ಆ್ಯಪ್ನಗರ

ಗಣೇಶ್‌ ನಟನೆಯ 'ಸಖತ್‌' ಫಸ್ಟ್‌ಲುಕ್‌ಗೂ 'ಸರಿಗಮಪ' ಹನುಮಂತನಿಗೂ ಏನಾದರೂ ಸಂಬಂಧ ಇದೆಯಾ?

ಗಣೇಶ್‌ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಈ ಫಸ್ಟ್‌ಲುಕ್‌ ನೋಡಿದ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲದೆ, ಸರಿಗಮಪ ರಿಯಾಲಿಟಿ ಶೋ ಖ್ಯಾತಿಯ ಹನುಮಂತ ಕೂಡ ಕೆಲವರಿಗೆ ನೆನಪಾಗುತ್ತಿದ್ದಾನೆ!

Vijaya Karnataka Web 29 Feb 2020, 2:31 pm
'ಗೋಲ್ಡನ್‌ ಸ್ಟಾರ್‌' ಗಣೇಶ್‌ ಮತ್ತು ನಿರ್ದೇಶಕ ಸಿಂಪಲ್‌ ಸುನಿ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ 'ಚಮಕ್‌' ಚಿತ್ರ ಸೂಪರ್‌ ಹಿಟ್‌ ಆಯಿತು. ಅದರಲ್ಲಿ ಗಣೇಶ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದರು. ಕಾಮಿಡಿ ಜೊತೆಗೆ ಒಂದು ಸುಂದರ ಫ್ಯಾಮಿಲಿ ಕಹಾನಿಯನ್ನು ನಿರ್ದೇಶಕರು ಹೇಳಿದ್ದರು. ಎಂದಿನ ಸುನಿ ಫ್ಲೇವರ್‌ ಜೊತೆಗೆ ಗಣೇಶ್‌ ಮ್ಯಾನರಿಸಂ ಸೇರಿಕೊಂಡು ಸಿನಿಮಾ ಸೂಪರ್‌ ಹಿಟ್‌ ಆಯಿತು. ಈಗ ಅದೇ ಜೋಡಿ ಮತ್ತೆ ಒಂದಾಗುತ್ತಿದೆ. ಅಂದರೆ ಗಣೇಶ್‌ ಮತ್ತು ಸುನಿ ಜೊತೆಯಾಗಿ ಹೊಸ ಚಿತ್ರ ಮಾಡುತ್ತಿದ್ದಾರೆ. ಇದರ ಶೀರ್ಷಿಕೆ 'ಸಖತ್‌' ಎಂಬ ಸುದ್ದಿ ಕೆಲವೇ ದಿನಗಳ ಹಿಂದೆ ಬಹಿರಂಗ ಆಯಿತು. ವಿಶೇಷ ಏನೆಂದರೆ, ಈಗ 'ಸಖತ್‌' ಸಿನಿಮಾ ತಂಡದಿಂದ ಒಂದು ಫಸ್ಟ್‌ಲುಕ್‌ ರಿಲೀಸ್‌ ಆಗಿದೆ. ಅದರಲ್ಲಿ ಗಣೇಶ್‌ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಈ ಫಸ್ಟ್‌ಲುಕ್‌ ನೋಡಿದ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲದೆ, ಸರಿಗಮಪ ರಿಯಾಲಿಟಿ ಶೋ ಖ್ಯಾತಿಯ ಹನುಮಂತ ಕೂಡ ಕೆಲವರಿಗೆ ನೆನಪಾಗುತ್ತಿದ್ದಾನೆ!
Vijaya Karnataka Web golden star ganesh sakath first look is like saregamapa hanumantha
ಗಣೇಶ್‌ ನಟನೆಯ 'ಸಖತ್‌' ಫಸ್ಟ್‌ಲುಕ್‌ಗೂ 'ಸರಿಗಮಪ' ಹನುಮಂತನಿಗೂ ಏನಾದರೂ ಸಂಬಂಧ ಇದೆಯಾ?


​ಸಖತ್‌ನಲ್ಲಿ ಇರಲಿದೆ ರಿಯಾಲಿಟಿ ಶೋ ಕಥೆ?

ಈ ಹಿಂದೆ 'ಚಮಕ್‌' ಸಿನಿಮಾದಲ್ಲಿ ಗಂಡ-ಹೆಂಡತಿ ನಡುವಿನ ಎಮೋಷನಲ್‌ ಕಥೆ ಹೇಳಿದ್ದರು ನಿರ್ದೇಶಕ ಸುನಿ. ಪ್ರೇಕ್ಷಕರಿಗೂ ಆ ಸಿನಿಮಾ ತುಂಬ ಇಷ್ಟ ಆಗಿತ್ತು. ಸ್ತ್ರೀರೋಗ ತಜ್ಞನ ಪಾತ್ರದಲ್ಲಿ ಗಣೇಶ್‌ ಕಾಣಿಸಿಕೊಂಡಿದ್ದರು. ಆದರೆ ಈಗ ಎರಡನೇ ಬಾರಿ ಒಂದಾಗುತ್ತಿರುವ ಈ ನಟ-ನಿರ್ದೇಶಕನ ಜೋಡಿಯಿಂದ ಜನರು ಹೊಸ ಕಥೆಯನ್ನು ನಿರೀಕ್ಷಿಸುತ್ತಿದ್ದಾರೆ. ಅಚ್ಚರಿ ಏನೆಂದರೆ, 'ಸಖತ್‌' ಸಿನಿಮಾದಲ್ಲಿ ರಿಯಾಲಿಟಿ ಶೋಗೆ ಸಂಬಂಧಿಸಿದ ಕಥೆ ಇರಲಿದೆ ಎಂಬುದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ. ಈಗ ಫಸ್ಟ್‌ಲುಕ್‌ನಲ್ಲಿ ಕಾಣಿಸಿಕೊಂಡಿರುವ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದು ಸ್ಪಷ್ಟವಾಗಿದೆ. ಯಾವುದೋ ಮನರಂಜನಾ ವಾಹಿನಿಯ ರಿಯಾಲಿಟಿ ಶೋ ವೇದಿಕೆ ಮೇಲೆ ಗಣೇಶ್‌ ಮೈಕ್‌ ಹಿಡಿದು ನಿಂತಿದ್ದಾರೆ.


ಮತ್ತೆ ಚಮಕ್‌ ಕೊಡೋಕೆ ಬರುತ್ತಿದ್ದಾರೆ ಗಣೇಶ್‌-ಸುನಿ; ಹೊಸ ಸಿನಿಮಾ ಬಗ್ಗೆ ಅಪ್‌ಡೇಟ್‌ ಮಾಹಿತಿ ಇಲ್ಲಿದೆ

​ಈ ಲುಕ್‌ ಕಂಡು ಹನುಮಂತ ನೆನಪಾಗಿದ್ದೇಕೆ?

ಸಾಮಾಜಿಕ ಜಾಲತಾಣದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಅವರು ಈ ಫಸ್ಟ್‌ಲುಕ್‌ ಹಂಚಿಕೊಂಡರು. ಅದಕ್ಕೆ ಸಾಕಷ್ಟು ಜನರಿಂದ ಮೆಚ್ಚುಗೆ ಸಿಕ್ಕಿದೆ. ಆ ಮೂಲಕ 'ಸಖತ್‌' ಚಿತ್ರದ ಮೇಲೆ ಎಷ್ಟು ನಿರೀಕ್ಷೆ ಇದೆ ಎಂಬುದೂ ಗೊತ್ತಾಗಿದೆ. ಆದರೆ ಇನ್ನೂ ಕೆಲವರು ಈ ಲುಕ್‌ ನೋಡಿ ಸರಿಗಮಪ ರಿಯಾಲಿಟಿ ಶೋ ಖ್ಯಾತಿಯ ಹನುಮಂತನನ್ನು ನೆನಪಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಕೂಡ ಇದೆ. ಈ ಫಸ್ಟ್‌ಲುಕ್‌ನಲ್ಲಿ ಬಣ್ಣ ಬಣ್ಣದ ಶರ್ಟ್, ಪಕ್ಕಾ ಹಳ್ಳಿ ಶೈಲಿಯ ಲುಂಗಿ ಧರಿಸಿ ಗಣೇಶ್‌ ಪೋಸ್‌ ನೀಡಿದ್ದಾರೆ. ಕೈಯಲ್ಲಿ ಮೈಕ್‌ ಹಿಡಿದು ಹಾಡು ಹೇಳುತ್ತಿರುವ ಗಣೇಶ್‌ಗೂ, 'ಸರಿಗಮಪ ಸೀಸನ್‌ 15'ರಲ್ಲಿ ಮಿಂಚಿದ ಹನುಮಂತನಿಗೂ ಸಾಮ್ಯತೆ ಇದೆ ಎಂಬುದು ಅನೇಕರ ಅಭಿಪ್ರಾಯ. ಇದೇ ರೀತಿ ಲುಂಗಿ ಧರಿಸಿ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದ ಹನುಮಂತ ಕೂಡ ಸಖತ್‌ ಜನಪ್ರಿಯತೆ ಪಡೆದಿದ್ದ. 'ಸರ್‌.. ಇದು ಹನುಮಂತನ ಬಯೋಪಿಕ್‌ ಇರಬಹುದೇ?' ಎಂದು ಕೆಲವರು ಕಾಮೆಂಟ್‌ ಕೂಡ ಮಾಡಿದ್ದಾರೆ.


ಸಿಂಗರ್ ಹನುಮಂತನಿಗೆ ಲೈಟಾಗಿ ಲವ್ವಾಗಿದೆ!

​ಭರದಿಂದ ಸಾಗುತ್ತಿದೆ ಶೂಟಿಂಗ್‌

ಇತ್ತೀಚೆಗಷ್ಟೇ 'ಸಖತ್‌'ಗೆ ಮುಹೂರ್ತ ನೆರವೇರಿಸಲಾಯಿತು. ಫೆ.24ರಂದು ಮುಹೂರ್ತದ ಜೊತೆಗೆ ಶೂಟಿಂಗ್‌ ಕೂಡ ಆರಂಭ ಆಗಿದೆ. ಸುಪ್ರಿತ್‌ ಹಾಗೂ ವೆಂಕಟ್‌ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಸಂತೋಷ್‌ ರೈ ಪಾತಾಜೆ ಛಾಯಾಗ್ರಹಣ, ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ 'ಚಮಕ್‌' ಚಿತ್ರದಲ್ಲೂ ಅವರಿಬ್ಬರು ಕೆಲಸ ಮಾಡಿದ್ದರು. ಟಾಲಿವುಡ್‌ ನಟಿ ಸುರಭಿ ಇದೇ ಮೊದಲ ಬಾರಿಗೆ 'ಸಖತ್‌' ಮೂಲಕ ಕನ್ನಡಕ್ಕೆ ಕಾಲಿಡುತ್ತಿದ್ದಾರೆ. ಒಟ್ಟಿನಲ್ಲಿ ಈ ಚಿತ್ರಕ್ಕೂ ಹನುಮಂತನಿಗೂ ಏನು ಸಂಬಂಧ ಎಂದು ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಸದ್ಯ ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪ್ರಸ್ತುತ ಚಿತ್ರೀಕರಣ ಭರದಿಂದ ಸಾಗುತ್ತಿದ್ದು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ.


ಅನುಶ್ರೀ ಮತ್ತು 'ಸರಿಗಮಪ' ಖ್ಯಾತಿಯ ಹನುಮಂತನ ಬಗ್ಗೆ ಕೇಳಿಬಂದ ಸುದ್ದಿ ನಿಜಾನಾ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌