ಆ್ಯಪ್ನಗರ

'ಬಜಾರ್' ಚಿತ್ರದ ನಾಯಕ ನಟ ಧನ್ವೀರ್‌ ಗೌಡ ವಿರುದ್ಧ ಎಫ್‌ಐಆರ್!

ನಟ ಧನ್ವೀರ್‌ ಗೌಡ ಅವರಿಗೆ ಒಂದರಮೇಲೊಂದು ವಿವಾದ ಎದುರಾಗುತ್ತಲೇ ಇದೆ. ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ ಅವರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಧನ್ವೀರ್‌ ಮತ್ತು ಅವರ ಸ್ನೇಹಿತರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

Vijaya Karnataka Web 24 Oct 2020, 5:31 pm
ಮೈಸೂರು: ಕಳೆದೆರಡು ದಿನಗಳ ಕೆಳಗಷ್ಟೇ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾತ್ರಿ ವೇಳೆ ಸಫಾರಿ ನಡೆಸಿದ್ದ ಆರೋಪ ಎದುರಿಸಿದ್ದ ನಟ ಧನ್ವೀರ್‌ ಗೌಡ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಆದರೆ ಇದು ಸಫಾರಿ ಮಾಡಿದ್ದಕ್ಕಲ್ಲ, ಬದಲಿಗೆ ಆನೆಯ ಮೇಲೆ ನಿಂತು ಫೋಸ್‌ ಕೊಟ್ಟಿದ್ದ ಕಾರಣಕ್ಕಾಗಿ!
Vijaya Karnataka Web ಧನ್ವೀರ್‌ ಗೌಡ


'ಬಜಾರ್' ಚಿತ್ರದ ನಾಯಕ ನಟ ಧನ್ವೀರ್‌ ಗೌಡ ಈ ಹಿಂದೆ ಆನೆಯ ಮೇಲೆ ಕುಳಿತು ಫೋಟೋ ತೆಗೆಸಿಕೊಂಡಿದ್ದಕ್ಕಾಗಿ 'ನಾಗರಹೊಳೆ ರಾಷ್ಟ್ರೀಯ ಉದ್ಯಾನವನ'ದ ನಿರ್ದೇಶಕರ ಸೂಚನೆ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. ಇನ್ನು ಎಫ್‌ಐಆರ್‌ನಲ್ಲಿ ಧನ್ವೀರ್ ಸೇರಿದಂತೆ 6 ಮಂದಿ ಹೆಸರನ್ನು ಸಹ ಸೇರಿಸಲಾಗಿದೆ. ಅರಣ್ಯ ಇಲಾಖೆಯ ದೂರಿನನ್ವಯ ಧನ್ವೀರ್‌ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು ಅವರೊಟ್ಟಿಗಿದ್ದ 5 ಮಂದಿ ಸೇಹ್ನಿತರಿಗೂ ಇದೀಗ ಸಂಕಷ್ಟ ಎದುರಾದಂತಿದೆ.

ಸೆ.27ರಂದು ಮತ್ತಿಗೂಡು ಆನೆ ಶಿಬಿರಕ್ಕೆ ಭೇಟಿ ನೀಡಿದ್ದ ಧನ್ವೀರ್ ಅವರೊಟ್ಟಿಗಿನ ಸ್ನೇಹಿತರು ಅಲ್ಲಿನ ಆನೆಗಳನ್ನ ಕಂಡು ಅವುಗಳ ಮೇಲೆ ಏರಿ ಕುಳಿತು ಪೋಟೋ, ವಿಡಿಯೋಗೆ ಪೋಸ್ ಕೊಟ್ಟಿದ್ದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ ಧನ್ವೀರ್‌ ಮೇಲೆ ಅರಣ್ಯ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಎಫ್‌ಐಆರ್‌ ದಾಖಲು ಮಾಡಿದೆ. ವನ್ಯಜೀವಿ ಸಂರಕ್ಷಣ ಕಾಯ್ದೆ 1972 ಅಡಿಯಲ್ಲಿ ದೂರು ಇದಾಗಿದ್ದು, ಧನ್ವೀರ್‌, ವಿಶ್ವಾಸ್‌ ಅಯ್ಯರ್‌, ದರ್ಶನ್‌ ಬಿನ್‌ ನಂದಕುಮಾರ್ ಹಾಗೂ ಈ ಜೊತೆಗೆ ಹೆಸರು ಪತ್ತೆಯಾಗದ ಇನ್ನೂ ಮೂವರು ಆರೋಪಿಗಳ ಮೇಲೆ ಕೇಸ್‌ ದಾಖಲಾಗಿದೆ.

also read: ಬಂಡೀಪುರ ನ್ಯಾಶನಲ್‌ ಪಾರ್ಕ್‌ನಲ್ಲಿ ನಟ ಧನ್ವೀರ್ ಸಫಾರಿ: ಪ್ರಶ್ನೆ ಮಾಡಿದ ನೆಟ್ಟಿಗರು!

ಈ ಕುರಿತು ಪ್ರಕಟಣೆ ನೀಡಿದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ನಿರ್ದೇಶಕರಾದ‌ ಮಹೇಶ್ ಅವರು ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಚಿತ್ರರಂಗದ ತಾರೆಯರು ಎಂದು ಹೇಳಿಕೊಂಡು ಆನೆ ಚೌಕೂರು ವನ್ಯಜೀವಿ ವಲಯಕ್ಕೆ ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

also read: ಧನ್ವೀರ್ ಸಫಾರಿ ವಿವಾದಕ್ಕೆ ಅರಣ್ಯಾಧಿಕಾರಿ ಹೇಳೋದೇನು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌