ಮಲಯಾಳಂ ನಟ ರಘು ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ರಘು ಮಂಗಳವಾರ (ಮೇ 4) ನಿಧನ ಹೊಂದಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು. ಕಳೆದ ತಿಂಗಳು.. ಅಂದ್ರೆ ಏಪ್ರಿಲ್ 16 ರಂದು ಮನೆಯಲ್ಲಿ ಕುಸಿದು ಬಿದ್ದ ರಘು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೆಂಟಿಲೇಟರ್ನಲ್ಲಿದ್ದ ರಘು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಕೊನೆಯುಸಿರೆಳೆದಿದ್ದಾರೆ.
1980ರಲ್ಲಿ ತೆರೆಕಂಡ 'ಮೇಳ' ಚಿತ್ರದ ಮೂಲಕ ರಘು ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. 'ಮೇಳ' ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ರಘು ತಮ್ಮ ಅಭಿನಯದ ಮೂಲಕ ಜನಮನಗೆದ್ದರು. ಇದೇ ಕಾರಣಕ್ಕೆ ಇಂದಿಗೂ ಇವರು 'ಮೇಳ' ರಘು ಅಂತಲೇ ಹೆಸರುವಾಸಿ.
ತಮ್ಮ ವೃತ್ತಿ ಬದುಕಿನಲ್ಲಿ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ರಘು ಅಭಿನಯಿಸಿದ್ದಾರೆ. ಇತ್ತೀಚೆಗೆಷ್ಟೇ ಬಿಡುಗಡೆಯಾಗಿ ಜನರಿಂದ ಪ್ರಶಂಸೆ ಪಡೆದುಕೊಂಡಿದ್ದ 'ದೃಶ್ಯಂ 2' ಚಿತ್ರದಲ್ಲೂ ರಘು ನಟಿಸಿದ್ದರು. ರಘು ನಿಧನಕ್ಕೆ ಶ್ರೀಧರ್ ಪಿಳ್ಳೈ, ಮಮ್ಮೂಟಿ, ಮೋಹನ್ ಲಾಲ್ ಸೇರಿದಂತೆ ಮಲಯಾಳಂ ಚಿತ್ರರಂಗ ಕಂಬನಿ ಮಿಡಿದಿದೆ.