ಆ್ಯಪ್ನಗರ

ಅಮಿತಾಭ್ ಬಚ್ಚನ್, ಹೃತಿಕ್ ಗಮನಸೆಳೆದಿರುವ ಯಾರೀ ಟಿಕ್‍ಟಾಕ್ ಸ್ಟಾರ್?

ವಿಡಿಯೋ ಶೇರಿಂಗ್ ಆ್ಯಪ್‌ ಟಿಕ್‍ಟಾಕ್‌ನಲ್ಲಿ ಲಕ್ಷಾಂತರ ಮಂದಿ ಫಾಲೋವರ್ಸ್ ಇದ್ದಾರೆ. ಇವರ ಡ್ಯಾನ್ಸ್ ವಿಡಿಯೋ ಇದುವರೆಗೆ ಒಟ್ಟಾರೆ 11 ದಶಲಕ್ಷ ವೀಕ್ಷಣೆಗೆ ಪಾತ್ರವಾಗಿದೆ. ರಿಮಿಕ್ಸ್ ಹಾಡುಗಳಿಗೆ ಹಾಕುತ್ತಿರುವ ಸ್ಟೆಪ್‌ ನೋಡಿದ ಬಾಲಿವುಡ್ ತಾರೆಗಳು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.

Vijaya Karnataka Web 14 Jan 2020, 4:39 pm
ವಿಡಿಯೋ ಶೇರಿಂಗ್ ಆ್ಯಪ್‌ ಟಿಕ್‍ಟಾಕ್ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಇಂದು ಯುವಜನತೆಗೆ ಹೊಸ ವೇದಿಕೆಯನ್ನು ಒದಗಿಸುತ್ತಿರುವ ಈ ಆ್ಯಪ್‌‌ ಭಾರತದಲ್ಲಿ ಅಷ್ಟೇ ಅಲ್ಲದೆ ಜಗತ್ತಿನಾದ್ಯಂತ ಕೋಟ್ಯಂತರ ಮಂದಿಯನ್ನು ರಂಜಿಸುತ್ತಿದೆ. ಸಾವಿರಾರು ಮಂದಿ ಈ ಆ್ಯಪ್‌ ಮೂಲಕ ಸ್ಟಾರ್ ಆಗಿ ಬದಲಾಗಿದ್ದೂ ಉಂಟೂ.
Vijaya Karnataka Web ಟಿಕ್ ಟಾಕ್ ಡ್ಯಾನ್ಸರ್


ಇದೀಗ ಅಂತಹದ್ದೇ ವಿಡಿಯೋ ಒಂದು ವೈರಲ್ ಆಗಿದೆ. ಮೈಕೇಲ್ ಜಾಕ್ಸನ್ ಸ್ಟೈಲ್‌ನಲ್ಲಿ ಯುವಕನೊಬ್ಬ ಮಾಡುತ್ತಿರುವ ಡ್ಯಾನ್ಸ್‌ಗೆ ಬಾಲಿವುಡ್ ತಾರೆಗಳು ಬೆರಗಾಗಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್, ಬಿಗ್ ಬಿ ಅಮಿತಾಬ್ ಬಚ್ಚನ್‌ನಂತಹವರೇ ಈ ಯುವಕನ ಡ್ಯಾನ್ಸ್‌ ನೋಡಿ ಮಂತ್ರಮುಗ್ಧರಾಗಿದ್ದಾರೆ.

ಈ ಯುವಕ ನೃತ್ಯ ನೋಡಿದ ಹೃತಿಕ್ ರೋಷನ್, "ಅತ್ಯಂತ ನಯವಾದ ಏರ್ ವಾಕರ್" ಎಂದು ಕಾಮೆಂಟ್ ಮಾಡಿದ್ದಾರೆ. ಇಷ್ಟಕ್ಕೂ ಮೈಕೇಲ್ ಜಾಕ್ಸನ್ ನಾಚುವಂತೆ ಡ್ಯಾನ್ಸ್ ಮಾಡಿರುವ ಈ ಯುವಕನ ಹೆಸರು ಯುವರಾಜ್ ಸಿಂಗ್. ಟಿಕ್‍ಟಾಕ್‌ನಲ್ಲಿ 'ಬಾಬಾ ಜಾಕ್ಸನ್ 2020' ಎಂದೇ ಜನಪ್ರಿಯ.
ವಿಡಿಯೋ ಶೇರಿಂಗ್ ಆ್ಯಪ್‌ ಟಿಕ್‍ಟಾಕ್‌ನಲ್ಲಿ ಲಕ್ಷಾಂತರ ಮಂದಿ ಫಾಲೋವರ್ಸ್ ಇದ್ದಾರೆ. ಇವರ ಡ್ಯಾನ್ಸ್ ವಿಡಿಯೋ ಇದುವರೆಗೆ ಒಟ್ಟಾರೆ 11 ದಶಲಕ್ಷ ವೀಕ್ಷಣೆಗೆ ಪಾತ್ರವಾಗಿದೆ. ರಿಮಿಕ್ಸ್ ಹಾಡುಗಳಿಗೆ ಹಾಕುತ್ತಿರುವ ಸ್ಟೆಪ್‌ ನೋಡಿದ ಬಾಲಿವುಡ್ ತಾರೆಗಳು ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಹೃತಿಕ್ ರೋಷನ್, ಅಮಿತಾಬ್ ಬಚ್ಚನ್, ಸುನಿಲ್ ಶೆಟ್ಟಿ, ಅನುಪಮ್ ಖೇರ್‌ನಂತಹ ತಾರೆಗಳು ಆತನ ಡ್ಯಾನ್ಸ್ ವಿಡಿಯೋ ಬೆರಗಾಗಿದ್ದಾರೆ.
ಇವರ ವಿಡಿಯೋವನ್ನು ಹಂಚಿಕೊಂಡಿರುವ ನೆಟ್ಟಿಗರೊಬ್ಬರು, "ಕೊನೆಯ ತನಕ ವೀಕ್ಷಿಸಿ. ಇವರ ಎಲ್ಲ ವಿಡಿಯೋಗಳನ್ನು ಸೇರಿಸಿ ಮಾಡಿದ್ದೇನೆ" ಎಂದಿದ್ದಾರೆ. ಮುಕಾಬಲಾ, ಕಾಂಟಾ ಲಗಾ ಸೇರಿದಂತೆ ಹಲವಾರು ಹಾಡುಗಳಿಗೆ ಯುವರಾಜ್ ನೃತ್ಯ ಮಾಡಿದ್ದಾರೆ. ಇವರನ್ನು ಜನಪ್ರಿಯವನ್ನಾಗಿಸಿ ಎಂದು ಹೃತಿಕ್ ರೊಷನ್ ಹಾಗೂ ಪ್ರಭುದೇವ ಅವರಿಗೆ ಟ್ಯಾಗ್ ಮಾಡಲಾಗಿದೆ.
ಶಾಶ್ ಎಂಬುವವರು ಭಾನುವಾರ ಪೋಸ್ಟ್ ಮಾಡಿರುವ ಈ ವಿಡಿಯೋ ಈಗಾಗಲೆ ಆನ್‍ಲೈನ್‌ನಲ್ಲಿ ವೈರಲ್ ಆಗಿದ್ದು ಟ್ವಿಟರ್‌ನಲ್ಲಿ 9.3 ಲಕ್ಷ ವೀಕ್ಷಣೆ ಪಡೆದಿದೆ. ಇದಿಷ್ಟೇ ಅಲ್ಲದೆ 52,000 ಲೈಕ್ಸ್ ಹಾಗೂ 15,000 ರೀಟ್ವೀಟ್ ಆಗಿದೆ.
ನಟಿ ರವೀನಾ ಟಂಡನ್ ಸಹ ಟ್ವೀಟ್ ಮಾಡಿದ್ದು ಅದ್ಭುತ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಟಿಪ್ ಟಿಪ್ ರೀಮಿಕ್ಸ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಈ ರೀತಿಯ ಪ್ರತಿಭೆಯನ್ನು ಪತ್ತೆ ಹಚ್ಚಬೇಕಾಗಿದೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌