ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಇಡೀ ದೇಶವೇ ಲಾಕ್ಡೌನ್ ಆಗಿದೆ. ಸಿನಿಮಾ ಚಟುವಟಿಕೆಗಳು ಸಂಪೂರ್ಣ ಬಂದ್ ಆಗಿರುವುದರಿಂದ ಮನರಂಜನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಬದುಕು ಕಷ್ಟಕ್ಕೆ ತಳ್ಳಲ್ಪಟ್ಟಿದೆ. ಅಂಥವರಿಗೆ ನೆರವಾಗಲು ಸಲ್ಮಾನ್ ಖಾನ್ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ 25 ಸಾವಿರ ಕಾರ್ಮಿಕರ ಬ್ಯಾಂಕ್ ಖಾತೆಗೆ ಸಲ್ಮಾಣ್ ಖಾನ್ ನೇರವಾಗಿ ಹಣ ಜಮಾ ಮಾಡುತ್ತಿದ್ದಾರೆ. ಈ ಕಾರ್ಯವನ್ನು ಅವರ 'ಬೀಯಿಂಗ್ ಹ್ಯೂಮನ್ ಫೌಂಡೇಶನ್' ವಹಿಸಿಕೊಂಡಿದೆ. ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯಿಸ್ ಒಕ್ಕೂಟವೂ ಈ ಮಾಹಿತಿಯನ್ನು ಖಚಿತ ಪಡಿಸಿದೆ.
'ನಮ್ಮ ಒಕ್ಕೂಟದಲ್ಲಿ 5 ಲಕ್ಷ ಕಾರ್ಮಿಕರು ಇದ್ದೇವೆ. ಅವರಲ್ಲಿ 25 ಸಾವಿರ ಜನರಿಗೆ ಹಣದ ಅನಿವಾರ್ಯತೆ ಎದುರಾಗಿದೆ. ಅವರಿಗೆ ಅಗತ್ಯ ನೆರವು ನೀಡುವ ಜವಾಬ್ದಾರಿಯನ್ನು ಬೀಯಿಂಗ್ ಹ್ಯೂಮನ್ ಸಂಸ್ಥೆ ವಹಿಸಿಕೊಂಡಿದೆ. ಮೂರು ದಿನಗಳ ಹಿಂದೆ ಕರೆ ಮಾಡಿ ಎಲ್ಲರ ಬ್ಯಾಂಕ್ ಖಾತೆ ವಿವರವನ್ನು ಸಂಗ್ರಹಿಸಿದ್ದಾರೆ. ಎಲ್ಲರಿಗೂ ನೇರವಾಗಿ ಹಣ ತಲುಪುವಂತೆ ಮಾಡುವುದು ಅವರ ಉದ್ದೇಶ' ಎಂದು ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯಿಸ್ ಒಕ್ಕೂಟದ ಅಧ್ಯಕ್ಷ ಬಿ.ಎನ್. ತಿವಾರಿ ಹೇಳಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹೇಳಿದ ಒಂದೇ ಮಾತಿಗೆ 25 ಕೋಟಿ ರೂ. ದೇಣಿಗೆ ನೀಡಿದ ಅಕ್ಷಯ್ ಕುಮಾರ್!
ಒಕ್ಕೂಟದಲ್ಲಿರುವ ಇನ್ನುಳಿದ 4 ಲಕ್ಷ 75 ಸಾವಿರ ಕಾರ್ಮಿಕರಿಗೆ ಆಹಾರದ ತೊಂದರೆ ಆಗದಂತೆ ಒಕ್ಕೂಟವೇ ನಿಗಾವಹಿಸಿದೆ. ಆದರೆ ಆಹಾರ ಸಾಮಾಗ್ರಿಗಳನ್ನು ಕಾರ್ಮಿಕರಿಗೆ ತಲುಪಿಸುವುದು ಕಷ್ಟ ಆಗಿದೆ ಎಂದು ಬಿ.ಎನ್. ತಿವಾರಿ ಹೇಳಿದ್ದಾರೆ. ಇನ್ನು, ಪಿಎಂ ಕೇರ್ಸ್ ಫಂಡ್ಗೆ ದೇಣಿಗೆ ನೀಡುವ ಮೂಲಕ ಅನೇಕ ಬಾಲಿವುಡ್ ತಾರೆಯರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.
ಫಾರ್ಮ್ಹೌಸ್ನಿಂದಲೇ ಸಿನಿಮಾ ಕೆಲಸ ಆರಂಭಿಸಿದ ನಟ ಸಲ್ಮಾನ್ ಖಾನ್