ಆ್ಯಪ್ನಗರ

ಪರಭಾಷಾ ಸ್ಟಾರ್‌ಗಳಿಗೆ ಚಪ್ಪಾಳೆ ಹೊಡೆದಿದ್ದಕ್ಕೆ ಕನ್ನಡಿಗರಿಗೆ ಈ ಗತಿ ಬಂತೇ? ; ಪ್ರಧಾನಿ ಮೋದಿ ವಿರುದ್ಧ ಜಗ್ಗೇಶ್ ಗರಂ

ಜಗ್ಗೇಶ್ ನರೇಂದ್ರ ಮೋದಿ ವಿಚಾರಕ್ಕೆ ಬೇಸರ ಮಾಡಿಕೊಂಡಿದ್ದಾರೆ. ಜಗ್ಗೇಶ್ ಈ ನಡೆ ಕೆಲವರಿಗೆ ಅಚ್ಚರಿ ಮೂಡಿಸಿದೆ. ಈ ನಿಮಿತ್ತ ಜಗ್ಗೇಶ್ ಸರಣಿ ಟ್ವೀಟ್ ಮಾಡಿದ್ದರು. ಜಗ್ಗೇಶ್ ಟ್ವೀಟ್ ಮಾಡುವ ಮೊದಲೇ ಈ ವಿಚಾರವಾಗಿ ಮೆಗಾಸ್ಟಾರ್ ಚಿರಂಜೀವಿ ಸೊಸೆ ಟ್ವೀಟ್ ಮಾಡಿ ಬೇಸರ ಹೊರಹಾಕಿದ್ದರು.

Vijaya Karnataka Web 21 Oct 2019, 12:33 pm
ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನಾಚರಣೆಯ ಸ್ಮರಣಾರ್ಥ ಪ್ರಧಾನಿಗಳ ಅಧಿಕೃತ ನಿವಾಸದಲ್ಲೇ ಒಂದು ಸಂವಾದ ಏರ್ಪಡಿಸಲಾಗಿತ್ತು. ಬಾಲಿವುಡ್‌ ಸೆಲೆಬ್ರಿಟಿಗಳು ಈ ಸಂವಾದದಲ್ಲಿ ಪಾಲ್ಗೊಂಡಿದ್ದರು. ಈ ಬಗ್ಗೆ ಜಗ್ಗೇಶ್ ಬೇಸರ ಮಾಡಿಕೊಂಡಿದ್ದಾರೆ.
Vijaya Karnataka Web jaggesh


ಸಂವಾದದಲ್ಲಿ ಭಾಗವಹಿಸಿದ್ದವರು ಯಾರು?

ಅನೀಲ್ ಕಪೂರ್, ಶಾರುಖ್ ಖಾನ್‌, ಕಂಗನಾ ರಣಾವತ್, ಜಾಕಿ ಶ್ರಾಫ್, ಜಾಕ್ವೇಲಿನ್ ಫರ್ನಾಂಡಿಸ್, ಸೋನಮ್ ಕಪೂರ್, ಕಪಿಲ್ ಶರ್ಮಾ, ಏಕ್ತಾ ಕಪೂರ್, ನಿರ್ದೇಶಕರಾದ ರಾಜಕುಮಾರ್ ಹಿರಾನಿ, ಆಮೀರ್ ಖಾನ್‌, ಆನಂದ್ ಎಲ್‌.ರೈ ಸೇರಿದಂತೆ ಬಾಲಿವುಡ್‌ನ ಪ್ರಖ್ಯಾತ ತಾರೆಯರು ಭಾಗವಹಿಸಿದ್ದರು. ಅವರೆಲ್ಲದೊಂದಿಗಿನ ಫೋಟೋಗಳನ್ನು ನರೇಂದ್ರ ಮೋದಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆಮೀರ್ ಖಾನ್‌, ಶಾರುಖ್ ಖಾನ್ ಅವರೊಂದಿಗಿನ ನರೇಂದ್ರ ಮೋದಿ ಅವರು ತೆಗೆಸಿಕೊಂಡಿರುವ ಸೆಲ್ಫೀ ಸಖತ್ ವೈರಲ್ ಆಗಿತ್ತು.

'ದಕ್ಷಿಣ ಭಾರತದ ಮೇಲೆ ಯಾಕಿಷ್ಟು ನಿರ್ಲಕ್ಷ್ಯ'; ಮೋದಿ ವಿರುದ್ಧ ಬೇಸರಗೊಂಡ ಚಿರಂಜೀವಿ ಸೊಸೆ!!

ಜಗ್ಗೇಶ್ ಟ್ವೀಟ್‌ನಲ್ಲಿ ಏನಿದೆ?
ಈ ಸಂವಾದದ ವಿರುದ್ಧ ಜಗ್ಗೇಶ್ ಬೇಸರ ಮಾಡಿಕೊಂಡಿದ್ದಾರೆ. "ಕನ್ನಡಿಗರು ಪರಭಾಷಾ ಸಿನಿಮಾಗಳಿಗೆ ಹೆಚ್ಚು ಚಪ್ಪಾಳೆ ಹೊಡೆದ ತಪ್ಪಿಗೆ ಇಂದು ದಾರಿತಪ್ಪಿದವರಂತೆ ಆಗಿದ್ದೇವೆ. ಉತ್ತರ ಭಾರತದ ಕಲಾವಿದರಿಗಿಂತ ಸ್ಯಾಂಡಲ್‌ವುಡ್‌ ಕಲಾವಿದರು ಯಾವುದರಲ್ಲೂ ಕಡಿಮೆ ಇಲ್ಲ. ಶಾರುಖ್, ಆಮೀರ್ ಕಲಾರಂಗಕ್ಕೆ ಒಡೆಯರು. ಕನ್ನಡದ ಕಲಿಗಳು ಅನೇಕರಿದ್ದಾರೆ. ಕರ್ನಾಟಕದಲ್ಲಿ ಕನ್ನಡ ಚಿತ್ರರಂಗದಿಂದ ಹೆಚ್ಚು ತೆರಿಗೆ ಕಟ್ಟಲಾಗುತ್ತಿದೆ. ದೇಶದಲ್ಲಿ ಬಹುಭಾಷಾ ಭಾವನೆಯಿದೆ, ಕೇವಲ ಹಿಂದಿ ಚಿತ್ರರಂಗ ಒಂದೇ ಅಲ್ಲ. ಖಾನ್‌ಗಳಿಂದ ಚಿತ್ರರಂಗ ಅಲ್ಲ" ಎಂದು ಬೇಸರಮಾಡಿಕೊಂಡಿದ್ದಾರೆ.

ಸ್ವಪಕ್ಷದವರ ವಿರುದ್ಧವೇ ಜಗ್ಗೇಶ್ ಬೇಸರ
ಜಗ್ಗೇಶ್ ಬಿಜೆಪಿ ಪಕ್ಷದಲ್ಲಿದ್ದಾರೆ. ನರೇಂದ್ರ ಮೋದಿ ಕೂಡ ಬಿಜೆಪಿಯವರೇ. ದಕ್ಷಿಣ ಭಾರತದ ಯಾವೊಬ್ಬ ನಟ-ನಟಿಯರಿಗೂ ಈ ಸಂವಾದಕ್ಕೆ ಮೋದಿ ಆಹ್ವಾನ ನೀಡಿರಲಿಲ್ಲ. ಹೀಗಾಗಿ ಜಗ್ಗೇಶ್ ಈ ಕಾರಣಕ್ಕೆ ಮೋದಿ ವಿರುದ್ಧ ಬೇಸರ ಹೊರಹಾಕಿದ್ದಾರೆ.

ಪ್ರಧಾನಿ ಮೋದಿಯವರ ಜೊತೆ ಮಿಂಚಿದ ಬಾಲಿವುಡ್‌ ತಾರೆಗಳು

ರಾಮ್‌ ಚರಣ್ ತೇಜ್ ಪತ್ನಿಗೂ ಬೇಸರ
ನಟ ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೆಲಾ ಅವರಿಗೆ ಈ ವಿಚಾರ ಬಹಳ ಬೇಸರ ತರಿಸಿದೆ. ನರೇಂದ್ರಮೋದಿ ಅವರ ನಡೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌