ಆ್ಯಪ್ನಗರ

Hansika Motwani: ಐಫೆಲ್ ಟವರ್ ಮುಂದೆ 'ಬಿಂದಾಸ್' ಹುಡುಗಿ ಹನ್ಸಿಕಾ ಮೋಟ್ವಾನಿಗೆ ಪ್ರೇಮ ನಿವೇದನೆ

ಪುನೀತ್‌ ರಾಜ್‌ಕುಮಾರ್ ಅಭಿಯನದ 'ಬಿಂದಾಸ್' ಸಿನಿಮಾದ ಮೂಲಕ ಕನ್ನಡಕ್ಕೂ ಎಂಟ್ರಿ ನೀಡಿದ್ದ ನಟಿ ಹನ್ಸಿಕಾ ಮೋಟ್ವಾನಿ ಅವರು 'ಉಯಿರೇ ಉಯಿರೇ', 'ಸಿಂಗಮ್ 3', 'ವಿಲನ್' ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಈಗ ಅವರು ಬಾಯ್‌ಫ್ರೆಂಡ್ ಪ್ರೇಮ ನಿವೇದನೆ ಮಾಡಿದ ಫೋಟೋಗಳನ್ನು ಹಂಚಿಕೊಂಡು, ಮದುವೆ ಸತ್ಯ ಎಂದಿದ್ದಾರೆ.

Authored byಪದ್ಮಶ್ರೀ ಭಟ್ | Vijaya Karnataka Web 2 Nov 2022, 1:07 pm
ನಟಿ ಹನ್ಸಿಕಾ ಮೋಟ್ವಾನಿ ( Hansika Motwani ) ಮದುವೆ ಬಗ್ಗೆ ಕೆಲ ದಿನಗಳಿಂದ ಒಂದಷ್ಟು ಮಾತು ಕೇಳಿಬಂದಿತ್ತು. ಈಗ ಅವರು ಪ್ರೇಮ ನಿವೇದನೆ ಮಾಡಿದ ಫೋಟೋಗಳನ್ನು ಹಂಚಿಕೊಂಡು, ಮದುವೆ ಆಗೋದು ಸತ್ಯ ಎಂದಿದ್ದಾರೆ.
Vijaya Karnataka Web hansika


ಐಫೆಲ್ ಟವರ್ ಮುಂದೆ ಪ್ರೇಮ ನಿವೇದನೆ
ಪ್ಯಾರೀಸ್‌ನಲ್ಲಿರುವ ಐಫೆಲ್ ಟವರ್ ಮುಂದೆ ಸೊಹೇಲ್ ಕಥುರಿಯಾ ಅವರು ಮಂಡಿಯೂರಿ ಕೂತು ಹನ್ಸಿಕಾಗೆ ಮದುವೆಯಾಗುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಐಫೆಲ್ ಟವರ್ ಮುಂದೆ ಹೂವು, ಕ್ಯಾಂಡಲ್ ಹಚ್ಚಿ ಸಿಂಗಾರ ಕೂಡ ಮಾಡಲಾಗಿತ್ತು. ಪ್ರೇಮ ನಿವೇದನೆ ಮಾಡಿರುವ ಫೋಟೋಗಳನ್ನು ಹಂಚಿಕೊಂಡಿರುವ ಹನ್ಸಿಕಾ ಅವರು, "Noe and Forever" ಎಂದು ಬರೆದುಕೊಂಡಿದ್ದಾರೆ. ಅದಕ್ಕೆ ಸೊಹೇಲ್ ಅವರು ಐ ಲವ್ ಯು ಮೈ ಲೈಫ್ ಎಂದು ಹೇಳಿದ್ದಾರೆ.

ಹನ್ಸಿಕಾ ಪೋಸ್ಟ್‌ಗೆ ಸಾಕಷ್ಟು ಸೆಲೆಬ್ರಿಟಿಗಳು ಕಾಮೆಂಟ್ ಮಾಡಿ, ಶುಭಾಶಯ ತಿಳಿಸಿದ್ದಾರೆ. ಅನುಷ್ಕಾ ಶೆಟ್ಟಿ, ಶ್ರೀಯಾ ರೆಡ್ಡಿ, ಖುಷ್ಬೂ ಸುಂದರ್ ಮುಂತಾದವರು ಶುಭಾಶಯ ತಿಳಿಸಿದ್ದಾರೆ.

'ಬಿಂದಾಸ್' ಬ್ಯೂಟಿ ಹನ್ಸಿಕಾಗೆ ಉದ್ಯಮಿ ಜೊತೆ ಮದುವೆ? ಆದ್ರೆ, ಈ ವಿಚಾರ ಅವರಿಗೇ ಗೊತ್ತಿಲ್ಲ!

ಮದುವೆ ಯಾವಾಗ?
ಡಿಸೆಂಬರ್ 4ರಂದು ರಾಜಸ್ಥಾನದಲ್ಲಿ ಹನ್ಸಿಕಾ ಮೋಟ್ವಾನಿ, ಸೊಹೇಲ್ ಮದುವೆ ನಡೆಯಲಿದೆ. ಕುಟುಂಬಸ್ಥರು, ಆತ್ಮೀಯರ ಸಾಕ್ಷಿಯಾಗಿ ಡೆಸ್ಟಿನೇಶನ್ ವೆಡ್ಡಿಂಗ್ ನಡೆಯಲಿದೆ. ಮದುವೆ ಬಗ್ಗೆ ಹನ್ಸಿಕಾ ಅಧಿಕೃತ ಹೇಳಿಕೆ ನೀಡಬೇಕಿದೆ. ಡಿಸೆಂಬರ್ 2ರಂದು ವಿವಾಹ ಪೂರ್ವ ಕಾರ್ಯಕ್ರಮಗಳು ನಡೆಯಲಿದೆ. ಡಿಸೆಂಬರ್ 3ರಂದು ಸಂಗೀತ, ಮೆಹೆಂದಿ ಕಾರ್ಯಕ್ರಮ ನಡೆಯಲಿದೆ. ಆರತಕ್ಷತೆ ಬದಲು ಕ್ಯಾಸಿನೋ ಥೀಮ್‌ನಲ್ಲಿ ರಾತ್ರಿ ಪಾರ್ಟಿ ನಡೆಯಲಿದೆಯಂತೆ.

ಹನ್ಸಿಕಾ ಮೋಟ್ವಾನಿ ಫೋಟೋಗಳು ಲೀಕ್ ಆದಾಗ..

ಲವ್ ಮ್ಯಾರೇಜ್
ಮುಂಬೈ ಮೂಲದ ಉದ್ಯಮಿ ಸೊಹೇಲ್ ಉದ್ಯಮಿ-ಹನ್ಸಿಕಾ ಬ್ಯುಸಿನೆಸ್‌ ಪಾರ್ಟನರ್ ಎನ್ನಲಾಗಿದೆ. ಒಂದಷ್ಟು ವರ್ಷಗಳಿಂದ ಇವರಿಬ್ಬರ ನಡುವೆ ಸ್ನೇಹ ಇತ್ತು. ಆನಂತರ ಇವರಿಬ್ಬರು ಒಟ್ಟಾಗಿ ಉದ್ಯಮ ಶುರುಮಾಡಿದರು. ಇನ್ನು ಇದು ಲವ್ ಮ್ಯಾರೇಜ್ ಎಂದು ನಟಿಯ ಆಪ್ತಮೂಲಗಳು ತಿಳಿಸಿವೆ.

ಬಾಲನಟಿಯಾಗಿದ್ರು, ಹೀರೋಯಿನ್ ಆಗಿ ಮೆರೆಯುತ್ತಿದ್ದಾರೆ
ಮೂಲತಃ ಉತ್ತರ ಭಾರತದವರಾದ ಹನ್ಸಿಕಾ ಮೋಟ್ವಾನಿ, ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು. 'ದೇಶಮುದುರು' ಸಿನಿಮಾದಿಂದ ಹೀರೋಯಿನ್‌ ಆದರು. ತಮಿಳು, ತೆಲುಗು ಭಾಷೆಗಳಲ್ಲಿ ಬೇಡಿಕೆ ಹೆಚ್ಚಿಸಿಕೊಂಡ ಮೇಲೆ ಪುನೀತ್‌ ರಾಜ್‌ಕುಮಾರ್ ಅಭಿಯನದ 'ಬಿಂದಾಸ್' ಸಿನಿಮಾದ ಮೂಲಕ ಕನ್ನಡಕ್ಕೂ ಎಂಟ್ರಿ ನೀಡಿದ್ದರು.

ಮುಂಬರುವ ಸಿನಿಮಾಗಳು

Partner , 105 Minutes, ಮೈ ನೇಮ್ ಈಜ್ ಶ್ರುತಿ, ರೌಡಿ ಬೇಬಿ, ವಿಜಯ್ ಚಾಂದೆರ್ ಜೊತೆಗಿನ ಸಿನಿಮಾ, ಆರ್ ಕಣ್ಣನ್ ಜೊತೆ ಚಿತ್ರ ಸೇರಿ ಹನ್ಸಿಕಾ ಕೈತುಂಬ ಸಿನಿಮಾಗಳಿವೆ
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌