ಆ್ಯಪ್ನಗರ

ಕಮಲ್‌ ಹಾಸನ್‌ 66ನೇ ಜನ್ಮದಿನ: ಅಪ್ಪನಿಗೆ ಮನಸಾರೆ ಶುಭಕೋರಿದ ಪುತ್ರಿ ಶ್ರುತಿ ಹಾಸನ್‌

ಬಹುಭಾಷಾ ನಟ ಕಮಲ್‌ ಹಾಸನ್‌ ಅವರಿಗೆ ಇಂದು (ನ.7) ಜನ್ಮದಿನ ಸಂಭ್ರಮ. ವಿಶ್ವಾದ್ಯಂತ ಇರುವ ಅವರ ಅಭಿಮಾನಿಗಳು ಸೋಶಿಯಲ್‌ ಮೀಡಿಯಾ ಮೂಲಕ ಶುಭಕೋರುತ್ತಿದ್ದಾರೆ. ಪುತ್ರಿ ಶ್ರುತಿ ಹಾಸನ್‌ ಕೂಡ ಅಪ್ಪನಿಗೆ ವಿಶ್ ಮಾಡಿದ್ದಾರೆ.

Vijaya Karnataka Web 7 Nov 2020, 9:09 am
ಭಾರತೀಯ ಚಿತ್ರರಂಗದ ಮೇರು ಪ್ರತಿಭೆಗಳಲ್ಲಿ ಒಬ್ಬರಾದ ಕಮಲ್‌ ಹಾಸನ್‌ ಶನಿವಾರ (ನ.7) ತಮ್ಮ 66ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಎಲ್ಲರಿಂದ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಸೋಶಿಯಲ್‌ ಮೀಡಿಯಾ ಮೂಲಕ ವಿಶ್‌ ಮಾಡುತ್ತಿದ್ದಾರೆ.
Vijaya Karnataka Web ಕಮಲ್‌ ಹಾಸನ್‌ ಶ್ರುತಿ ಹಾಸನ್‌


ಕೋವಿಡ್‌-19 ಹರಡುವ ಭೀತಿಯಿಂದ ಸಾರ್ವಜನಿಕವಾಗಿ ಯಾವುದೇ ರೀತಿಯ ಸಂಭ್ರಮಾಚರಣೆ ಮಾಡಲಾಗುತ್ತಿಲ್ಲ. ಕೆಲವೇ ದಿನಗಳ ಹಿಂದೆ ಅಭಿಮಾನಿಗಳು ಈ ಬಾರಿ ಕಮಲ್‌ ಜನ್ಮದಿನಕ್ಕಾಗಿ ಕಾಮನ್‌ ಡಿಪಿ ಸಿದ್ಧಪಡಿಸಿದ್ದರು. ಅದನ್ನು ಕಮಲ್‌ ಪುತ್ರಿ ಶ್ರುತಿ ಹಾಸನ್‌ ಬಿಡುಗಡೆ ಮಾಡಿದ್ದರು. ಕಾಮನ್‌ ಡಿಪಿ ಶೇರ್‌ ಮಾಡಿಕೊಳ್ಳುವ ಮೂಲಕ ಲಕ್ಷಾಂತರ ಅಭಿಮಾನಿಗಳು ಅವರಿಗೆ ಶುಭ ಕೋರುತ್ತಿದ್ದಾರೆ.

ಪ್ರೀತಿಯ ತಂದೆಗೆ ಶ್ರುತಿ ಹಾಸನ್‌ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಅಪ್ಪನ ಜೊತೆಗೆ ಇರುವ ತಮ್ಮ ಬಾಲ್ಯದ ಫೋಟೋವನ್ನು ಶೇರ್‌ ಮಾಡಿಕೊಂಡಿದ್ದಾರೆ. ಅಪ್ಪ-ಮಗಳ ಈ ಮುದ್ದಾದ ಫೋಟೋಗೆ ಲಕ್ಷಾಂತರ ಮಂದಿ ಮೆಚ್ಚುಗೆ ಸೂಚಿಸಿದ್ದಾರೆ. 'ಅಪ್ಪ, ಬಾಪೂಜಿ, ಡ್ಯಾಡಿ, ಪ್ರೀತಿಯ ಕಮಲ್‌ ಹಾಸನ್‌ಗೆ ಹ್ಯಾಪಿ ಬರ್ತ್‌ಡೇ. ಈ ವರ್ಷ ಕೂಡ ನಿಮ್ಮ ಬದುಕಿನ ಸ್ಮರಣೀಯ ವರ್ಷವಾಗಲಿ' ಎಂದು ಶ್ರುತಿ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

also read: 232ನೇ ಸಿನಿಮಾವನ್ನು ಘೋಷಣೆ ಮಾಡಿದ ಕಮಲ್ ಹಾಸನ್‌! ಈ ಚಿತ್ರದ ನಿರ್ದೇಶಕ ಯಾರು?

ಕಮಲ್‌ ಹಾಸನ್‌ ನಟಿಸುತ್ತಿರುವ 'ಇಂಡಿಯನ್‌ 2' ಸಿನಿಮಾ ಮೇಲೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಆದರೆ ಈ ಸಿನಿಮಾ ಕೆಲಸಗಳು ಕೊರೊನಾ ವೈರಸ್‌ ಕಾರಣದಿಂದ ತಡವಾಗಿದೆ. ಈ ನಡುವೆ ತಮಿಳುನಾಡು ರಾಜಕೀಯದಲ್ಲಿ ಕಮಲ್‌ ಹಾಸನ್‌ ಆಸಕ್ತಿ ತೋರಿಸುತ್ತಿದ್ದಾರೆ. 2021ರ ಚುನಾವಣೆಯಲ್ಲಿ ಅವರು ಸ್ಪರ್ಧಿಸುವ ಸಾಧ್ಯತೆ ಕೂಡ ದಟ್ಟವಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಅನೇಕ ಜನಪರ ಕಾರ್ಯಗಳಲ್ಲಿ ಕಮಲ್‌ ತೊಡಗಿಕೊಂಡಿದ್ದರು.

also read: ಒಂದೇ ಸಿನಿಮಾದಲ್ಲಿ ರಜನಿಕಾಂತ್‌-ಕಮಲ್ ಹಾಸನ್ ನಟನೆ! ತೆರೆಮರೆಯಲ್ಲಿ ನಡೆದಿದೆ ಬಿಗ್‌ ಪ್ಲ್ಯಾನ್‌

View this post on Instagram Happy birthday to my Bapuji, Appa, daddy dearest @ikamalhaasan may this year be another memorable one in your library of splendid years 🖤 can’t wait to see all you have in store for the world A post shared by Shruti Haasan (@shrutzhaasan) on Nov 6, 2020 at 10:42am PST

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌