ಆ್ಯಪ್ನಗರ

ಬಿಡುಗಡೆಗೂ ಮೊದಲೇ ದಾಖಲೆ ಬರೆದ ಧ್ರುವ ಸರ್ಜಾ ನಟನೆಯ 'ಪೊಗರು' ಸಿನಿಮಾ!

'ಆ್ಯಕ್ಷನ್‌ ಪ್ರಿನ್ಸ್' ಧ್ರುವ ಸರ್ಜಾ ನಟಿಸಿರುವ 'ಪೊಗರು' ಚಿತ್ರವು ಬಿಡುಗಡೆಗೆ ಸಿದ್ಧವಾಗುತ್ತಿದೆ. ಕನ್ನಡದ ಜೊತೆಗೆ ತೆಲುಗಿನಲ್ಲೂ ರಿಲೀಸ್ ಮಾಡೋಕೆ ಪ್ಲ್ಯಾನ್ ಮಾಡಲಾಗಿದೆ. ಈ ಮಧ್ಯೆ 'ಪೊಗರು' ಒಂದು ದಾಖಲೆಯನ್ನು ಬರೆದಿದೆ.

Vijaya Karnataka Web 5 Aug 2020, 3:27 pm
ನಟ ಧ್ರುವ ಸರ್ಜಾ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ 'ಪೊಗರು' ಚಿತ್ರದ ಮೇಲೆ ಸದ್ಯ ಎಲ್ಲರ ಕಣ್ಣು ಇದೆ. ಯಾಕೆಂದರೆ, 'ಭರ್ಜರಿ' ಚಿತ್ರದ ನಂತರ ಧ್ರುವ ಸಾಕಷ್ಟು ಸಮಯ ತೆಗೆದುಕೊಂಡು ಈ ಸಿನಿಮಾ ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೆ, ತೆಲುಗಿನಲ್ಲಿಯೂ ಈ ಸಿನಿಮಾ ತೆರೆಗೆ ಬರಲಿದ್ದು, ಆ ಮೂಲಕ ಧ್ರುವ ಟಾಲಿವುಡ್‌ಗೂ ಎಂಟ್ರಿ ನೀಡಲಿದ್ದಾರೆ. ಸದ್ಯ 'ಪೊಗರು' ಚಿತ್ರವು ಬಿಡುಗಡೆಗೂ ಮೊದಲೇ ಹೊಸ ದಾಖಲೆಯೊಂದನ್ನು ಬರೆದಿದೆ. ಏನದು ದಾಖಲೆ? ಇಲ್ಲಿದೆ ಮಾಹಿತಿ!
Vijaya Karnataka Web dhruva sarja rashmika mandanna starrer pogaru movie karabuu song crosses 100 million views
ಬಿಡುಗಡೆಗೂ ಮೊದಲೇ ದಾಖಲೆ ಬರೆದ ಧ್ರುವ ಸರ್ಜಾ ನಟನೆಯ 'ಪೊಗರು' ಸಿನಿಮಾ!


'ಪೊಗರು' ಚಿತ್ರದ 'ಖರಾಬು..' ಹಾಡು ಯೂ ಟ್ಯೂಬ್‌ನಲ್ಲಿ ಇದುವರೆಗೂ 10 ಕೋಟಿಗೂ (100 ಮಿಲಿಯನ್) ಅಧಿಕ ಬಾರಿ ವೀಕ್ಷಣೆಗೊಂಡಿದೆ. ಏಪ್ರಿಲ್ 2ರಂದು 'ಖರಾಬು..' ಹಾಡು ಯೂ ಟ್ಯೂಬ್‌ನಲ್ಲಿ ರಿಲೀಸ್ ಆಗಿತ್ತು. ಇದೀಗ ಸರಿಯಾಗಿ 3 ತಿಂಗಳಿಗೆ ಈ ಹಾಡು 10 ಕೋಟಿಗೂ ಅಧಿಕ ಬಾರಿ ಸಿನಿಪ್ರಿಯರಿಂದ ವೀಕ್ಷಣೆಗೊಳಪಟ್ಟಿದೆ. ಕನ್ನಡದಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿ 100 ಮಿಲಿಯನ್ ವೀಕ್ಷಣೆ ಕಂಡ ಮೊದಲು ಹಾಡು ಇದಾಗಿದೆ. ಅಂದಹಾಗೆ, 'ಪೊಗರು' ಚಿತ್ರ ಇನ್ನೂ ತೆರೆ ಕಂಡಿಲ್ಲ. ಸಿನಿಮಾ ತೆರೆಕಾಣುವ ಮುನ್ನವೇ ಹಾಡು ಇಷ್ಟೊಂದು ದೊಡ್ಡ ಹಿಟ್ ಆಗಿರುವುದು ವಿಶೇಷ.

ಹಾಡಿಗೆ ಚಂದನ್‌ ಶೆಟ್ಟಿ ಸಂಗೀತ
'ಖರಾಬು..' ಹಾಡಿಗೆ ಸಂಗೀತ ಸಂಯೋಜಿಸಿ, ಸಾಹಿತ್ಯ ಬರೆದು, ಹಾಡಿರುವುದು 'ಬಿಗ್ ಬಾಸ್' ಖ್ಯಾತಿಯ ಚಂದನ್‌ ಶೆಟ್ಟಿ. ಸ್ಟಾರ್ ನಟರೊಬ್ಬರ ಸಿನಿಮಾಕ್ಕೆ ಅವರು ಸಂಗೀತ ನೀಡಿರುವುದು ಇದೇ ಮೊದಲು. ಇದೀಗ ಮೊದಲ ಪ್ರಯತ್ನವೇ ಭರ್ಜರಿ ಸಕ್ಸಸ್ ತಂದುಕೊಟ್ಟಿದೆ. ಸಿನಿಮಾಗೆ ಈ ಹಾಡಿನ ಯಶಸ್ಸು ಇನ್ನಷ್ಟು ಮೈಲೇಜ್ ನೀಡಿದೆ ಎಂದರೆ ಸುಳ್ಳಲ್ಲ. ಇನ್ನು, 'ಖರಾಬು..' ಹಾಡಿನಲ್ಲಿ ಧ್ರುವ ಸರ್ಜಾ ಅವರ ಡ್ಯಾನ್ಸಿಂಗ್ ಸ್ಟೆಪ್‌ಗಳು ಸಖತ್ ಕ್ರೇಜ್ ಹುಟ್ಟುಹಾಕಿವೆ. ಇದು ಕೂಡ ಹಾಡು ಹಿಟ್ ಆಗಲು ಒಂದು ಕಾರಣ ಎನ್ನಬಹುದು.

ಶೀಘ್ರದಲ್ಲೇ ಟಾಲಿವುಡ್‌ನಲ್ಲೂ 'ಪೊಗರು' ತೋರಿಸಲಿದ್ದಾರೆ ನಟ ಧ್ರುವ ಸರ್ಜಾ!

ಆ.6ಕ್ಕೆ ತೆಲುಗು ವರ್ಷನ್ ರಿಲೀಸ್
'ಪೊಗರು' ಚಿತ್ರವನ್ನು ತೆಲುಗಿನಲ್ಲಿಯೂ ರಿಲೀಸ್ ಮಾಡುತ್ತಿರುವುದರಿಂದ, ಅಲ್ಲಿಯೂ ಪ್ರಚಾರ ಶುರು ಮಾಡಿದೆ ಚಿತ್ರತಂಡ. ಅದರ ಮೊದಲ ಹಂತವಾಗಿ 'ಖರಾಬು..' ಹಾಡಿನ ತೆಲುಗು ವರ್ಷನ್ ಅನ್ನು ಆ.6ರಂದು ರಿಲೀಸ್ ಮಾಡೋಕೆ ಚಿತ್ರತಂಡ ನಿರ್ಧರಿಸಿದೆ. ಚಿತ್ರದಲ್ಲಿ ರಶ್ಮಿಕಾ ಇರುವುದು 'ಪೊಗರು' ಬಳಗಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ. ಯಾಕೆಂದರೆ, ಈಗಾಗಲೇ ಅವರು ಟಾಲಿವುಡ್‌ನಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇನ್ನು, ಹಾಡಿಗೆ ತೆಲುಗು ಸಿನಿರಸಿಕರು ಯಾವ ರೀತಿ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

ರಿಲೀಸ್‌ ರೇಸ್‌ನಲ್ಲಿ ದರ್ಶನ್‌, ದುನಿಯಾ ವಿಜಯ್‌, ಧ್ರುವ! ಯಾರ ಚಿತ್ರಕ್ಕೆ ಮೊದಲು ಬಿಡುಗಡೆ ಭಾಗ್ಯ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌