ಆ್ಯಪ್ನಗರ

'ಚಮಕ್‌' ಬಳಿಕ ಮತ್ತೆ ಡಾಕ್ಟರ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ನಟ 'ಗೋಲ್ಡನ್‌ ಸ್ಟಾರ್‌' ಗಣೇಶ್‌!

ಲಾಕ್‌ಡೌನ್‌ ಪರಿಣಾಮದ ನಡುವೆಯೂ ಸಿನಿಮಾ ಚಟುವಟಿಕೆಗಳು ಗರಿಗೆದರುತ್ತಿವೆ. 'ಗೋಲ್ಡನ್‌ ಸ್ಟಾರ್‌' ಗಣೇಶ್‌ ಕೂಡ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಅದರಲ್ಲಿ ಅವರು ಡಾಕ್ಟರ್‌ ಪಾತ್ರ ಮಾಡುತ್ತಿರುವುದು ವಿಶೇಷ.

Vijaya Karnataka Web 24 Aug 2020, 11:09 pm
ನಟ 'ಗೋಲ್ಡನ್‌ ಸ್ಟಾರ್‌' ಗಣೇಶ್‌ ಪ್ರಸ್ತುತ 'ಗಾಳಿಪಟ 2' ಸಿನಿಮಾ ಶೂಟಿಂಗ್‌ ಪುನಾರಂಭ ಮಾಡಲು ಕಾಯುತ್ತಿದ್ದಾರೆ. ಅದರ ಜೊತೆಗೆ ಇನ್ನೂ ಕೆಲವು ಸಿನಿಮಾಗಳು ಅವರ ಕೈಯಲ್ಲಿವೆ. ಸಿಂಪಲ್‌ ಸುನಿ ನಿರ್ದೇಶಿಸುತ್ತಿರುವ 'ಸಖತ್‌' ಹಾಗೂ 'ತ್ರಿಬಲ್‌ ರೈಡ್‌' ಚಿತ್ರದ ಕೆಲಸಗಳಲ್ಲೂ ಗಣೇಶ್‌ ತೊಡಗಿಕೊಳ್ಳಬೇಕಿದೆ. ಅಷ್ಟರಲ್ಲಾಗಲೇ ಅವರು ಇನ್ನೊಂದು ಹೊಸ ಸಿನಿಮಾಗೆ ಸಹಿ ಹಾಕಿದ್ದಾರೆ.
Vijaya Karnataka Web golden star ganesh to play doctor role in his new film
'ಚಮಕ್‌' ಬಳಿಕ ಮತ್ತೆ ಡಾಕ್ಟರ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ನಟ 'ಗೋಲ್ಡನ್‌ ಸ್ಟಾರ್‌' ಗಣೇಶ್‌!


ಈವರೆಗೂ ರೊಮ್ಯಾಂಟಿಕ್ ಹೀರೋ ಪಾತ್ರಗಳಲ್ಲಿಯೇ ಗಣೇಶ್‌ ಕಾಣಿಸಿಕೊಂಡಿದ್ದು ಹೆಚ್ಚು. ಅವುಗಳ ಜೊತೆಗೆ ಕೆಲವು ಪ್ರಯೋಗಗಳನ್ನೂ ಮಾಡುತ್ತ ಬಂದಿದ್ದಾರೆ. ಈಗ ಅವರು ಒಪ್ಪಿಕೊಂಡಿರುವ ಹೊಸ ಸಿನಿಮಾದಲ್ಲಿ ನ್ಯೂರೋಸರ್ಜನ್‌ ಪಾತ್ರ ಮಾಡಲಿದ್ದಾರೆ ಎಂಬುದು ವಿಶೇಷ! ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವುದು ಮತ್ತು ಬಂಡವಾಳ ಹೂಡುತ್ತಿರುವವರು ಕೂಡ ವೈದ್ಯರು! ಡಾ. ಶೈಲೇಶ್‌ ಕುಮಾರ್‌ ನಿರ್ಮಾಣ ಮಾಡುತ್ತಿದ್ದರೆ, ಡಾ. ಶಶಿಕಲಾ ಪಿ. ನಿರ್ದೇಶನ ಮಾಡಲಿದ್ದಾರೆ.

ವೈದ್ಯರ ಭಾವನಾತ್ಮಕ ಬದುಕಿನ ಕುರಿತ ಕಥಾಹಂದರ ಈ ಸಿನಿಮಾದಲ್ಲಿ ಇರಲಿದೆ. ವೈದ್ಯಕೀಯ ಲೋಕದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ನಿರ್ಮಾಪಕ-ನಿರ್ದೇಶಕರು ಅದೇ ಅನುಭವಗಳನ್ನು ತೆರೆಮೇಲೆ ಮೂಡಿಸುತ್ತಿದ್ದಾರೆ. ಗಣೇಶ್‌ ಅವರನ್ನು ಗಮನದಲ್ಲಿ ಇಟ್ಟುಕೊಂಡೇ ಈ ಚಿತ್ರದ ಕಥೆ ಸಿದ್ಧಪಡಿಸಲಾಗಿದೆಯಂತೆ. ಅವರು ಈ ಪಾತ್ರಕ್ಕೆ ಸೂಕ್ತ ನ್ಯಾಯ ಒದಗಿಸುತ್ತಾರೆ ಎಂಬ ಸಂಪೂರ್ಣ ಭರವಸೆ ತಂಡಕ್ಕಿದೆ.

also read: ಸಿಂಪಲ್ ಸುನಿ ಜೊತೆ ಸೇರಿ 'ದಿ ಸ್ಟೋರಿ ಆಫ್ ರಾಯಘಡ' ಹೇಳಲಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್!

ಗಣೇಶ್‌ ಕೂಡ ಈ ಕಥೆ ಕೇಳಿ ಇಂಪ್ರೆಸ್‌ ಆಗಿದ್ದಾರೆ. ನಿರ್ದೇಶಕಿ ಶಶಿಕಲಾ ಕಥೆ ನಿರೂಪಿಸಲು ಆರಂಭಿಸಿದ 20 ನಿಮಿಷದಲ್ಲಿ ಈ ಸಿನಿಮಾ ಮಾಡಲು ಒಪ್ಪಿಗೆ ಸೂಚಿಸಿದರಂತೆ ಗಣೇಶ್‌! ಅಂದಹಾಗೆ ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಇಟ್ಟಿಲ್ಲ. ಪಕ್ಕಾ ಕಮರ್ಷಿಯಲ್‌ ಶೈಲಿಯಲ್ಲಿಯೇ ಸಿನಿಮಾ ಮೂಡಿಬರಲಿದೆ. ಈ ಹಿಂದೆ ಸುನಿ ನಿರ್ದೇಶಿಸಿದ್ದ 'ಚಮಕ್‌' ಸಿನಿಮಾದಲ್ಲಿ ಸ್ತ್ರೀರೋಗ ತಜ್ಞನ ಪಾತ್ರಕ್ಕೆ ಗಣೇಶ್‌ ಬಣ್ಣ ಹಚ್ಚಿದ್ದರು. ಈಗ ಮತ್ತೆ ಅವರು ಡಾಕ್ಟರ್‌ ಪಾತ್ರ ಮಾಡಲು ಒಪ್ಪಿಕೊಂಡಿರುವುದರಿಂದ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿದೆ.

also read: ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾ ನಾಯಕಿ ಶ್ರದ್ಧಾ ಸಾಯುವಂತೆ ಪ್ರಾರ್ಥನೆ ಮಾಡಿದ ಆ ವ್ತಕ್ತಿ ಯಾರು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌