ಆ್ಯಪ್ನಗರ

ಲೊಕೇಷನ್ ನೋಡುವುದಕ್ಕೆ ಹೋಗಿ ಗುಜರಾತ್‌ನಿಂದ 'ಎಮ್ಮೆ' ತಗೊಂಡು ಬಂದ 'ಜೋಗಿ' ಪ್ರೇಮ್‌!

'ಜೋಗಿ' ಪ್ರೇಮ್‌ ನಿರ್ದೇಶನದ 'ಏಕ್‌ ಲವ್ ಯಾ' ಚಿತ್ರದ ಕೆಲಸಗಳು ಕೊನೇ ಹಂತದಲ್ಲಿವೆ. ಇತ್ತೀಚೆಗೆ ಅವರು ಲೊಕೇಷನ್‌ ನೋಡುವ ಸಲುವಾಗಿ ಉತ್ತರ ಭಾರತಕ್ಕೆ ಹೋಗಿದ್ದರು. ಅಲ್ಲಿಂದ ಬರುವಾಗ ವಿಶೇಷ ಅತಿಥಿಗಳನ್ನು ಕರೆದುಕೊಂಡು ಬಂದಿದ್ದಾರೆ.

Vijaya Karnataka Web 24 Nov 2020, 11:54 am
ಸಿನಿಮಾ ನಿರ್ದೇಶನ, ನಟನೆಯ ಜೊತೆಗೆ ಈಗ ವ್ಯವಸಾಯವನ್ನೂ ಶುರು ಮಾಡಿದ್ದಾರೆ 'ಜೋಗಿ' ಪ್ರೇಮ್‌. ಮಂಡ್ಯದ ರೈತ ಕುಟುಂಬದಿಂದ ಬಂದ ಪ್ರೇಮ್, ಆನಂತರ ಗಾಂಧಿನಗರದಲ್ಲಿ ಸ್ಟಾರ್ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದು ಈಗ ಇತಿಹಾಸ. ಸಿನಿಮಾ ಕೆಲಸಗಳಿಂದ ಬಿಡುವು ಸಿಕ್ಕಾಗೆಲ್ಲ ತಮ್ಮ 'ಅಮ್ಮನ ತೋಟ'ಕ್ಕೆ ಹೋಗಿ, ಒಂದಷ್ಟು ಕೃಷಿ ಕೆಲಸಗಳನ್ನು ಮಾಡುತ್ತಿರುತ್ತಾರೆ. ಇತ್ತೀಚಿಗೆ ಈ ತೋಟಕ್ಕೆ ಇಬ್ಬರು ವಿಶೇಷ ಅತಿಥಿಗಳು ಬಂದಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ.
Vijaya Karnataka Web jogi prem


ಗುಜರಾತ್‌ನಿಂದ ಬಂದ್ರು ಅಮ್ಮ-ಮಗಳು
ಪ್ರೇಮ್‌ ಈಗ 'ಏಕ್‌ ಲವ್ ಯಾ' ಸಿನಿಮಾದ ಕೊನೇ ಹಂತದ ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದಾರೆ. ಅದಕ್ಕಾಗಿ ಶೂಟಿಂಗ್‌ಗೆ ಲೊಕೇಷನ್ ಹುಡುಕಲು ಉತ್ತರ ಭಾರತದ ಕಡೆಗೆ ಹೋಗಿದ್ದರು. ಅಲ್ಲಿ ಅವರಿಗೆ ಈ ತಾಯಿ-ಮಗಳು ಸಿಕ್ಕಿದ್ದಾರೆ. ಈ ಬಗ್ಗೆ ಪ್ರೇಮ್ ಹೇಳಿಕೊಂಡಿರುವುದು ಹೀಗೆ. 'ಏಕ್‌ ಲವ್ ಯಾ ಚಿತ್ರದ ಶೂಟಿಂಗ್‌ಗೆ ಲೊಕೇಷನ್ ನೋಡುವುದಕ್ಕೆ ಗುಜರಾತ್‌ನ ಕಚ್‌ಗೆ ಹೋಗಿದ್ದೆ. ಅಲ್ಲಿ ಒಂದು ಎಮ್ಮೆಯನ್ನು ನೋಡಿದೆ, ತುಂಬಾ ಇಷ್ಟ ಆಯ್ತು. ಯಾಕೆ ಇದನ್ನು ಅಮ್ಮನ ತೋಟಕ್ಕೆ ತಗೊಂಡು ಹೋಗಬಾರದು ಅಂತ ಅನ್ನಿಸಿತು. ತಕ್ಷಣವೇ ಡಿಸೈಡ್ ಮಾಡಿದೆ. 2 ಸಾವಿರ ಕಿಮೀ ಜೊತೆಯಲ್ಲಿ ಕರೆದುಕೊಂಡು ಬಂದೆ. ತಾಯಿಗೆ 'ಮಂಡೋದರಿ', ಮಗಳಿಗೆ 'ಭೈರವಿ' ಅಂತ ಹೆಸರಿಟ್ಟೆ. ಅಲ್ಲಿಗೆ ಅಮ್ಮನ ತೋಟಕ್ಕೆ ಹೊಸ ಅತಿಥಿ ಎಂಟ್ರಿ ಆದ್ರು' ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ ಪ್ರೇಮ್!

ಪುತ್ರ ಸೂರ್ಯ, ಕರು ಭೈರವಿ ಜೊತೆಗೆ ಇರುವ ಫೋಟೋವನ್ನು ರಕ್ಷಿತಾ ಪ್ರೇಮ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ನಮ್ಮ ತೋಟದ ಎರಡು ಪುಟಾಣಿಗಳು' ಎಂದು ಕ್ಯಾಪ್ಷನ್ ನೀಡಿದ್ದಾರೆ. ಕರುವಿನ ಜೊತೆ ಪ್ರೇಮ್‌ ಇರುವ ವಿಡಿಯೋವನ್ನು ಸಹ ಅವರು ಹಂಚಿಕೊಂಡಿದ್ದಾರೆ. ಸಾಕು ಪ್ರಾಣಿಗಳ ಮೇಲೆ ಪ್ರೇಮ್‌ಗೆ ಇರುವ ಪ್ರೀತಿ ಕಂಡು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

'ಜೋಗಿ' ಪ್ರೇಮ್ ಈಗ ಮೂರು ಸಿನಿಮಾಗಳಿಗೆ ಹೀರೋ
'ಏಕ್‌ ಲವ್ ಯಾ' ಸಿನಿಮಾ ಮುಗಿದ ನಂತರ ನಟನೆ ಕಡೆಗೆ ಗಮನ ನೀಡಲಿದ್ದಾರೆ ಪ್ರೇಮ್. ಕಳೆದ ತಿಂಗಳು ಅವರು ಹೀರೋ ಆಗಿರುವ ಮೂರು ಸಿನಿಮಾಗಳು ಘೋಷಣೆ ಆಗಿವೆ. ಪ್ರೇಮ್‌ ನಟಿಸುತ್ತಿರುವ 'ಗಾಂಧಿಗಿರಿ' ಸಿನಿಮಾ ಮುಗಿಯೋಕು ಮೊದಲೇ, ಆ ತಂಡದಿಂದ 'ಕೇಡಿ ಕಿಷ್ಣ' ಘೋಷಣೆ ಆಗಿದೆ. ರಘು ಹಾಸನ್‌ ಇದರ ನಿರ್ದೇಶಕರು. ಚಕ್ರವರ್ತಿ ಚಂದ್ರಚೂಡ್‌ ನಿರ್ದೇಶನದಲ್ಲಿ 'ಐ ಆ್ಯಮ್ ಕಲ್ಕಿ' ಸಿನಿಮಾವನ್ನು ಪ್ರೇಮ್‌ ಒಪ್ಪಿಕೊಂಡಿದ್ದು, ಎಲ್‌.ಪಿ. ಸುರೇಶ್ ಇದರ ನಿರ್ಮಾಣ ಮಾಡುತ್ತಿದ್ದಾರೆ. ಎಚ್. ವಿಜಯ್‌ಕುಮಾರ್ ನಿರ್ದೇಶನದ, ಅಕ್ಷಯ್ ಸಮರ್ಥ್ ನಿರ್ಮಾಣದ ಇನ್ನೂ ಹೆಸರಿಡದ ಸಿನಿಮಾವೊಂದರಲ್ಲೂ ಪ್ರೇಮ್‌ ನಟಿಸಲಿದ್ದಾರೆ.

'ಜೋಗಿ' ಪ್ರೇಮ್‌ ಎದುರು ವಿಲನ್ ಆಗಿ ಅಬ್ಬರಿಸಲಿದ್ದಾರೆ ತಮಿಳಿನ ಬಾಬಿ ಸಿಂಹ! ಯಾವ ಸಿನಿಮಾದಲ್ಲಿ?

View this post on Instagram A post shared by Prem❣️s (@directorprems)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌