ಆ್ಯಪ್ನಗರ

'ಭರಾಟೆ' ನಟಿ ಶ್ರೀಲೀಲಾ & 'ಬಜಾರ್‌' ಸಿನಿಮಾ ಹೀರೋ ಧನ್ವೀರ್‌ ಗೌಡ ನಡುವೆ 'ಬೈ ಟೂ ಲವ್‌'!

ಕನ್ನಡ ಚಿತ್ರರಂಗದಲ್ಲಿ ಈಗತಾನೇ ನೆಲೆ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದಾರೆ ನಟಿ ಶ್ರೀಲೀಲಾ ಮತ್ತು ನಟ ಧನ್ವೀರ್‌. ಕ್ರಿಸ್‌ಮಸ್‌ ಹಬ್ಬದ ದಿನವೇ ಇವರಿಬ್ಬರ ಕುರಿತು ಈ ಹೊಸ ನ್ಯೂಸ್‌ ಕೇಳಿಬಂದಿದೆ. ಏನದು? ಇಲ್ಲಿದೆ ವಿವರ...

Vijaya Karnataka Web 25 Dec 2020, 11:23 pm
ನಟ ಧನ್ವೀರ್‌ ಗೌಡ ಮತ್ತು ನಟಿ ಶ್ರೀಲೀಲಾ ಒಂದಾಗುತ್ತಿದ್ದಾರೆ. ಚಿತ್ರರಂಗಕ್ಕೆ ಕಾಲಿಡುತ್ತಲೇ ಭರವಸೆ ಮೂಡಿಸಿರುವ ಕಲಾವಿದರು ಇವರು. ಇಬ್ಬರಿಗೂ ಒಳ್ಳೊಳ್ಳೆಯ ಸಿನಿಮಾ ಅವಕಾಶಗಳು ಬರುತ್ತಿವೆ. ಇಬ್ಬರ ಜೋಡಿ ಕೂಡ ಸೂಪರ್‌ ಆಗಿದೆ. ಧನ್ವೀರ್‌ ಮತ್ತು ಶ್ರೀಲೀಲಾ ಜೊತೆಯಾಗಿ ಈಗ 'ಬೈ ಟೂ ಲವ್‌' ಶುರುಮಾಡಿದ್ದಾರೆ!
Vijaya Karnataka Web ಧನ್ವೀರ್‌ ಗೌಡ ಶ್ರೀಲೀಲಾ


ಏನಿದು 'ಬೈ ಟೂ ಲವ್‌'? ಉತ್ತರ ಸಿಂಪಲ್‌; 'ಅಲೆಮಾರಿ', 'ಕಾಲೇಜ್‌ ಕುಮಾರ್‌' ಖ್ಯಾತಿಯ ನಿರ್ದೇಶಕ ಹರಿ ಸಂತೋಷ್‌ ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾದ ಹೆಸರು 'ಬೈ ಟೂ ಲವ್‌'. ಈ ಚಿತ್ರದಲ್ಲಿ ಧನ್ವೀರ್‌ ಮತ್ತು ಶ್ರೀಲೀಲಾ ಜೋಡಿಯಾಗಿ ನಟಿಸುತ್ತಿದ್ದಾರೆ. ಕ್ರಿಸ್‌ಮಸ್‌ ಹಬ್ಬದ ದಿನವೇ ಶ್ರೀ ಬಂಡೆ ಮಹಾಕಾಳಿ ದೇವಾಲಯದಲ್ಲಿ ಈ ಸಿನಿಮಾಗೆ ಮುಹೂರ್ತ ನೆರವೇರಿಸಲಾಗಿದೆ. ಶೀಘ್ರದಲ್ಲೇ ಶೂಟಿಂಗ್‌ ಕೂಡ ಆರಂಭ ಆಗಲಿದೆ.

ಮೊದಲ ಸನ್ನಿವೇಶಕ್ಕೆ ಕಾಶ್ವಿ ವೆಂಕಟ್ ಆರಂಭ ಫಲಕ ತೋರಿದರು. ಸಿದ್ದು ವೆಂಕಟ್ ಕ್ಯಾಮರಾ ಚಾಲನೆ ಮಾಡಿದರು. ಹರಿ ಸಂತೋಷ್ ನಿರ್ದೇಶನದ ಈ ಚಿತ್ರದಲ್ಲಿ ಧನ್ವೀರ್ ಮತ್ತು ಶ್ರೀಲೀಲಾ ಜೊತೆಗೆ ಸಾಧುಕೋಕಿಲ, ಅಚ್ಯುತ್‌ ಕುಮಾರ್, ಶಿವರಾಜ್ ಕೆ.ಆರ್. ಪೇಟೆ ಮುಂತಾದವರು ನಟಿಸಲಿದ್ದಾರೆ. ಇದು ಹರಿ ಸಂತೋಷ್ ನಿರ್ದೇಶನ ಮಾಡುತ್ತಿರುವ 9ನೇ ಸಿನಿಮಾ. ನಿರ್ದೇಶನ ಮಾಡುವುದರ ಜೊತೆಗೆ ಕಥೆ ಮತ್ತು ಚಿತ್ರಕಥೆ ಕೂಡ ಅವರೇ ಬರೆದಿದ್ದಾರೆ.

also read: ಶ್ರೀಲೀಲಾ ಈಗ ಕನ್ನಡ ಚಿತ್ರರಂಗದ 'ದುಬಾರಿ' ನಟಿ! ಧ್ರುವ ಸರ್ಜಾಗೆ ಜೋಡಿಯಾದ 'ಕಿಸ್‌' ಬೆಡಗಿ!

ಕೆ.ವಿ.ಎನ್. ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿಶಾ ವೆಂಕಟ್ ಹಾಗೂ ಸುಪ್ರೀತ್ ಅವರು 'ಬೈ ಟೂ ಲವ್' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಸಂಸ್ಥೆಯಿಂದ ನಿರ್ಮಾಣ ಆಗುತ್ತಿರುವ ಮೂರನೇ ಚಿತ್ರ ಇದು. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಅವರು ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಜನವರಿ 4ರಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಈಗಾಗಲೇ ಹೆಚ್ಎಂಟಿ ಬಳಿ ಅದ್ದೂರಿ ಸೆಟ್ ನಿರ್ಮಾಣವಾಗುತ್ತಿದೆ.

also read: 'ಬಜಾರ್' ಚಿತ್ರದ ನಾಯಕ ನಟ ಧನ್ವೀರ್‌ ಗೌಡ ವಿರುದ್ಧ ಎಫ್‌ಐಆರ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌