ಆ್ಯಪ್ನಗರ

ಪ್ರತಿಷ್ಠಿತ ಕಾನ್ ಚಿತ್ರೋತ್ಸವ ಮೇಲೆ ಕೊರೊನಾ ವೈರಸ್ ಕರಿನೆರಳು

ಜಗತ್ತಿನಾದ್ಯಂತ ಕೊರೊನಾ ವೈರಸ್‍ನ ಕರಾಳ ಛಾಯೆ ಕವಿದಿದ್ದು ಪ್ರತಿಷ್ಠಿತ ಚಲನಚಿತ್ರೋತ್ಸವಗಳಿಗೂ ಇದರ ದುಷ್ಪರಿಣಾಮ ಸೋಕಿದೆ. ಫ್ರಾ‌ನ್ಸ್‌ನಲ್ಲಿ ಪ್ರತಿ ವರ್ಷ ನಡೆಯುವ ಪ್ರತಿಷ್ಠಿತ ಕಾನ್ ಚಿತ್ರೋತ್ಸವ ಈ ಸಲ ನಡೆಯುವುದು ಅನುಮಾನ ಎಂದಿವೆ ಮೂಲಗಳು.

Vijaya Karnataka 17 Apr 2020, 8:05 pm

ಪ್ರತಿಷ್ಠಿತ ಕಾನ್ ಚಿತ್ರೋತ್ಸವದ ಮೇಲೆಯೂ ಕೊರೊನಾ ಕರಿನೆರಳು ವ್ಯಾಪಿಸಿದೆ. ಭಾರತ ಸೇರಿದಂತೆ ವಿವಿಧ ದೇಶಗಳ ಸಿಲೆಬ್ರಿಟಿಗಳು ಪಾಲ್ಗೊಳ್ಳುವ ಈ ಸಮಾರಂಭವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಎಲ್ಲಾ ಸಾಧ್ಯತೆಗಳು ವ್ಯಕ್ತವಾಗಿವೆ.
Vijaya Karnataka Web ಕಾನ್ ಚಲನಚಿತ್ರೋತ್ಸವ


ನಿಗದಿಯಂತೆ ಇದೇ ಮೇ 12ರಿಂದ 23ರವರೆಗೆ ಕಾನ್ ಚಿತ್ರೋತ್ಸವ ನಡೆಯಬೇಕಿತ್ತು. ಆದರೆ ಕೊರೊನಾ ಸೋಂಕಿನಿಂದಾಗಿ ಫ್ರಾನ್ಸ್‌ನಲ್ಲೂ ಸಭೆ, ಸಮಾರಂಭಗಳ ಆಯೋಜನೆಗೆ ನಿರ್ಬಂಧ ಹೇರಲಾಗಿದ್ದರಿಂದ ದಿನಾಂಕ ಮುಂದೂಡಲ್ಪಡುವ ಸಾಧ್ಯತೆ ಕಳೆದ ಮಾರ್ಚ್ ನಲ್ಲಿ ವ್ಯಕ್ತವಾಗಿತ್ತು. ಈಗ ಕೊರೊನಾ ಸಮಸ್ಯೆ ಫ್ರಾನ್ಸ್‌ನಲ್ಲಿ ಮತ್ತಷ್ಟು ಬಿಗಡಾಯಿಸಿದೆ.

ಕಳೆದ ಸೋಮವಾರ ಅಲ್ಲಿನ ಅಧ್ಯಕ್ಷ ಎಮಾನ್ಯುವಲ್‌ ಮ್ಯಾಕ್ರೊನ್‌ ಅವರು ಗೃಹ ದಿಗ್ಬಂಧನ ಮತ್ತು ಬೃಹತ್‌ ಜನ ಸಮೂಹ ಸೇರುವ ಸಮಾರಂಭಗಳಿಗಿದ್ದ ನಿರ್ಬಂಧವನ್ನು ಮೇವರೆಗೆ ವಿಸ್ತರಿಸಿದ್ದಾರೆ. ಈ ಬಗ್ಗೆ ಕಾನ್ ಚಿತ್ರೋತ್ಸವ ಸಮಿತಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, 'ಈ ವರ್ಷ ಕಾನ್ ಚಿತ್ರೋತ್ಸವ ಅದರ ಮೂಲ ರೂಪದಲ್ಲಿ ನಡೆಯುವುದು ಕಷ್ಟವಾಗಿದೆ. ಜುಲೈ ಮೊದಲ ವಾರದಲ್ಲಿ ನಡೆಸುವ ಬಗ್ಗೆ ಯೋಚನೆ ಇದೆ. ಆದರೆ ಅದಕ್ಕೂ ಕೆಲವು ಸಮಸ್ಯೆಗಳಿವೆ' ಎಂದು ಹೇಳಿದೆ.

ಕಾನ್ ಚಲನ ಚಿತ್ರೋತ್ಸವದಲ್ಲಿ ಬಾಲಿವುಡ್‌ ನಟಿಯರ ವಾವ್‌ ಲುಕ್

ಕಾನ್ ಚಿತ್ರೋತ್ಸವವನ್ನು ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ಗೂ ಮುಂದೂಡಲಾಗುವುದಿಲ್ಲ. ಯಾಕೆಂದರೆ ಆ ಸಮಯದಲ್ಲಿ ವೆನಿಸ್‌ ಚಿತ್ರೋತ್ಸವ, ನ್ಯೂಯಾರ್ಕ್ ಚಿತ್ರೋತ್ಸವ ಇತ್ಯಾದಿಗಳ ವೇಳಾಪಟ್ಟಿ ನಿಗದಿಯಾಗಿದೆ. ಆದ್ದರಿಂದ ಸದ್ಯಕ್ಕೆ ಕಾನ್ ಚಿತ್ರೋತ್ಸವ ಡೋಲಾಯಮಾನ ಸ್ಥಿತಿಯಲ್ಲಿದೆ.

Cannes 2019: ಭಾರಿ ಚರ್ಚೆಗೆ ಗ್ರಾಸವಾದ ಪ್ರಿಯಾಂಕಾ ಚೋಪ್ರಾ ತೋಳು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌