ಆ್ಯಪ್ನಗರ

ಶಿವರಾಜ್‌ಕುಮಾರ್‌-ಯಡಿಯೂರಪ್ಪ ಭೇಟಿಗೆ ಕೊರೊನಾ ಅಡ್ಡಿ! ಚಿತ್ರರಂಗದ ಮುಂದಿನ ಪ್ಲ್ಯಾನ್‌ ಏನು?

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಮಂಗಳವಾರ (ಆ.4) ಭೇಟಿಯಾಗಲು ಶಿವರಾಜ್‌ಕುಮಾರ್‌ ನಿರ್ಧರಿಸಿದ್ದರು. ಆದರೆ ಸಿಎಂಗೆ ಕೊರೊನಾ ಪಾಸಿಟಿವ್‌ ಆಗಿರುವುದರಿಂದ ಈ ಕಾರ್ಯಕ್ರಮವನ್ನು ಮುಂದೂಡಲಾಗಿದೆ.

Vijaya Karnataka Web 3 Aug 2020, 11:25 am
ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಆರಂಭಿಸಲು ಅನುಮತಿ, ಚಿತ್ರರಂಗಕ್ಕೆ ಪ್ರತ್ಯೇಕ ಪ್ಯಾಕೇಜ್ ನೀಡುವುದು ಸೇರಿದಂತೆ ಅನೇಕ ಮನವಿಗಳನ್ನು ಸಲ್ಲಿಸಲು ಮಂಗಳವಾರ (ಆ.4) ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಶಿವಣ್ಣ ಭೇಟಿ ಆಗಬೇಕಿತ್ತು. ಆದರೆ ಯಡಿಯೂರಪ್ಪ ಅವರಿಗೆ ಕೊರೊನಾ ವೈರಸ್‌ ಪಾಸಿಟಿವ್‌ ವರದಿ ಬಂದ ಹಿನ್ನೆಲೆಯಲ್ಲಿ ಆ ಕಾರ್ಯಕ್ರಮ ರದ್ದಾಗಿದೆ.
Vijaya Karnataka Web cm bs yediyurappa tests positive for coronavirus meeting with shivarajkumar postponed
ಶಿವರಾಜ್‌ಕುಮಾರ್‌-ಯಡಿಯೂರಪ್ಪ ಭೇಟಿಗೆ ಕೊರೊನಾ ಅಡ್ಡಿ! ಚಿತ್ರರಂಗದ ಮುಂದಿನ ಪ್ಲ್ಯಾನ್‌ ಏನು?


ಚಿತ್ರ ಪ್ರದರ್ಶನಗಳು ಸ್ಥಗಿತ ಆಗಿರುವುದರಿಂದ ಚಿತ್ರರಂಗಕ್ಕೆ ಯಾವೆಲ್ಲ ತೊಂದರೆಗಳಾಗಿವೆ ಎಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕಾಗಿದೆ. ಈ ಸಲುವಾಗಿ ನಾಗವಾರದಲ್ಲಿರುವ 'ಹ್ಯಾಟ್ರಿಕ್ ಹೀರೋ' ಶಿವರಾಜ್‌ಕುಮಾರ್‌ ಮನೆಯಲ್ಲಿ ಇತ್ತೀಚೆಗೆ ಚಿತ್ರರಂಗದ ಗಣ್ಯರು ಸಭೆ ಸೇರಿದ್ದರು. ಆ ವಿಚಾರಗಳನ್ನು ಮುಖ್ಯಮಂತ್ರಿಗಳಿಗೆ ತಿಳಿಸಿ, ಮನವಿ ಸಲ್ಲಿಸಲು ಮಂಗಳವಾರ ಭೇಟಿಗೆ ಸಮಯ ನಿಗದಿ ಆಗಿತ್ತು. ಸದ್ಯ ಆ ಭೇಟಿಯನ್ನು ಮುಂದೂಡಲಾಗಿದೆ.

ಬಿ.ಎಸ್‌. ಯಡಿಯೂರಪ್ಪ ತಮಗೆ ಕೊರೊನಾ ಪಾಸಿಟಿವ್‌ ಆಗಿದೆ ಎಂಬ ವಿಚಾರವನ್ನು ಭಾನುವಾರ (ಆ.2) ಸ್ಪಷ್ಟಪಡಿಸಿದರು. ಪ್ರಸ್ತುತ ಅವರು ಕ್ವಾರಂಟೈನ್‌ ಆಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದು ರಾಜಕಾರಣಿಗಳು, ಸಿನಿಮಾರಂಗದ ಗಣ್ಯರು ಮುಂತಾದವರು ಪ್ರಾರ್ಥಿಸುತ್ತಿದ್ದಾರೆ. ಅವರು ಸಂಪೂರ್ಣ ಚೇತರಿಸಿಕೊಂಡ ಬಳಿಕವೇ ಅವರನ್ನು ಶಿವರಾಜ್‌ಕುಮಾರ್‌ ಭೇಟಿ ಮಾಡಲಿದ್ದಾರೆ.

also read: ಚಿತ್ರಮಂದಿರ ತೆರೆಯುವ ಬಗ್ಗೆ ಶಿವರಾಜ್‌ಕುಮಾರ್‌ ಮನೆಯಲ್ಲಿ ನಡೆದಿದೆ ಮಹತ್ವದ ಸಭೆ!

ಡಾ. ರಾಜ್‌ಕುಮಾರ್‌, ಅಂಬರೀಷ್‌ ಬಳಿಕ ಸ್ಯಾಂಡಲ್‌ವುಡ್‌ಗೆ ನಾಯಕ ಯಾರು ಎಂಬ ಪ್ರಶ್ನೆ ಆಗಾಗ ಕೇಳಿಬರುತ್ತಲೇ ಇತ್ತು. ಆ ನಾಯಕತ್ವವನ್ನು ಇತ್ತೀಚೆಗೆ ಶಿವರಾಜ್‌ಕುಮಾರ್‌ ವಹಿಸಿಕೊಂಡಿದ್ದಾರೆ. ಅವರಿಗೆ ಇಡೀ ಕನ್ನಡ ಚಿತ್ರರಂಗ ಬೆಂಬಲವಾಗಿ ನಿಂತಿದೆ. ಅವರು ಚಂದನವನದ ನಾಯಕತ್ವ ವಹಿಸಿಕೊಂಡಾಗಿನಿಂದ ಹಲವು ಸಭೆಗಳನ್ನು ಮಾಡುತ್ತಿದ್ದಾರೆ. ಲಾಕ್‌ಡೌನ್ ನಂತರವಂತೂ ಚಿತ್ರರಂಗ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದು, ಶಿವಣ್ಣನ ಮುಂದಾಳತ್ವದಲ್ಲಿ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಪ್ಲ್ಯಾನ್ ರೂಪಿಸಲಾಗುತ್ತಿದೆ.

also read: ಶಿವಣ್ಣ ಮನೆಯಲ್ಲಿ ನಡೆದ ಚಿತ್ರರಂಗದ ಸಭೆಗೆ ನಟ ಜಗ್ಗೇಶ್‌ ಗೈರಾಗಿದ್ದಕ್ಕೆ ಇಲ್ಲಿದೆ ಕಾರಣ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌