ಆ್ಯಪ್ನಗರ

ರಾಜಮೌಳಿಯ 'ಆರ್‌ಆರ್‌ಆರ್‌' ಸಿನಿಮಾದಲ್ಲಿ ಹಾಲಿವುಡ್‌ ಕಲಾವಿದರ ದಂಡು!

'ಬಾಹುಬಲಿ' ನಂತರ ನಿರ್ದೇಶಕ ರಾಜಮೌಳಿ 'ಆರ್‌ಆರ್‌ಆರ್' ಚಿತ್ರದ ಕೆಲಸಗಳಲ್ಲಿ ಮಗ್ನರಾಗಿದ್ದಾರೆ. ರಾಮ್ ಚರಣ್‌ ತೇಜ- ಜೂ. ಎನ್‌ಟಿಆರ್ ಮೊದಲ ಬಾರಿಗೆ ಈ ಸಿನಿಮಾಗಾಗಿ ಒಂದಾಗಿದ್ದಾರೆ. ಈಗಾಗಲೇ ಈ ಸಿನಿಮಾದ ಶೇ.70 ಭಾಗ ಚಿತ್ರೀಕರಣ ಮುಕ್ತಾಯವಾಗಿದೆ. ಆದರೆ, ಜೂ.ಎನ್‌ಟಿಆರ್‌ಗೆ ಮಾತ್ರ ನಾಯಕಿ ಯಾರೆಂದು ಫಿಕ್ಸ್ ಆಗಿರಲಿಲ್ಲ. ಅವರಿಗೆ ಈ ಮೊದಲು ಎಮ್ಮಾ ರಾಬರ್ಟ್ಸ್ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಮಾಹಿತಿ ಇತ್ತು. ಆದರೆ, ಅವರು ಅರ್ಧದಲ್ಲೇ ಹೊರನಡೆದರು. ಇದೀಗ ಅವರಿಗೂ ನಾಯಕಿ ಆಯ್ಕೆ ಆಗಿದ್ಧಾರೆ. ಒಲಿವಿಯಾ ಮೋರಿಸ್ 'ಆರ್‌ಆರ್‌ಆರ್‌' ಚಿತ್ರತಂಡ ಸೇರಿಕೊಂಡಿದ್ದಾರೆ. ಮೂಲತಃ ರಂಗಭೂಮಿ ನಟಿಯಾಗಿರುವ ಒಲಿವಿಯಾ, ಈ ಸಿನಿಮಾ ಮೂಲಕ ಭಾರತೀಯ ಸಿನಿಮಾರಂಗಕ್ಕೆ ಎಂಟ್ರಿ ನೀಡಿದ್ದಾರೆ. ಇನ್ನು. ರೇ ಸ್ಟೀವನ್‌ಸನ್‌ ಮತ್ತು ಅಲಿಸನ್ ಡೂಡಿ ಕೂಡ 'ಆರ್‌ಆರ್‌ಆರ್‌' ಪ್ರಮುಖ ಪಾತ್ರ ಪೋಷಣೆ ಮಾಡುತ್ತಿದ್ದಾರೆ. ಇಬ್ಬರಿಗೂ ಖಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ಧಾರೆ. 2020ರ ಜುಲೈನಲ್ಲಿ ಸಿನಿಮಾವನ್ನು ತೆರೆಕಾಣಿಸುವ ಉದ್ದೇಶ ಇಟ್ಟುಕೊಂಡಿದ್ಧಾರೆ ರಾಜಮೌಳಿ. ಇನ್ನು, ಬಾಲಿವುಡ್‌ನ ಆಲಿಯಾ ಭಟ್,‌ ಅಜಯ್‌ ದೇವ್‌ಗನ್‌ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Vijaya Karnataka Web 20 Nov 2019, 5:39 pm

Vijaya Karnataka Web hollywood actress olivia morris and ray stevenson acted in rrr movie
ರಾಜಮೌಳಿಯ 'ಆರ್‌ಆರ್‌ಆರ್‌' ಸಿನಿಮಾದಲ್ಲಿ ಹಾಲಿವುಡ್‌ ಕಲಾವಿದರ ದಂಡು!

ಆರ್‌ಆರ್‌ಆರ್‌ನಲ್ಲಿ ರಂಗಭೂಮಿ ನಟಿ

ರಂಗಭೂಮಿ ನಟಿಯಾಗಿರುವ ಒಲಿವಿಯಾ ಮೋರಿಸ್ 'ಆರ್‌ಆರ್‌ಆರ್‌'ನಲ್ಲಿ ಜೆನ್ನಿಫರ್ ಅನ್ನೋ ಪಾತ್ರ ಮಾಡಿದ್ದಾರೆ. ಈ ಮೊದಲು ಈ ಪಾತ್ರಕ್ಕೆ ಎಮ್ಮಾ ರಾಬರ್ಟ್ಸ್ ಆಯ್ಕೆ ಆಗಿದ್ದರು.

ಬ್ರಿಟಿಷ್ ವಿಲನ್ ಆಗಿ ಸ್ಟೀವನ್‌ಸನ್‌

ಹಾಲಿವುಡ್‌ ನಟ ರೇ ಸ್ಟೀವನ್‌ಸನ್‌ ಈ ಸಿನಿಮಾದಲ್ಲಿ ಬ್ರಿಟಿಷ್ ಖಳನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅವರದ್ದು ಸ್ಕಾಟ್ ಎಂಬ ಪಾತ್ರ. 'ಥೋರ್', 'ದಿ ಟ್ರಾನ್ಸ್‌ಪೋರ್ಟರ್' ಮುಂತಾದ ಹಾಲಿವುಡ್ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಲೇಡಿ ವಿಲನ್ ಆಗಿ ಅಲಿಸನ್‌

ಮತ್ತೋರ್ವ ಹಾಲಿವುಡ್‌ ನಟಿ ಅಲಿಸನ್‌ ಡೂಡಿ 'ಆರ್‌ಆರ್‌ಆರ್‌'ನಲ್ಲಿ ಲೇಡಿ ವಿಲನ್‌ ಆಗಿ ಕಾಣಿಸಿಕೊಳ್ಳಲಿದ್ಧಾರೆ. 53ರ ಹರೆಯದ ಈ ನಟಿಗೆ ಚಿತ್ರದಲ್ಲಿ ಲೇಡಿ ಸ್ಕಾಟ್ ಪಾತ್ರವಿದೆ.

ರಾಮ್‌ ಚರಣ್‌ಗೆ ಜೋಡಿಯಾದ ಆಲಿಯಾ

ಬಾಲಿವುಡ್ ನಟಿ ಆಲಿಯಾ ಭಟ್‌ ಈ ಸಿನಿಮಾದಲ್ಲಿ ರಾಮ್ ಚರಣ್‌ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಅವರಿಗೆ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.

ಮಹತ್ವದ ಪಾತ್ರದಲ್ಲಿ ಅಜಯ್‌ ದೇವ್‌ಗನ್‌

ನಟ ಅಜಯ್ ದೇವ್‌ಗನ್‌ 'ಆರ್‌ಆರ್‌ಆರ್‌'ನಲ್ಲಿ ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚುವ ಮೂಲಕ ಟಾಲಿವುಡ್‌ಗೆ ಕಾಲಿಟ್ಟಿದ್ದಾರೆ.

ರಾಜಮೌಳಿ ಮೇಲೆ ಹೆಚ್ಚಿದ ನಿರೀಕ್ಷೆ

'ಬಾಹುಬಲಿ' ನಂತರ ರಾಜಮೌಳಿ 'ಆರ್‌ಆರ್‌ಆರ್‌' ಚಿತ್ರವನ್ನು ಕೈಗೆತ್ತಿಕೊಂಡಿರುವುದರಿಂದ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಕೊಂಡಿದೆ. ಬಹುಭಾಷೆಯಲ್ಲಿ ಈ ಸಿನಿಮಾ ನಿರ್ಮಾಣಗೊಳ್ಳಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌