ಆ್ಯಪ್ನಗರ

'ಸ್ಯಾಂಡಲ್‌ವುಡ್ ಕ್ವೀನ್' ನಟಿ ರಮ್ಯಾಗೆ ಹುಟ್ಟುಹಬ್ಬದ ಸಂಭ್ರಮ: ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆ!

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಅವರಿಗೆ ಇಂದು 37ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಸ್ಯಾಂಡಲ್‌ವುಡ್‌ ಕಲಾವಿದರು, ಅಭಿಮಾನಿಗಳು ರಮ್ಯಾಗೆ ಶುಭಾಶಯ ಕೋರುತ್ತಿದ್ದಾರೆ. ಸಿನಿಮಾದಿಂದ ರಮ್ಯಾ ದೂರವಿದ್ದರೂ ಕೂಡ ಪ್ರೇಕ್ಷಕರು ಅವರನ್ನು ಮರೆತಿಲ್ಲ.

THE TIMES OF INDIA NEWS SERVICE 29 Nov 2020, 10:28 am
ಚಿತ್ರರಂಗದಲ್ಲಿ ಇದ್ದಷ್ಟು ದಿನ ನಂಬರ್ 1 ನಟಿಯಾಗಿ ಮೆರೆದ ನಟಿ ರಮ್ಯಾ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅವರು 37ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರಮ್ಯಾ ಅವರಿಗೆ ಸ್ಯಾಂಡಲ್‌ವುಡ್ ಕಲಾವಿದರು, ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.
Vijaya Karnataka Web fans wishes to sandalwood queen ramya divya spandana for her birthday
'ಸ್ಯಾಂಡಲ್‌ವುಡ್ ಕ್ವೀನ್' ನಟಿ ರಮ್ಯಾಗೆ ಹುಟ್ಟುಹಬ್ಬದ ಸಂಭ್ರಮ: ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆ!


ಸಿನಿಮಾ ಹಾಗೂ ರಾಜಕೀಯದಿಂದ ರಮ್ಯಾ ದೂರ!

ಕನ್ನಡ ಹಾಗೂ ತಮಿಳು, ತೆಲುಗು ಚಿತ್ರರಂಗದಲ್ಲಿಯೂ ಕೆಲಸ ಮಾಡಿರುವ ರಮ್ಯಾ ಪಾರ್ಲಿಮೆಂಟ್‌ನ ಸದಸ್ಯರಾಗಿದ್ದರು. ಸಿನಿಮಾ ಜೊತೆಗೆ ರಾಜಕೀಯದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಈಗ ಅವರು ಸಿನಿಮಾ ಹಾಗೂ ರಾಜಕಾರಣದಿಂದ ದೂರವಿದ್ದಾರೆ. ಕಳೆದ ಒಂದು ವರ್ಷಗಳಿಂದ ಸೋಶಿಯಲ್ ಮೀಡಿಯಾ ಹಾಗೂ ಸಾರ್ವಜನಿಕ ಜೀವನದಿಂದ ದೂರವಿದ್ದ ರಮ್ಯಾ ಅವರು ಈಗ ಮತ್ತೆ ಸೋಶಿಯಲ್ ಮೀಡಿಯಾಕ್ಕೆ ಆಗಮಿಸಿ ಅನೇಕ ಘಟನೆಗಳ ಬಗ್ಗೆ ಅವರ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ರಾಜಕೀಯದಿಂದಾಗಿ ಅನೇಕರ ವಿರೋಧ ಕಟ್ಟಿಕೊಂಡ ರಮ್ಯಾ!

2012ರಲ್ಲಿ ಕಾಂಗ್ರೆಸ್ ಪಕ್ಷ ಸೇರಿಕೊಂಡ ರಮ್ಯಾ ಮಂಡ್ಯ ವಿಧಾನ 2014ರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸೋತರು. ಇದಾದ ನಂತರವ ಅವರ ಗಮನ ರಾಷ್ಟ್ರ ರಾಜಕಾರಣದತ್ತ ಹೋಯ್ತು. ಕಾಂಗ್ರೆಸ್‌ ಪಕ್ಷವನ್ನು ಬಲಪಡಿಸುವುದರತ್ತ ರಮ್ಯಾ ಕಾರ್ಯನಿರ್ವಹಿಸಿದರು. ಆ ವೇಳೆ ಬೇರೆಯವರ ಮೇಲೆ ಆರೋಪ ಮಾಡುತ್ತ ಬಂದ ರಮ್ಯಾ ಅವರು ನರೇಂದ್ರ ಮೋದಿ, ಬಿಜೆಪಿ ಅಭಿಮಾನಿಗಳ ಕೋಪಕ್ಕೆ ತುತ್ತಾದರು. ಇದೇ ರಾಜಕೀಯ ವಿಷಯದಿಂದ 'ರೆಬೆಲ್ ಸ್ಟಾರ್' ಅಂಬರೀಶ್ ಜೊತೆಯೂ ಮನಸ್ತಾಪ ಕಟ್ಟಿಕೊಂಡರು.

Also Read-ಆಗ ನಾನು ಬಾಲಿಶವಾಗಿದ್ದೆ, ಅಷ್ಟು ಪ್ರೌಢಿಮೆಯಿಯರಲಿಲ್ಲ: 'ಸ್ಯಾಂಡಲ್‌ವುಡ್ ಕ್ವೀನ್' ನಟಿ ರಮ್ಯಾ!

ರಮ್ಯಾ ಮತ್ತೆ ನಿಮಾ ಮತ್ತು ರಾಜಕೀಯಕ್ಕೆ ಮರಳುತ್ತಾರಾ?

ಈಗ ರಮ್ಯಾ ಅಧ್ಯಾತ್ಮದತ್ತ ಮುಖ ಮಾಡಿದ್ದಾರೆ. ಇದರ ಕೋರ್ಸ್ ಕೂಡ ಮಾಡಿದ್ದಾರಂತೆ. ಕೆಲ ತಿಂಗಳುಗಳಿಂದ ರಮ್ಯಾ ನೀಡಿರುವ ಸಂದರ್ಶನದಲ್ಲಿ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರಕ್ಕೆ ಮತ್ತೆ ಮರಳುವುದು ಡೌಟ್ ಎಂಬಂತೆ ರಮ್ಯಾ ಹೇಳಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ರಮ್ಯಾ ಅವರು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌