ಆ್ಯಪ್ನಗರ

'ದಿಯಾ' ಸಿನಿಮಾ ಹೀರೋ ದೀಕ್ಷಿತ್‌ ಶೆಟ್ಟಿ ಇನ್‌ಸ್ಟಾಗ್ರಾಮ್‌ ಖಾತೆ ಹ್ಯಾಕ್‌ ಆಗಿದ್ದು ಹೇಗೆ?

ದಿಯಾ ಚಿತ್ರದ ಮೂಲಕ ಭಾರಿ ಜನಪ್ರಿಯತೆ ಪಡೆದುಕೊಂಡಿರುವ ನಟ ದೀಕ್ಷಿತ್‌ ಶೆಟ್ಟಿ ಅವರ ಮೇಲೆ ಸೈಬರ್‌ ಖದೀಮರು ಕಣ್ಣು ಹಾಕಿದ್ದರು. ಅಷ್ಟಕ್ಕೂ ಅಂಥವರ ಜಾಲದಲ್ಲಿ ದೀಕ್ಷಿತ್‌ ಸಿಕ್ಕಿ ಹಾಕಿಕೊಂಡಿದ್ದು ಹೇಗೆ ಗೊತ್ತಾ?

Vijaya Karnataka Web 13 Oct 2020, 4:52 pm
ಕೊರೊನಾ ಸಂಕಷ್ಟ ಕಾಲದಲ್ಲಿ ಸೈಬರ್‌ ಅಪರಾಧಗಳ ಸಂಖ್ಯೆ ಹೆಚ್ಚಿದೆ. ಅದರಲ್ಲೂ ಸೆಲೆಬ್ರಿಟಿಗಳ ಸೋಶಿಯಲ್‌ ಮೀಡಿಯಾ ಖಾತೆಗಳಿಗೆ ಕನ್ನ ಹಾಕುವ ಕೃತ್ಯ ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಇತ್ತೀಚೆಗೆ ನಟ ದೀಕ್ಷಿತ್‌ ಶೆಟ್ಟಿ ಅವರ ಇನ್‌ಸ್ಟಾಗ್ರಾಮ್‌ ಖಾತೆಯನ್ನು ಸೈಬರ್‌ ಖದೀಮರು ಹ್ಯಾಕ್‌ ಮಾಡಿದ್ದರು. ಈ ಬಗ್ಗೆ ದೀಕ್ಷಿತ್‌ ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ.
Vijaya Karnataka Web ದೀಕ್ಷಿತ್‌ ಶೆಟ್ಟಿ


'ದಿಯಾ' ಸಿನಿಮಾದ ಯಶಸ್ಸಿನಲ್ಲಿ ಇರುವ ದೀಕ್ಷಿತ್‌ಗೆ ಈ ಹ್ಯಾಕಿಂಗ್‌ ಕಿರಿಕಿರಿ ಶುರು ಆಗಿದ್ದು ಒಂದೇ ಒಂದು ಮೆಸೇಜ್‌ನಿಂದ. 'ಕೆಲವೇ ದಿನಗಳ ಹಿಂದೆ ನಾನು ನನ್ನ ಖಾತೆಯನ್ನು ವೇರಿಫೈ ಮಾಡಲು ಕೇಳಿಕೊಂಡಿದ್ದೆ. ಈ ಮೆಸೇಜ್‌ ಬಂದಾಗ ಅದಕ್ಕೆ ಸಂಬಂಧಿಸಿರಬಹುದು ಎಂದುಕೊಂಡೆ. ಅವರು ಕಳಿಸಿದ್ದ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ, ಕೇಳಿದ ಮಾಹಿತಿಯನ್ನೆಲ್ಲ ತುಂಬಲು ಶುರುಮಾಡಿದೆ' ಎನ್ನುವ ಮೂಲಕ ಆ ಹ್ಯಾಕಿಂಗ್‌ ಪ್ರಕ್ರಿಯೆ ಹೇಗೆ ಶುರು ಆಯಿತು ಎಂಬುದನ್ನು ತಿಳಿಸಿದ್ದಾರೆ ದೀಕ್ಷಿತ್‌.

'ಮಾಹಿತಿ ತುಂಬುವ ಪ್ರಕ್ರಿಯೆಯನ್ನು ನಾನಿನ್ನೂ ಪೂರ್ತಿಗೊಳಿಸಿರಲಿಲ್ಲ. ಒಂದು ಖಾತೆಯನ್ನು ಹ್ಯಾಕ್‌ ಮಾಡಲು ಇಷ್ಟು ಸಾಕು ಎಂಬುದು ನನ್ನ ಊಹೆಗೆ ಬಂತು. ಮಧ್ಯರಾತ್ರಿ ನನ್ನ ಅಕೌಂಟ್‌ ಹೆಸರು ಪದೇಪದೇ ಬದಲಾಗುತ್ತಿರುವುದನ್ನು ಗಮನಿಸಿದ ನನ್ನ ಸ್ನೇಹಿತರೊಬ್ಬರು ನನಗೆ ಮಾಹಿತಿ ನೀಡಿದರು. ಬೆಳಗಾಗುವುದರೊಳಗೆ ನನ್ನ ಖಾತೆಯನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ' ಎನ್ನುವ ದೀಕ್ಷಿತ್‌ ಒಂದೆರಡು ದಿನಗಳ ಬಳಿಕ ಅಕೌಂಟ್‌ ಮರಳಿ ಪಡೆಯುವಲ್ಲಿ ಯಶಸ್ವಿಯಾದರು.

also read: ಮತ್ತೆ ರಿಲೀಸ್‌ ಆಗುತ್ತಿದೆ 'ದಿಯಾ' ಸಿನಿಮಾ! ಈಗ ಚಿತ್ರಮಂದಿರದಲ್ಲಿ ನೋಡೋರಿಗೆ ಕಾದಿದೆ ಹೊಸ ಅಚ್ಚರಿ!

'ನನ್ನಂಥ ಕಲಾವಿದರಿಗೆ ಸೋಶಿಯಲ್‌ ಮೀಡಿಯಾ ಖಾತೆ ತುಂಬ ಮುಖ್ಯವಾಗುತ್ತದೆ. ಕಷ್ಟಪಟ್ಟು ಫಾಲೋವರ್‌ಗಳನ್ನು ಸಂಪಾದಿಸಿರುತ್ತೇವೆ. ಅವರನ್ನು ಕಳೆದುಕೊಳ್ಳುವುದು ಬೇಸರ ಎನಿಸುತ್ತದೆ. ಏನೇ ಮಾಹಿತಿ ಇದ್ದರೂ ಅದನ್ನು ಈ ಖಾತೆಗಳ ಮೂಲಕ ಹಂಚಿಕೊಳ್ಳಬಹುದು. ಹಬ್ಬದ ಈ ಸಂದರ್ಭದಲ್ಲಿ ಕೆಲವು ಪೋಸ್ಟರ್‌ಗಳನ್ನು ಶೇರ್‌ ಮಾಡುವುದಿತ್ತು. ಪುಣ್ಯಕ್ಕೆ ನಾನು ನನ್ನ ಖಾತೆ ಮರಳಿ ಪಡೆದಿದ್ದೇನೆ' ಎಂದಿದ್ದಾರೆ ದೀಕ್ಷಿತ್‌.

also read: 'ನಾಗಿಣಿ', 'ದಿಯಾ' ಖ್ಯಾತಿಯ ದೀಕ್ಷಿತ್‌ ಶೆಟ್ಟಿ ಇನ್‌ಸ್ಟಾಗ್ರಾಮ್‌ ಅಕೌಂಟ್ ಹ್ಯಾಕ್‌! ಈ ಬಗ್ಗೆ ನಟ ಹೇಳಿದ್ದೇನು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌