ ಕೆಲಸ ಮಾಡಬೇಕು ಎಂಬ ನನ್ನ ಕನಸು ನನಸಾದ ಆ ಮೊದಲ ದಿನದ ನೆನಪು ಇನ್ನೂ ಹಸಿರಾಗಿದೆ' ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ತಮನ್ನಾ ಬರೆದುಕೊಂಡಿದ್ದಾರೆ. ಆವಂತಿಕಾ ಎಂಬ ಪಾತ್ರಕ್ಕೆ ಅವರು ಬಣ್ಣ ಹಚ್ಚಿದ್ದರು.

'ನಾನು ಮತ್ತು ಪ್ರಭಾಸ್ ಬೆಳಗಿನ ಜಾವ 3 ಗಂಟೆಯ ಫ್ರೆಂಡ್ಸ್‌'- ಅನುಷ್ಕಾ ಶೆಟ್ಟಿ ಹಿಂಗ್ಯಾಕೆ ಹೇಳಿದ್ರು?
--------------------------------------
ಈ ಪ್ರಶ್ನೆಗೆ ಕಾಮೆಂಟ್‌ ಬಾಕ್ಸ್‌ನಲ್ಲಿ ಉತ್ತರಿಸಿ
1. ಬಾಹುಬಲಿ ಸಿನಿಮಾದಲ್ಲಿ ನಿಮಗೆ ಹೆಚ್ಚು ಇಷ್ಟವಾದ ಪಾತ್ರ ಯಾವುದು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌