ಆ್ಯಪ್ನಗರ

10 ಕೋಟಿ ರೂ. ಕಮಾಯಿ ಮಾಡಿದೆಯೇ 'ಪಾಪ್‌ಕಾರ್ನ್‌ ಮಂಕಿ ಟೈಗರ್‌'?

ಪಾಪ್‌ಕಾರ್ನ್‌ ಮಂಕಿ ಟೈಗರ್‌ ತೆರೆಕಾಣುವುದಕ್ಕೂ ಮುನ್ನವೇ ಉತ್ತಮ ವಹಿವಾಟು ಮಾಡಲು ಆರಂಭಿಸಿದೆಯಂತೆ. ಈ ಬಗ್ಗೆ ಗಾಂಧಿನಗರ ಗಲ್ಲಿಗಳಲ್ಲಿ ಹೊಸ ಸುದ್ದಿ ಕೇಳಿಬರುತ್ತಿದೆ.

Vijaya Karnataka Web 12 Feb 2020, 9:56 pm
'ಟಗರು' ಸಿನಿಮಾದಲ್ಲಿ ಡಾಲಿ ಎಂಬ ಪಾತ್ರ ಮಾಡಿದ ಬಳಿಕ ನಟ ಧನಂಜಯ ಅವರ ಮಾರುಕಟ್ಟೆ ದೊಡ್ಡದಾಗಿದೆ. ಈಗ ಅವರು ಮತ್ತೆ ಸೂರಿ ನಿರ್ದೇಶನದಡಿ ಮೂಡಿಬಂದಿರುವ 'ಪಾಪ್‌ಕಾರ್ನ್‌ ಮಂಕಿ ಟೈಗರ್‌' ಚಿತ್ರದಲ್ಲಿ ನಟಿಸಿದ್ದು, ಅದು ಬಿಡುಗಡೆಗೆ ಸಜ್ಜಾಗಿದೆ. ರಿಲೀಸ್‌ ನಂತರ ಈ ಸಿನಿಮಾ ಎಷ್ಟು ಕಲೆಕ್ಷನ್‌ ಮಾಡಲಿದೆಯೋ ಗೊತ್ತಿಲ್ಲ. ಆದರೆ ತೆರೆಕಾಣುವುದಕ್ಕೂ ಮುನ್ನವೇ ಉತ್ತಮ ವಹಿವಾಟು ಮಾಡಲು ಆರಂಭಿಸಿದೆಯಂತೆ. ಈ ಬಗ್ಗೆ ಗಾಂಧಿನಗರ ಗಲ್ಲಿಗಳಲ್ಲಿ ಹೊಸ ಸುದ್ದಿ ಕೇಳಿಬರುತ್ತಿದೆ.
Vijaya Karnataka Web dali dhananjay starrer popcorn monkey tiger makes 10 cr pre release business
10 ಕೋಟಿ ರೂ. ಕಮಾಯಿ ಮಾಡಿದೆಯೇ 'ಪಾಪ್‌ಕಾರ್ನ್‌ ಮಂಕಿ ಟೈಗರ್‌'?


​ಗಾಂಧಿನಗರದಿಂದ ಕೇಳಿಬಂತು ಸುದ್ದಿ

ನಟ ಡಾಲಿ ಧನಂಜಯ ಹೊಸ ಅವತಾರದಲ್ಲಿ ಅವರು ಜನರ ಎದುರು ಬರುತ್ತಿದ್ದಾರೆ. ಡಾಲಿ ಮತ್ತು ಸೂರಿ ಕಾಂಬಿನೇಷನ್‌ ಎಂಬ ಕಾರಣಕ್ಕೆ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ಇತ್ತೀಚೆಗೆ ರಿಲೀಸ್ ಆದ ಟೀಸರ್ ಮತ್ತು 'ಮಾದೇವಾ...' ಹಾಡು ದೊಡ್ಡಮಟ್ಟದಲ್ಲಿ ಸದ್ದು ಮಾಡಿದೆ. ಹಾಗಾಗಿ ಪರಭಾಷಾ ಸಿನಿಪ್ರಿಯರಿಗೂ ಈ ಬಗ್ಗೆ ಕೌತುಕ ಮೂಡಿದೆ. ಎಲ್ಲಾ ವರ್ಗದವರೂ ಈ ಚಿತ್ರವನ್ನು ಇಷ್ಟಪಡುವ ನಿರೀಕ್ಷೆ ಇದೆ. ಈ ನಡುವೆ 'ಪಾಪ್‌ಕಾರ್ನ್‌ ಮಂಕಿ ಟೈಗರ್‌' ರಿಲೀಸ್‌ಗೂ ಮೊದಲೇ ಬರೋಬ್ಬರಿ 10 ಕೋಟಿ ರೂಪಾಯಿ ವ್ಯಾಪಾರ ವಹಿವಾಟು ಮಾಡಿದೆ ಎಂಬ ಮಾತು ಗಾಂಧಿನಗರದಿಂದ ಕೇಳಿಬರುತ್ತಿದೆ.

ಕುತೂಹಲ ಕೆರಳಿಸಿರುವ ಡಾಲಿ ಧನಂಜರ್ ಹೊಸ 'ಪಾಪ್‍ಕಾರ್ನ್' ಲುಕ್!

​ವಿತರಣೆಗೆ ಮುಂದಾದ ಪುಷ್ಕರ್‌

ಅವನೇ ಶ್ರೀಮನ್ನಾರಾಯಣ ರೀತಿಯ ದೊಡ್ಡ ಸಿನಿಮಾವನ್ನು ನಿರ್ಮಿಸಿ, ವಿತರಣೆ ಮಾಡಿದ್ದ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಅವರು ಈಗ 'ಪಾಪ್‌ಕಾರ್ನ್‌ ಮಂಕಿ ಟೈಗರ್‌' ಚಿತ್ರವನ್ನು ವಿತರಿಸಲು ಮುಂದೆ ಬಂದಿದ್ದಾರೆ. ಪುಷ್ಕರ್ ಫಿಲಂಸ್ ಮತ್ತು ಮೋಹನ್ ಫಿಲಂಸ್ ವಿತರಣೆ ಮಾಡಲಿವೆ. ಚಿತ್ರದ ಬಗ್ಗೆ ಇರುವ ಕ್ರೇಜ್‌ ಆಧರಿಸಿ, ಈ ಸಿನಿಮಾದ ವಿತರಣೆ ಹಕ್ಕುಗಳನ್ನು ಬರೋಬ್ಬರಿ 4 ಕೋಟಿ ರೂ.ಗಳಿಗೆ ಖರೀದಿಸಲಾಗಿದೆ ಎನ್ನಲಾಗುತ್ತಿದೆ. ಧನಂಜಯ ಅವರ ಸಿನಿಮಾ ಕರಿಯರ್‌ನಲ್ಲೇ ಇಷ್ಟು ದೊಡ್ಡ ಮೊತ್ತಕ್ಕೆ ವಿತರಣೆ ಹಕ್ಕುಗಳು ಮಾರಾಟವಾದ ಮೊದಲ ಸಿನಿಮಾ ಎಂಬ ಖ್ಯಾತಿಗೆ 'ಪಾಪ್‌ಕಾರ್ನ್‌ ಮಂಕಿ ಟೈಗರ್‌' ಪಾತ್ರವಾಗುತ್ತಿದೆ.

ಡಾಲಿ ಧನಂಜಯಗೆ ಸೂರಿ ಕಡೆಯಿಂದ ಸಿಗುತ್ತಿದೆ ಸರ್ಪ್ರೈಸ್‌ ಗಿಫ್ಟ್‌!

Twitter-Pushkara Mallikarjunaiah

​ಕಿರುತೆರೆಯಲ್ಲೂ ಸಿಕ್ಕಾಪಟ್ಟೆ ಡಿಮ್ಯಾಂಡ್‌

ಚಿತ್ರಮಂದಿರಗಳಲ್ಲಿ ಮಾತ್ರವಲ್ಲದೆ, ಕಿರುತೆರೆಯಲ್ಲೂ ಈ ಚಿತ್ರವನ್ನು ಪ್ರದರ್ಶಿಸಲು ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಕನ್ನಡದ ಪ್ರಖ್ಯಾತ ಮನರಂಜನಾ ವಾಹಿನಿಗಳು ನಾಮುಂದು ತಾಮುಂದು ಎಂದು ಪ್ರಸಾರ ಹಕ್ಕುಗಳನ್ನು ಖರೀದಿಸಲು ಮುಗಿಬಿದ್ದಿವೆಯಂತೆ. ಕನ್ನಡದ ಎಲ್ಲ ಮುಂಚೂಣಿ ಚಾನಲ್‌ಗಳು 'ಪಾಪ್‌ಕಾರ್ನ್ ಮಂಕಿ ಟೈಗರ್' ಸಿನಿಮಾವನ್ನು ಖರೀದಿ ಮಾಡಲು ಉತ್ಸುಕತೆ ತೋರಿಸಿವೆ ಎನ್ನಲಾಗುತ್ತಿದೆ. ಈ ಪೈಕಿ ಒಂದು ವಾಹಿನಿಯು ಬಹು ದೊಡ್ಡ ಮೊತ್ತಕ್ಕೆ ಚಿತ್ರದ ಪ್ರಸಾರ ಹಕ್ಕುಗಳನ್ನು ಖರೀದಿ ಮಾಡೋದಕ್ಕೆ ನಿರ್ಧರಿಸಿದೆಯಂತೆ. ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರಬೀಳಬೇಕಿದೆ.

'ಪಾಪ್‍ಕಾರ್ನ್ ಮಂಕಿ ಟೈಗರ್' ಕುರಿತು ದುನಿಯಾ ಸೂರಿ ವಿಶೇಷ ಸಂದರ್ಶನ

​ಡಿಜಿಟಲ್ ಮಾರುಕಟ್ಟೆಯಲ್ಲೂ ನಡೆದಿದೆ ಮಾತುಕತೆ

ಟಿವಿ ಮತ್ತು ಚಿತ್ರಮಂದಿರಗಳ ರೀತಿಯೇ ಡಿಜಿಟಲ್‌ ಮಾರುಕಟ್ಟೆಯಲ್ಲೂ 'ಪಾಪ್‌ಕಾರ್ನ್ ಮಂಕಿ ಟೈಗರ್' ಹವಾ ಎಬ್ಬಿಸುವ ಲಕ್ಷಣ ತೋರಿಸಿದೆ. ಅಮೇಜಾನ್‌ನಿಂದ ಬಂಪರ್ ಆಫರ್ ಬಂದಿದೆಯಂತೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲೇ ಡಿಜಿಟಲ್ ಪ್ರಸಾರ ಹಕ್ಕುಗಳ ವ್ಯವಹಾರ ಕೂಡ ಅಂತಿಮವಾಗಲಿದೆ. ಹೀಗೆ ಎಲ್ಲ ವಲಯಗಳಿಂದಲೂ ಬೇಡಿಕೆ ಸೃಷ್ಟಿಸಿಕೊಂಡಿರುವ 'ಪಾಪ್‌ಕಾರ್ನ್‌ ಮಂಕಿ ಟೈಗರ್' ಸಿನಿಮಾ ರಿಲೀಸ್‌ ಆಗುವುದಕ್ಕೂ ಮುನ್ನವೇ 10 ಕೋಟಿ ರೂ. ವ್ಯಾಪಾರ ಮಾಡಿದೆ ಎಂಬ ಬಗ್ಗೆ ಚಿತ್ರತಂಡ ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದೆ. ರಿಲೀಸ್‌ ಆದ ಮೊದಲ ವಾರದಲ್ಲೇ ಅಂದಾಜು 7ರಿಂದ 8 ಕೋಟಿ ರೂ. ಕಮಾಯಿ ಆಗಬಹುದು ಎಂದು ಬಾಕ್ಸ್‌ ಆಫೀಸ್‌ನ ವ್ಯಾಕರಣ ಬಲ್ಲವರು ಊಹಿಸಿದ್ದಾರೆ.

ಪಕ್ಕಾ ಫಿಕ್ಸ್ ಆಯ್ತು 'ಪಾಪ್‍ಕಾರ್ನ್ ಮಂಕಿ ಟೈಗರ್' ರಿಲೀಸ್ ಡೇಟ್

​ಶಿವರಾತ್ರಿಗೆ ಡಾಲಿ-ಸೂರಿ ಸೌಂಡು

ಎಲ್ಲೆಡೆ ಹೈಪ್‌ ಸೃಷ್ಟಿ ಮಾಡಿರುವ ಈ ಚಿತ್ರ ಶಿವರಾತ್ರಿ ಹಬ್ಬಕ್ಕೆ ಸರಿಯಾಗಿ ತೆರೆ ಕಾಣುತ್ತಿದೆ. ಅಂದರೆ, ಫೆ.21ಕ್ಕೆ ಅದ್ದೂರಿಯಾಗಿ ರಿಲೀಸ್‌ ಆಗುತ್ತಿದೆ. ರಾಜ್ಯಾದ್ಯಂತ ಅಂದಾಜು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಪಾಪ್‌ಕಾರ್ನ್‌ ಮಂಕಿ ಟೈಗರ್' ಧೂಳೆಬ್ಬಿಸಲಿದೆ. ಸದ್ಯದಲ್ಲೇ ಚಿತ್ರಮಂದಿರಗಳ ಪಟ್ಟಿ ಕೂಡ ಪ್ರಕಟ ಆಗಲಿದೆ. 'ಟಗರು' ಸಿನಿಮಾದಲ್ಲಿ ದೊಡ್ಡ ಮಟ್ಟದ ಮ್ಯಾಜಿಕ್‌ ಮಾಡಿದ್ದ ನಿರ್ದೇಶಕ ಸೂರಿ ಹಾಗೂ ನಟ ಧನಂಜಯ ಅವರ ಕಾಂಬಿನೇಷನ್‌ನಿಂದ ಈ ಬಾರಿ ಎಂತಹ ಮನರಂಜನೆ ಸಿಗಲಿದೆ ಎಂಬುದನ್ನು ತಿಳಿದುಕೊಳ್ಳಲು ಸಿನಿಪ್ರಿಯರು ತುದಿಗಾಲಿನ ಮೇಲೆ ನಿಂತಿದ್ದಾರೆ.

ಮಂಕಿ ಸೀನ ರೋಲ್‌ ಬಗ್ಗೆ ಡಾಲಿ ಧನಂಜಯ್‌ ಹೇಳಿದ್ದೇನು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌