ಆ್ಯಪ್ನಗರ

'ಹೌದು ಹುಲಿಯಾ' ಎಂದ ಕಿಚ್ಚ ಸುದೀಪ್ ಮತ್ತು ಸಲ್ಮಾನ್ ಖಾನ್; ಸಖತ್ ಪಂಚಿಂಗ್ ಸೌಂಡ್ ಕೊಟ್ಟ ಡೈಲಾಗ್

ಲೇಖನ -(ಹರೀಶ್‌ ಬಸವರಾಜ್‌) ಕೆಲ ದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದ 'ಹೌದು ಹುಲಿಯಾ' ಎಂಬ ಡೈಲಾಗ್‌ ದಬಾಂಗ್‌-3 ಚಿತ್ರದಲ್ಲಿಯೂ ಬಳಕೆಯಾಗಿದೆ. ಈ ಬಗ್ಗೆ ಕನ್ನಡ ಸಂಭಾಷಣೆಗಳನ್ನು ಬರೆದಿರುವ ಗುರುದತ್‌ ಗಾಣಿಗ ಲವಲವಿಕೆಗೆ ಮಾಹಿತಿ ನೀಡಿದ್ದಾರೆ.

Vijaya Karnataka Web 13 Dec 2019, 11:44 am
ಲೇಖನ -(ಹರೀಶ್‌ ಬಸವರಾಜ್‌) ಕೆಲ ದಿನಗಳಿಂದ ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದ 'ಹೌದು ಹುಲಿಯಾ' ಎಂಬ ಡೈಲಾಗ್‌ ದಬಾಂಗ್‌-3 ಚಿತ್ರದಲ್ಲಿಯೂ ಬಳಕೆಯಾಗಿದೆ. ಈ ಬಗ್ಗೆ ಕನ್ನಡ ಸಂಭಾಷಣೆಗಳನ್ನು ಬರೆದಿರುವ ಗುರುದತ್‌ ಗಾಣಿಗ ಲವಲವಿಕೆಗೆ ಮಾಹಿತಿ ನೀಡಿದ್ದಾರೆ.
Vijaya Karnataka Web howdu huliya dialogue in sudeep salman khan starrer dabangg 3 film
'ಹೌದು ಹುಲಿಯಾ' ಎಂದ ಕಿಚ್ಚ ಸುದೀಪ್ ಮತ್ತು ಸಲ್ಮಾನ್ ಖಾನ್; ಸಖತ್ ಪಂಚಿಂಗ್ ಸೌಂಡ್ ಕೊಟ್ಟ ಡೈಲಾಗ್


ವೈರಲ್ ಆಗಿದ್ದ 'ಹೌದು ಹುಲಿಯಾ'

'ಹೌದು ಹುಲಿಯಾ ಈಗ ವೈರಲ್‌ ಆಗಿದೆ. ಆದರೆ ಆ ಘಟನೆ ಆದ ಎರಡ್ಮೂರು ದಿನಗಳಾದ ಮೇಲೆ ನನ್ನ ಕಿವಿಗೆ ಬಿತ್ತು. ನಾನು ಇದನ್ನು ಸಿನಿಮಾದಲ್ಲಿಬಳಸಿದರೆ ಖಂಡಿತಾ ಇಷ್ಟವಾಗುತ್ತದೆ ಎನಿಸಿ ಸಂಭಾಷಣೆಯಲ್ಲಿಸೇರಿಸಿದೆ. ಈ ಡೈಲಾಗ್‌ಗೆ ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡ ಡಬ್ಬಿಂಗ್‌ ಮಾಡಿದ್ದಾರೆ. ಅವರು ತಮ್ಮದೇ ಆದ ಪಂಚಿಂಗ್‌ ಶೈಲಿಯಲ್ಲಿಹೇಳಿರುವುದರಿಂದ ಇದು ಸಿನಿಮಾದಲ್ಲಿಇನ್ನೂ ಕಿಕ್‌ ಕೊಡುತ್ತದೆ. ಈ ಡೈಲಾಗ್‌ನಲ್ಲಿಫನ್‌, ವ್ಯಂಗ್ಯ, ಬಿಲ್ಡಪ್‌ ಎಲ್ಲವೂ ಇದೆ. ಹಾಗಾಗಿ ಇದನ್ನು ಸೇರಿಸಿದ್ದೇವೆ' ಎಂದು ಗುರುದತ್‌ ಗಾಣಿಗ ತಿಳಿಸಿದ್ದಾರೆ.

'ದಬಾಂಗ್‌-3ಯಲ್ಲಿ ವಿವಿಧ ಭಾಗಗಳ ಸೊಗಡಿನ ಕನ್ನಡ

'ದಬಾಂಗ್‌-3ಯಲ್ಲಿಉತ್ತರ ಕರ್ನಾಟಕ, ಮಂಡ್ಯ, ಮೈಸೂರು ಸೇರಿ ವಿವಿಧ ಭಾಗಗಳ ಸೊಗಡಿನ ಕನ್ನಡವನ್ನು ಬಳಸಿದ್ದೇವೆ. ಪ್ರೇಕ್ಷಕ ನೋಡುತ್ತಾ ಕುಳಿತಿದ್ದರೆ ನೂರಕ್ಕೆ ನೂರರಷ್ಟು ಇದು ಕನ್ನಡ ಸಿನಿಮಾ ಎಂದುಕೊಂಡೇ ವೀಕ್ಷಿಸುತ್ತಾರೆ. ಇದು ಕನ್ನಡ ಸಿನಿಮಾ ಎನಿಸಬೇಕು ಎನ್ನುವ ಕಾರಣಕ್ಕೆ ಈ ಹೌದು ಹುಲಿಯಾದಂತಹ ಪಂಚಿಂಗ್‌ ಡೈಲಾಗ್‌ಗಳನ್ನು ಬರೆದಿದ್ದೇವೆ. ಇಂಥ ಪದಗಳು ಜನರ ಮನಸ್ಸಿನಲ್ಲಿಅಚ್ಚೊತ್ತಿವೆ. ಹಾಗಾಗಿ ಇದು ಕನ್ನಡ ಸಿನಿಮಾ ಎಂದು ನಾನು ಹೇಳುತ್ತೇನೆ' ಎಂದು ಅವರು ಹೇಳಿದ್ದಾರೆ.

ಆ ಡೈಲಾಗ್‌ ಸೇರಿಸುವಾಗ ವೈರಲ್ ಆಗಿರಲಿಲ್ಲ ಹೌದು ಹುಲಿಯಾ


'ನಾವು ಹೌದು ಹುಲಿಯಾ ಡೈಲಾಗ್‌ ಸೇರಿಸಬೇಕು ಎಂದು ಚರ್ಚೆ ಮಾಡಿದಾಗ ಅದಿನ್ನೂ ವೈರಲ್‌ ಆಗಿರಲೇ ಇಲ್ಲ. ನಾವು ಡಬ್ಬಿಂಗ್‌ ಮಾಡಿದ ನಾಲ್ಕೈದು ದಿನಗಳ ನಂತರ ನೋಡಿದರೆ ಎಲ್ಲರ ಸೋಷಿಯಲ್‌ ಮೀಡಿಯಾದಲ್ಲಿ ಹೌದು ಹುಲಿಯನದ್ದೇ ಸದ್ದು' ಎಂದು ಹೇಳುತ್ತಾರೆ ಕರ್ನಾಟಕಕ್ಕೆ ಈ ಚಿತ್ರವನ್ನು ವಿತರಣೆ ಮಾಡುತ್ತಿರುವ ಜಾಕ್‌ ಮಂಜು.

ಬಿಲ್ಲಿಸಿಂಗ್‌ ಎನ್ನುವ ಮುಖ್ಯ ಖಳನ ಪಾತ್ರದಲ್ಲಿ ಸುದೀಪ್

ದಬಾಂಗ್‌-3 ಸಿನಿಮಾ ಇದೇ 20ಕ್ಕೆ ದೇಶಾದ್ಯಂತ ರಿಲೀಸ್‌ ಆಗಲಿದೆ. ಸುದೀಪ್‌ ಬಿಲ್ಲಿಸಿಂಗ್‌ ಎನ್ನುವ ಮುಖ್ಯ ಖಳನ ಪಾತ್ರದಲ್ಲಿಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಕನ್ನಡ ಭಾಷೆಯಲ್ಲಿನೂರಕ್ಕೂ ಹೆಚ್ಚಿನ ಚಿತ್ರಮಂದಿರದಲ್ಲಿರಿಲೀಸ್‌ ಆಗುತ್ತದೆ. ಈಗಾಗಲೇ ಬಿಡುಗಡೆಯಾಗಿರುವ ಕನ್ನಡ ಭಾಷೆಯ ಹಾಡುಗಳು ಸೋಷಿಯಲ್‌ ಮೀಡಿಯಾದಲ್ಲಿವೈರಲ್‌ ಆಗಿವೆ.

ಕೆಲವೇ ಸೆಕೆಂಡ್‌ಗಳಲ್ಲಿ ಬಂದು ಹೋಗುವ ಡೈಲಾಗ್‌ '​ಹೌದು ಹುಲಿಯಾ'

ಹೌದು ಹುಲಿಯಾ ಕೆಲವೇ ಸೆಕೆಂಡ್‌ಗಳಲ್ಲಿ ಬಂದು ಹೋಗುವ ಡೈಲಾಗ್‌. ಆದರೆ ಅದರ ಸೌಂಡಿಂಗ್‌ ಸಿನಿಮಾದಲ್ಲಿಸಖತ್‌ ಪಂಚ್‌ ಆಗುತ್ತದೆ. ಜನ ಖಂಡಿತಾ ಎಂಜಾಯ್‌ ಮಾಡುತ್ತಾರೆ ಎಂದು ಹೇಳಿದ್ದಾರೆ ಸಂಭಾಷಣೆಕಾರ ಗುರುದತ್‌ ಗಾಣಿಗ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌