ಆ್ಯಪ್ನಗರ

ಧ್ರುವ ಸರ್ಜಾ ಹಿಂದು ಧರ್ಮ, ಬ್ರಾಹ್ಮಣರ ವಿರೋಧಿಯಲ್ಲ: ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್!

ನಟ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ 'ಪೊಗರು' ಸಿನಿಮಾದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡುವ ದೃಶ್ಯವಿದೆ ಎಂದು ಆರೋಪ ಮಾಡಲಾಗಿದೆ. ಈ ಕುರಿತು ದೊಡ್ಡ ಚರ್ಚೆಯೂ ಆಯ್ತು. ನಟ ಒಳ್ಳೆ ಹುಡುಗ ಪ್ರಥಮ್ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

Authored byಟೀನಾ | Vijaya Karnataka Web 23 Feb 2021, 6:38 pm

ಹೈಲೈಟ್ಸ್‌:

  • ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಅಭಿನಯದ 'ಪೊಗರು' ಸಿನಿಮಕ್ಕೆ ನಂದ ಕಿಶೋರ್ ನಿರ್ದೇಶನ
  • ಪೊಗರು ಸಿನಿಮಾದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡಲಾಗಿದೆ ಎಂಬ ಆರೋಪವಿದೆ
  • ಪೊಗರು ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ ಒಳ್ಳೆ ಹುಡುಗ ಪ್ರಥಮ್
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web bigg boss pratham reaction on dhruva sarja rashmika mandanna starrer pogaru movie brahmin controversy
ಧ್ರುವ ಸರ್ಜಾ ಹಿಂದು ಧರ್ಮ, ಬ್ರಾಹ್ಮಣರ ವಿರೋಧಿಯಲ್ಲ: ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್!
ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಅಭಿನಯದ 'ಪೊಗರು' ಸಿನಿಮಾ ಫೆ 19ರಂದು ಅದ್ದೂರಿಯಾಗಿ ರಿಲೀಸ್ ಆಗಿತ್ತು. ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ರಿಲೀಸ್ ಆಗಿದ್ದ ಈ ಚಿತ್ರದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ನಟ / ನಿರ್ದೇಶಕ ಬಿಗ್ ಬಾಸ್ ಖ್ಯಾತಿಯ ಒಳ್ಳೆ ಹುಡುಗ ಪ್ರಥಮ್ ಪ್ರತಿಕ್ರಿಯೆ ನೀಡಿದ್ದಾರೆ.
"ನೀವು ಧ್ರುವ ಸರ್ಜಾ ಅವರ ಯಾವುದೇ ಮಾತು, ಟ್ವೀಟ್ ನೋಡಿ, ಕೊನೆಯಲ್ಲಿ ಹೇಳೋದು ಜೈಆಂಜನೇಯ, ಜೈಶ್ರೀರಾಮ್ ಅಂತ. ಧ್ರುವ ಸರ್ಜಾ ಅವರು ಹಿಂದು ಧರ್ಮ, ಬ್ರಾಹ್ಮಣರ ವಿರುದ್ಧವಾಗಿದ್ದಾರಾ? ನೀವೇ ಯೋಚಿಸಿ? ರಾಕ್ಷಸಿ ಪ್ರವೃತ್ತಿ ತೋರಿಸುವಾಗ ತಪ್ಪಾಗಿದೆ, ದೃಶ್ಯ ತೆಗೆಯುವುದಾಗಿ ಎಂದು ನಂದ ಕಿಶೋರ್ ಹೇಳಿದ್ದಾರೆ. ವಿವಾದಬೇಡ. ಧ್ರುವ ಸರ್ಜಾರ ಶ್ರಮಕ್ಕೆ ಹಾರೈಸಿ" ಎಂದು ಪ್ರಥಮ್ ಹೇಳಿದ್ದಾರೆ.

"ಹಿಂದುಧರ್ಮ ನಿಂದನೆ ಯಾರೂ ಒಪ್ಪತಕ್ಕದಲ್ಲ. ನಾನು ಸಿನಿಮಾ ನಟ ಆಗೋಕೂ ಮುಂಚೆ ಒಬ್ಬ ದೇಶಭಕ್ತ, ಹಿಂದು‌‌. ನನಗೆ ದಲಿತರಾದಿಯಾಗಿ ಬ್ರಾಹ್ಮಣರು ಎಲ್ಲರೂ ನನ್ನವರೇ. ಒಂದು ಮನವಿ ಮಾಡ್ಕೊಳ್ತೀನಿ. ಆಗಿರೋ ತಪ್ಪನ್ನ ತಿದ್ದುವ ಕೆಲಸ ನಿರ್ದೇಶಕರಾದ ನಂದಕಿಶೋರ್ ಅವರು ಮಾಡುತ್ತಿದ್ದಾರೆ. ಧ್ರುವ ಕೂಡ ಆಂಜನೇಯನ ಪರಮ ಭಕ್ತ. ಚಿತ್ರತಂಡದ ಪ್ರಮುಖ ಸಾರಥಿ ನಂದ ಕಿಶೋರ್ ಕ್ಷಮೆ ಕೇಳಿದ್ದಾರೆ. ದಯವಿಟ್ಟು ಧ್ರುವರನ್ನು ಹಿಂದು ವಿರೋಧಿ, ಬ್ರಾಹ್ಮಣ ವಿರೋಧಿ ಅಂತ ಬಿಂಬಿಸುವುದನ್ನು ನಿಲ್ಲಿಸಿ" ಎಂದು ಪ್ರಥಮ್ ಹೇಳಿದ್ದಾರೆ.

Also Read-ಸೆನ್ಸಾರ್ ಮಂಡಳಿ ಮುಂದೆ 'ಪೊಗರು' ಸಿನಿಮಾ ವಿರುದ್ಧ ಬ್ರಾಹ್ಮಣ ಸಂಘಟನೆಗಳ ಪ್ರತಿಭಟನೆ!

ಮೈಸೂರು ಸೇರಿದಂತೆ ಕೆಲ ಭಾಗಗಳಲ್ಲಿ ಬ್ರಾಹ್ಮಣರು ಸೆನ್ಸಾರ್ ಮಂಡಳಿ ವಿರುದ್ಧ ಪ್ರತಿಭಟನೆ ಮಾಡಿದ್ದರು. ನಂದ ಕಿಶೋರ್ ಹಾಗೂ ಬ್ರಾಹ್ಮಣ ಸಮುದಾಯದ ರಾಜ್ಯಾಧ್ಯಕ್ಷ ಸಚ್ಚಿದಾನಂದಮೂರ್ತಿ ಅವರು ಸುದ್ದಿಗೋಷ್ಠಿ ಕರೆದಿದ್ದರು. ಆ ವೇಳೆ 'ಪೊಗರು' ಸಿನಿಮಾದ ಕೆಲವೊಂದಿಷ್ಟು ದೃಶ್ಯಗಳನ್ನು ಕತ್ತರಿಸುವುದಾಗಿ ನಂದ ಕಿಶೋರ್ ಭರವಸೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌