ಆ್ಯಪ್ನಗರ

ಪತ್ನಿ ಮಾಡಿದ ಪಾದಪೂಜೆಯಿಂದ 'ನೆನಪಿರಲಿ' ಪ್ರೇಮ್‌ಗೆ ಇನ್ಮೇಲೆ ಜಾಕ್‌ಪಾಟ್‌!

ಇಂದು (ಜುಲೈ 19) ಭೀಮನ ಅಮಾವಾಸ್ಯೆ. ನಟ 'ನೆನಪಿರಲಿ' ಪ್ರೇಮ್ ಅವರ ಮನೆಯಲ್ಲೂ ಈ ಹಬ್ಬವನ್ನು ಆಚರಣೆ ಮಾಡಲಾಗಿದೆ. ಇದೇ ವೇಳೆ ಪತ್ನಿಗೆ ಕ್ಯೂಟ್ ಆಗಿ ವಿಶ್ ಕೂಡ ಮಾಡಿದ್ದಾರೆ ಪ್ರೇಮ್‌.

Vijaya Karnataka Web 20 Jul 2020, 7:08 pm
ಇಂದು (ಜುಲೈ 19) ಭೀಮನ ಅಮಾವಾಸ್ಯೆ. ಈ ಹಬ್ಬದ ಸ್ಪೆಷಲ್‌ ಏನಪ್ಪ ಅಂದರೆ, ಭೀಮನ ಅಮಾವಾಸ್ಯೆಯನ್ನು ವಿವಾಹಿತ ಮಹಿಳೆಯರು ಗಂಡನ ದೀರ್ಘಾಯುಷ್ಯಕ್ಕಾಗಿ ಆಚರಿಸಿದರೆ, ಅವಿವಾಹಿತ ಮಹಿಳೆಯರು ಒಳ್ಳೆಯ ಗಂಡ ಸಿಗಲಿ ಎಂದು ಆಚರಣೆ ಮಾಡುತ್ತಾರೆ. ಭೀಮನ ಅಮಾವಾಸ್ಯೆಯನ್ನು ದಕ್ಷಿಣ ಕರ್ನಾಟಕದಲ್ಲಿ ಆಟಿ ಅಮಾವಾಸ್ಯೆ, ಕರ್ಕಾಟಕ ಅಮಾವಾಸ್ಯೆಯೆಂದು ಕರೆಯುತ್ತಾರೆ. ಉತ್ತರ ಕರ್ನಾಟಕದಲ್ಲಿ ಇದನ್ನು ಕೊಡೆ ಅಮಾವಾಸ್ಯೆಯೆಂದು ಕರೆಯುವುದುಂಟು. ಸದ್ಯ ಸ್ಯಾಂಡಲ್‌ವುಡ್ ನಟ 'ನೆನಪಿರಲಿ' ಪ್ರೇಮ್ ಅವರ ಮನೆಯಲ್ಲಿಯೂ ಭೀಮನ ಅಮಾವಾಸ್ಯೆ ಆಚರಣೆ ಆಗಿದೆ.
Vijaya Karnataka Web bheemana amavasya nenapirali prem romantic post about his wife
ಪತ್ನಿ ಮಾಡಿದ ಪಾದಪೂಜೆಯಿಂದ 'ನೆನಪಿರಲಿ' ಪ್ರೇಮ್‌ಗೆ ಇನ್ಮೇಲೆ ಜಾಕ್‌ಪಾಟ್‌!


ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪತ್ನಿ ಪಾದ ಪೂಜೆ ಮಾಡುತ್ತಿರುವ ಫೋಟೋಗಳನ್ನು ಪ್ರೇಮ್ ಹಂಚಿಕೊಂಡಿದ್ದಾರೆ. ಜೊತೆಗೆ ಒಂದಷ್ಟು ಕ್ಯೂಟ್ ಆದ ಸಾಲುಗಳನ್ನು ಪ್ರೇಮ್ ಬರೆದುಕೊಂಡಿದ್ದಾರೆ. 'ನಿನ್ನ ಪ್ರೀತಿಸಿದ ಮೇಲೆ ಆಯಸ್ಸು ಜಾಸ್ತಿ ಆಯಿತು... ಮದುವೆ ಆದಮೇಲೆ ಅದೃಷ್ಟ ಖುಲಾಯಿಸಿತು.. ಈಗ ಪಾದಪೂಜೆ ಮಾಡಿದೀಯ, ನನ್ಮಗಂದು ಇನ್ಮೇಲೆ ಜಾಕ್‌ಪಾಟ್‌... ಭೀಮನ ಅಮಾವಾಸ್ಯೆ ಶುಭಾಶಯಗಳು..' ಎಂದು ಅವರು ಹೇಳಿದ್ದಾರೆ. ಪ್ರೇಮ್‌ ಅವರ ಈ ಫೋಸ್ಟ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಅಂದಹಾಗೆ, ಪ್ರೇಮ್‌ ಮತ್ತು ಜ್ಯೋತಿ ಪ್ರೀತಿಸಿ ಮದುವೆಯಾಗಿದ್ದರು. ಮೂರು ವರ್ಷ ಪ್ರೀತಿಸಿ, ಮನೆಯವರ ವಿರೋಧದ ನಡುವೆಯೂ ಈ ಜೋಡಿ ಒಂದಾಗಿತ್ತು. ಈ ದಂಪತಿಗೆ ಅಮೃತಾ ಹಾಗೂ ಏಕಾಂತ್ ಎಂಬ ಮಕ್ಕಳಿದ್ದಾರೆ. ಜ್ಯೋತಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ತೀರಾ ಅಪರೂಪ. ಇತ್ತೀಚೆಗಷ್ಟೇ ಈ ದಂಪತಿ ಮಗಳ 18ನೇ ವರ್ಷದ ಜನ್ಮದಿನದ ಆಚರಣೆ ಮಾಡಲಾಗಿದೆ.

ಓಡಿ ಹೋಗಿ ಮದುವೆಯಾಗಿದ್ದ ನಟ ನೆನಪಿರಲಿ ಪ್ರೇಮ್; ಇವರ ಪತ್ನಿ, ಮಗಳು, ಮಗನ ಬಗ್ಗೆ ಇಲ್ಲಿದೆ ಸವಿವರ!

ಇನ್ನು, ವೃತ್ತಿ ಬದುಕಿನ 25ನೇ ಸಿನಿಮಾ 'ಪ್ರೇಮಂ ಪೂಜ್ಯಂ' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ವಿಶೇಷವೆಂದರೆ, ಇಲ್ಲಿ ಅವರು ವಿಶೇಷವಾಗಿ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸ್ಕ್ರಿಪ್ಟ್ ಆಯ್ಕೆಯಲ್ಲಿ ಬಹಳ ಚ್ಯೂಸಿ ಆಗಿರುವ ಅವರು, 'ಪ್ರೇಮಂ ಪೂಜ್ಯಂ' ಸಿನಿಮಾವನ್ನು ಬಹಳ ಇಷ್ಟಪಟ್ಟು ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅವರಿಗೆ ಮೂರನೇ ಬಾರಿಗೆ ನಾಯಕಿಯಾಗಿ ಐಂದ್ರಿತಾ ರೇ ನಟಿಸುತ್ತಿದ್ದಾರೆ. ರಾಘವೇಂದ್ರ ಇದರ ನಿರ್ದೇಶಕರು. ಈ ಚಿತ್ರದಲ್ಲಿ ಪ್ರೇಮ್ ನಾಲ್ಕು ಶೇಡ್‌ ಉಳ್ಳ ಪಾತ್ರವನ್ನು ಮಾಡುತ್ತಿದ್ದಾರಂತೆ.

ನೆನಪಿರಲಿ ಪ್ರೇಮ್ 'ಪ್ರೇಮಂ ಪೂಜ್ಯಂ' ನಾಯಕಿ ಯಾರು ಗೊತ್ತೇ?

View this post on Instagram ನಿನ್ನ ಪ್ರೀತ್ಸಿದ್ಮೇಲೆ ಆಯಸ್ಸು ಜಾಸ್ತಿ ಆಯಿತು. ಮದುವೆ ಆದ್ಮೇಲೆ ಅದೃಷ್ಟ ಕುಲಾಯಿಸ್ತು. ಈಗ ಪಾದಪೂಜೆ ಮಾಡಿದೀಯ ನನ್ಮಗಂದು ಇನ್ಮೇಲೆ ಜಾಕ್ಪಾಟ್... ಭೀಮನ ಅಮಾವಾಸ್ಯೆ ಶುಭಾಶಯಗಳು. @jyothiprem1008 #STAYLOVELY A post shared by Prem Nenapirali (@premnenapirali) on Jul 20, 2020 at 3:18am PDT

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌