ಆ್ಯಪ್ನಗರ

ರಾಜಮೌಳಿಯ 'RRR' ದೇಶಭಕ್ತಿಯ ಸಿನಿಮಾವಲ್ಲ! ಅಚ್ಚರಿಯ ವಿಚಾರ ಬಿಚ್ಚಿಟ್ಟ ಚಿತ್ರತಂಡ!

ಎಸ್‌ಎಸ್‌ ರಾಜಮೌಳಿ ತಾವು ನಿರ್ದೇಶಿಸುವ ಸಿನಿಮಾವನ್ನು ಬಹಳ ವೈಭವದಿಂದ ಚಿತ್ರೀಕರಿಸಿ, ತೆರೆಗೆ ತರುತ್ತಾರೆ. ಅಲ್ಲದೆ, ಕಥೆ ಬಗ್ಗೆಯೂ ಸಾಕಷ್ಟು ಜಾಗ್ರತೆ ವಹಿಸುತ್ತಾರೆ. ಇದೀಗ 'ಆರ್‌ಆರ್‌ಆರ್‌' ಕಥೆ ಏನಿರಬಹುದು ಎಂಬ ಕುತೂಹಲ ಹಲವರಲ್ಲಿದೆ.

Vijaya Karnataka Web 11 Oct 2020, 10:33 pm
ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಮೊದಲ ಬಾರಿಗೆ ಒಟ್ಟಿಗೆ ನಟಿಸಿರುವ 'ಆರ್‌ಆರ್‌ಆರ್' ಸಿನಿಮಾದ ಬಗ್ಗೆ ವಿಶ್ವಾದ್ಯಂತ ದೊಡ್ಡ ನಿರೀಕ್ಷೆ ಇದೆ. ಇಬ್ಬರು ಸ್ಟಾರ್ ನಟರು ಒಟ್ಟಿಗೆ ನಟಿಸಿರುವುದರಿಂದ, ಇದರ ಕಥೆ ಏನಿರಬಹುದು ಎಂಬ ಕುತೂಹಲವಂತೂ ಇದ್ದೇ ಇದೆ. ಹಾಗಾಗಿ, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಥೆಯನ್ನು ಊಹಿಸುತ್ತಿದ್ದಾರೆ. ಆದರೆ, ಆ ಊಹೆಗಳೆಲ್ಲ ತಲೆಕೆಳಗಾಗುವಂತೆ ಟ್ವಿಸ್ಟ್ ನೀಡಿದೆ ಚಿತ್ರತಂಡ.
Vijaya Karnataka Web jr ntr ram charan


ಹೌದು, ಸಿನಿಪ್ರಿಯರ ಊಹೆ ತಲೆಕೆಳಗಾಗುವಂತಹ ಟ್ವಿಸ್ಟ್‌ವೊಂದನ್ನು 'ಆರ್‌ಆರ್‌ಆರ್‌' ನೀಡಿದೆ. ಇಂದು (ಅ.11) ನಾಯಕರಿಬ್ಬರು ಕೈ-ಕೈ ಹಿಡಿದುಕೊಂಡಿರುವ ಲೋಗೋವನ್ನು ಚಿತ್ರತಂಡ ರಿಲೀಸ್ ಮಾಡಿದೆ. ಅದನ್ನು ಕಂಡ ಅಭಿಮಾನಿಗಳು ಅನೇಕ ರೀತಿಯಲ್ಲಿ ಕಥೆಯನ್ನು ಕಲ್ಪಿಸಿಕೊಳ್ಳುತ್ತಿದ್ದಾರೆ. ಹೀಗೆ ಒಬ್ಬರು ಒಂದು ಊಹೆ ಮಾಡಿದ್ದರು. 'ಈ ಲೋಗೋವನ್ನು ನೋಡುತ್ತಿದ್ದರೆ, ಅಲ್ಲೂರಿ ಸೀತಾರಾಮರಾಜು (ರಾಮ್ ಚರಣ್‌) ಮತ್ತು ಕೊಮರಮ್ ಭೀಮ್‌ (ಎನ್‌ಟಿಆರ್‌) ಸ್ವಾತಂತ್ರ್ಯ ಹೋರಾಟ ಮಾಡುವುದಕ್ಕೆ ಮೊದಲ ಬಾರಿಗೆ ಜೊತೆಯಾದ ದೃಶ್ಯವಿರಬೇಕು ಎನಿಸುತ್ತದೆ' ಎಂದು ಕಾಮೆಂಟ್ ಮಾಡಿದ್ದರು. ಆದರೆ, ಇದಕ್ಕೆ ಬೇರೆಯದೇ ಟ್ವಿಸ್ಟ್ ನೀಡಿದೆ 'ಆರ್‌ಆರ್‌ಆರ್‌' ಬಳಗ!

'ಹೌದು, ಅವರಿಬ್ಬರು ಭೇಟಿಯಾಗುತ್ತಾರೆ. ಇವು ಅವರದೇ ಕೈಗಳು. ಆದರೆ ನೀವು ಹೇಳಿದಂತೆ, ಈ ಸಿನಿಮಾದಲ್ಲಿ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡುವುದಿಲ್ಲ. 'ಆರ್‌ಆರ್‌ಆರ್‌' ಸಿನಿಮಾ ಸಂಪೂರ್ಣ ಕಾಲ್ಪನಿಕ ಸಿನಿಮಾ. ಇದು ದೇಶಭಕ್ತಿಯ ಸಿನಿಮಾವಲ್ಲ' ಎಂದು ಸ್ಪಷ್ಟನೆ ನೀಡಿದೆ ಚಿತ್ರತಂಡ! ಈ ಸಿನಿಮಾ 1920ರ ಕಾಲಘಟ್ಟದ ಕಥೆ ಹೊಂದಿದೆ. ಜೊತೆಗೆ ಇದರಲ್ಲಿ ಬ್ರಿಟೀಷ್‌ ಕಲಾವಿದರು ಇರುವುದರಿಂದ, ಸ್ವಾತಂತ್ರ್ಯ ಹೋರಾಟದ ಕಥೆ ಇದರಲ್ಲಿ ಇರಬಹುದೇನೋ ಎಂಬುದು ಎಲ್ಲರ ಊಹೆಯೂ ಆಗಿತ್ತು. ಆದರೆ, ಚಿತ್ರತಂಡ ಅದೆಲ್ಲದಕ್ಕೂ ಈಗ ಫುಲ್‌ಸ್ಟಾಪ್ ಇಟ್ಟಿದೆ!

ಇದೇ ಅಕ್ಟೋಬರ್ 22ರಂದು ಎನ್‌ಟಿಆರ್‌ ನಿಭಾಯಿಸಿರುವ 'ಕೊಮರಮ್‌ ಭೀಮ್' ಪಾತ್ರವನ್ನು ಪರಿಚಯಿಸುವ ಸಲುವಾಗಿ ಒಂದು ಟೀಸರ್ ಅನ್ನು ರಿಲೀಸ್ ಮಾಡುವುದಕ್ಕೆ ಚಿತ್ರತಂಡ ಸಜ್ಜಾಗಿದೆ. ಈ ಹಿಂದೆ ರಾಮ್‌ ಚರಣ್ ಬರ್ತ್‌ಡೇಗೆ ಅವರ ಪಾತ್ರದ ಟೀಸರ್ ರಿಲೀಸ್ ಮಾಡಿತ್ತು ಚಿತ್ರತಂಡ. ರಾಜಮೌಳಿ ನಿರ್ದೇಶನದ ಈ ಸಿನಿಮಾವನ್ನು ಡಿವಿವಿ ದಾನಯ್ಯ 400 ಕೋಟಿ ರೂ.ಗಳಿಗೂ ಅಧಿಕ ಹಣ ಹಾಕಿ ನಿರ್ಮಾಣ ಮಾಡುತ್ತಿದ್ದಾರೆ. ಆಲಿಯಾ ಭಟ್, ಅಜಯ್ ದೇವ್‌ಗನ್, ಸಮುದ್ರ ಖಣಿ, ಶ್ರಿಯಾ ಸರಣ್ ಮುಂತಾದವರು ನಟಿಸುತ್ತಿದ್ದಾರೆ!

RRR movie: ಕೊನೆಗೂ ಜೂ. ಎನ್‌ಟಿಆರ್‌ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ರಾಜಮೌಳಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌