ಆ್ಯಪ್ನಗರ

Suriya: ತನ್ನ ಜೀವನನಕಥೆ ಆಧರಿಸಿದ 'ಸೂರರೈ ಪೋಟ್ರು' ಸಿನಿಮಾ ಇಷ್ಟಪಡದವರಿಗೆ ಉತ್ತರ ಕೊಟ್ಟ ಜಿಆರ್‌ ಗೋಪಿನಾಥ್!

ತಮಿಳು ನಟ ಸೂರ್ಯ ನಟನೆಯ ಕ್ಯಾಪ್ಟನ್ ಜಿ ಆರ್ ಗೋಪಿನಾಥ್ ಅವರ ಜೀವನಕಥೆ ಆಧರಿಸಿ ಮಾಡಿದ 'ಸೂರರೈ ಪೋಟ್ರು' ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಆದರೆ ಕೆಲವರಿಗೆ ಈ ಚಿತ್ರ ಬೇಸರ ತಂದಿದ್ದು, ಅದಕ್ಕೆ ಸ್ವತಃ ಜಿಆರ್ ಗೋಪಿನಾಥ್ ಪ್ರತಿಕ್ರಿಯೆ ನೀಡಿದ್ದಾರೆ.

Vijaya Karnataka Web 5 Aug 2021, 5:34 pm
ಕ್ಯಾಪ್ಟನ್ ಜಿ ಆರ್ ಗೋಪಿನಾಥ್ ಅವರ ಜೀವನಕಥೆಯನ್ನಾದರಿಸಿದ 'ಸೂರರೈ ಪೊಟ್ರು' ಸಿನಿಮಾ ಅನೇಕರಿಗೆ ಇಷ್ಟವಾಗಿದೆ. ಇದನ್ನು ನೋಡಿದ ಕರ್ನಾಟಕದ ಮಂದಿಗೆ ಕನ್ನಡಿಗನ ಕಥೆಯನ್ನು ಕನ್ನಡಿಗರೇ ಸಿನಿಮಾ ಮಾಡಬಹುದಿತ್ತು ಎಂದು ಅನಿಸಿದೆ. ಇನ್ನು ಗೋಪಿನಾಥ್ ಅವರ ಸಹೋದ್ಯೋಗಿಗಳು, ಕೆಲ ಸ್ನೇಹಿತರಿಗೆ ಈ ಚಿತ್ರ ಬೇಸರ ತರಿಸಿದೆಯಂತೆ. ಇದಕ್ಕೆ ಸ್ವತಃ ಜಿ ಆರ್ ಗೋಪಿನಾಥ್ ಅವರೇ ಉತ್ತರ ನೀಡಿದ್ದಾರೆ.
Vijaya Karnataka Web captain gr gopinath reply who are disappointed about suriya starrer soorarai pottru movie
Suriya: ತನ್ನ ಜೀವನನಕಥೆ ಆಧರಿಸಿದ 'ಸೂರರೈ ಪೋಟ್ರು' ಸಿನಿಮಾ ಇಷ್ಟಪಡದವರಿಗೆ ಉತ್ತರ ಕೊಟ್ಟ ಜಿಆರ್‌ ಗೋಪಿನಾಥ್!


ಸಿಂಪ್ಲಿ ಫ್ಲೈ' ಪುಸ್ತಕ ಆಧರಿಸಿ ಸಿನಿಮಾ
ಸುಧಾ ಕೊಂಗಾರಾ ನಿರ್ದೇಶನದ ಸೂರರೈ ಪೊಟ್ರು ಸಿನಿಮಾ ಅಮೆಜಾನ್ ಪ್ರೈಂನಲ್ಲಿ ರಿಲೀಸ್ ಆಗಿದೆ. ಇದಕ್ಕೆ ಹೆಚ್ಚಾಗಿ ಪಾಸಿಟಿವ್ ಪ್ರತಿಕ್ರಿಯೆಗಳು ಬಂದಿವೆ. ಅತಿ ಹೆಚ್ಚು ಪ್ರೇಕ್ಷಕರ ಮನಸ್ಸನ್ನು ಕದ್ದಿದ್ದರೂ ಕೂಡ ಕೆಲವರಿಗೆ ಈ ಚಿತ್ರ ತುಂಬ ಮಸಾಲೆಭರಿತವಾಗಿದೆ. ಇನ್ನೂ ಕೆಲವರು ಈ ಸಿನಿಮಾದಲ್ಲಿ ವಾಸ್ತವ, ನೈಜತೆಯ ಕೊರತೆ ಇದೆ ಎಂದಿದ್ದಾರೆ. 'ಏರ್ ಡೆಕ್ಕನ್' ಸಂಸ್ಥಾಪಕ ಜಿ ಆರ್‌ ಗೋಪಿನಾಥ್ ಅವರ ಪುಸ್ತಕ 'ಸಿಂಪ್ಲಿ ಫ್ಲೈ' ಪುಸ್ತಕ ಆಧರಿಸಿ ಈ ಚಿತ್ರ ತಯಾರಿ ಮಾಡಲಾಗಿತ್ತು.

ಬೇಸರಪಟ್ಟುಕೊಂಡವರಿಗೆ ಗೋಪಿನಾಥ್ ಏನು ಹೇಳ್ತಾರೆ?
ಯಾರಿಗೆ 'ಸೂರರೈ ಪೊಟ್ರು' ಸಿನಿಮಾ ಬೇಸರ ತಂದಿದೆಯೋ ಅವರಿಗೆ ಗೋಪಿನಾಥ್ ಟ್ವಿಟ್ಟರ್ ಮೂಲಕ ಉತ್ತರ ನೀಡಿದ್ದಾರೆ. 'ಸೂರರೈ ಪೊಟ್ರು ಸಿನಿಮಾ ನನ್ನ ಪುಸ್ತಕದಲ್ಲಿ ಇದ್ದಹಾಗಿಲ್ಲ, ವಾಸ್ತವ ಅಂಶದಿಂದ ದೂರವಾಗಿದೆ ಎಂದು ಕೆಲ ಸ್ನೇಹಿತರು, ಸೇನೆಯ ಅಧಿಕಾರಿಗಳು, ಏರ್ ಡೆಕ್ಕನ್ ಸಂಸ್ಥೆಯ ಸಹೋದ್ಯೋಗಿಗಳು ಬೇಸರ ಮಾಡಿಕೊಂಡಿದ್ದರು. ಸಿನಿಮಾಕ್ಕೆ ತಕ್ಕಂತೆ ಕೆಲವನ್ನು ನಾಟಕೀಯವಾಗಿ ತೋರಿಸಲಾದರೂ ಕೂಡ ಇದರಲ್ಲಿ ಉತ್ತಮ ಅಂಶವಿದೆ' ಎಂದು ಜಿಆರ್‌ ಗೋಪಿನಾಥ್ ಹೇಳಿದ್ದಾರೆ.

Also Read-ಸೂರ್ಯ ನಟನೆಯ 'ಸೂರರೈ ಪೋಟ್ರು' ಸಿನಿಮಾದಲ್ಲಿ ಕನ್ನಡಿಗರಿಗೆ ಬೇಸರ ತರಿಸಿದ ವಿಷಯ ಯಾವುದು?

ನಾಯಕನ ಯಶಸ್ಸಿನಲ್ಲಿ ಉಳಿದವರ ತ್ಯಾಗ ಅಪಾರ!
'ಸಂಪೂರ್ಣ ಸತ್ಯಾಂಶಗಳಿಂದ ಕೂಡಿದ್ದರೆ ಅದು ಡಾಕ್ಯುಮೆಂಟರಿ ಆಗಿರುತ್ತಿತ್ತು. ಇದು ಬೇರೆ ಪ್ರಕಾರ ಆದರೂ ಕೂಡ ಮೌಲ್ಯದಿಂದ ಕೂಡಿದೆ. ನಾಯಕನಿಗೆ ಪತ್ನಿ, ಮನೆಯವರಿಂದ ಭಾವನಾತ್ಮಕ ಪ್ರೋತ್ಸಾಹ ಬೇಕು ಎಂದು ಸಿನಿಮಾ ತೋರಿಸಿಕೊಡುತ್ತದೆ. ಇನ್ನು ಯಶಸ್ಸಿಗೋಸ್ಕರ ನಾಯಕನಿಗಿಂತ ಜಾಸ್ತಿ ಮನೆಯವರು, ಉಳಿದವರು ತ್ಯಾಗ ಮಾಡಿರುತ್ತಾರೆ' ಎಂದು ಗೋಪಿನಾಥ್ ಹೇಳಿದ್ದಾರೆ.

ಪತ್ನಿ ಅವಳ ಕನಸನ್ನು ಈಡೇರಿಸಿಕೊಳ್ಳಬಲ್ಲಳು!
'ತನ್ನ ಕನಸನ್ನು ತ್ಯಾಗ ಮಾಡದೆ ಪತ್ನಿಯಾದವಳು ಪತಿಯ ಕನಸಿಗೆ ಸಾಥ್ ನೀಡಬಹುದು. ಅವಳ ಐಡೆಂಟಟಿಯನ್ನು ಕಳೆದುಕೊಳ್ಳದೆ ಗಂಡನ ಕಷ್ಟ, ಕನಸಿಗೆ ಸಾಕಾರವಾಗಬಲ್ಲಳು' ಎಂದು ಕೂಡ ತಿಳಿಸಿದ 'ಸೂರರೈ ಪೊಟ್ರು' ಸಿನಿಮಾದ ಅಪರ್ಣಾ ಪಾತ್ರದ ಬಗ್ಗೆ ಮಾತನಾಡಿದ್ದಾರೆ.

Also Read-'ಸೂರರೈ ಪೋಟ್ರು' ಖ್ಯಾತಿಯ ಸುಧಾ ನಿರ್ದೇಶನದ ಮುಂದಿನ ಸಿನಿಮಾಕ್ಕೆ ಹೀರೋ ಯಾರು? ಶುರುವಾಗಿದೆ ಚರ್ಚೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌