ಆ್ಯಪ್ನಗರ

ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಸ್ಪರ್ಧಿ, ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರದ ನಾಯಕಿ ಸನಾ ಖಾನ್!

ಗೋಲ್ಡನ್ ಸ್ಟಾರ್ ಗಣೇಶ್ 'ಕೂಲ್ ಸಖತ್ ಹಾಟ್ ಮಗ' ಸಿನಿಮಾದ ನಟಿ ಸನಾ ಖಾನ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಸ್ವತ ನಟಿಯೇ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತ ಮಾಹಿತಿ ಹೊರಡಿಸಿದ್ದಾರೆ.

THE TIMES OF INDIA NEWS SERVICE 22 Nov 2020, 1:04 pm
ಗೋಲ್ಡನ್ ಸ್ಟಾರ್ ಗಣೇಶ್ 'ಕೂಲ್ ಸಖತ್ ಹಾಟ್ ಮಗ' ಸಿನಿಮಾದ ನಟಿ ಸನಾ ಖಾನ್ ಅವರು ಗುಜರಾತಿನಲ್ಲಿ ಮುಫ್ತಿ ಅನಾಸ್ ಎಂಬುವವರ ಜೊತೆ ಕಲ್ಯಾಣವಾಗಿದ್ದಾರೆ. ಇಂಟರ್‌ನೆಟ್‌ನಲ್ಲಿ ಈ ಜೋಡಿಯ ಮದುವೆ ವಿಡಿಯೋ ವೈರಲ್ ಆಗುತ್ತಿದೆ. ಮದುವೆ ಸಂಭ್ರಮದಲ್ಲಿ ಈ ಜೋಡಿ ಕೇಕ್ ಕತ್ತರಿಸಿ ಇನ್ನಷ್ಟು ಖುಷಿಪಟ್ಟಿದೆ.
Vijaya Karnataka Web bigg boss 6 fame south indian actress sana khan married to mufti anas
ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಸ್ಪರ್ಧಿ, ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರದ ನಾಯಕಿ ಸನಾ ಖಾನ್!


ಮದುವೆ ಅಧಿಕೃತಪಡಿಸಿದ ನಟಿ!
ಮದುವೆಯ ಫೋಟೋ ಹಂಚಿಕೊಂಡ ಸನಾ ಖಾನ್ ಅವರು, 'ಅಲ್ಲಾರಿಂದ ಇಬ್ಬರೂ ಪ್ರೀತಿಸಿದೆವು, ಅಲ್ಲಾರಿಂದಾಗಿ ಮದುವೆಯಾದೆವು, ಈ ಜಗತ್ತಿನಲ್ಲಿ ಅಲ್ಲಾ ನಮ್ಮಿಬ್ಬರನ್ನು ಒಟ್ಟಾಗಿ ಇಡಲಿ' ಎಂದು ಹೇಳಿದ್ದಾರೆ. ಆದರೆ ಈ ಮದುವೆಯ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಇನ್ನು ಮುಫ್ತಿ ಯಾರು? ಹೇಗೆ ಈ ಜೋಡಿಯ ಪರಿಚಯವಾಯ್ತು? ಯಾವುದರ ಬಗ್ಗೆಯೂ ಸುಳಿವು ಸಿಕ್ಕಿಲ್ಲ.

ಬಣ್ಣದ ಲೋಕಕ್ಕೆ ಗುಡ್‌ಬೈ ಹೇಳಿದ ಸನಾ ಖಾನ್

ಕೆಲದಿನಗಳ ಹಿಂದೆ ಸನಾ ಖಾನ್ ಅವರು ನಟನೆಗೆ ಗುಡ್‌ಬೈ ಹೇಳಿದ್ದರು. ಈ ಕುರಿತು ಅವರು ಸಂಕ್ಷಿಪ್ತವಾಗಿ ಮಾಹಿತಿ ಹಂಚಿಕೊಂಡಿದ್ದರು. 'ಮಾನವೀಯತೆ ಮೇಲೆ ಕೆಲಸ ಮಾಡಿಕೊಂಡು, ಸೃಷ್ಟಿದಾತ ಹೇಳಿದ ನಿಯಮಗಳನ್ನು ಪಾಲಿಸುತ್ತೇನೆ. ನನಗೆ ಚಿತ್ರೋದ್ಯಮ ಹೆಸರು, ಹಣ, ಗೌರವ ಎಲ್ಲವನ್ನು ನೀಡಿದೆ. ಆದರೆ ಮನುಷ್ಯ ಹೆಸರು, ಹಣ ಮಾಡಲು ಭೂಮಿಗೆ ಬರುವುದಾ? ನನಗೆ ಇದು ಗೊತ್ತಾಯ್ತು. ಹೆಸರು, ಹಣಕ್ಕೋಸ್ಕರ ಇಡೀ ಜೀವನವನ್ನು ಕಳೆಯುವುದಲ್ಲ. ಹೀಗಾಗಿ ನಾನು ಬಣ್ಣದಲೋಕದಿಂದ ದೂರ ಹೋಗುವೆ' ಎಂದು ಸನಾ ಖಾನ್ ಹೇಳಿದ್ದರು.
Also Read-ವಿವಾದದ ಸುಳಿಯಲ್ಲಿ ಸನಾ ಖಾನ್

ಅನೇಕ ವಿವಾದಗಳಲ್ಲಿ ಸನಾ ಖಾನ್ ಭಾಗಿ?
ಸನಾ ಖಾನ್ 15 ವರ್ಷದ ಬಾಲಕಿಯೊಬ್ಬಳ ಅಪಹರಣ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಬಿಗ್ ಬಾಸ್ ರಿಯಾಲಿಟಿ ಶೋದಲ್ಲಿ ಸಲ್ಮಾನ್ ಮನ ಸೆಳೆದು ಪ್ರಖರ ಬೆಳಕಿಗೆ ಬಂದು, 'ಮೆಂಟಲ್' ಸಿನಿಮಾದಲ್ಲಿ ನಟಿಸಿದ್ದರು. ಕೇರಳದ ಕಣ್ಣೂರಿನವರಾದ ಸನಾ ಖಾನ್, ಟಿವಿ ಜಾಹೀರಾತುಗಳ ಮೂಲಕ ಪ್ರಖ್ಯಾತಿ ಗಳಿಸಿದ್ದರು. ಹೈಸ್ಕೂಲ್‌ನಲ್ಲಿರುವಾಗಲೇ ‘ಯೇ ಹೇ ಹೈ ಸೊಸೈಟಿ’ ಎಂಬ ವಯಸ್ಕರ ಚಿತ್ರದಲ್ಲಿ ನಟಿಸಿದ್ದರು.

Also Read-ಬಣ್ಣದ ಲೋಕಕ್ಕೆ ವಿದಾಯ ಹೇಳಿದ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ನಾಯಕಿ ಸನಾ ಖಾನ್! ಕಾರಣ ಏನು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌