ತಮಿಳು ಚಿತ್ರರಂಗದ ಪ್ರಿಯರು ನಿರೀಕ್ಷೆ ಮಾಡದ ವಿಚಾರವೊಂದು ನಿನ್ನೆ (ಜನವರಿ 17) ಜಗಜ್ಜಾಹೀರಾಯಿತು. 18 ವರ್ಷ ಒಟ್ಟಿಗೆ ಜೀವನ ನಡೆಸಿದ್ದ ಐಶ್ವರ್ಯ ರಜನಿಕಾಂತ್ ಹಾಗೂ ನಟ ಧನುಷ್ ತಾವು ದೂರಾಗುತ್ತಿರುವ ಬಗ್ಗೆ ನಿನ್ನೆ ಅಧಿಕೃತವಾಗಿ ಘೋಷಿಸಿದರು. ಹಾಗ್ನೋಡಿದ್ರೆ, ಕಾಲಿವುಡ್ನಲ್ಲಿ ಮಾದರಿ ಜೋಡಿಯಾಗಿದ್ದವರು ಐಶ್ವರ್ಯ ಹಾಗೂ ಧನುಷ್. ಅಂಥದ್ರಲ್ಲಿ ಇವರಿಬ್ಬರೇ ಈಗ ಬೇರೆ ಬೇರೆಯಾಗುತ್ತಿರುವುದು ಅಭಿಮಾನಿಗಳಿಗೆ ನೋವುಂಟು ಮಾಡಿದೆ. ಇಬ್ಬರು ಮಕ್ಕಳದ್ದೂ ಇದೇ ಕಥೆ!
ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಲತಾ ದಂಪತಿಗೆ ಇಬ್ಬರು ಮಕ್ಕಳು. ಹಿರಿಯ ಪುತ್ರಿ ಐಶ್ವರ್ಯ ಮತ್ತು ಕಿರಿಯ ಪುತ್ರಿ ಸೌಂದರ್ಯ.
ನಟ ಧನುಷ್ ಅವರನ್ನು ಹಿರಿಯ ಪುತ್ರಿ ಐಶ್ವರ್ಯ 2004ರಲ್ಲಿ ಪ್ರೀತಿಸಿ ವಿವಾಹವಾದರು. ಧನುಷ್ ಮತ್ತು ಐಶ್ವರ್ಯ ದಂಪತಿಗೆ ಯಾತ್ರ ಮತ್ತು ಲಿಂಗಾ ಎಂಬ ಇಬ್ಬರು ಪುತ್ರರಿದ್ದಾರೆ. 18 ವರ್ಷಗಳ ಕಾಲ ಸಂಸಾರ ನಡೆಸಿದ್ದ ಐಶ್ವರ್ಯ ಮತ್ತು ಧನುಷ್ ಇದೀಗ ವಿಚ್ಛೇದನ ಪಡೆಯುತ್ತಿದ್ದಾರೆ. ಹಾಗ್ನೋಡಿದ್ರೆ, ರಜನಿಕಾಂತ್ ಕುಟುಂಬದಲ್ಲಿ ವಿಚ್ಛೇದನ ಪ್ರಕರಣ ಇದೇ ಮೊದಲೇನಲ್ಲ. ಇದಕ್ಕೂ ಮೊದಲು ರಜನಿಕಾಂತ್ ಅವರ ಪುತ್ರಿ ಸೌಂದರ್ಯ ತಮ್ಮ ಪತಿಯಿಂದ ವಿಚ್ಛೇದನ ಪಡೆದಿದ್ದರು.
2010ರಲ್ಲಿ ಅಶ್ವಿನ್ ರಾಮ್ಕುಮಾರ್ ಎಂಬ ಉದ್ಯಮಿಯನ್ನು ಸೌಂದರ್ಯ ಮದುವೆಯಾದರು. ಈ ದಂಪತಿಗೆ ವೇದ್ ಎಂಬ ಪುತ್ರನಿದ್ದಾನೆ. ಮಗು ಹುಟ್ಟಿದ ಒಂದೇ ವರ್ಷಕ್ಕೆ ಪತಿ ಅಶ್ವಿನ್ ರಾಮ್ಕುಮಾರ್ರಿಂದ ಸೌಂದರ್ಯ ದೂರಾದರು. 2017ರಲ್ಲಿ ಅಶ್ವಿನ್ ರಾಮ್ಕುಮಾರ್ ಹಾಗೂ ಸೌಂದರ್ಯ ವಿಚ್ಛೇದನ ಪಡೆದರು. 2019ರಲ್ಲಿ ನಟ ಹಾಗೂ ಉದ್ಯಮಿ ವಿಶಗನ್ ವಾನಂಗಮುಡಿ ಎಂಬುವರ ಕೈಹಿಡಿದರು ಸೌಂದರ್ಯ.
ಎರಡನೇ ಪುತ್ರಿ ಸೌಂದರ್ಯ ತಮ್ಮ ಮೊದಲ ಪತಿ ಅಶ್ವಿನ್ ರಾಮ್ಕುಮಾರ್ ಅವರಿಂದ ದೂರಾದಾಗ ತಂದೆ ರಜನಿಕಾಂತ್ ಪಟ್ಟ ಸಂಕಟ ಅಷ್ಟಿಷ್ಟಲ್ಲ. ಪುತ್ರಿ ಸೌಂದರ್ಯ ವಿಚ್ಛೇದನ ಪಡೆದಾಗ ರಜನಿಕಾಂತ್ ತೀವ್ರವಾಗಿ ಮನನೊಂದಿದ್ದರು ಎಂದು ಬಲ್ಲವರು ಹೇಳುತ್ತಾರೆ. ಇದೀಗ ಮೊದಲ ಪುತ್ರಿಯ ವೈವಾಹಿಕ ಬದುಕಿನಲ್ಲೂ ಬಿರುಗಾಳಿ ಎದ್ದಿರುವುದು ರಜನಿಕಾಂತ್ ಮನಸ್ಸನ್ನು ಇನ್ನಷ್ಟು ಘಾಸಿಗೊಳಿಸುವುದರಲ್ಲಿ ಅನುಮಾನವಿಲ್ಲ ಎಂದು ‘ತಲೈವಾ’ ಅಭಿಮಾನಿಗಳು ಆತಂಕಗೊಂಡಿದ್ದಾರೆ.
ಐಶ್ವರ್ಯ ಹೆಸರು ಬದಲಾವಣೆ ಆಗಿಲ್ಲ!
ತಾವು ದೂರಾಗುತ್ತಿರುವ ಬಗ್ಗೆ ಐಶ್ವರ್ಯ ಮತ್ತು ಧನುಷ್ ಅಧಿಕೃತವಾಗಿ ಅನೌನ್ಸ್ ಮಾಡಿರಬಹುದು. ಆದರೆ, ಐಶ್ವರ್ಯ ಮಾತ್ರ ತಮ್ಮ ಹೆಸರನ್ನು ಬದಲಾವಣೆ ಮಾಡಿಕೊಂಡಿಲ್ಲ. ತಮ್ಮ ಹೆಸರಿನಲ್ಲಿರುವ ಧನುಷ್ಗೆ ಐಶ್ವರ್ಯ ಕತ್ತರಿ ಪ್ರಯೋಗ ಮಾಡಿಲ್ಲ. ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ‘ಐಶ್ವರ್ಯ.ಆರ್.ಧನುಷ್’ ಅಂತಲೇ ಇದೆ.
ಪ್ರೊಫೈಲ್ ಫೋಟೋ ಬದಲಿಸಿಕೊಂಡ ಸೌಂದರ್ಯ
ಐಶ್ವರ್ಯ ಮತ್ತು ಧನುಷ್ ಅವರ ವಿಚ್ಛೇದನ ವಿಚಾರ ಬಹಿರಂಗವಾದ ಬೆನ್ನಲ್ಲೇ ಸಹೋದರಿ ಸೌಂದರ್ಯ ರಜನಿಕಾಂತ್ ತಮ್ಮ ಟ್ವಿಟ್ಟರ್ ಪ್ರೊಫೈಲ್ನ ಫೋಟೋ ಬದಲಿಸಿಕೊಂಡಿದ್ದಾರೆ. ಐಶ್ವರ್ಯ ಹಾಗೂ ತಮ್ಮನ್ನು ತಂದೆ ರಜನಿಕಾಂತ್ ಎತ್ತಿಕೊಂಡಿರುವ ಹಳೇ ಫೋಟೋವನ್ನು ಸೌಂದರ್ಯ ಪ್ರೊಫೈಲ್ ಪಿಕ್ಚರ್ ಆಗಿ ಮಾಡಿಕೊಂಡಿದ್ದಾರೆ.