ಆ್ಯಪ್ನಗರ

ಸೌತ್‌ ಇಂಡಿಯಾದಲ್ಲಿ ಭಾರೀ ಬೇಡಿಕೆ ಸೃಷ್ಟಿಸಿಕೊಂಡ ಪ್ರಜ್ವಲ್‌ ದೇವರಾಜ್‌!

ಗುರು ದೇಶಪಾಂಡೆ ನಿರ್ಮಾಣದಲ್ಲಿ ಮೂಡಿ ಬಂದಿರುವ 'ಜಂಟಲ್‌ಮನ್‌' ಸಿನಿಮಾಗೆ ಪರಭಾಷೆಯಿಂದಲೂ ಡಿಮಾಂಡ್‌ ಹೆಚ್ಚಾಗಿದೆ. ತಮಿಳು, ತೆಲುಗು ಮತ್ತು ಮಲೆಯಾಳಂನಲ್ಲಿ ರಿಮೇಕ್‌ ಮಾಡಲು ನಿರ್ಮಾಣ ಸಂಸ್ಥೆಗಳು ಮುಂದೆ ಬಂದಿವೆ.

Vijaya Karnataka Web 13 Jan 2020, 11:30 am
ಗುರು ದೇಶಪಾಂಡೆ ನಿರ್ಮಾಣದಲ್ಲಿ ಮೂಡಿ ಬಂದಿರುವ 'ಜಂಟಲ್‌ಮನ್‌' ಸಿನಿಮಾಗೆ ಪರಭಾಷೆಯಿಂದಲೂ ಡಿಮಾಂಡ್‌ ಹೆಚ್ಚಾಗಿದೆ. ತಮಿಳು, ತೆಲುಗು ಮತ್ತು ಮಲೆಯಾಳಂನಲ್ಲಿ ರಿಮೇಕ್‌ ಮಾಡಲು ನಿರ್ಮಾಣ ಸಂಸ್ಥೆಗಳು ಮುಂದೆ ಬಂದಿವೆ. ಸಂಕ್ರಾಂತಿ ನಂತರ ಯಾರೆಲ್ಲ ಸಿನಿಮಾ ಮಾಡಲಿದ್ದಾರೆ ಎಂಬುದನ್ನು ತಿಳಿಸುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ನಟ ಸಾಯಿಕುಮಾರ್‌ ತೆಲುಗಿನಲ್ಲಿ, ನಟ ಸಿಂಬು ಅವರ ಮ್ಯಾನೇಜರ್‌ ಮತ್ತು ಪಿ.ಸಿ.ಗಣೇಶ್‌ ತಮಿಳಿಗೆ ಹಾಗೂ ತ್ರಿಶೂರ್‌ ಬ್ಯಾನರ್‌ನಲ್ಲಿ ಸುನಿಲ್‌ ಮಲೆಯಾಳಂಗೆ ರಿಮೇಕ್‌ ಮಾಡಲು ಒಲವು ತೋರಿದ್ದಾರೆ. ಆದರೆ, ಇನ್ನೂ ಯಾವುದೂ ಅಂತಿಮವಾಗಿಲ್ಲ ಎಂಬುದು ನಿರ್ಮಾಪಕ ಗುರು ಹೇಳಿಕೆ. 'ಟ್ರೇಲರ್‌ ಬಗ್ಗೆ ಕನ್ನಡದಲ್ಲಿ ಮಾತ್ರವಲ್ಲ, ಹಲವು ಸಿನಿಮಾ ರಂಗದಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ದಾಖಲೆ ರೀತಿಯಲ್ಲಿ ಜನರು ಅದನ್ನು ನೋಡಿದ್ದಾರೆ. ಸ್ಯಾಂಡಲ್‌ವುಡ್‌ನ ಖ್ಯಾತ ನಟರು ಮತ್ತು ನಿರ್ದೇಶಕರು ಮೆಚ್ಚಿ ಮಾತನಾಡಿದ್ದಾರೆ. ಹಾಗಾಗಿ ಪರಭಾಷೆಯಲ್ಲೂಈ ಚಿತ್ರಕ್ಕೆ ಡಿಮಾಂಡ್‌ ಹೆಚ್ಚಾಗಿದೆ' ಎಂದಿದ್ದಾರೆ ನಿರ್ಮಾಪಕರು.
Vijaya Karnataka Web big demand for prajwal devaraj starrer gentleman movie remake rights
ಸೌತ್‌ ಇಂಡಿಯಾದಲ್ಲಿ ಭಾರೀ ಬೇಡಿಕೆ ಸೃಷ್ಟಿಸಿಕೊಂಡ ಪ್ರಜ್ವಲ್‌ ದೇವರಾಜ್‌!


​ಪ್ರಜ್ವಲ್‌ ಕರಿಯರ್‌ನಲ್ಲಿ ಡಿಫರೆಂಟ್‌ ಸಿನಿಮಾ

'ತಮಿಳು ಮತ್ತು ತೆಲುಗಿನ ಅನೇಕ ನಟರು, ನಿರ್ದೇಶಕರು ಮತ್ತು ನಿರ್ಮಾಣ ಸಂಸ್ಥೆಗಳು ನನಗೇ ಕಾಲ್‌ ಮಾಡಿ, ಟ್ರೇಲರ್‌ ಬಗ್ಗೆ ಮಾತನಾಡಿದ್ದಾರೆ. ಕಥಾವಸ್ತುವಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಮೆಚ್ಚುಗೆಯ ಮಾತುಗಳು ಸಿನಿಮಾಗೆ ಮತ್ತಷ್ಟು ಬಲ ತರಲಿವೆ. ನನ್ನ ಕರಿಯರ್‌ನಲ್ಲೂಇದೊಂದು ಉತ್ತಮ ಸಿನಿಮಾ ಆಗಲಿದೆ' ಎಂದಿದ್ದಾರೆ ಪ್ರಜ್ವಲ್‌ ದೇವರಾಜ್‌.

​ಸಂಚಾರಿ ವಿಜಯ್‌ಗೆ ಪೊಲೀಸ್ ರೋಲ್‌

ನಿಶ್ವಿಕಾ ನಾಯ್ಡು ಮತ್ತು ಪ್ರಜ್ವಲ್‌ ದೇವರಾಜ್‌ ಕಾಂಬಿನೇಷನ್‌ನಲ್ಲಿಈ ಸಿನಿಮಾ ಮೂಡಿ ಬಂದಿದ್ದು, ಸಂಚಾರಿ ವಿಜಯ್‌ ಕೂಡ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ರಿಲೀಸ್‌ ಆಗಿರುವ ಟ್ರೇಲರ್‌ ಮತ್ತು ಪೋಸ್ಟರ್‌ಗಳು ಸ್ಯಾಂಡಲ್‌ವುಡ್‌ನಲ್ಲಿ ಕುತೂಹಲ ಮೂಡಿಸಿವೆ. ಜಡೇಶ್‌ ಕುಮಾರ್‌ ನಿರ್ದೇಶನದ ಸಿನಿಮಾವಿದು.

​ವಿಭಿನ್ನ ಸ್ಕ್ರೀನ್‌ಪ್ಲೇ ಇರುವ ಸಿನಿಮಾ

'ಕನ್ನಡ ಸಿನಿಮಾರಂಗದಲ್ಲಿ ಕಥೆಯನ್ನೇ ಕೇಂದ್ರವಾಗಿರಿಸಿಕೊಂಡು ಬಂದಿರುವ ಚಿತ್ರಗಳು ಗೆದ್ದಿವೆ. ಉತ್ತಮ ಕಂಟೆಂಟ್‌ ಇದ್ದರೆ ಜನರೂ ಇಷ್ಟಪಟ್ಟು ನೋಡಿದ್ದಾರೆ. ಜಂಟಲ್‌ಮನ್‌ ಕಥೆ ಕೂಡ ಹೊಸದಾಗಿದೆ. ಚಿತ್ರಕಥೆಯನ್ನು ಬೇರೆ ರೀತಿಯಲ್ಲಿ ಹೆಣೆಯಲಾಗಿದೆ. ಎಲ್ಲ ವರ್ಗದವರೂ ಇಷ್ಟಪಡುವಂಥ ಚಿತ್ರ ಇದಾಗಲಿದೆ' ಎಂದಿದ್ದಾರೆ ನಿರ್ಮಾಪಕರು.

​ಟ್ರೇಲರ್‌ನಿಂದಲೇ ರಿಮೇಕ್‌ಗೆ ಬೇಡಿಕೆ

ಸಿನಿಮಾದ ಕಥೆಯೇ ವಿಭಿನ್ನವಾಗಿದೆ. ಅದಕ್ಕೆ ತಕ್ಕಂತೆ ಪೋಸ್ಟರ್‌ಗಳನ್ನು ವಿನ್ಯಾಸ ಮಾಡಲಾಗಿತ್ತು. ಪೋಸ್ಟರ್‌ ಕುರಿತಾಗಿಯೇ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಮೂರು ಭಾಷೆಯಿಂದಲೂ ರಿಮೇಕ್‌ ಬೇಡಿಕೆ ಬಂದಿದೆ. ಇದಕ್ಕೆ ಕಾರಣ ಟ್ರೇಲರ್‌. ದಕ್ಷಿಣ ಭಾರತದಲ್ಲಿ ಟ್ರೇಲರ್‌ ಸಖತ್‌ ಸೌಂಡ್‌ ಮಾಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌