ಆ್ಯಪ್ನಗರ

ಪ್ರೇಕ್ಷಕರಲ್ಲಿ ಕುತೂಹಲ ಸೃಷ್ಟಿಸಿರುವ ಡಾಲಿ: 4 ತಿಂಗಳಲ್ಲಿ 4 ಸಿನಿಮಾ ರಿಲೀಸ್‌ಗೆ ರೆಡಿ

ಸ್ಯಾಂಡಲ್‌ವುಡ್‌ ಸ್ಟಾರ್‌ ನಟ ಡಾಲಿ ಧನಂಜಯ ನಟನೆಯ ನಾಲ್ಕು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ವಿಭಿನ್ನ ಪಾತ್ರಗಳನ್ನು ಒಳಗೊಂಡ ಸಿನಿಮಾಗಳ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಸೃಷ್ಟಿಯಾಗಿದೆ.

Curated byಹರ್ಷಿತಾ ಎನ್ | Vijaya Karnataka Web 14 Jun 2022, 11:56 am
ಹರೀಶ್‌ ಬಸವರಾಜ್‌
Vijaya Karnataka Web kannada actor daali dhananjay starrer 4 movies releasing in next 4 months
ಪ್ರೇಕ್ಷಕರಲ್ಲಿ ಕುತೂಹಲ ಸೃಷ್ಟಿಸಿರುವ ಡಾಲಿ: 4 ತಿಂಗಳಲ್ಲಿ 4 ಸಿನಿಮಾ ರಿಲೀಸ್‌ಗೆ ರೆಡಿ

ಸ್ಯಾಂಡಲ್‌ವುಡ್‌ ಸ್ಟಾರ್‌ ನಟ ಡಾಲಿ ಧನಂಜಯ ನಟನೆಯ ನಾಲ್ಕು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ವಿಭಿನ್ನ ಪಾತ್ರಗಳನ್ನು ಒಳಗೊಂಡ ಸಿನಿಮಾಗಳ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಸೃಷ್ಟಿಯಾಗಿದೆ.

ಯಾವುದೇ ಪಾತ್ರಕೊಟ್ಟರೂ ಅದಕ್ಕೆ ನ್ಯಾಯ ಸಲ್ಲಿಸುವ ಮತ್ತು ಪ್ರತಿ ಪಾತ್ರದಿಂದಲೂ ಅಭಿಮಾನಿಗಳನ್ನು ಗಳಿಸಿಕೊಳ್ಳುವ ಶಕ್ತಿ ಇರುವ ಕಲಾವಿದ ಡಾಲಿ ಧನಂಜಯ. ಸದ್ಯ ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟರಲ್ಲಿ ಒಬ್ಬರೆನಿಸಿರುವ ಇವರು ನಟಿಸಿರುವ ನಾಲ್ಕು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ.

ಹೌದು, ಧನಂಜಯ ನಟನೆಯ ನಾಲ್ಕು ಸಿನಿಮಾಗಳು ತಿಂಗಳಿಗೊಂದರಂತೆ ಬಿಡುಗಡೆಯಾಗುತ್ತಿವೆ. ‘ಬಡವ ರಾಸ್ಕಲ್‌’ ಸಿನಿಮಾದ ದೊಡ್ಡ ಯಶಸ್ಸು ಧನಂಜಯ ಅವರನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಯಿತು. ಹತ್ತಾರು ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದ ಸಿನಿಮಾ ಮತ್ತು ಕಳೆದ ವರ್ಷದ ಬ್ಲಾಕ್‌ ಬಸ್ಟರ್‌ ಹಿಟ್‌ ಸಿನಿಮಾಗಳ ಪಟ್ಟಿಯಲ್ಲಿರುವ ಸಿನಿಮಾಗಳಲ್ಲಿ ‘ಬಡವ ರಾಸ್ಕಲ್‌’ ಸಹ ಒಂದು. ಅದಾದ ಮೇಲೆ ಧನಂಜಯ ಅವರ ಮಾರುಕಟ್ಟೆಯೂ ಬೆಳೆದಿದೆ.

ಜುಲೈ: ಬೈರಾಗಿ

ಟಗರು ಸಿನಿಮಾದಲ್ಲಿ ಶಿವರಾಜ್‌ಕುಮಾರ್‌ ಮತ್ತು ಧನಂಜಯ ಕಾಂಬಿನೇಶನ್‌ ಹೆಚ್ಚು ಸುದ್ದಿಯಾಯಿತು. ಇವರಿಬ್ಬರ ಕಾಂಬಿನೇಶನ್‌ನಲ್ಲಿ ಹಲವು ಸಿನಿಮಾಗಳು ಸೆಟ್ಟೇರುತ್ತವೆ ಎನ್ನಲಾಗಿತ್ತಾದರೂ ಕಡೆಗೆ ಅನೌನ್ಸ್‌ ಆಗಿದ್ದು ಮಾತ್ರ ‘ಬೈರಾಗಿ’ ಸಿನಿಮಾ. ಈ ಸಿನಿಮಾ ಜುಲೈ 1ಕ್ಕೆ ಬಿಡುಗಡೆಯಾಗುತ್ತಿದೆ. ಈ ಸಿನಿಮಾದಲ್ಲಿ ಧನಂಜಯ ಅವರಿಗೆಂದೇ ಇಂಟ್ರೊಡಕ್ಷನ್ ಫೈಟ್‌ ಅನ್ನು ಚಿತ್ರತಂಡ ಕಂಪೋಸ್‌ ಮಾಡಿಸಿದೆ. ಧನಂಜಯ ಅವರ ಲುಕ್‌ ಮತ್ತು ಕಾಸ್ಟ್ಯೂಮ್‌ ಕೂಡ ಈಗಾಗಲೇ ಗಮನ ಸೆಳೆದಿದೆ.

Bairagee: ಶಿವಣ್ಣ & ಧನಂಜಯ್ ಕಾಂಬಿನೇಷನ್‌ನ 'ಬೈರಾಗಿ' ಸಿನಿಮಾದ ರಿಲೀಸ್ ಡೇಟ್ ಘೋಷಣೆ

ಆಗಸ್ಟ್‌: ಮಾನ್ಸೂನ್‌ ರಾಗ

ಡಾಲಿ ಧನಂಜಯ ವರ್ಸಟೈಲ್‌ ನಟ. ಆ ನಿಟ್ಟಿನಲ್ಲಿ ಅವರು ಒಪ್ಪಿಕೊಂಡಿರುವ ಸಿನಿಮಾಗಳಲ್ಲಿ ‘ಮಾನ್ಸೂನ್‌ ರಾಗ’ ವಿಶೇಷವಾಗಿ ಕಾಣುತ್ತದೆ. ಈ ಸಿನಿಮಾ ಆಗಸ್ಟ್‌ನಲ್ಲಿ ತೆರೆಗೆ ಬರಲಿದೆ ಎಂದು ಚಿತ್ರತಂಡ ಅನೌನ್ಸ್‌ ಮಾಡಿದೆ. ಈ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆಯಾದಾಗ ಧನಂಜಯ ಅವರ ಕಾಸ್ಟ್ಯೂಮ್‌ ಮತ್ತು ಸಾದಾ ಸೀದಾ ಲುಕ್‌ ಹಲವರಿಗೆ ಇಷ್ಟವಾಗಿತ್ತು. ಈ ಸಿನಿಮಾವನ್ನು ‘ಪುಷ್ಪಕ ವಿಮಾನ’ ಸಿನಿಮಾ ಖ್ಯಾತಿಯ ರವೀಂದ್ರನಾಥ್‌ ನಿರ್ದೇಶನ ಮಾಡಿದ್ದಾರೆ.

'ಜಮಾಲಿಗುಡ್ಡ'ದಲ್ಲಿ ಧನಂಜಯ್ ಬಾರ್‌ ಸಪ್ಲೈಯರ್‌; ಬಿಡುಗಡೆ ದಿನಾಂಕ ಘೋಷಿಸಿದ ಚಿತ್ರತಂಡ

ಸೆಪ್ಟೆಂಬರ್‌: ಜಮಾಲಿ ಗುಡ್ಡ

ಈಗಾಗಲೇ ಫಸ್ಟ್‌ಲುಕ್‌, ಮೋಶನ್‌ ಪೋಸ್ಟರ್‌ ಮತ್ತು ಸಿನಿಮಾದ ಟೈಟಲ್‌ ಮೂಲಕ ಹೆಚ್ಚು ಗಮನ ಸೆಳೆದಿರುವ ‘ಒನ್ಸ್‌ ಅಪಾನ್‌ ಟೈಮ್‌ ಇನ್‌ ಜಮಾಲಿ ಗುಡ್ಡ’ ಸಿನಿಮಾ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಕುಶಾಲ್‌ ಗೌಡ ನಿರ್ದೇಶನ ಮಾಡಿರುವ ಈ ಸಿನಿಮಾದಲ್ಲಿ ಧನಂಜಯ ಅವರು ಬಾರ್‌ ಸಪ್ಲೈಯರ್‌ ಆಗಿ ನಟಿಸಿರುವುದು ವಿಶೇಷ. ಈ ಸಿನಿಮಾ ತನ್ನ ವಿಭಿನ್ನ ಶೈಲಿಯ ನಿರೂಪಣೆ ಮತ್ತು ಕಥೆಯ ಕಾರಣಕ್ಕೆ ಅಭಿಮಾನಿಗಳಿಗೆ ಇಷ್ಟವಾಗುತ್ತದೆ ಎಂಬುದು ಚಿತ್ರತಂಡದ ಅಭಿಪ್ರಾಯ.

'ಬೈರಾಗಿ' ಸಿನಿಮಾದ ಹಾಡಿಗೆ ಶಿವಣ್ಣ ಜೊತೆಗೆ ಧ್ವನಿಗೂಡಿಸುವ ಆ 'ಸ್ಟಾರ್' ನಟ ಯಾರು?

ದೀಪಾವಳಿಗೆ ಹೆಡ್‌ ಬುಷ್‌

ಹೆಚ್ಚು ನಿರೀಕ್ಷೆ ಹುಟ್ಟು ಹಾಕಿರುವುದು ‘ಹೆಡ್‌ ಬುಷ್‌’ ಸಿನಿಮಾ. ಬೆಂಗಳೂರಿನ ಭೂಗತ ಜಗತ್ತಿನಲ್ಲಿ ಡಾನ್‌ ಆಗಿದ್ದ ಜಯರಾಜ್‌ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಈ ಸಿನಿಮಾ ರೆಟ್ರೋ ಸ್ಟೈಲ್‌ನಲ್ಲಿ ನಿರ್ಮಾಣವಾಗಿದೆ. ಈ ಸಿನಿಮಾದಲ್ಲಿ ಧನಂಜಯ ಅವರು ಜಯರಾಜ್‌ ಪಾತ್ರದಲ್ಲಿ ನಟಿಸಿದ್ದಾರೆ. ಇದರ ಫಸ್ಟ್‌ ಲುಕ್‌ ಮತ್ತು ರಿಲೀಸ್‌ ದಿನಾಂಕದ ಅನೌನ್ಸ್‌ಮೆಂಟ್‌ ಪೋಸ್ಟರ್‌ ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ಸಿನಿಮಾದಲ್ಲಿ ವಸಿಷ್ಠ ಸಿಂಹ, ರಘು ಮುಖರ್ಜಿ, ದೇವರಾಜ್‌, ಲೂಸ್‌ ಮಾದ ಯೋಗಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

ಮುಂದಿನ ನಾಲ್ಕು ತಿಂಗಳು ನನ್ನ ನಾಲ್ಕು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಪ್ರತಿಯೊಂದು ಪಾತ್ರಗಳಲ್ಲಿಯೂ ವರ್ಸಟಾಲಿಟಿ ಕಾಣಬಹುದು. ಪ್ರೇಕ್ಷಕರಿಗೆ ಪ್ರತಿ ಸಿನಿಮಾವೂ ಹೊಸದಾಗಿಯೇ ಕಾಣುತ್ತದೆ. ಹೀಗಾಗಿ ಎಲ್ಲ ಸಿನಿಮಾಗಳು ಇಷ್ಟವಾಗುತ್ತವೆ ಎನ್ನುವ ಭರವಸೆ ಇದೆ ಎಂದಿದ್ದಾರೆ ನಟ ಧನಂಜಯ.

ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌