ಆ್ಯಪ್ನಗರ

ಮುನಿಸು ಮರೆತು ಒಂದಾದ 'ಸ್ಪೆಷಲ್‌' ಜೋಡಿ ಧನಂಜಯ-ಗುರುಪ್ರಸಾದ್‌! ಇದು 'ಬಡವ ರಾಸ್ಕಲ್‌' ಮೋಡಿ!

ಕೆಲವು ವರ್ಷಗಳ ಹಿಂದೆ ನಟ ಧನಂಜಯ ಮತ್ತು ನಿರ್ದೇಶಕ ಗುರುಪ್ರಸಾದ್‌ ನಡುವೆ ಸಣ್ಣ ವೈಮನಸ್ಸು ಮೂಡಿತ್ತು. ಆದರೆ ಅದನ್ನೆಲ್ಲ ಮರೆತು ಅವರೀಗ ಮತ್ತೆ ಕೈ ಜೋಡಿಸಿದ್ದಾರೆ. 'ಬಡವ ರಾಸ್ಕಲ್‌' ಚಿತ್ರದಲ್ಲಿ ಇಬ್ಬರೂ ಜೊತೆಯಾಗಿದ್ದಾರೆ.

Vijaya Karnataka Web 15 Oct 2020, 9:06 am
ನಟ 'ಡಾಲಿ' ಧನಂಜಯ ಅವರು ತಮ್ಮದೇ ನಿರ್ಮಾಣ ಮತ್ತು ನಟನೆಯ 'ಬಡವ ರಾಸ್ಕಲ್‌' ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಈ ಚಿತ್ರಕ್ಕೆ ಕ್ಲೈಮ್ಯಾಕ್ಸ್‌ ಚಿತ್ರೀಕರಣ ಮಾಡಲಾಯಿತು. ಅಚ್ಚರಿ ಏನೆಂದರೆ ಈ ಸಿನಿಮಾದಲ್ಲಿ ಇಬ್ಬರು ನಿರ್ದೇಶಕರು ಅತಿಥಿ ಪಾತ್ರ ಮಾಡಿದ್ದಾರೆ. ಆ ಮೂಲಕ ಚಿತ್ರಕ್ಕೆ ಹೊಸ ಮೆರುಗು ನೀಡಿದ್ದಾರೆ. ಆ ಇಬ್ಬರಲ್ಲಿ ಒಬ್ಬರು 'ಮಠ' ಖ್ಯಾತಿಯ ನಿರ್ದೇಶಕ ಗುರುಪ್ರಸಾದ್‌ ಎಂಬುದು ವಿಶೇಷ.
Vijaya Karnataka Web ಬಡವ ರಾಸ್ಕಲ್‌


ಧನಂಜಯ ಅವರ ಮೊದಲ ಚಿತ್ರ 'ಡೈರೆಕ್ಟರ್‌ ಸ್ಪೆಷಲ್‌'ಗೆ ನಿರ್ದೇಶನ ಮಾಡಿದವರೇ ಗುರುಪ್ರಸಾದ್‌. ಆದರೆ ಇತ್ತೀಚಿನ ವರ್ಷಗಳಲ್ಲಿ ಇಬ್ಬರ ನಡುವೆ ವೈಮನಸ್ಸು ಮೂಡಿತ್ತು. ಅಚ್ಚರಿ ಎಂದರೆ ಅದನ್ನೆಲ್ಲ ಮರೆತು ಅವರಿಬ್ಬರೂ ಮತ್ತೆ ಒಂದಾಗಿದ್ದಾರೆ. ಈ ಬೆಳವಣಿಗೆ ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. 'ಗುರುಪ್ರಸಾದ್‌ ಅವರು ಈ ಸಿನಿಮಾದಲ್ಲಿ ನಟಿಸಬೇಕು ಎಂದು ಧನಂಜಯ ಅವರೇ ನಮಗೆ ಸಲಹೆ ನೀಡಿದರು' ಎನ್ನುತ್ತಾರೆ ಚಿತ್ರದ ನಿರ್ದೇಶಕ ಶಂಕರ್‌ ಗುರು.

'ಗುರುಪ್ರಸಾದ್‌ ಅವರು ನನಗೆ ಗುರುಗಳಿದ್ದಂತೆ. ಅವರ ಜೊತೆ ನಾನು ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. 'ಬಡವ ರಾಸ್ಕಲ್‌' ಚಿತ್ರದ ಕ್ಲೈಮ್ಯಾಕ್ಸ್‌ ಪ್ಲ್ಯಾನ್‌ ಮಾಡುತ್ತಿದ್ದಾಗ ನನಗೆ ಏನಾದರೂ ಡಿಫರೆಂಟ್‌ ಆಗಿ ಮಾಡಬೇಕು ಎನಿಸಿತು. ತೆರೆಮೇಲೆ ಮ್ಯಾಜಿಕ್‌ ಸೃಷ್ಟಿ ಮಾಡುವಂತಹ ಒಂದು ಪಾತ್ರ ಬೇಕಿತ್ತು. ಆಗಲೇ ನಾವು ಗುರುಪ್ರದಾಸ್‌ ಅವರನ್ನು ಹೇಳಲು ನಿರ್ಧರಿಸಿದೆವು. ಕ್ಲೈಮ್ಯಾಕ್ಸ್‌ನಲ್ಲಿ ಅವರೊಂದು ಪ್ರಮುಖ ಪಾತ್ರ ಮಾಡಿದ್ದಾರೆ' ಎಂಬುದು ಶಂಕರ್‌ ಗುರು ನೀಡುವ ಮಾಹಿತಿ.

also read: 'ಬಡವ ರಾಸ್ಕಲ್' ತಂಡದ 100ಕ್ಕೂ ಅಧಿಕ ಕಾರ್ಮಿಕರಿಗೆ ಉಡುಗೊರೆ ನೀಡಿದ 'ಡಾಲಿ' ಧನಂಜಯ!

ಅದೇ ರೀತಿ, 'ನೀರ್‌ ದೋಸೆ' ನಿರ್ದೇಶಕ ವಿಜಯ್‌ ಪ್ರಸಾದ್‌ ಕೂಡ ಒಂದು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಅವರು ಸಹ 'ತೋತಾಪುರಿ' ಚಿತ್ರದಲ್ಲಿ ಧನಂಜಯಗೆ ಆ್ಯಕ್ಷನ್‌-ಕಟ್ ಹೇಳಿರುವಂತವರು. 'ಸಾಮಾನ್ಯವಾಗಿ ವಿಜಯ್‌ ಪ್ರಸಾದ್‌ ಅವರು ನಟಿಸುವುದಿಲ್ಲ. ಆದರೆ ನಮ್ಮ ಮನವಿಗಾಗಿ ಈ ಸಿನಿಮಾದಲ್ಲಿ ಇನ್ಸ್‌ಪೆಕ್ಟರ್‌ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಕಥೆಯ ಮುಖ್ಯಭಾಗದಲ್ಲಿ ಅವರು ನಾಯಕನನ್ನು ಭೇಟಿ ಆಗುತ್ತಾರೆ' ಎನ್ನುವ ಮೂಲಕ 'ಬಡವ ರಾಸ್ಕಲ್‌' ಬಗ್ಗೆ ನಿರೀಕ್ಷೆ ಹೆಚ್ಚಿಸಿದ್ದಾರೆ ಶಂಕರ್‌ ಗುರು.

also read: 'ಡಾಲಿ' ಧನಂಜಯ ನಟನೆ, ನಿರ್ಮಾಣದ 'ಬಡವ ರಾಸ್ಕಲ್‌' ಚಿತ್ರಕ್ಕೆ ಅದ್ದೂರಿ ವೆಚ್ಚದಲ್ಲಿ ಕ್ಲೈಮ್ಯಾಕ್ಸ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌