ಬಿಗ್ ಬಾಸ್ ಕನ್ನಡ ಸೀಸನ್ 6ರಲ್ಲಿ ಜನಸಾಮಾನ್ಯರ ವಿಭಾಗದಿಂದ ಸ್ಪರ್ಧಿಸಿ, ಆ ಸೀಸನ್ ವಿನ್ನರ್ ಆಗಿದ್ದವರು ಕೃಷಿಕ ಶಶಿಕುಮಾರ್. ಅಧುನಿಕ ಕೃಷಿ ಪದ್ಧತಿ ಮೂಲಕ ಜನಪ್ರಿಯರಾಗಿರುವ ಅವರು, ಈಗಲೂ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಜೊತೆಗೆ ಅವರೀಗ ಸಿನಿಮಾರಂಗದಲ್ಲೂ ಸಕ್ರಿಯರಾಗಿದ್ದಾರೆ. ಪ್ರಸ್ತುತ ಅನೂಪ್ ಆಂಟೋನಿ ನಿರ್ದೇಶನದ 'ಮೆಹಬೂಬಾ' ಸಿನಿಮಾದಲ್ಲಿ ಅವರು ಹೀರೋ ಆಗಿ ನಟಿಸುತ್ತಿದ್ದಾರೆ. ಆ ಸಿನಿಮಾದ ಕೆಲಸಗಳು ಕೊನೇ ಹಂತದಲ್ಲಿವೆ. ಅದು ತೆರೆಗೆ ಬರುವ ಮುನ್ನವೇ ಮತ್ತೊಂದು ಸಿನಿಮಾದಲ್ಲಿ ಶಶಿ ಬಣ್ಣ ಹಚ್ಚುವುದಕ್ಕೆ ಸಿದ್ಧರಾಗಿದ್ದಾರೆ. ವಿಶೇಷವೆಂದರೆ, ಇಲ್ಲಿ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಾವ ಸಿನಿಮಾ ಅದು? ಶುಗರ್ ಫ್ಯಾಕ್ಟರಿ! ಕೃಷ್ಣ-ಸೋನಲ್ ನಟನೆಯ ಶುಗರ್ ಫ್ಯಾಕ್ಟರಿ!
ಈಗಾಗಲೇ ಚಿತ್ರೀಕರಣ ಶುರು ಮಾಡಿರುವ 'ಶುಗರ್ ಫ್ಯಾಕ್ಟರಿ' ಚಿತ್ರದಲ್ಲಿ ಶಶಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಮಾಹಿತಿ ನೀಡುವ ಶಶಿ, 'ಈ ಸಿನಿಮಾದಲ್ಲಿ ಒಂದು ಮಹತ್ವವಾದ ಅತಿಥಿ ಪಾತ್ರಕ್ಕೆ ನಾನು ಬಣ್ಣ ಹಚ್ಚಲಿದ್ದೇನೆ. ಸದ್ಯ ಗೋವಾದಲ್ಲಿ ಶೂಟಿಂಗ್ ನಡೆಯುತ್ತಿದ್ದು, ಅಲ್ಲಿ ಮುಗಿಯುತ್ತಿದ್ದಂತೆಯೇ, ಮೈಸೂರು ಮತ್ತು ಬೆಂಗಳೂರಿನಲ್ಲಿ ಶೂಟಿಂಗ್ ನಡೆಯಲಿದೆ' ಎಂದು ಹೇಳುತ್ತಾರೆ. ಬಹಳ ದಿನಗಳ ನಂತರ ದೀಪಕ್ ಅರಸ್ ಈ ಸಿನಿಮಾದ ಮೂಲಕ ನಿರ್ದೇಶಕರಾಗಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ. 'ಡಾರ್ಲಿಂಗ್' ಕೃಷ್ಣಗೆ ನಾಯಕಿಯಾಗಿ ಸೋನಲ್ ಮಂಥೇರೋ ಇದ್ದಾರೆ. 24 ದಿನಗಳ ಕಾಲ ಮೂರು ಹಾಡುಗಳು, ಒಂದು ಸಾಹಸ ಸನ್ನಿವೇಶ ಹಾಗೂ ಮಾತಿನ ಭಾಗದ ಚಿತ್ರೀಕರಣವನ್ನು ಗೋವಾದಲ್ಲಿ ಮಾಡುವುದಕ್ಕೆ ತಂಡ ಸಿದ್ಧತೆ ಮಾಡಿಕೊಂಡಿದೆ. ಕೃಷ್ಣ, ಸೋನಲ್ ಜೊತೆಗೆ ಅದ್ವಿತಿ ಶೆಟ್ಟಿ, ಶಿಲ್ಪಾ ಶೆಟ್ಟಿ, ರಂಗಾಯಣ ರಘು ಮುಂತಾದವರು ನಟಿಸುತ್ತಿದ್ದಾರೆ.
ರಿಲೀಸ್ಗೆ ರೆಡಿ ಆಗುತ್ತಿರುವ 'ಮೆಹಬೂಬಾ'
ಶಶಿ ಹೀರೋ ಆಗಿದ್ದು 'ಮೆಹಬೂಬಾ' ಸಿನಿಮಾದ ಮೂಲಕ. ಅದರಲ್ಲಿ ಅವರಿಗೆ ನಾಯಕಿಯಾಗಿ ಪಾವನಾ ಗೌಡ ನಟಿಸಿದ್ದಾರೆ. 'ಬ್ಯೂಟಿಫುಲ್ ಮನಸುಗಳು', 'ನೀರ್ದೋಸೆ' ಥರದ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಪ್ರಸನ್ನ ಶ್ರೀನಿವಾಸ್, ಈ ಸಿನಿಮಾಗೂ ಹಣ ಹಾಕಿದ್ದಾರೆ. ಫೈಟ್ ಮತ್ತು ಸಾಂಗ್ ಶೂಟಿಂಗ್ ಬ್ಯಾಲೆನ್ಸ್ ಇತ್ತು. ಅದಕ್ಕಾಗಿ ಶಶಿ ದೇಹವನ್ನು ಹುರಿಗೊಳಿಸಿಕೊಂಡಿದ್ದರು.
Photos: ಗೋವಾದಲ್ಲಿ 'ಶುಗರ್ ಫ್ಯಾಕ್ಟರಿ' ಶುರು ಮಾಡಿದ 'ಡಾರ್ಲಿಂಗ್' ಕೃಷ್ಣ & ಸೋನಲ್!
ಸಿಕ್ಸ್ ಪ್ಯಾಕ್ ಮಾಡಿಕೊಂಡ ಶಶಿ
'ಮೆಹಬೂಬಾ' ಸಿನಿಮಾಕ್ಕಾಗಿ ಶಶಿ, ಸಿಕ್ಸ್ ಪ್ಯಾಕ್ ಮಾಡಿಕೊಂಡಿದ್ದಾರೆ. 'ನನ್ನ 'ಮೆಹಬೂಬಾ' ಚಿತ್ರದ ಸಾಹಸ ಮತ್ತು ಹಾಡುಗಳ ಚಿತ್ರೀಕರಣಕ್ಕಾಗಿ ಸಿಕ್ಸ್ ಪ್ಯಾಕ್ ಮಾಡಿಕೊಳ್ಳುವುದು ಬಹಳ ಅವಶ್ಯಕವಾಗಿತ್ತು. ಹೀರೋ ಅಂದಮೇಲೆ ಫಿಟ್ ಆಗಿರುವುದು ಬಹಳ ಮುಖ್ಯ ಅಲ್ಲವೇ? ಅದಕ್ಕಾಗಿ ಮುಂಬರುವ ಸಿನಿಮಾಗಳಿಗೂ ಇದರಿಂದ ಅನುಕೂಲ ಆಗಲಿ ಎಂದು ಬಾಡಿ ಬಿಲ್ಡ್ ಮಾಡಿಕೊಂಡೆ. ಸಿಕ್ಸ್ ಪ್ಯಾಕ್ ಮಾಡುವುದಕ್ಕೆ ನಾನು 45ರಿಂದ 60 ದಿನಗಳವರೆಗೆ ಸಮಯ ತೆಗೆದುಕೊಂಡೆ. ನಾನು ಸಂಪೂರ್ಣವಾಗಿ ಪ್ರೋಟೀನ್ ಮತ್ತು ನಾರಿನ ಆಹಾರ ತೆಗೆದುಕೊಳ್ಳುತ್ತಿದ್ದೆ. ಫಿಶ್ ಡಯೆಟ್ ಮಾಡಿದೆ' ಎಂದು ಅವರು ಸಿಕ್ಸ್ ಪ್ಯಾಕ್ ಮಾಡಿದ್ದರ ಕುರಿತು ಹೇಳಿಕೊಂಡಿದ್ದರು.
ಬಿಗ್ ಬಾಸ್ ಶಶಿ ಮಾತು, ಮಾರ್ಗದರ್ಶನ ನಮ್ಮ ಸಮುದಾಯವನ್ನು ಬಲಪಡಿಸಿದೆ; ಹರಿಹರದ ಶ್ವಾಸ ಗುರು!