ಆ್ಯಪ್ನಗರ

'ಕೆಜಿಎಫ್‌: ಚಾಪ್ಟರ್‌ 2' ಟೀಸರ್‌ ಬಿಡುಗಡೆಗೆ ದಿನಾಂಕ ಫಿಕ್ಸ್‌! ಸಿಹಿ ಸುದ್ದಿ ನೀಡಿದ ಪ್ರಶಾಂತ್‌ ನೀಲ್‌!

ಯಶ್‌ ನಟನೆಯ 'ಕೆಜಿಎಫ್‌: ಚಾಪ್ಟರ್‌ 2' ಸಿನಿಮಾ ಬಗ್ಗೆ ಸಿನಿಪ್ರಿಯರು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರತಂಡದಿಂದ ಸಿಗುವ ಎಲ್ಲ ಅಪ್‌ಡೇಟ್‌ಗಳಿಗಾಗಿ ಯಶ್‌ ಫ್ಯಾನ್ಸ್‌ ಕಾಯುತ್ತಿರುತ್ತಾರೆ. ಅಂಥವರಿಗಾಗಿ ನಿರ್ದೇಶಕ ಪ್ರಶಾಂತ್‌ ನೀಲ್‌ ಗುಡ್‌ ನ್ಯೂಸ್‌ ನೀಡಿದ್ದಾರೆ.

Vijaya Karnataka Web 21 Dec 2020, 11:40 am
'ರಾಕಿಂಗ್ ಸ್ಟಾರ್‌' ಯಶ್‌ ನಟನೆಯ 'ಕೆಜಿಎಫ್‌: ಚಾಪ್ಟರ್‌ 2' ಸಿನಿಮಾದ ಟೀಸರ್‌ ಯಾವಾಗ ಬರಲಿದೆ? ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಸೋಶಿಯಲ್‌ ಮೀಡಿಯಾ ಮೂಲಕ ನಿರ್ದೇಶಕ ಪ್ರಶಾಂತ್‌ ನೀಲ್‌ ಸಿಹಿ ಸುದ್ದಿ ನೀಡಿದ್ದಾರೆ. ಜ.8ರಂದು ಟೀಸರ್‌ ಬಿಡುಗಡೆ ಆಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಇದು ಅಭಿಮಾನಿಗಳ ಸಂತಸಕ್ಕೆ ಕಾರಣ ಆಗಿದೆ.
Vijaya Karnataka Web ಯಶ್‌


'ಆ ಸಾಮ್ರಾಜ್ಯದ ಒಂದು ನೋಟ. ಇದನ್ನು ಸೃಷ್ಟಿಸಲು ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿರಬಹುದು. ಆದರೆ ನಾವು ಇನ್ನಷ್ಟು ಬಲಿಷ್ಟವಾಗಿ, ದೊಡ್ಡದಾಗಿ ಆಗಮಿಸುತ್ತಿದ್ದೇವೆ. ಹೊಂಬಾಳೆ ಫಿಲ್ಮ್ಸ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಜ.8ರಂದು ಬೆಳಗ್ಗೆ 10.18ಕ್ಕೆ ಕೆಜಿಎಫ್‌: ಚಾಪ್ಟರ್‌ 2 ಟೀಸರ್‌ ಬಿಡುಗಡೆ ಆಗಲಿದೆ' ಎಂದು ಪ್ರಶಾಂತ್‌ ನೀಲ್‌ ಟ್ವೀಟ್‌ ಮಾಡಿದ್ದಾರೆ.

ಅಂದಹಾಗೆ, ಜ.8ರಂದು ಯಶ್‌ ಜನ್ಮದಿನ. ಆ ಪ್ರಯುಕ್ತ 'ಕೆಜಿಎಫ್‌ 2' ಟೀಸರ್‌ ಬರಲಿದೆ ಎಂಬ ಸುದ್ದಿ ಈ ಹಿಂದೆಯೇ ಹಬ್ಬಿತ್ತು. ಅದೇ ಸುದ್ದಿಯನ್ನು ಪ್ರಶಾಂತ್‌ ನೀಲ್‌ ಖಚಿತಪಡಿಸಿದ್ದಾರೆ. ಈ ಮಾಹಿತಿಯ ಜೊತೆ ಅವರೊಂದು ಹೊಸ ಪೋಸ್ಟರ್‌ ಹಂಚಿಕೊಂಡಿದ್ದಾರೆ. ಅದರಲ್ಲಿ ಯಶ್‌ ಎಂದಿನಂತೆ ಖಡಕ್‌ ಆಗಿ ಪೋಸ್‌ ನೀಡಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಕ್ಲೈಮ್ಯಾಕ್ಸ್‌ ಶೂಟಿಂಗ್‌ ಮುಕ್ತಾಯಗೊಳಿಸಲಾಯಿತು. ಅದರಲ್ಲಿ ಸಂಜಯ್‌ ದತ್‌ ಪಾಲ್ಗೊಂಡಿದ್ದರು.

also read: ಮತ್ತೆ ಜೊತೆಯಾಗಿ ನಟಿಸಿದ ಯಶ್‌-ರಾಧಿಕಾ ಪಂಡಿತ್‌! ಆದರೆ, ಅಭಿಮಾನಿಗಳು ಕೇಳುತ್ತಿರುವುದೇ ಬೇರೆ!

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ 2020ರಲ್ಲಿಯೇ ಈ ಸಿನಿಮಾ ತೆರೆಕಾಣಬೇಕಿತ್ತು. ಆದರೆ ಕೊರೊನಾ ವೈರಸ್‌ ಹಾವಳಿಯಿಂದ ಉಂಟಾದ ಲಾಕ್‌ಡೌನ್‌ನಿಂದಾಗಿ ಚಿತ್ರದ ಕೆಲಸಗಳು ಸ್ಥಗಿತಗೊಂಡಿದ್ದರಿಂದ ರಿಲೀಸ್‌ ತಡವಾಗಿದೆ. ಹೊಸ ಬಿಡುಗಡೆ ದಿನಾಂಕದ ಬಗ್ಗೆ ಚಿತ್ರತಂಡ ಇನ್ನೂ ಮಾಹಿತಿ ಬಿಟ್ಟುಕೊಟ್ಟಿಲ್ಲ. ವಿಜಯ್‌ ಕಿರಗಂದೂರು ನಿರ್ಮಾಣದ ಈ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ.

also read: 'ಕೆಜಿಎಫ್: ಚಾಪ್ಟರ್ 2'ನಲ್ಲಿ ಸಂಜಯ್ ದತ್‌ ಪಾಲಿನ ಶೂಟಿಂಗ್‌ ಕಂಪ್ಲೀಟ್! ಸೋಮವಾರದ ಗುಡ್ ನ್ಯೂಸ್ ಏನು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌